ಮಗನ ಮದುವೆ ಓಡಾಟಕ್ಕೆ ಲಕ್ಷುರಿ ಕಾರು ಖರೀದಿಸಿದ ನಾಗಾರ್ಜುನ; ಬೆಲೆ ಎಷ್ಟು?

ನಾಗಾರ್ಜುನ ಅವರಿಗೆ ಆಟೋಮೊಬೈಲ್‌ಗಳ ಬಗ್ಗೆ ಬಹಳ ಆಸಕ್ತಿ ಇದೆ. ಕಾಲಕಾಲಕ್ಕೆ ಹೊಸ ಮಾದರಿಯ ವಾಹನಗಳನ್ನು ತಮ್ಮ ಗ್ಯಾರೇಜಿಗೆ ಸೇರಿಸುತ್ತಾರೆ. ಈಗ ಅವರು ಟೊಯೊಟಾ ಲೆಕ್ಸಸ್ ವಾಹನ ಖರೀದಿ ಮಾಡಿ ತಂದಿದ್ದಾರೆ.

ಮಗನ ಮದುವೆ ಓಡಾಟಕ್ಕೆ ಲಕ್ಷುರಿ ಕಾರು ಖರೀದಿಸಿದ ನಾಗಾರ್ಜುನ; ಬೆಲೆ ಎಷ್ಟು?
ನಾಗಾರ್ಜುನ
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Nov 29, 2024 | 7:50 AM

ತೆಲುಗು ಚಿತ್ರರಂಗದ ಹಿರಿಯ ನಟ ನಾಗಾರ್ಜುನ ಅವರು ಚಿತ್ರರಂಗದ ಶ್ರೀಮಂತ ನಟರಲ್ಲಿ ಒಬ್ಬರು. ನಾಗಾರ್ಜುನ ಜೀವನಶೈಲಿ ಯಾವಾಗಲೂ ವಿಶಿಷ್ಟವಾಗಿದೆ. ಅವರು ಹಾಯಾಗಿ ಜೀವನ ನಡೆಸುತ್ತಿದ್ದಾರೆ. ಅವರ ಬಳಿ ದುಬಾರಿ ಕಾರುಗಳು ಇವೆ. ಅವರು ಪ್ರೈವೆಟ್ ಜೆಟ್ ಕೂಡ ಇದೆ. ಅವರು ಈಗ ಟೊಯೊಟಾ ಲೆಕ್ಸಸ್ ಎಂಪಿ ಕಾರು ಖರೀದಿಸಿ ತಂದಿದ್ದಾರೆ. ಮಗನ ಮದುವೆಗೂ ಮೊದಲು ಈ ಕಾರು ಖರೀದಿ ಮಾಡಿದ್ದಾರೆ. ಈ ಕಾರಿನ ಬೆಲೆಯನ್ನು ತಿಳಿದರೆ ಎಲ್ಲರಿಗೂ ಅಚ್ಚರಿ ಆಗೋದು ಗ್ಯಾರಂಟಿ.

ನಾಗಾರ್ಜುನ ಅವರಿಗೆ ಆಟೋಮೊಬೈಲ್‌ಗಳ ಬಗ್ಗೆ ಬಹಳ ಆಸಕ್ತಿ ಇದೆ. ಕಾಲಕಾಲಕ್ಕೆ ಹೊಸ ಮಾದರಿಯ ವಾಹನಗಳನ್ನು ತಮ್ಮ ಗ್ಯಾರೇಜಿಗೆ ಸೇರಿಸುತ್ತಾರೆ. ಈಗ ಅವರು ಟೊಯೊಟಾ ಲೆಕ್ಸಸ್ ವಾಹನ ಖರೀದಿ ಮಾಡಿ ತಂದಿದ್ದಾರೆ. ನಾಗರ್ಜುನ ಅವರ ಮಗ ನಾಗ ಚೈತನ್ಯ ಮದುವೆ ಡಿಸೆಂಬರ್ 4ರಂದು ನಡೆಯಲಿದೆ. ಮದುವೆ ಸುತ್ತಾಟಕ್ಕೆ ಬೇಕಾಗುತ್ತದೆ ಎಂಬ ಕಾರಣಕ್ಕೆ ಅವರು ಈ ಕಾರನ್ನು ಖರೀದಿ ಮಾಡಿದ್ದಾರೆ ಎನ್ನಲಾಗಿದೆ.

