ಧಾರಾವಾಹಿ ನಟನಾಗಿದ್ದಾಗ ಕಿಚ್ಚ ಸುದೀಪ್, ಯಾವ ಧಾರಾವಾಹಿ ಗೊತ್ತ?
Kichcha Sudeep: ಸುದೀಪ್ ಇಂದು ಚಿತ್ರರಂಗದ ಬಾದ್ ಶಾ ಎನಿಸಿಕೊಂಡಿದ್ದಾರೆ. ಆದರೆ ಸುದೀಪ್ ಅವರು ಈ ಸ್ಥಾನಕ್ಕೆ ಏರಲು ಸಾಕಷ್ಟು ಕಷ್ಟಪಟ್ಟಿದ್ದಾರೆ. ಹಲವಾರು ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸಿ ಬಳಿಕ ನಾಯಕನಾದವರು ಸುದೀಪ್. ಸಿನಿಮಾ ಅವಕಾಶ ಎಂಬುದು ಅವರು ಸುಲಭವಾಗಿ ಬಂದಿದ್ದಲ್ಲ, ಮುಂಬೈಗೆ ಹೋಗಿ ತರಬೇತಿ ಪಡೆದು ಬಂದು, ಧಾರಾವಾಹಿ, ಸಿನಿಮಾಗಳಲ್ಲಿ ಸಣ್ಣ-ಪುಟ್ಟ ಪಾತ್ರಗಳಲ್ಲಿ ನಟಿಸಿದ ಬಳಿಕವೇ ನಾಯಕ ಆದವರು.

ಸುದೀಪ್ (Sudeep) ಕನ್ನಡ ಚಿತ್ರರಂಗದ ಮಾತ್ರವಲ್ಲ ಭಾರತೀಯ ಚಿತ್ರರಂಗದ ಪ್ರತಿಭಾವಂತ ಸ್ಟಾರ್ ನಟರಲ್ಲಿ ಒಬ್ಬರು. ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಅಭಿಮಾನಿಗಳನ್ನು ಕಿಚ್ಚ ಸುದೀಪ್ ಹೊಂದಿದ್ದಾರೆ. ಸುದೀಪ್ ಇಂದು ಚಿತ್ರರಂಗದ ಬಾದ್ ಶಾ ಎನಿಸಿಕೊಂಡಿದ್ದಾರೆ. ಆದರೆ ಸುದೀಪ್ ಅವರು ಈ ಸ್ಥಾನಕ್ಕೆ ಏರಲು ಸಾಕಷ್ಟು ಕಷ್ಟಪಟ್ಟಿದ್ದಾರೆ. ಹಲವಾರು ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸಿ ಬಳಿಕ ನಾಯಕನಾದವರು ಸುದೀಪ್. ಸಿನಿಮಾ ಅವಕಾಶ ಎಂಬುದು ಅವರು ಸುಲಭವಾಗಿ ಬಂದಿದ್ದಲ್ಲ, ಮುಂಬೈಗೆ ಹೋಗಿ ತರಬೇತಿ ಪಡೆದು ಬಂದು, ಧಾರಾವಾಹಿ, ಸಿನಿಮಾಗಳಲ್ಲಿ ಸಣ್ಣ-ಪುಟ್ಟ ಪಾತ್ರಗಳಲ್ಲಿ ನಟಿಸಿದ ಬಳಿಕವೇ ನಾಯಕ ಆದವರು.
ಸುದೀಪ್ ಅವರು ‘ತಾಯವ್ವ’ ಹೆಸರಿನ ಸಿನಿಮಾನಲ್ಲಿ ಮೊದಲು ನಟಿಸಿದ್ದು ಬಹುತೇಕ ಎಲ್ಲರಿಗೂ ತಿಳಿದಿರುವಂಥಹದೇ ಆದರೆ ಅದಕ್ಕೂ ಮುನ್ನ ಸುದೀಪ್, ಧಾರಾವಾಹಿ ಒಂದರಲ್ಲಿ ಕೆಲ ಸಮಯ ನಟಿಸಿದ್ದರು. ಸುದೀಪ್ ಅವರ ಧಾರಾವಾಹಿ ವಿಷಯ ಅವರ ಅಭಿಮಾನಿಗಳಿಗೆ ಕೆಲವರಿಗೆ ತಿಳಿದಿರಲಿಕ್ಕಿಲ್ಲ. ಸುಮಾರು 30 ವರ್ಷಗಳ ಹಿಂದೆ ಸುದೀಪ್ ಅವರು ಧಾರಾವಾಹಿ ಒಂದರಲ್ಲಿ ಮೊದಲ ಬಾರಿಗೆ ನಟಿಸಿದ್ದರು. ಆ ಧಾರಾವಾಹಿಯಲ್ಲಿ ಸುದೀಪ್ ಅವರ ಸಹ ನಟಿ ಆಗಿದ್ದವರು ಇದೀಗ ಸುದೀಪ್ ಅವರ ಆ ಹಳೆಯ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
