ಪತಿಯನ್ನು ಕಳೆದುಕೊಂಡ ದುಃಖದಲ್ಲಿ ವಿಶೇಷ ಮನವಿ ಮಾಡಿದ ನಟಿ ಮೀನಾ

ವಿದ್ಯಾ ಸಾಗರ್ ನಿಧನಕ್ಕೆ ಕೊವಿಡ್ ಕಾರಣ ಎಂದೇ ಹೇಳಲಾಗಿತ್ತು. ಈ ಬಗ್ಗೆ ಅನೇಕ ಅಂತೆಕಂತೆಗಳು ಹರಿದಾಡಿದ್ದವು. ಈ ಸಂದರ್ಭದಲ್ಲಿ ವದಂತಿಗಳನ್ನು ಜನರು ನಿಜ ಎಂದು ನಂಬಿಕೊಳ್ಳುತ್ತಾರೆ. ಹಾಗಾಗಬಾರದು ಎಂಬ ಕಾರಣಕ್ಕೆ ಮೀನಾ ವಿಶೇಷ ಮನವಿ ಮಾಡಿದ್ದಾರೆ.

ಪತಿಯನ್ನು ಕಳೆದುಕೊಂಡ ದುಃಖದಲ್ಲಿ ವಿಶೇಷ ಮನವಿ ಮಾಡಿದ ನಟಿ ಮೀನಾ
ಮೀನಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Jul 01, 2022 | 7:12 PM

ಬಹುಭಾಷಾ ನಟಿ ಮೀನಾ (Actress Meena) ಅವರ ಪತಿ ವಿದ್ಯಾ ಸಾಗರ್ (Vidya Sagar) ಅವರು ಇತ್ತೀಚೆಗೆ ಮೃತಪಟ್ಟರು. ಶ್ವಾಸಕೋಶ ಸಂಬಂಧಿ ಕಾಯಿಲೆಯಿಂದ ಅವರು ಮೃತಪಟ್ಟ ವಿಚಾರ ಕೇಳಿ ಅನೇಕ ಸೆಲೆಬ್ರಿಟಿಗಳು ಸಂತಾಪ ಸೂಚಿಸುತ್ತಿದ್ದಾರೆ. ಪತಿಯನ್ನು ಕಳೆದುಕೊಂಡ ನೋವು ಮೀನಾ ಅವರನ್ನು ಬಹುವಾಗಿ ಕಾಡಿದೆ. ವಿದ್ಯಾ ಸಾಗರ್ ನಿಧನದ ನಂತರದಲ್ಲಿ ಅವರು ಇದೇ ಮೊದಲ ಬಾರಿಗೆ ಮೀನಾ ಪ್ರತಿಕ್ರಿಯೆ ನೀಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರು ಭಾವುಕರಾಗಿ ಪೋಸ್ಟ್ ಹಾಕಿದ್ದಾರೆ.

‘ನನ್ನ ಪ್ರೀತಿಯ ಪತಿ ವಿದ್ಯಾ ಸಾಗರ್ ಅವರ ಅಗಲಿಕೆಯಿಂದ ನಾನು ತುಂಬಾ ದುಃಖಿತನಾಗಿದ್ದೇನೆ. ನಮ್ಮ ಖಾಸಗಿತನವನ್ನು ಗೌರವಿಸಿ ಮತ್ತು ಸ್ವಲ್ಪ ಸಹಾನುಭೂತಿಯನ್ನು ತೋರಿಸಿ ಎಂದು ನಾನು ಎಲ್ಲಾ ಮಾಧ್ಯಮಗಳ ಬಳಿ ಪ್ರಾಮಾಣಿಕವಾಗಿ ವಿನಂತಿಸುತ್ತೇನೆ’ ಎಂದು ಪತ್ರ ಆರಂಭಿಸಿದ್ದಾರೆ ಮೀನಾ.

ಇದನ್ನೂ ಓದಿ
Image
ಹಾಟ್ ಅವತಾರ ತಾಳಿದ ರಾಶಿ ಖನ್ನಾಗೆ ಸಖತ್ ಡಿಮ್ಯಾಂಡ್
Image
Meena: ಮೀನಾ ಪತಿ ವಿದ್ಯಾಸಾಗರ್​ ಸಾವಿಗೆ ಕಾರಣ ಏನು? ಕೊವಿಡ್​ ಕುರಿತ ಅನುಮಾನಕ್ಕೆ ಖುಷ್ಬೂ ಪ್ರತಿಕ್ರಿಯೆ
Image
Meena: ಬಹುಭಾಷಾ ನಟಿ ಮೀನಾ ಪತಿ ವಿದ್ಯಾಸಾಗರ್​​ ಇನ್ನಿಲ್ಲ; ಶ್ವಾಸಕೋಶದ ಸೋಂಕಿನಿಂದ ನಿಧನ

ವಿದ್ಯಾ ಸಾಗರ್ ನಿಧನಕ್ಕೆ ಕೊವಿಡ್ ಕಾರಣ ಎಂದೇ ಹೇಳಲಾಗಿತ್ತು. ಈ ಬಗ್ಗೆ ಅನೇಕ ಅಂತೆಕಂತೆಗಳು ಹರಿದಾಡಿದ್ದವು. ಈ ಕುರಿತು ನಟಿ ಖುಷ್ಬೂ ಕಡೆಯಿಂದ ಸ್ಪಷ್ಟನೆ ಕೂಡ ಸಿಕ್ಕಿತ್ತು. ಈ ಸಂದರ್ಭದಲ್ಲಿ ವದಂತಿಗಳನ್ನು ಜನರು ನಿಜ ಎಂದು ನಂಬಿಕೊಳ್ಳುತ್ತಾರೆ. ಹಾಗಾಗಬಾರದು ಎಂಬ ಕಾರಣಕ್ಕೆ ಮೀನಾ ವಿಶೇಷ ಮನವಿ ಮಾಡಿದ್ದಾರೆ. ‘ದಯವಿಟ್ಟು ಈ ವಿಷಯದ ಕುರಿತು ಯಾವುದೇ ಸುಳ್ಳು ಮಾಹಿತಿಯನ್ನು ಪ್ರಸಾರ ಮಾಡಬೇಡಿ’ ಎಂದು ಕೋರಿದ್ದಾರೆ.

ಈ ಸಂದರ್ಭದಲ್ಲಿ ಬೆಂಬಲಕ್ಕೆ ನಿಂತ ಎಲ್ಲರಿಗೂ ಮೀನಾ ಧನ್ಯವಾದ ಹೇಳಿದ್ದಾರೆ. ‘ಈ ಕಷ್ಟದ ಸಮಯದಲ್ಲಿ ನಮ್ಮ ಕುಟುಂಬದ ಸಹಾಯಕ್ಕೆ ನಿಂತ ಒಳ್ಳೆಯ ಹೃದಯಗಳಿಗೆ ನನ್ನ ಕೃತಜ್ಞತೆ. ಅತ್ಯುತ್ತಮ ಪ್ರಯತ್ನ ಮಾಡಿದ ಎಲ್ಲಾ ವೈದ್ಯಕೀಯ ತಂಡಕ್ಕೆ, ನಮ್ಮ ಸಿಎಂ, ಆರೋಗ್ಯ ಸಚಿವರು, ಸ್ನೇಹಿತರು, ಕುಟುಂಬ, ಮಾಧ್ಯಮಗಳು ಪ್ರೀತಿ ಕಳುಹಿಸಿದ್ದಕ್ಕಾಗಿ ಧನ್ಯವಾದ ಹೇಳಲು ಬಯಸುತ್ತೇನೆ’ ಎಂದಿದ್ದಾರೆ ಮೀನಾ.

ಖುಷ್ಬೂ ಹೇಳಿದ್ದೇನು?

ಬಹುಭಾಷಾ ನಟಿ ಮೀನಾ ಅವರ ಪತಿ ವಿದ್ಯಾಸಾಗರ್​ ನಿಧನಕ್ಕೆ ಕೊರೊನಾ ಕಾರಣ ಎಂದು ಕೆಲವು ಮಾಧ್ಯಮಗಳಲ್ಲಿ ವರದಿ ಆಯಿತು. ಅದು ಖುಷ್ಬೂ ಗಮನಕ್ಕೆ ಬಂದಿದೆ. ಆ ಕುರಿತು ಅವರು ಟ್ವೀಟ್​ ಮಾಡಿದ್ದಾರೆ. ‘ಮಾಧ್ಯಮದವರು ತುಂಬ ಜವಾಬ್ದಾರಿಯುತವಾಗಿ ಇರಬೇಕು ಎಂದು ಮನವಿ ಮಾಡಿಕೊಳ್ಳುತ್ತೇನೆ. ಮೀನಾ ಪತಿಗೆ ಮೂರು ತಿಂಗಳ ಹಿಂದೆ ಕೊವಿಡ್​ ಆಗಿತ್ತು. ಅದರಿಂದ ಅವರ ಶ್ವಾಸಕೋಶದ ಸ್ಥಿತಿ ಹದಗೆಟ್ಟಿತ್ತು. ಆದರೆ ಕೊವಿಡ್​ನಿಂದಲೇ ಅವರು ಮೃತರಾದರು ಎಂದು ಹೇಳುವ ಮೂಲಕ ತಪ್ಪು ಮಾಹಿತಿ ಮತ್ತು ಭಯವನ್ನು ಹುಟ್ಟುಹಾಕಬೇಡಿ. ನಾವು ಎಚ್ಚರಿಕೆಯಿಂದ ಇರಬೇಕು’ ಎಂದು ಅವರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Meena: ಬಹುಭಾಷಾ ನಟಿ ಮೀನಾ ಪತಿ ವಿದ್ಯಾಸಾಗರ್​​ ಇನ್ನಿಲ್ಲ; ಶ್ವಾಸಕೋಶದ ಸೋಂಕಿನಿಂದ ನಿಧನ

Meena: ಮೀನಾ ಪತಿ ವಿದ್ಯಾಸಾಗರ್​ ಸಾವಿಗೆ ಕಾರಣ ಏನು? ಕೊವಿಡ್​ ಕುರಿತ ಅನುಮಾನಕ್ಕೆ ಖುಷ್ಬೂ ಪ್ರತಿಕ್ರಿಯೆ

ಮುಖ್ಯಮಂತ್ರಿ ಮಾತಾಡುತ್ತಿದ್ದರೂ ಹೊರಗೆ ಹೋದ ವಿರೋಧಪಕ್ಷಗಳ ಶಾಸಕರು
ಮುಖ್ಯಮಂತ್ರಿ ಮಾತಾಡುತ್ತಿದ್ದರೂ ಹೊರಗೆ ಹೋದ ವಿರೋಧಪಕ್ಷಗಳ ಶಾಸಕರು
ಜಮೀರ್ ಉತ್ತರದಿಂದ ಬಿಜೆಪಿ ಸಮಾಧಾನವಾಗದಿದ್ದಾಗ ಮುಖ್ಯಮಂತ್ರಿ ಉತ್ತರ
ಜಮೀರ್ ಉತ್ತರದಿಂದ ಬಿಜೆಪಿ ಸಮಾಧಾನವಾಗದಿದ್ದಾಗ ಮುಖ್ಯಮಂತ್ರಿ ಉತ್ತರ
ಪ್ರಿನ್ಸಿಪಾಲ್​ಗೆ ಅಡುಗೆ ಮಾಡಿಕೊಡಲು 8ನೇ ಕ್ಲಾಸ್ ಹುಡುಗನಿಗೆ ಒತ್ತಾಯ
ಪ್ರಿನ್ಸಿಪಾಲ್​ಗೆ ಅಡುಗೆ ಮಾಡಿಕೊಡಲು 8ನೇ ಕ್ಲಾಸ್ ಹುಡುಗನಿಗೆ ಒತ್ತಾಯ
ಸದನದಲ್ಲಿ ಸಚಿವ ಜಮೀರ್ ಅಹ್ಮದ್ ನೆರವಿಗೆ ಧಾವಿಸಿದ ಸಿದ್ದರಾಮಯ್ಯ
ಸದನದಲ್ಲಿ ಸಚಿವ ಜಮೀರ್ ಅಹ್ಮದ್ ನೆರವಿಗೆ ಧಾವಿಸಿದ ಸಿದ್ದರಾಮಯ್ಯ
ವಿರೋಧಪಕ್ಷದವರು ಸರ್ಕಾರದ ತಪ್ಪುಗಳನ್ನು ಎತ್ತಿ ತೋರಿಸಬೇಕು: ಮುಖ್ಯಮಂತ್ರಿ
ವಿರೋಧಪಕ್ಷದವರು ಸರ್ಕಾರದ ತಪ್ಪುಗಳನ್ನು ಎತ್ತಿ ತೋರಿಸಬೇಕು: ಮುಖ್ಯಮಂತ್ರಿ
Amit Shah Press Meet Live:ಅಮಿತ್​ ಶಾ ತುರ್ತು ಸುದ್ದಿಗೋಷ್ಠಿ ನೇರಪ್ರಸಾರ
Amit Shah Press Meet Live:ಅಮಿತ್​ ಶಾ ತುರ್ತು ಸುದ್ದಿಗೋಷ್ಠಿ ನೇರಪ್ರಸಾರ
ತಲೆ ಚಚ್ಚಿಕೊಂಡು ಕಣ್ಣೀರು ಹಾಕಿದ ಚೈತ್ರಾ ಕುಂದಾಪುರ
ತಲೆ ಚಚ್ಚಿಕೊಂಡು ಕಣ್ಣೀರು ಹಾಕಿದ ಚೈತ್ರಾ ಕುಂದಾಪುರ
ಧರಣಿ ಮರೆತು ಸಚಿವೆ ಜತೆ ಸೆಲ್ಫೀ ತೆಗೆದುಕೊಂಡ ಅಂಗನವಾಡಿ ಕಾರ್ಯಕರ್ತೆಯರು!
ಧರಣಿ ಮರೆತು ಸಚಿವೆ ಜತೆ ಸೆಲ್ಫೀ ತೆಗೆದುಕೊಂಡ ಅಂಗನವಾಡಿ ಕಾರ್ಯಕರ್ತೆಯರು!
ಬೆಂಗಳೂರು ಬೆಳೆದರೆ ಅದು ರಾಜ್ಯದ ಬೆಳವಣಿಗೆ ಅಲ್ಲ: ಲಕ್ಷ್ಮಣ ಸವದಿ
ಬೆಂಗಳೂರು ಬೆಳೆದರೆ ಅದು ರಾಜ್ಯದ ಬೆಳವಣಿಗೆ ಅಲ್ಲ: ಲಕ್ಷ್ಮಣ ಸವದಿ
ಮತ್ತೇ ಮುನ್ನೆಲೆಗೆ ಬಂದ ಐಎಎಸ್ ಮತ್ತು ಐಪಿಎಸ್ ಅಧಿಕಾರಿಣಿಗಳ ಜಗಳ
ಮತ್ತೇ ಮುನ್ನೆಲೆಗೆ ಬಂದ ಐಎಎಸ್ ಮತ್ತು ಐಪಿಎಸ್ ಅಧಿಕಾರಿಣಿಗಳ ಜಗಳ