AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೆಲುಗು ಸಿನಿಮಾದಲ್ಲಿ ನಟಿಸಲಿದ್ದಾರೆ ಐಶ್ವರ್ಯಾ ರೈ: ನಾಯಕ ಯಾರು?

Aishwarya Rai: ನಟಿ ಐಶ್ವರ್ಯಾ ರೈ ಮೊದಲ ಬಾರಿಗೆ ತೆಲುಗು ಸಿನಿಮಾ ಒಂದರಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ. 1999ರಲ್ಲಿ ತೆಲುಗು ಸಿನಿಮಾದ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದರು ಐಶ್ವರ್ಯಾ, ಅದಾದ ಬಳಿಕ ಈಗ ನಾಯಕಿಯಾಗಿ ನಟಿಸುತ್ತಿದ್ದಾರೆ. ಅಂದಹಾಗೆ ಐಶ್ವರ್ಯಾ ಎದುರು ನಾಯಕನಾಗಿ ನಟಿಸಲಿರುವ ನಟ ಯಾರು?

ತೆಲುಗು ಸಿನಿಮಾದಲ್ಲಿ ನಟಿಸಲಿದ್ದಾರೆ ಐಶ್ವರ್ಯಾ ರೈ: ನಾಯಕ ಯಾರು?
ಐಶ್ವರ್ಯಾ ರೈ
ಮಂಜುನಾಥ ಸಿ.
|

Updated on: Sep 23, 2023 | 3:47 PM

Share

ಖ್ಯಾತ ನಟಿ, ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈಗೆ (Aishwarya Rai) ದಕ್ಷಿಣ ಭಾರತ ಚಿತ್ರರಂಗ ಹೊಸದೇನಲ್ಲ. ಐಶ್ವರ್ಯಾ ರೈ ನಟನೆ ಆರಂಭಿಸಿದ್ದೇ ದಕ್ಷಿಣ ಭಾರತ ಚಿತ್ರರಂಗದ ಮೂಲಕ. ಅವರ ಮೊದಲ ಸಿನಿಮಾ ಮಣಿರತ್ನಂ ನಿರ್ದೇಶನದ ‘ಇರುವರ್’ ಸಿನಿಮಾ ಮೂಲಕ. ಐಶ್ವರ್ಯಾ ರೈಗೆ ದಕ್ಷಿಣ ಭಾರತ ಚಿತ್ರರಂಗದ ಹೊಸದಲ್ಲವಾದರೂ ಐಶ್ವರ್ಯಾ ಈ ವರೆಗೆ ನಟಿಸಿರುವುದು ಕೇವಲ ತಮಿಳು ಸಿನಿಮಾಗಳಲ್ಲಿ ಮಾತ್ರ. ದಕ್ಷಿಣದ ಇತರೆ ಭಾಷೆಯ ಸಿನಿಮಾಗಳಲ್ಲಿ ಈ ವರೆಗೆ ಐಶ್ವರ್ಯಾ ರೈ ನಟಿಸಿಲ್ಲ. ಆದರೆ ಈಗ ಮೊದಲ ಬಾರಿಗೆ ತಮಿಳು ಬಿಟ್ಟು ಬೇರೆ ಚಿತ್ರರಂಗದಲ್ಲಿ ಕೆಲಸ ಮಾಡಲು ಒಪ್ಪಿಕೊಂಡಿದ್ದಾರೆ ಐಶ್ವರ್ಯಾ ರೈ.

ಐಶ್ವರ್ಯಾ ರೈ ಇದೇ ಮೊದಲ ಬಾರಿಗೆ ತೆಲುಗು ಸಿನಿಮಾದಲ್ಲಿ ನಟಿಸಲಿದ್ದಾರೆ. ಐಶ್ವರ್ಯಾ ರೈ ನಟಿಸುತ್ತಿದ್ದಾರೆಂದರೆ ಅದು ದೊಡ್ಡ ನಟನ, ದೊಡ್ಡ ಬ್ಯಾನರ್​ನ ಸಿನಿಮಾ ಆಗಿರಲಿದೆ ಎಂಬುದು ಸುಲಭದ ಊಹೆ. ಹಾಗೆಯೇ ಆಗಿದೆ. ಮೆಗಾಸ್ಟಾರ್ ಚಿರಂಜೀವಿ ನಟಿಸಲಿರುವ ಹೊಸ ಸಿನಿಮಾದಲ್ಲಿ ಐಶ್ವರ್ಯಾ ರೈ ನಾಯಕಿಯಾಗಿ ನಟಿಸಲಿದ್ದಾರೆ. ಚಿರಂಜೀವಿ ನಟನೆಯ 157ನೇ ಸಿನಿಮಾ ಇದಾಗಿದ್ದು, ಸಿನಿಮಾವನ್ನು ಬಹು ಅದ್ಧೂರಿಯಾಗಿ ತೆರೆಗೆ ತರುವ ಯೋಜನೆ ಹಾಕಿಕೊಳ್ಳಲಾಗಿದೆ.

