AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅವಕಾಶ ಕೊಟ್ಟ ನಿರ್ದೇಶಕನಿಗೆ ಅಂತಿಮ ನಮನ ಸಲ್ಲಿಸಿದ ಅಜಯ್ ದೇವಗನ್

Ajay Devgn mentor: ಬಾಲಿವುಡ್​ನ ಸೂಪರ್ ಸ್ಟಾರ್ ಅಜಯ್ ದೇವಗನ್. ಅವರ ತಂದೆ ಮಗನನ್ನು ಹೀರೋ ಮಾಡಬೇಕು ಎಂಬ ಪ್ರಯತ್ನದಲ್ಲಿದ್ದಾಗ ಯಾರೂ ಅವಕಾಶ ಕೊಟ್ಟಿರಲಿಲ್ಲ. ಆದರೆ ಕೊನೆಗೆ ಅಜಯ್ ಅವರಲ್ಲಿದ್ದ ನಟನನ್ನು ಗುರುತಿಸಿದ್ದು ನಿರ್ದೇಶಕ ಕುಕು ಕೋಹ್ಲಿ. ನಿನ್ನೆಯಷ್ಟೆ ಕುಕು ಕೋಹ್ಲಿ ನಿಧನ ಹೊಂದಿದ್ದು, ಅಜಯ್ ದೇವಗನ್ ಅವರು ತಮ್ಮ ಮೊದಲ ಗುರುವಿಗೆ ಭಾವುಕ ವಿದಾಯ ಹೇಳಿದ್ದಾರೆ.

ಅವಕಾಶ ಕೊಟ್ಟ ನಿರ್ದೇಶಕನಿಗೆ ಅಂತಿಮ ನಮನ ಸಲ್ಲಿಸಿದ ಅಜಯ್ ದೇವಗನ್
Ajay Devgn
ಮಂಜುನಾಥ ಸಿ.
|

Updated on: Aug 26, 2026 | 3:20 PM

Share

ಹಿಂದಿ ಚಿತ್ರರಂಗದ (Bollywood) ಜನಪ್ರಿಯ ಸಿನಿಮಾ ನಿರ್ದೇಶಕರುಗಳಲ್ಲಿ ಒಬ್ಬರಾಗಿದ್ದ ಕುಕು ಕೋಹ್ಲಿ ನಿನ್ನೆ (ಆಗಸ್ಟ್ 25) ರಾತ್ರಿ ನಿಧನ ಹೊಂದಿದ್ದಾರೆ. ಕುಕು ಕೊಹ್ಲಿ ಅವರಿಗೆ 77 ವರ್ಷ ವಯಸ್ಸಾಗಿತ್ತು. ಕುಕು ಕೋಹ್ಲಿ ಹೆಚ್ಚು ಸಿನಿಮಾಗಳನ್ನು ನಿರ್ದೇಶನ ಮಾಡಿಲ್ಲವಾದರೂ ಅಜಯ್ ದೇವಗನ್ ಅಂಥಹಾ ಸ್ಟಾರ್ ನಟರನ್ನು ಚಿತ್ರರಂಗಕ್ಕೆ ಪರಿಚಯಿಸಿದ ಶ್ರೇಯ ಅವರದ್ದು. ತಮಗೆ ಸಿನಿಮಾ ನಟನಾಗಿ ಅವಕಾಶ ಕೊಟ್ಟ ನಿರ್ದೇಶಕನ ಸ್ಮರಿಸಿರುವ ಅಜಯ್ ದೇವಗನ್, ಕುಕು ಕೋಹ್ಲಿ ಅವರಿಗೆ ಅಂತಿಮ ನಮನ ಸಲ್ಲಿಸಿದ್ದಾರೆ.

ಕುಕು ಕೋಹ್ಲಿ ನಿಧನದ ಬಗ್ಗೆ ಟ್ವೀಟ್ ಮಾಡಿರುವ ನಟ ಅಜಯ್ ದೇವಗನ್, ‘ಕೆಲವು ಜನರು ನಿಮ್ಮ ಜೀವನದ ಹಾದಿಯನ್ನು ಶಾಶ್ವತವಾಗಿ ಬದಲಾಯಿಸುತ್ತಾರೆ. ಕುಕು ಕೊಹ್ಲಿ ಅವರು ನನಗೆ ಅಂತಹ ಜನರಲ್ಲಿ ಒಬ್ಬರು. ನೀವು ನನ್ನ ಮೇಲೆ ಇಟ್ಟಿದ್ದ ನಂಬಿಕೆಗೆ ಎಂದೆಂದಿಗೂ ಕೃತಜ್ಞರಾಗಿರುತ್ತೇನೆ. ಕುಕು ಜಿ, ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ. ಓಂ ಶಾಂತಿ’ ಎಂದಿದ್ದಾರೆ ನಟ.