ನಾಗಾರ್ಜುನ ಅವರು ಹೈದರಾಬಾದ್‌ನ ಖೈರತಾಬಾದ್‌ನಲ್ಲಿರುವ ಆರ್‌ಟಿಒ ಕಚೇರಿಗೆ ಕಾರಿನೊಂದಿಗೆ ಬಂದಿದ್ದಾರೆ. ಆರ್​ಟಿಒ ಕಚೇರಿಗೆ ಅವರು ಬರುತ್ತಿದ್ದಂತೆ ಅಭಿಮಾನಿಗಳು ನಾಯಕನನ್ನು ನೋಡಲು ಮುಗಿಬಿದ್ದರು. ಕಾರು ನೋಂದಣಿ ಬಳಿಕ ಅವರು ಅಭಿಮಾನಿಗಳ ಜೊತೆ ಪೋಸ್ ನೀಡಿದರು. ನಾಗಾರ್ಜುನ ಖರೀದಿಸಿರುವ ಹೊಸ ಕಾರಿನ ಬೆಲೆ ಸುಮಾರು ಎರಡೂವರೆ ಕೋಟಿ ರೂಪಾಯಿ ಇದೆ ಎನ್ನಲಾಗಿದೆ. ಈ ಕಾರನ್ನು ಈ ಮೊದಲು ರಣಬೀರ್ ಕಪೂರ್ ಕೂಡ ಖರೀದಿ ಮಾಡಿದ್ದರು. ಈ ಕಾರು ಸೆಲೆಬ್ರಿಟಿಗಳ ಫೇವರಿಟ್ ಕಾರು ಎನಿಸಿಕೊಳ್ಳುತ್ತಿದೆ.

ನಾಗಾರ್ಜುನ ಸಿನಿಮಾಗಳ ವಿಚಾರಕ್ಕೆ ಬಂದರೆ ಸದ್ಯ ಶೇಖರ್ ಕಮ್ಮುಲ ನಿರ್ದೇಶನದ ‘ಕುಬೇರ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದರಲ್ಲಿ ಕಾಲಿವುಡ್ ಹೀರೋ ಧನುಷ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ರಜನಿಕಾಂತ್, ಉಪೇಂದ್ರ ಅಭಿನಯದ ಕೂಲಿ ಸಿನಿಮಾದಲ್ಲೂ ವಿಶೇಷ ಪಾತ್ರ ಮಾಡುತ್ತಿದ್ದಾರೆ.

ಇದನ್ನೂ ಓದಿ: ಮಾಲ್ಡೀವ್ಸ್ ಪಾರ್ಟಿ; ಒಂದೇ ಫ್ರೇಮ್​ನಲ್ಲಿ ಚಿರು, ನಾಗಾರ್ಜುನ, ಪ್ರಿನ್ಸ್, ರಾಮ್ ಚರಣ್ 

