AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಟ್ ಸಿನಿಮಾದ ಸೀಕ್ವೆಲ್​​ನಿಂದ ಹಿಂದೆ ಸರಿದ ನಿರ್ಮಾಪಕರು, ಸಂಕಷ್ಟದಲ್ಲಿ ‘ಬ್ರಹ್ಮಾಸ್ತ್ರ 2’

Brahmastra 2: ರಣ್​​ಬೀರ್ ಕಪೂರ್, ಆಲಿಯಾ ಭಟ್ ನಟಿಸಿದ್ದ ‘ಬ್ರಹ್ಮಾಸ್ತ್ರ’ ಸಿನಿಮಾ 2022 ರಲ್ಲಿ ಬಿಡುಗಡೆ ಆಗಿ ದೊಡ್ಡ ಹಿಟ್ ಆಗಿತ್ತು. ನಾಲ್ಕು ವರ್ಷವಾದರೂ ಸಿನಿಮಾದ ಸೀಕ್ವೆಲ್​ನ ಕೆಲಸಗಳು ಆರಂಭವಾಗಿರಲಿಲ್ಲ. ಇದೀಗ ಬಂದಿರುವ ಸುದ್ದಿಯ ಪ್ರಕಾರ, ‘ಬ್ರಹ್ಮಾಸ್ತ್ರ 2’ ಸಿನಿಮಾದಿಂದ ಕರಣ್ ಜೋಹರ್ ಹಾಗೂ ಜಿಯೋ ಸ್ಟುಡಿಯೋಸ್ ಹಿಂದೆ ಸರಿದಿದೆ.

ಹಿಟ್ ಸಿನಿಮಾದ ಸೀಕ್ವೆಲ್​​ನಿಂದ ಹಿಂದೆ ಸರಿದ ನಿರ್ಮಾಪಕರು, ಸಂಕಷ್ಟದಲ್ಲಿ ‘ಬ್ರಹ್ಮಾಸ್ತ್ರ 2’
Brahmastra
ಮಂಜುನಾಥ ಸಿ.
|

Updated on:Aug 25, 2026 | 2:05 PM

Share

ಕೋವಿಡ್ ಬಳಿಕ ಬಾಲಿವುಡ್​​ (Bollywood) ಸಿನಿಮಾಗಳು ಒಂದರ ಹಿಂದೊಂದು ಹೀನಾಯವಾಗಿ ಸೋಲುತ್ತಿದ್ದವು. ಬಾಲಿವುಡ್ ಮುಳುಗೇ ಹೋಯ್ತು ಎಂಬ ಮಾತುಗಳು ಹರಿದಾಡಲು ಆರಂಭವಾಗಿದ್ದವು. ಸಲ್ಮಾನ್ ಖಾನ್, ರಣ್ವೀರ್ ಕಪೂರ್ ಇನ್ನೂ ಕೆಲವು ಸ್ಟಾರ್ ನಟರ ಸಿನಿಮಾಗಳೇ ಫ್ಲಾಪ್ ಆಗಿದ್ದವು. ಅದೇ ಸಮಯದಲ್ಲಿ ಅಂದರೆ 2022ರಲ್ಲಿ ಬಿಡುಗಡೆ ಆದ ರಣ್​ಬೀರ್ ಕಪೂರ್ ನಟನೆಯ ‘ಬ್ರಹ್ಮಾಸ್ತ್ರ’ ಸಿನಿಮಾ ಹಿಟ್ ಎನಿಸಿಕೊಂಡಿತು. ಬಾಕ್ಸ್ ಆಫೀಸ್​​ನಲ್ಲಿ ಸುಮಾರು 450 ಕೋಟಿ ಗಳಿಸಿ ಸಂಕಷ್ಟದಲ್ಲಿದ್ದ ಬಾಲಿವುಡ್​​ಗೆ ನಿರೀಕ್ಷೆ ಹುಟ್ಟಿಸಿತು. ಆದರೆ ಇದೀಗ ಖುದ್ದು ಈ ಸಿನಿಮಾ ಸಂಕಷ್ಟಕ್ಕೆ ಸಿಲುಕಿದೆ. ಸಿನಿಮಾದ ಎರಡನೇ ಭಾಗದಿಂದ ಜಿಯೋ ಸ್ಟುಡಿಯೋ ಹಿಂದೆ ಸರಿದಿದೆ. ಜೊತೆಗೆ ಕರಣ್ ಜೋಹರ್ ಸಹ ಕೈಕೊಟ್ಟಿದ್ದಾರೆ.