1996ರಲ್ಲಿ ಸುದೀಪ್ ಅವರು ‘ಪ್ರೇಮದ ಕಾದಂಬರಿ’ ಹೆಸರಿನ ಧಾರಾವಾಹಿಯಲ್ಲಿ ನಟಿಸಿದ್ದರು. ಬಹುತೇಕ ಧಾರಾವಾಹಿಗಳು ಮಹಿಳಾ ಪ್ರಧಾನ ಆಗಿರುವ ಕಾರಣ, ಧಾರಾವಾಹಿಯಲ್ಲಿ ಬಹಳ ಪ್ರಮುಖವಾದ ಪಾತ್ರ ಸುದೀಪ್ ಅವರದ್ದಾಗಿರಲಿಲ್ಲ. ಅದೇ ಧಾರಾವಾಹಿಯಲ್ಲಿ ಸುದೀಪ್ ಜೊತೆಗೆ ಸಂಗೀತ ಅನಿಲ್ ಅವರು ಹಳೆಯ ಫೊಟೊವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಮೀಸೆ, ಗಡ್ಡ ರಹಿತವಾಗಿ ಸುದೀಪ್, ಚಾಕಲೇಟ್ ಬಾಯ್ ರೀತಿ ಕಾಣುತ್ತಿದ್ದಾರೆ. ಸುದೀಪ್ ಮತ್ತು ಸಂಗೀತ ಅವರು ‘ಪ್ರೇಮ ಬರಹ’ ಧಾರಾವಾಹಿಯಲ್ಲಿ ಒಟ್ಟಿಗೆ ನಟಿಸಿದ್ದರು, ಅದು 1996 ರಲ್ಲಿ ಉದಯ ಚಾನೆಲ್ನಲ್ಲಿ ಪ್ರಸಾರ ಆಗುತ್ತಿತ್ತು.
ಇದನ್ನೂ ಓದಿ:‘ಬಿಗ್ಬಾಸ್’ ಅಪ್ಡೇಟ್ ಹೊತ್ತು ಬರುತ್ತಿದ್ದಾರೆ ಕಿಚ್ಚ ಸುದೀಪ್
ಚಿತ್ರದ ಜೊತೆಗೆ ಒಕ್ಕಣೆ ಬರೆದಿರುವ ಸಂಗೀತ ಅನಿಲ್, ‘ಇವರು ಯಾರೆಂದು ಊಹಿಸಿ ನನ್ನ ಹಳೆಯ ಆಲ್ಬಮ್ ಫೋಟೋ ಗ್ಯಾಲರಿಯಲ್ಲಿ ಸಿಕ್ಕಿತು ನನ್ನ ಒಂದು ಸೀರಿಯಲ್‌ನಲ್ಲಿ ನನ್ನ ನಾಯಕನಾಗಿದ್ದನು ಮತ್ತು ಈಗ ಅವನು ಕನ್ನಡ ಇಂಡಸ್ಟ್ರಿಯ ಬಾದ್‌ಶಾ ಇದು 26 ವರ್ಷದ ಹಳೆಯ ಚಿತ್ರ , ಹಂಚಿಕೊಳ್ಳದೇ ಇರಲಿಲ್ಲ, ನಮ್ಮ ಕಿಚ್ಚ ಸುದೀಪ್ ಬಗ್ಗೆ ‘ತುಂಬಾ ಸಂತೋಷ ಮತ್ತು ಹೆಮ್ಮೆ ಇದೆ ಆದರೆ ಚಿತ್ರ ಸ್ಪಷ್ಟವಾಗಿಲ್ಲ ದಯವಿಟ್ಟು ಸಹಿಸಿಕೊಳ್ಳಿ’ ಎಂದಿದ್ದಾರೆ. ಧಾರಾವಾಹಿ ಹೆಸರು ಊಹಿಸಿ ಎಂದು ಸವಾಲನ್ನು ಹಾಕಿದ್ದಾರೆ. ಆದರೆ ಬಹುತೇಕರಿಗೆ ಸಾಧ್ಯವಾಗಿಲ್ಲ.
ಸುದೀಪ್ ಈಗ ಹಲವಾರು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ‘ಬಿಲ್ಲ ರಂಗ ಭಾಷಾ’ ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿದೆ. ಅದಾದ ಬಳಿಕ ಒಬ್ಬ ತಮಿಳು ನಿರ್ದೇಶಕ, ಸುದೀಪ್ ಅವರಿಗಾಗಿ ಸಿನಿಮಾ ನಿರ್ದೇಶಿಸಲಿದ್ದಾರೆ. ಕೆಆರ್ಜಿ ಸ್ಟುಡಿಯೋಸ್ ನಿರ್ಮಾಣದ ಹೊಸ ಸಿನಿಮಾನಲ್ಲಿಯೂ ನಟಿಸಲಿದ್ದಾರೆ. ಇವುಗಳ ಜೊತೆಗೆ ಖುದ್ದು ಹೊಸ ಸಿನಿಮಾ ಒಂದನ್ನು ಸುದೀಪ್ ನಿರ್ದೇಶನ ಮಾಡಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




