ಸ್ಪೂಫ್ ವಿಡಿಯೊವನ್ನು ನಿಜವೆಂದು ಭಾವಿಸಿ ಕತಾರ್​​ ಏರ್​​​ವೇಸ್ ಮುಖ್ಯಸ್ಥರನ್ನು ಈಡಿಯಟ್ ಎಂದ ಕಂಗನಾ

ಅಲ್ ಜಝೀರಾಕ್ಕೆ ಕತಾರ್ ಏರ್ ವೇಸ್ ಮುಖ್ಯಸ್ಥ ನೀಡಿದ ಸಂದರ್ಶನವೊಂದರ ಸ್ಪೂಫ್ ವಿಡಿಯೊವನ್ನು ಟ್ವಿಟರ್ ಬಳಕೆದಾರರೊಬ್ಬರು ಹರಿಬಿಟ್ಟಿದ್ದು ಅದೂ ವೈರಲ್ ಆಗಿದೆ. ಸಂದರ್ಶನ ವಿಡಿಯೊವನ್ನು ಹಾಸ್ಯ, ವಿಡಂಬನೆಯ ಮಾತುಗಳಿಂದ ಡಬ್ ಮಾಡಿದ್ದು...

ಸ್ಪೂಫ್ ವಿಡಿಯೊವನ್ನು ನಿಜವೆಂದು ಭಾವಿಸಿ ಕತಾರ್​​ ಏರ್​​​ವೇಸ್ ಮುಖ್ಯಸ್ಥರನ್ನು ಈಡಿಯಟ್ ಎಂದ ಕಂಗನಾ
ಕಂಗನಾ ರಣಾವತ್
TV9kannada Web Team

| Edited By: Rashmi Kallakatta

Jun 08, 2022 | 11:04 PM

ದೆಹಲಿ: ಒಂದಲ್ಲ ಒಂದು ವಿವಾದಗಳಿಂದ ಸದಾ ಸುದ್ದಿಯಲ್ಲಿರುವ ನಟಿ ಕಂಗನಾ ರಣಾವತ್  ಸ್ಪೂಫ್ ವಿಡಿಯೊವನ್ನೇ ನಿಜವೆಂದು ಭಾವಿಸಿ ಆಕ್ರೋಶದ ಪ್ರತಿಕ್ರಿಯೆ ನೀಡಿ ನಗೆಪಾಟಲಿಗೀಡಾಗಿದ್ದಾರೆ. ಬಿಜೆಪಿಯ ಮಾಜಿ ವಕ್ತಾರರು ಪ್ರವಾದಿ ಮೊಹಮ್ಮದ್ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದನ್ನು ಕತಾರ್ ಖಂಡಿಸಿತ್ತು. ಈ ವಿವಾದದ ನಡುವೆ ಬಾಯ್ಕಾಟ್ ಕತಾರ್ ಏರ್​​ವೇಸ್ ಎಂಬ ಅಭಿಯಾನ ಟ್ವಿಟರ್​​ನಲ್ಲಿ ನಡೆದಿತ್ತು. ಇತ್ತ ವಶುದೇವ್ ಎಂಬ ಯುವಕ ಭಾರತ ಕತಾರ್ ಏರ್​​ವೇಸ್​​ನ್ನು ಬಾಯ್ಕಾಟ್ ಮಾಡಬೇಕು ಎಂದು ಕರೆ ನೀಡುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಈ ವಿಡಿಯೊದಲ್ಲಿ ವಶುದೇವ್, ಹಿಂದೂ ದೇವತೆಗಳ ನಗ್ನ ಚಿತ್ರಗಳನ್ನು ಚಿತ್ರಿಸಿದ ಕಲಾವಿದ ಎಂಎಫ್ ಹುಸೇನ್ ಅವರಿಗೆ ಕತಾರ್ ಆಶ್ರಯ ನೀಡಿದೆ. ಇಂತಿರುವಾಗ(ಬಿಜೆಪಿಯ ಮಾಜಿ ವಕ್ತಾರ) ನೂಪುರ್ ಶರ್ಮಾ ಅವರ ಹೇಳಿಕೆಗಳ ಬಗ್ಗೆ ಅದೇ ಕತಾರ್ ನಮಗೆ ಪಾಠ ಹೇಳಲು ಬರುತ್ತಿದೆ. ಈ ವಿವಾದದಿಂದಾಗಿ ಕತಾರ್‌ನಲ್ಲಿ ಭಾರತೀಯರನ್ನು ವಜಾ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಕತಾರ್​​ನ ಉತ್ಪನ್ನಗಳನ್ನು ಮತ್ತು ಕತಾರ್ ಏರ್‌ವೇಸ್‌ನ್ನು ಬಹಿಷ್ಕರಿಸುವಂತೆ ಕರೆ ನೀಡಿದ್ದರು.