ಸಿನಿಮಾದ ಮೊದಲ ಭಾಗದಲ್ಲಿ ರಣ್​​ಬೀರ್ ಕಪೂರ್, ಆಲಿಯಾ ಭಟ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರು. ಸಿನಿಮಾನಲ್ಲಿ ಅಮಿತಾಬ್ ಬಚ್ಚನ್, ಶಾರುಖ್ ಖಾನ್, ದೀಪಿಕಾ ಪಡುಕೋಣೆ ಅವರುಗಳು ಅತಿಥಿ ಪಾತ್ರಗಳಲ್ಲಿ ನಟಿಸಿದ್ದಾರೆ. ಮೊದಲ ಸಿನಿಮಾನಲ್ಲೇ ಸಿನಿಮಾದ ಎರಡನೇ ಭಾಗದ ಬಗ್ಗೆ ಸುಳಿವನ್ನು ನಿರ್ದೇಶಕ ಅಯಾನ್ ಮುಖರ್ಜಿ ನೀಡಿದ್ದರು. ಆದರೆ ಮೊದಲ ಸಿನಿಮಾ ಮುಗಿದು ನಾಲ್ಕು ವರ್ಷವಾದರೂ ‘ಬ್ರಹ್ಮಾಸ್ತ್ರ 2’ ಸಿನಿಮಾದ ಕೆಲಸಗಳು ಆರಂಭವಾಗಿರಲಿಲ್ಲ. ಇದೀಗ ಇದ್ದಕ್ಕಿದ್ದಂತೆ ಜಿಯೋ ಸ್ಟುಡಿಯೋ ಸಿನಿಮಾದಿಂದ ಹಿಂದೆ ಸರಿದಿದೆ. ಕರಣ್ ಅವರ ಧರ್ಮಾ ಪ್ರೊಡಕ್ಷನ್ ಸಹ ಈ ಸಿನಿಮಾದ ನಿರ್ಮಾಣದಿಂದ ಹಿಂದೆ ಸರಿದಿದೆ.

ಸಿನಿಮಾದ ಸ್ಟುಡಿಯೋ ಪಾರ್ಟನರ್ ಆಗುವಂತೆ ಅಯಾನ್ ಮುಖರ್ಜಿ ಜಿಯೋ ಸ್ಟುಡಿಯೋಸ್ ಅನ್ನು ಕೇಳಿದ್ದರು. ಈ ಬಗ್ಗೆ ಸಾಕಷ್ಟು ಮಾತುಕತೆ ನಡೆದು, ಜಿಯೋ ಸ್ಟುಡಿಯೋಸ್ ‘ಬ್ರಹ್ಮಾಸ್ತ್ರ 2’ ತಂಡ ಸೇರಿಕೊಳ್ಳಲಿದೆ ಎಂಬ ಸುದ್ದಿಗಳು ಸಹ ಹರಿದಾಡಿದ್ದವು. ಆದರೆ ಸಿನಿಮಾದ ಕೆಲ ಹಕ್ಕುಗಳ ಸಂಬಂಧ ಉಂಟಾಗಿರುವ ಭಿನ್ನಾಭಿಪ್ರಾಯದಿಂದ ಜಿಯೋ ಸ್ಟುಡಿಯೋ ಹಿಂದೆ ಸರಿದಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ:26 ವರ್ಷಗಳ ಬಳಿಕ ದಕ್ಷಿಣಕ್ಕೆ ಬರುತ್ತಿದ್ದಾರೆ ಬಾಲಿವುಡ್​​ ಹಿರಿಯ ನಟ

ಅಯಾನ್ ಮುಖರ್ಜಿ ಅವರ ಪ್ರೊಡಕ್ಷನ್ ಹೌಸ್ ಆದ ‘ಸ್ಟಾರ್‌ಲೈಟ್ ಪಿಕ್ಚರ್ಸ್ ಪ್ರೈವೇಟ್ ಲಿಮಿಟೆಡ್’, ಬ್ರಹ್ಮಾಸ್ತ್ರದ ಮೊದಲ ಭಾಗದ ನಿರ್ಮಾಪಕರಲ್ಲಿ ಒಂದಾಗಿದ್ದು, ಈ ಬ್ಯಾನರ್ ಚಿತ್ರದ ಐಪಿ (IP) ಹಕ್ಕುಗಳನ್ನು ಹೊಂದಿದೆ. ಸ್ಟಾರ್‌ಲೈಟ್ ಸಂಸ್ಥೆಯೇ ‘ಬ್ರಹ್ಮಾಸ್ತ್ರ 2’ ಅನ್ನು ನಿರ್ಮಿಸಲಿದ್ದು, ಅವರು ಜೊತೆಯಾಗಲು ಸ್ಟುಡಿಯೋ ಪಾಲುದಾರರಾಗಿ ಜಿಯೋ ಹಾಸ್ಟ್​​ಸ್ಟಾರ್ ಅನ್ನು ಕೇಳಲಾಗಿತ್ತು.