ಇನ್ನು ನಾಗಾರ್ಜುನ ಅವರಯ ಸದ್ಯ ಮಗನ ಮದುವೆ ತಯಾರಿಯಲ್ಲಿ ಇದ್ದಾರೆ. ತಮ್ಮದೇ ಅನ್ನಪೂರ್ಣ ಸ್ಟುಡಿಯೋದಲ್ಲಿ ಮದುವೆ ನಡೆಯುತ್ತಿದೆ. ತಮ್ಮದೇ ‘ಎನ್​ ಕನ್ವೆಂಷನ್​ ಹಾಲ್’ ಇದ್ದಿದ್ದರೆ ಅವರು ಮಗನ ಮದುವೆಯನ್ನು ಇನ್ನಷ್ಟು ಅದ್ದೂರಿಯಾಗಿ ಮಾಡುತ್ತಿದ್ದರು. ಅವರ ಮತ್ತೋರ್ವ ಮಗ ಅಖಿಲ್ ಅಕ್ಕಿನೇನಿ ಕೂಡ ಮದುವೆಗೆ ರೆಡಿ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ನಿತ್ಯ ಗಂಡ ಹೆಂಡತಿ ನಡುವಿನ ಕಲಹಕ್ಕೆ ಉಪಾಯವೇನು? ವಿಡಿಯೋ ನೋಡಿ
ನಿತ್ಯ ಗಂಡ ಹೆಂಡತಿ ನಡುವಿನ ಕಲಹಕ್ಕೆ ಉಪಾಯವೇನು? ವಿಡಿಯೋ ನೋಡಿ
Daily Horoscope: ಈ ರಾಶಿಯವರಿಗೆ ಇಂದು ಧನಲಾಭ ನಿಶ್ಚಿತ!
Daily Horoscope: ಈ ರಾಶಿಯವರಿಗೆ ಇಂದು ಧನಲಾಭ ನಿಶ್ಚಿತ!
ತಮ್ಮ- ಶಿವಕುಮಾರ್ ನಡುವಿನ ಒಳಒಪ್ಪಂದದ ಬಗ್ಗೆ ಸಿಎಂ ತಿಳಿಸಬೇಕು: ವಿಜಯೇಂದ್ರ
ತಮ್ಮ- ಶಿವಕುಮಾರ್ ನಡುವಿನ ಒಳಒಪ್ಪಂದದ ಬಗ್ಗೆ ಸಿಎಂ ತಿಳಿಸಬೇಕು: ವಿಜಯೇಂದ್ರ
ಚಿರತೆಯ ಕುತ್ತಿಗೆ ಹಿಡಿದು ಪೋಸ್ ಕೊಟ್ಟ ಗ್ರಾಮಸ್ಥರು; ವಿಡಿಯೋ ವೈರಲ್
ಚಿರತೆಯ ಕುತ್ತಿಗೆ ಹಿಡಿದು ಪೋಸ್ ಕೊಟ್ಟ ಗ್ರಾಮಸ್ಥರು; ವಿಡಿಯೋ ವೈರಲ್
ಉಡುಪಿ ಬಳಿ ಕಾರು ಪಲ್ಟಿ; ರಸ್ತೆ ಬದಿ ನಿಂತಿದ್ದ ವೃದ್ಧರಿಗೆ ಗಾಯ
ಉಡುಪಿ ಬಳಿ ಕಾರು ಪಲ್ಟಿ; ರಸ್ತೆ ಬದಿ ನಿಂತಿದ್ದ ವೃದ್ಧರಿಗೆ ಗಾಯ
ಉಜ್ಜಯಿನಿ ದೇವಸ್ಥಾನದಲ್ಲಿ ದೇವರ ಮುಂದಿಟ್ಟಿದ್ದ ಹಾಲು ಕುಡಿದ ನಾಯಿ
ಉಜ್ಜಯಿನಿ ದೇವಸ್ಥಾನದಲ್ಲಿ ದೇವರ ಮುಂದಿಟ್ಟಿದ್ದ ಹಾಲು ಕುಡಿದ ನಾಯಿ
ಅವರು ಮಾಡೋದು ಹೋರಾಟ ಅದರೆ ನಮ್ಮದು ಶಕ್ತಿ ಪ್ರದರ್ಶನವಾ? ಕುಮಾರ ಬಂಗಾರಪ್ಪ
ಅವರು ಮಾಡೋದು ಹೋರಾಟ ಅದರೆ ನಮ್ಮದು ಶಕ್ತಿ ಪ್ರದರ್ಶನವಾ? ಕುಮಾರ ಬಂಗಾರಪ್ಪ
ವಕ್ಫ್ ವಿರುದ್ಧ ಹೋರಾಟ ದೇಶಕ್ಕೆ ಮಾದರಿ ಅಂತ ಜೆಪಿಸಿ ಹೇಳಿದೆ: ಜಾರಕಿಹೊಳಿ
ವಕ್ಫ್ ವಿರುದ್ಧ ಹೋರಾಟ ದೇಶಕ್ಕೆ ಮಾದರಿ ಅಂತ ಜೆಪಿಸಿ ಹೇಳಿದೆ: ಜಾರಕಿಹೊಳಿ
ಪಕ್ಷದ ರಾಜ್ಯಾಧ್ಯಕ್ಷನ ಸ್ಥಾನವೆಂದರೆ ಮಂತ್ರಿಯ ಹುದ್ದೆಯಲ್ಲ: ವಿಜಯೇಂದ್ರ
ಪಕ್ಷದ ರಾಜ್ಯಾಧ್ಯಕ್ಷನ ಸ್ಥಾನವೆಂದರೆ ಮಂತ್ರಿಯ ಹುದ್ದೆಯಲ್ಲ: ವಿಜಯೇಂದ್ರ
ಕೇರಳದ ತ್ರಿಶೂರ್‌ನಲ್ಲಿ ಟ್ಯಾಂಕ್‌ಗೆ ಬಿದ್ದು ಆನೆ ಮರಿ ಸಾವು; ವಿಡಿಯೋ ವೈರಲ್
ಕೇರಳದ ತ್ರಿಶೂರ್‌ನಲ್ಲಿ ಟ್ಯಾಂಕ್‌ಗೆ ಬಿದ್ದು ಆನೆ ಮರಿ ಸಾವು; ವಿಡಿಯೋ ವೈರಲ್