ಅಜಯ್ ದೇವಗನ್ ಅವರನ್ನು ನಾಯಕನನ್ನಾಗಿ ಮಾಡಬೇಕು ಎಂದು ಅವರ ತಂದೆ ಬಹಳ ಪ್ರಯತ್ನ ಪಟ್ಟಿದ್ದರು. ನೋಡಲು ಕಪ್ಪಗೆ, ತೆಳ್ಳಗಿದ್ದ ಅಜಯ್ ಅವರಿಗೆ ಯಾರೂ ಅವಕಾಶ ಕೊಟ್ಟಿರಲಿಲ್ಲ. ಆಗ ಕುಕು ಕೋಹ್ಲಿ ಅವರು ತಮ್ಮ ಮೊದಲ ಸಿನಿಮಾ ‘ಪೂಲ್ ಔರ್ ಕಾಂಟೆ’ಯಲ್ಲಿ ಅಜಯ್ ಅವರಿಗೆ ಅವಕಾಶ ಕೊಟ್ಟರು, ಮುಂದಿನದ್ದು ಇತಿಹಾಸ. ಆ ಸಿನಿಮಾ ದೊಡ್ಡ ಹಿಟ್ ಆಯ್ತು. ಈಗ ಅಜಯ್ ದೊಡ್ಡ ಸ್ಟಾರ್ ಆಗಿದ್ದಾರೆ.

ಇದನ್ನೂ ಓದಿ:ತೆಲುಗು ಚಿತ್ರರಂಗದ ಬಗ್ಗೆ ವ್ಯಂಗ್ಯ ಮಾಡಿದ ಬಾಲಿವುಡ್ ನಿರ್ದೇಶಕ

ಕುಕು ಕೋಹ್ಲಿ ಅವರು ಹಿಂದಿಯ ಖ್ಯಾತ ನಟಿ ಅರುಣಾ ಇರಾನಿ ಅವರ ಪತಿಯೂ ಹೌದು. ಕನ್ನಡದ ‘ಅಣ್ಣಯ್ಯ’ ಸಿನಿಮಾನಲ್ಲಿ ರವಿಚಂದ್ರನ್ ಅವರ ತಾಯಿ ಪಾತ್ರ ಮಾಡಿದ್ದ ಅರುಣಾ ಇರಾನಿ, 1990 ರಲ್ಲಿ ಕುಕು ಕೋಹ್ಲಿ ಅವರನ್ನು ವಿವಾಹವಾದರು. ಕುಕು ಕೋಹ್ಲಿ ಅವರು ಎಂಟು ಸಿನಿಮಾಗಳನ್ನಷ್ಟೆ ನಿರ್ದೇಶಿಸಿದ್ದರು. ಅದರಲ್ಲಿ ಹಲವು ಹಿಟ್, ಸೂಪರ್ ಹಿಟ್ ಸಿನಿಮಾಗಳು ಸಹ ಸೇರಿವೆ. ಅಜಯ್ ದೇವಗನ್, ಧರ್ಮೇಂದ್ರ, ಗೋವಿಂದ ಇನ್ನೂ ಕೆಲವು 90ರ ದಶಕದ ಸ್ಟಾರ್ ಹೀರೋಗಳಿಗೆ ಅವರು ನಿರ್ದೇಶನ ಮಾಡಿದ್ದಾರೆ.

ಕುಕು ಕೋಹ್ಲಿ ಅವರ ಅಂತಿಮ ಕಾರ್ಯದಲ್ಲಿ ಬಾಲಿವುಡ್​​ನ ಕೆಲವು ಸ್ಟಾರ್ ನಟ-ನಟಿಯರು ಭಾಗಿ ಆಗಿದ್ದರು. ರೋಹಿತ್ ಶೆಟ್ಟಿ, ಕತ್ರಿನಾ ಕೈಫ್, ವಿಕ್ಕಿ ಕೌಶಲ್ ಇನ್ನೂ ಹಲವರು ಮುಂಬೈನಲ್ಲಿ ನಡೆದ ಕುಕು ಕೋಹ್ಲಿ ಅವರ ಅಂತಿಮ ಕಾರ್ಯದಲ್ಲಿ ಭಾಗಿ ಆಗಿದ್ದರು. ಹಲವು ಸಿನಿಮಾ ಸೆಲೆಬ್ರಿಟಿಗಳು ಕೊಹ್ಲಿ ಅವರಿಗೆ ಸಾಮಾಜಿಕ ಜಾಲತಾಣದ ಮೂಲಕ ಅಂತಿಮ ವಿದಾಯ ಹೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us