‘ಬ್ರಹ್ಮಾಸ್ತ್ರ’ ಸಿನಿಮಾಕ್ಕೆ ಸ್ಟಾರ್ ಸ್ಟುಡಿಯೋಸ್ ಪಾಲುದಾರಿಕೆಯನ್ನು ಹೊಂದಿತ್ತು. ಆದರೆ ಈಗ ಸ್ಟಾರ್ ಸ್ಟುಡಿಯೋಸ್, ಜಿಯೋ ಸ್ಟುಡಿಯೋಸ್​​ನ ಭಾಗವೇ ಆಗಿದೆ. ‘ಬ್ರಹ್ಮಾಸ್ತ್ರ 2’ ಸಿನಿಮಾಕ್ಕೆ ಅಯಾನ್ ಅವರು ಜಿಯೋ ಸ್ಟುಡಿಯೋಸ್ ಜೊತೆ ಪಾಲುದಾರಿಕೆಗೆ ಬಯಸಿದ್ದರು. ಜಿಯೋ ಅವರು ‘ಬ್ರಹ್ಮಾಸ್ತ್ರ 2’ ಜೊತೆ ಕೈಜೋಡಿಸಲಿದ್ದಾರೆ ಎಂದೇ ನಿರೀಕ್ಷಿಸಲಾಗಿತ್ತು. ಆದರೆ ಜಿಯೋ ಸ್ಟುಡಿಯೋಸ್ ಈ ಸಿನಿಮಾದಿಂದ ಹಿಂದೆ ಸರಿದಿದೆ.

ಮೊದಲ ‘ಬ್ರಹ್ಮಾಸ್ತ್ರ’ವನ್ನು ನಿರ್ಮಿಸಿದ್ದ ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ ಕೂಡ ಎರಡನೇ ಭಾಗದೊಂದಿಗೆ ಗುರುತಿಸಿಕೊಂಡಿಲ್ಲ. ಧರ್ಮ ಸಂಸ್ಥೆಯು ಹಿಂದೆ ಸರಿದ ನಂತರ, ಅಯಾನ್ ಮುಖರ್ಜಿ ಅವರು ಯಶ್ ರಾಜ್ ಫಿಲ್ಮ್ಸ್ ಜೊತೆ ಚರ್ಚೆಯನ್ನು ಆರಂಭಿಸಿದ್ದರು. ಅಯನ್ ಮುಖರ್ಜಿ ಅವರು ಯಶ್ ರಾಜ್ ಫಿಲಮ್ಸ್ ಗಾಗಿ ‘ವಾರ್ 2’ನಿರ್ದೇಶಿಸುತ್ತಿದ್ದಾಗ ಆದಿತ್ಯ ಚೋಪ್ರಾ ಈ ಯೋಜನೆಯಲ್ಲಿ ಆಸಕ್ತಿ ತೋರಿಸಿದ್ದರು. ಆದರೆ, ‘ವಾರ್ 2’ ಚಿತ್ರದ ನಿರಾಶಾದಾಯಕ ಪ್ರದರ್ಶನದ ನಂತರ, ವೈಆರ್​ಎಫ್ ಚರ್ಚೆಗಳನ್ನು ಮುಂದುವರಿಸದಿರಲು ನಿರ್ಧರಿಸಿತು. ತದನಂತರ ಜಿಯೋ ಸ್ಟುಡಿಯೋಸ್ ಚಿತ್ರರಂಗಕ್ಕೆ ಪ್ರವೇಶಿಸಿತು, ಆದರೆ ಆ ಒಪ್ಪಂದವೂ ವರ್ಕ್‌ಔಟ್ ಆಗಲಿಲ್ಲ. ಈಗ ‘ಬ್ರಹ್ಮಾಸ್ತ್ರ 2’ ಸಿನಿಮಾಕ್ಕೆ ನಿರ್ಮಾಪಕರೇ ಇಲ್ಲದಂತಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:04 pm, Tue, 25 August 26