ಸ್ಫೂಫ್ ವಿಡಿಯೊ ವೈರಲ್

ಅಲ್ ಜಝೀರಾಕ್ಕೆ ಕತಾರ್ ಏರ್ ವೇಸ್ ಮುಖ್ಯಸ್ಥ ನೀಡಿದ ಸಂದರ್ಶನವೊಂದರ ಸ್ಪೂಫ್ ವಿಡಿಯೊವನ್ನು ಟ್ವಿಟರ್ ಬಳಕೆದಾರರೊಬ್ಬರು ಹರಿಬಿಟ್ಟಿದ್ದು ಅದೂ ವೈರಲ್ ಆಗಿದೆ. ಸಂದರ್ಶನ ವಿಡಿಯೊವನ್ನು ಹಾಸ್ಯ, ವಿಡಂಬನೆಯ ಮಾತುಗಳಿಂದ ಡಬ್ ಮಾಡಿದ್ದು, ಕತಾರ್ ಏರ್​​ವೇಸ್ ಮುಖ್ಯಸ್ಥ ಅಕ್ಬರ್ ಅಲ್ ಬಕೇರ್ ಬಾಯ್ಕಾಟ್ ಕರೆ ಕೈ ಬಿಡುವಂತೆ ವಶುದೇವ್ ಅವರಲ್ಲಿ ವಿನಂತಿಸುತ್ತಿರುವುದಾಗಿ ತೋರಿಸಲಾಗಿದೆ.

ಡಬ್ ಮಾಡಿದ ಮಾತುಗಳು ಹೀಗಿವೆ: ವಶುದೇವ್ ನಮ್ಮ ದೊಡ್ಡ ಶೇರ್ ಹೋಲ್ಡರ್ ಆಗಿದ್ದಾರೆ, ಅವರು ₹ 624.50 ಹೂಡಿಕೆ ಹೊಂದಿದ್ದಾರೆ. ಇನ್ನು ಮುಂದೆ ಅದನ್ನು ಹೇಗೆ ನಿಭಾಯಿಸಬೇಕು ಎಂಬುದು ನಮಗೆ ಗೊತ್ತಿಲ್ಲ. ನಾವು ಎಲ್ಲ ವಿಮಾನಗಳನ್ನು ಕೆಳಗಿಳಿಸಿದ್ದೇವೆ. ನಮ್ಮ ವಿಮಾನಗಳು ಹಾರಾಡುವುದಿಲ್ಲ. ಬಾಯ್ಕಾಟ್​​ಗೆ ಕರೆನೀಡಿರುವುದನ್ನು ವಾಪಸ್ ಪಡೆಯಲಿ ಎಂದು ನಾವು ವಶುದೇವ್​​ನಲ್ಲಿ ಮನವಿ ಮಾಡುತ್ತೇವೆ. ಅದೇ ವೇಳೆ ವಶುದೇವ್ ಅವರು ತನ್ನ ವಿಡಿಯೊವನ್ನು ಶೇರ್ ಮಾಡಿ boycott ಎಂದು ಬರೆಯುವ ಬದಲು bycott ಎಂದು ಬರೆದಿದ್ದರು. ಬಾಯ್ಕಾಟ್ ಸ್ಪೆಲ್ಲಿಂಗ್ ಮಿಸ್ಟೇಕ್ ಬಗ್ಗೆಯೂ ಸ್ಪೂಫ್ ವಿಡಿಯೊದಲ್ಲಿ ಹೇಳಲಾಗಿದೆ. ಇದೊಂಥರಾ ವಿಶೇಷ ರೀತಿಯ ಬಾಯ್ಕಾಟ್ ಯಾಕೆಂದರೆ b-y-c-o-t-t. ವಶುದೇವ್ ಹಬೀಬಿ, ನಿಮ್ಮ ಟಿಕ್​​ಟಾಕ್ ವಿಡಿಯೊಗಾಗಿ ನಾವು ಒಂದು ವಿಮಾನವನ್ನು ನೀಡಲು ಅಥವಾ 2  ಲೀಟರ್ ಉಚಿತ ಪೆಟ್ರೋಲ್ ನೀಡಲು ತಯಾರಿದ್ದೇವೆ ಎಂದು ವಿಡಿಯೊದಲ್ಲಿ ತಮಾಷೆ ಮಾಡಲಾಗಿದೆ.