ಚಿರಂಜೀವಿಯ 157ನೇ ಸಿನಿಮಾವನ್ನು ನಿರ್ದೇಶಕ ಮಲ್ಲಿದಿ ವಶಿಷ್ಟ ನಿರ್ದೇಶನ ಮಾಡಲಿದ್ದಾರೆ. ಮಲ್ಲಿದಿ ವಶಿಷ್ಟ ಈ ಹಿಂದೆ ‘ಬಿಂಬಸಾರ’ ಹೆಸರಿನ ಫ್ಯಾಂಟಸಿಯುಳ್ಳ ಐತಿಹಾಸಿಕ ಕತೆಯುಳ್ಳ ಸಿನಿಮಾ ನಿರ್ದೇಶಿಸಿದ್ದರು. ಈಗ ಚಿರಂಜೀವಿಗಾಗಿ ಫ್ಯಾಂಟಸಿಯನ್ನೇ ಪ್ರಧಾನವಾಗಿರಿಸಿಕೊಂಡಿರುವ ಕತೆಯುಳ್ಳ ಸಿನಿಮಾ ತೆಗೆಯುತ್ತಿದ್ದಾರೆ. ಸಿನಿಮಾದ ಪೋಸ್ಟರ್ ನೋಡಿದ ಹಲವರು ಈ ಸಿನಿಮಾ ಚಿರಂಜೀವಿಯ ಹಳೆಯ ಸಿನಿಮಾ ‘ಅಂಜಿ’ಯ ಮುಂದುವರೆದ ಭಾಗ ಇರಬಹುದೆಂಬ ಅನುಮಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:‘ಪ್ರತಿ ದಿನ ಮೀನು ತಿಂದರೆ ನಿಮ್ಮ ಕಣ್ಣು ಐಶ್ವರ್ಯಾ ರೈ ರೀತಿ ಆಗುತ್ತದೆ’: ವಿವಾದ ಹುಟ್ಟಿಸಿದ ಸಚಿವರ ಹೇಳಿಕೆ

ಚಿರಂಜೀವಿ ನಟಿಸಿರುವ ಇತ್ತೀಚೆಗಿನ ಬಹುತೇಕ ಸಿನಿಮಾಗಳು ಫ್ಲಾಪ್ ಆಗಿವೆ. 2019ರಲ್ಲಿ ಬಿಡುಗಡೆ ಆಗಿದ್ದ ‘ಸೈರಾ ನರಸಿಂಹ ರೆಡ್ಡಿ’ ಸಿನಿಮಾದ ಬಳಿಕ ಚಿರಂಜೀವಿ ನಟಿಸಿರುವ ಯಾವುದೇ ಸಿನಿಮಾ ಹಿಟ್ ಆಗಿಲ್ಲ. ಇತ್ತೀಚೆಗೆ ಬಿಡುಗಡೆ ಆಗಿದ್ದ ‘ಭೋಲಾ ಶಂಕರ್’ ಸಿನಿಮಾ ಅಂತೂ ಇನ್ನಿಲ್ಲದಂತೆ ಫ್ಲಾಪ್ ಆಗಿದೆ. ಗೆಲುವಿನ ಹಳಿಗೆ ಮರಳುವ ಅತೀವ ಒತ್ತಡದಲ್ಲಿ ಚಿರಂಜೀವಿ ಇದ್ದು, ಅದೇ ಕಾರಣಕ್ಕೆ ರೀಮೇಕ್ ಬಿಟ್ಟು ಸ್ವಮೇಕ್ ಸಿನಿಮಾ ಕಡೆಗೆ ಮರಳಿದ್ದಾರೆ.

ಇನ್ನು ಐಶ್ವರ್ಯಾ ರೈ ಒಂದರ ಹಿಂದೊಂದು ಸಿನಿಮಾಗಳನ್ನು ಒಪ್ಪಿಕೊಳ್ಳದೆ, ಕಂಟೆಂಟ್, ನಿರ್ದೇಶಕರು, ನಿರ್ಮಾಣ ಸಂಸ್ಥೆಗಳನ್ನು ನೋಡಿ ಅಳೆದು-ತೂಗಿ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಐಶ್ವರ್ಯಾ ಇತ್ತೀಚೆಗಷ್ಟೆ ತಮಿಳಿನ ಪೊನ್ನಿಯನ್ ಸೆಲ್ವನ್ 1 ಮತ್ತು 2 ಸಿನಿಮಾನಲ್ಲಿ ನಂದಿನಿ ಪಾತ್ರದಲ್ಲಿ ಮಿಂಚಿದ್ದರು. ಈ ಸಿನಿಮಾವನ್ನು ಮಣಿರತ್ನಂ ನಿರ್ದೇಶನ ಮಾಡಿದ್ದಾರೆ. ‘ಪೊನ್ನಿಯಿನ್ ಸೆಲ್ವನ್’ ಬಳಿಕ ಐಶ್ವರ್ಯಾ ಯಾವುದೇ ಸಿನಿಮಾ ಒಪ್ಪಿಕೊಂಡಿರಲಿಲ್ಲ. ಇದೀಗ, ಚಿರಂಜೀವಿ ಜೊತೆಗಿನ ಸಿನಿಮಾಕ್ಕೆ ಎಸ್ ಅಂದಿದ್ದಾರೆ. ಅಂದಹಾಗೆ ಐಶ್ವರ್ಯಾ ರೈ 1999ರಲ್ಲಿ ತೆಲುಗಿನ ಒಂದು ಸಿನಿಮಾದಲ್ಲಿ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