Follow Us
PSI ಮೇಲೆ ಶಾಸಕ ಸುರೇಶ್‌ಗೌಡ ಪುತ್ರಿ ಕಪಾಳಮೋಕ್ಷ ಪ್ರಕರಣ; ವೀಡಿಯೋ ವೈರಲ್
PSI ಮೇಲೆ ಶಾಸಕ ಸುರೇಶ್‌ಗೌಡ ಪುತ್ರಿ ಕಪಾಳಮೋಕ್ಷ ಪ್ರಕರಣ; ವೀಡಿಯೋ ವೈರಲ್
ಕೆಪಿಎಸ್‌ಸಿ ಕಚೇರಿ ಮೇಲೆ ಮತ್ತೆ ಸಿಐಡಿ ದಾಳಿ
ಕೆಪಿಎಸ್‌ಸಿ ಕಚೇರಿ ಮೇಲೆ ಮತ್ತೆ ಸಿಐಡಿ ದಾಳಿ
ಪುತ್ತೂರು ಬಂದ್ ಹಿನ್ನೆಲೆ ಪರಿಸ್ಥಿತಿ ಶಾಂತ: ಬಿಗಿ ಪೊಲೀಸ್ ಬಂದೋಬಸ್ತ್
ಪುತ್ತೂರು ಬಂದ್ ಹಿನ್ನೆಲೆ ಪರಿಸ್ಥಿತಿ ಶಾಂತ: ಬಿಗಿ ಪೊಲೀಸ್ ಬಂದೋಬಸ್ತ್
ಬಗೆದಷ್ಟೂ ಬಯಲಾಗ್ತಿದೆ ಮರಿ ವೀರಪ್ಪನ್​​ ಗೋವಿಂದನ ಕರಾಳ ಇತಿಹಾಸ!
ಬಗೆದಷ್ಟೂ ಬಯಲಾಗ್ತಿದೆ ಮರಿ ವೀರಪ್ಪನ್​​ ಗೋವಿಂದನ ಕರಾಳ ಇತಿಹಾಸ!
ಕೊಡಗಿನಲ್ಲಿ ವರುಣನ ಅಬ್ಬರ; ಭಾಗಮಂಡಲದ ತ್ರಿವೇಣಿ ಸಂಗಮ ಮತ್ತೆ ಜಲಾವೃತ!
ಕೊಡಗಿನಲ್ಲಿ ವರುಣನ ಅಬ್ಬರ; ಭಾಗಮಂಡಲದ ತ್ರಿವೇಣಿ ಸಂಗಮ ಮತ್ತೆ ಜಲಾವೃತ!
ತಮಿಳುನಾಡಿಗೆ ಮತ್ತೆ ನೀರು ಬಿಡಬೇಕೆಂಬ ಆದೇಶ ಖಂಡಿಸಿ ಮಂಡ್ಯದಲ್ಲಿ ಪ್ರತಿಭಟನೆ
ತಮಿಳುನಾಡಿಗೆ ಮತ್ತೆ ನೀರು ಬಿಡಬೇಕೆಂಬ ಆದೇಶ ಖಂಡಿಸಿ ಮಂಡ್ಯದಲ್ಲಿ ಪ್ರತಿಭಟನೆ
'ಬಿಗ್ ಬಾಸ್ ಅಗ್ನಿ ಪರೀಕ್ಷೆ'ಯಲ್ಲಿ ಹೈ-ವೋಲ್ಟೇಜ್ ಕಾದಾಟ
'ಬಿಗ್ ಬಾಸ್ ಅಗ್ನಿ ಪರೀಕ್ಷೆ'ಯಲ್ಲಿ ಹೈ-ವೋಲ್ಟೇಜ್ ಕಾದಾಟ
ಕರಾವಳಿಯಲ್ಲಿ ಇಂದು ಈದ್ ಮಿಲಾದ್: ದ.ಕ, ಉಡುಪಿ ಜಿಲ್ಲೆಗೆ ಸಾರ್ವತ್ರಿಕ ರಜೆ
ಕರಾವಳಿಯಲ್ಲಿ ಇಂದು ಈದ್ ಮಿಲಾದ್: ದ.ಕ, ಉಡುಪಿ ಜಿಲ್ಲೆಗೆ ಸಾರ್ವತ್ರಿಕ ರಜೆ
ಮಂಗಳ ಗೌರಿ ವ್ರತ, ಪ್ರದೋಷ ದಿನ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಮಂಗಳ ಗೌರಿ ವ್ರತ, ಪ್ರದೋಷ ದಿನ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಆಯಿಲ್ ಟ್ಯಾಂಕರ್ ಪಲ್ಟಿ; ಎಣ್ಣೆ ಹಿಡಿಯಲು ಬಕೆಟ್ ಹಿಡಿದು ನುಗ್ಗಿದ ಜನ!
ಆಯಿಲ್ ಟ್ಯಾಂಕರ್ ಪಲ್ಟಿ; ಎಣ್ಣೆ ಹಿಡಿಯಲು ಬಕೆಟ್ ಹಿಡಿದು ನುಗ್ಗಿದ ಜನ!