Innocent Passed Away: ಖ್ಯಾತ ಮಲಯಾಳಂ ನಟ ಇನ್ನೋಸೆಂಟ್ ಹೃದಯಾಘಾತದಿಂದ ನಿಧನ
2023ರ ಮಾರ್ಚ್ 3ರಂದು ಇನ್ನೋಸೆಂಟ್ ಅನಾರೋಗ್ಯಕ್ಕೆ ಒಳಗಾದರು. ಅವರನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಯಿತು. ಮೂರು ವಾರಗಳ ಕಾಲ ಅವರು ಆಸ್ಪತ್ರೆಯಲ್ಲೇ ಇದ್ದರು.
ಕನ್ನಡ, ಮಲಯಾಳಂ ಚಿತ್ರಗಳಲ್ಲಿ ನಟಿಸಿ ಫೇಮಸ್ ಆದ ನಟ ಇನ್ನೋಸೆಂಟ್ (Innocent) ಅವರು ಭಾನುವಾರ (ಮಾರ್ಚ್ 26) ರಾತ್ರಿ ನಿಧನ ಹೊಂದಿದ್ದಾರೆ. ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಅವರಿಗೆ ಹೃದಯಾಘಾತ ಆಯಿತು. ಇದರಿಂದ ಅವರು ಕೊಚ್ಚಿಯ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು. ನಟನಾಗಿ, ನಿರ್ಮಾಪಕನಾಗಿ ಅವರು ಗಮನ ಸೆಳೆದಿದ್ದರು. ಉದ್ಯಮದಲ್ಲಿ ಕೈಸುಟ್ಟುಕೊಂಡ ಬಳಿಕ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ಅವರು ಸುಮಾರು 75ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದರು ಅನ್ನೋದು ವಿಶೇಷ. ಐದು ದಶಕಗಳ ಕಾಲ ಅವರು ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ್ದಾರೆ.
2023ರ ಮಾರ್ಚ್ 3ರಂದು ಇನ್ನೋಸೆಂಟ್ ಅನಾರೋಗ್ಯಕ್ಕೆ ಒಳಗಾದರು. ಅವರನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಯಿತು. ಮೂರು ವಾರಗಳ ಕಾಲ ಅವರು ಆಸ್ಪತ್ರೆಯಲ್ಲೇ ಇದ್ದರು. ಆದರೆ, ಯಾವುದೇ ಪ್ರಯೋಜನ ಆಗಲಿಲ್ಲ. ಮಾರ್ಚ್ 26ರಂದು ಅವರು ನಿಧನ ಹೊಂದಿದರು. ಅವರು ಈ ಮೊದಲು ಕ್ಯಾನ್ಸರ್ ಗೆದ್ದು ಬಂದಿದ್ದರು.
1972ರಲ್ಲಿ ಹಿರಿತೆರೆಗೆ ಇನ್ನೋಸೆಂಟ್ ಕಾಲಿಟ್ಟರು. ನಂತರ ಹಲವು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಅವರು ಬಣ್ಣ ಹಚ್ಚಿದ್ದರು. 1986ರಲ್ಲಿ ಅವರು 30ಕ್ಕೂ ಅಧಿಕ ಚಿತ್ರಗಳಲ್ಲಿ ಕಾಣಿಸಿಕೊಂಡರು! 1989ರಲ್ಲಿ ತೆರೆಗೆ ಬಂದ ‘ರಾಮ್ಜಿ ರಾವ್ ಸ್ಪೀಕಿಂಗ್’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರದ ಮೂಲಕ ಅವರಿಗೆ ಹೆಚ್ಚು ಜನಪ್ರಿಯತೆ ಸಿಕ್ಕಿತು. ಇದೇ ಚಿತ್ರವನ್ನು ‘ಹೇರಾ ಫೇರಿ’ ಹೆಸರಲ್ಲಿ ಹಿಂದಿಗೆ ರಿಮೇಕ್ ಮಾಡಲಾಯಿತು.
End of an iconic chapter in cinema history! Rest in peace Legend! ??#Innocent pic.twitter.com/NkPGlnSnxB
— Prithviraj Sukumaran (@PrithviOfficial) March 26, 2023
ಇದನ್ನೂ ಓದಿ: SSMB28: ಪ್ರಭಾಸ್, ರಾಮ್ ಚರಣ್ ಜೊತೆ ಮಹೇಶ್ ಬಾಬು ಕ್ಲ್ಯಾಶ್; ಮತ್ತೆ ಸ್ಟಾರ್ ವಾರ್?
2012ರಲ್ಲಿ ರಿಲೀಸ್ ಆದ ಕನ್ನಡ-ಮಲಯಾಳಂ ಸಿನಿಮಾ ‘ಶಿಕಾರಿ’ ಚಿತ್ರದ ಮೂಲಕ ಇನ್ನೋಸೆಂಟ್ ಅವರು ಕನ್ನಡಕ್ಕೂ ಕಾಲಿಟ್ಟರು. ಇದು ಅವರ ಮೊದಲ ಮತ್ತು ಕೊನೆಯ ಕನ್ನಡ ಸಿನಿಮಾ. ಇದಲ್ಲದೆ, ಹಿಂದಿ ಹಾಗೂ ತಮಿಳು ಭಾಷೆಯಲ್ಲೂ ಇನ್ನೋಸೆಂಟ್ ಅವರು ನಟಿಸಿದ್ದಾರೆ. ಅವರ ನಿಧನಕ್ಕೆ ಅನೇಕ ಸ್ಟಾರ್ ಹೀರೋಗಳು ಸಂತಾಪ ಸೂಚಿಸುತ್ತಿದ್ದಾರೆ.
ಇದನ್ನೂ ಓದಿ: ರಾಮ್ ಚರಣ್ ಜನ್ಮದಿನ; ಸ್ಟಾರ್ ನಟನ ಈ ಸಿನಿಮಾಗಳನ್ನು ನೀವು ಮಿಸ್ ಮಾಡಲೇಬಾರದು
ಇನೋಸೆಂಟ್ ಅವರು ರಾಜಕೀಯದಲ್ಲೂ ತೊಡಗಿಕೊಂಡಿದ್ದರು. ಕೇರಳದ ಚಾಲಕುಡಿ ಕ್ಷೇತ್ರದಿಂದ ಸ್ಪರ್ಧಿಸಿ 2014ರಲ್ಲಿ ಎಂಪಿ ಆದರು. 2019ರ ಚುನಾವಣೆಯಲ್ಲಿ ಅವರು ಸೋತರು. ಸಿನಿಮಾ ಹಾಗೂ ರಾಜಕೀಯ ಎರಡನ್ನೂ ಸಮತೋಲನ ಮಾಡಿಕೊಂಡು ಅವರು ಬಂದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:43 am, Mon, 27 March 23