ವಿಡಂಬನೆಯ ವಿಡಿಯೊವನ್ನು ನಿಜವೆಂದು ನಂಬಿದ ಪದ್ಮಶ್ರೀ ಕಂಗನಾ

ಇದನ್ನೂ ಓದಿ

ವೈರಲ್ ಆಗಿರುವ ಸ್ಪೂಫ್ ವಿಡಿಯೊವನ್ನು ನಿಜವೆಂದು ಭಾವಿಸಿದ ಪದ್ಮಶ್ರೀ ಪ್ರಶಸ್ತಿ ವಿಜೇತೆ 35ರ ಹರೆಯದ ಕಂಗನಾ, ಈ ವಿಡಿಯೊವನ್ನು ಕೊಂಡಾಡುತ್ತಿರುವ ಜನರ ವಿರುದ್ಧ ಕಿಡಿಕಾರಿದ್ದಾರೆ. ಬಡ ಯುವಕನ್ನು ಲೇವಡಿ ಮಾಡುತ್ತಾ ಈ ವಿಡಿಯೊವನ್ನು ಕೊಂಡಾಡುತ್ತಿರುವ ಭಾರತೀಯರು ಜನಸಂಖ್ಯೆಯಿಂದ ತುಂಬಿತುಳುಕುತ್ತಿರುವ ಈ ದೇಶಕ್ಕೆ ಹೊರೆ ಎಂದು ಕಂಗನಾ ತಮ್ಮ ಇನ್ ಸ್ಟಾಗ್ರಾಂ ಸ್ಟೋರಿ ಶೇರ್ ಮಾಡಿದ್ದಾರೆ. ಜಗತ್ತಿನಲ್ಲಿ ಅವನ ಅತ್ಯಲ್ಪ ಮತ್ತು ಸ್ಥಾನವನ್ನು ಅಣಕಿಸುತ್ತಾ ಬಡವನನ್ನು ಲೇವಡಿ ಮಾಡುವುದಕ್ಕೆ ಈ ಮೂರ್ಖನಿಗೆ ನಾಚಿಕೆ ಆಗುತ್ತಿಲ್ಲವೇ ಎಂದು ಕಂಗನಾ ಇನ್ನೊಂದು ಸ್ಟೋರಿ ಶೇರ್ ಮಾಡಿದ್ದಾರೆ. ವಾಸುದೇವ್ ನಿಮ್ಮಂತಹ ಶ್ರೀಮಂತರಿಗೆ ಬಡವ ಮತ್ತು ಅತ್ಯಲ್ಪ. ಆದರೆ ಯಾವುದೇ ಸಂದರ್ಭದಲ್ಲಿ ತನ್ನ ದುಃಖ, ನೋವು ಮತ್ತು ನಿರಾಶೆಯನ್ನು ವ್ಯಕ್ತಪಡಿಸುವ ಹಕ್ಕಿದೆ … ಈ ಪ್ರಪಂಚದ ಆಚೆಗೆ ನಾವೆಲ್ಲರೂ ಸಮಾನರು ಎಂದು ನೆನಪಿಡಿ ಎಂದು ಕಂಗನಾ ಬರೆದಿದ್ದಾರೆ. ಕಂಗನಾಳ ಈ ಅಚಾತುರ್ಯ ವೈರಲ್ ಆದ ನಂತರ ಆ ಇನ್ ಸ್ಟಾಗ್ರಾಮ್ ಸ್ಟೋರಿ ಡಿಲೀಟ್ ಆಗಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada