ನಭಾ ನಟೇಶ್ ಕೈಯಲ್ಲಿಲ್ಲ ಯಾವುದೇ ಹೊಸ ಸಿನಿಮಾ; ಡಿಮ್ಯಾಂಡ್ ಬಿಡದಿದ್ದಕ್ಕೆ ಸಿಗುತ್ತಿಲ್ಲ ಆಫರ್?
‘ಇಸ್ಮಾರ್ಟ್ ಶಂಕರ್’ ಗೆಲುವಿನ ನಂತರ ನಭಾ ನಟೇಶ್ ಸಂಭಾವನೆ ಕೋಟಿ ರೂಪಾಯಿ ದಾಟಿದೆ ಎನ್ನಲಾಗಿದೆ. ಈ ಚಿತ್ರದ ನಂತರದಲ್ಲಿ ಅವರಿಗೆ ಹೇಳಿಕೊಳ್ಳುವಂತಹ ಯಶಸ್ಸು ಸಿಕ್ಕಿಲ್ಲ.
ನಭಾ ನಟೇಶ್ (Nabha Natesh)ಅವರು ಕನ್ನಡದ ನಟಿ. ಶಿವರಾಜ್ಕುಮಾರ್ (Shivarajkumar) ನಟನೆಯ ‘ವಜ್ರಕಾಯ’ ಸಿನಿಮಾದಿಂದ ಅವರು ಬಣ್ಣದ ಬದುಕು ಆರಂಭಿಸಿದರು. ಆ ಬಳಿಕ ಅವರಿಗೆ ಹಲವು ಆಫರ್ಗಳು ಬರೋಕೆ ಶುರುವಾದವು. ‘ವಜ್ರಕಾಯ’ ತೆರೆಕಂಡ ನಂತರ ಅವರು ಕನ್ನಡದ ಒಂದು ಚಿತ್ರದಲ್ಲಿ ನಟಿಸಿದರು. ಆ ಬಳಿಕ ಅವರು ಟಾಲಿವುಡ್ ಕದ ತಟ್ಟಿದರು. 2019ರಲ್ಲಿ ತೆರೆಗೆ ಬಂದ ‘ಇಸ್ಮಾರ್ಟ್ ಶಂಕರ್’ ಸಿನಿಮಾದಿಂದ ನಭಾ ಲಕ್ ಬದಲಾಯಿತು. ಅವರು ಹಲವು ತೆಲುಗು ಚಿತ್ರಗಳಲ್ಲಿ ನಟಿಸಿದರು. ಆದರೆ, ಇತ್ತೀಚೆಗೆ ಅವರು ಹೊಸ ಚಿತ್ರಗಳನ್ನು ಒಪ್ಪಿಕೊಂಡಿಲ್ಲ. ಇದಕ್ಕೆ ನಭಾ ಮಾಡುತ್ತಿರುವ ಡಿಮ್ಯಾಂಡ್ ಕಾರಣ ಎನ್ನಲಾಗುತ್ತಿದೆ.
ಹೀರೋಗಳಿಗೆ ಹೋಲಿಸಿದರೆ ನಟಿಯರಿಗೆ ನೀಡುವ ಸಂಭಾವನೆ ಕಡಿಮೆಯೇ. ಅಷ್ಟು ದೊಡ್ಡ ಮಟ್ಟದಲ್ಲಿ ಖ್ಯಾತಿ ಗಳಿಸಿದ ನಾಯಕಿಯರು ಮಾತ್ರ ಕೋಟಿ ಮೇಲೆ ಸಂಭಾವನೆ ಪಡೆಯುತ್ತಾರೆ. ಕನ್ನಡದಿಂದ ತೆಲುಗಿಗೆ ಹಾರಿರುವ ಶ್ರೀಲೀಲಾ, ಮಂಗಳೂರು ಮೂಲದ ಕೃತಿ ಶೆಟ್ಟಿ ಸಂಭಾವನೆ ಕೋಟಿ ರೂಪಾಯಿ ಸಮೀಪಿಸಿದೆ. ಅವರಿಗೆ ಡಿಮ್ಯಾಂಡ್ ಹೆಚ್ಚಿದಂತೆ ಸಂಭಾವನೆ ಕೂಡ ಹೆಚ್ಚುತ್ತಿದೆ. ಆದರೆ, ನಭಾ ಇಡುತ್ತಿರುವ ಡಿಮ್ಯಾಂಡ್ನಿಂದ ಅವರಿಗೆ ಆಫರ್ಗಳು ಸಿಗುತ್ತಿಲ್ಲ ಎನ್ನಲಾಗಿದೆ.
‘ಇಸ್ಮಾರ್ಟ್ ಶಂಕರ್’ ಗೆಲುವಿನ ನಂತರ ನಭಾ ನಟೇಶ್ ಸಂಭಾವನೆ ಕೋಟಿ ರೂಪಾಯಿ ದಾಟಿದೆ ಎನ್ನಲಾಗಿದೆ. ಈ ಚಿತ್ರದ ನಂತರದಲ್ಲಿ ಅವರಿಗೆ ಹೇಳಿಕೊಳ್ಳುವಂತಹ ಯಶಸ್ಸು ಸಿಕ್ಕಿಲ್ಲ. ಹೀಗಾಗಿ, ಅನೇಕ ನಿರ್ಮಾಪಕರು ಸಂಭಾವನೆ ತಗ್ಗಿಸಿಕೊಳ್ಳುವಂತೆ ಕೇಳಿದ್ದಾರೆ. ಆದರೆ, ಕೋಟಿ ರೂಪಾಯಿ ಡಿಮ್ಯಾಂಡ್ನಿಂದ ಹಿಂದೆ ಸರಿಯಲು ಅವರು ಒಪ್ಪಿಲ್ಲ ಎಂದು ತೆಲುಗು ಮಾಧ್ಯಮಗಳು ವರದಿ ಮಾಡಿವೆ.
ನಭಾ ಅವರು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ. ಅವರು ಹಲವು ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ. ಫೋಟೋಶೂಟ್ನಿಂದ ಕೆಲ ನಟಿಯರಿಗೆ ಆಫರ್ ಸಿಕ್ಕಿದಿದೆ. ಆದರೆ, ಈ ಫೋಟೋಶೂಟ್ ನಭಾ ಕರಿಯರ್ಗೆ ಸಹಕಾರಿ ಆಗುತ್ತಿಲ್ಲ ಎನ್ನಲಾಗಿದೆ.
2021ರಲ್ಲಿ ತೆರೆಗೆ ಬಂದ ‘ಮಾಸ್ಟ್ರೋ’ ಸಿನಿಮಾದಲ್ಲಿ ನಭಾ ನಟೇಶ್ ಕೊನೆಯದಾಗಿ ಕಾಣಿಸಿಕೊಂಡರು. ಹಿಂದಿಯ ‘ಅಂಧಾಧುನ್’ ಚಿತ್ರದ ರಿಮೇಕ್ ಇದಾಗಿದೆ. ಈ ಸಿನಿಮಾ ಬಳಿಕ ಅವರು ಯಾವುದೇ ಚಿತ್ರದಲ್ಲಿ ನಟಿಸಿಲ್ಲ.
ಇದನ್ನೂ ಒದಿ: ಸೀರೆಯುಟ್ಟು ಗ್ಲಾಮರಸ್ ಲುಕ್ನಲ್ಲಿ ಮಿಂಚಿದ ವಜ್ರಕಾಯ ಬೆಡಗಿ ನಭಾ ನಟೇಶ್
ಟೆಂಪ್ರೇಚರ್ ಹೆಚ್ಚಿಸುವ ಲುಕ್ನಲ್ಲಿ ನಭಾ ನಟೇಶ್
Published On - 5:49 pm, Fri, 1 July 22