ಮಾಲ್ಡೀವ್ಸ್ ಪಾರ್ಟಿ; ಒಂದೇ ಫ್ರೇಮ್​ನಲ್ಲಿ ಚಿರು, ನಾಗಾರ್ಜುನ, ಪ್ರಿನ್ಸ್, ರಾಮ್ ಚರಣ್

ತೆಲುಗು ಚಿತ್ರರಂಗದ ಪ್ರಮುಖ ನಟರು ಮಾಲ್ಡೀವ್ಸ್‌ನಲ್ಲಿ ಒಂದು ಖಾಸಗಿ ಪಾರ್ಟಿಯಲ್ಲಿ ಭಾಗವಹಿಸಿದ್ದಾರೆ. ಚಿರಂಜೀವಿ, ಮಹೇಶ್ ಬಾಬು, ನಾಗಾರ್ಜುನ, ರಾಮ್ ಚರಣ್, ಅಖಿಲ್ ಅಕ್ಕಿನೇನಿ ಸೇರಿದಂತೆ ಅನೇಕ ನಟರು ಮತ್ತು ಅವರ ಕುಟುಂಬದವರು ಈ ಪಾರ್ಟಿಯಲ್ಲಿ ಭಾಗವಹಿಸಿದ್ದಾರೆ. ಅವರ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಈ ಪಾರ್ಟಿ ಒಬ್ಬ ಉದ್ಯಮಿಯ ಹುಟ್ಟುಹಬ್ಬದ ಆಚರಣೆಯಾಗಿತ್ತು.

ಮಾಲ್ಡೀವ್ಸ್ ಪಾರ್ಟಿ; ಒಂದೇ ಫ್ರೇಮ್​ನಲ್ಲಿ ಚಿರು, ನಾಗಾರ್ಜುನ, ಪ್ರಿನ್ಸ್, ರಾಮ್ ಚರಣ್
ಪಾರ್ಟಿಯಲ್ಲಿ ಟಾಲಿವುಡ್ ಹೀರೋಗಳು
Follow us
ಮದನ್​ ಕುಮಾರ್​
|

Updated on: Nov 07, 2024 | 9:38 PM

ತೆಲುಗು ಚಿತ್ರರಂಗದ ಟಾಪ್ ನಟರು ಮಾಲ್ಡೀವ್ಸ್​ಗೆ ತೆರಳಿದ್ದಾರೆ. ಅಲ್ಲಿ ಎಲ್ಲರೂ ಜೊತೆಯಾಗಿ ಪಾರ್ಟಿ ಮಾಡಿದ್ದಾರೆ. ಕುಟುಂಬ ಸಮೇತರಾಗಿ ಖುಷಿ ಖುಷಿಯ ಕ್ಷಣಗಳನ್ನು ಎಂಜಾಯ್ ಮಾಡಿದ್ದಾರೆ. ಈ ಪಾರ್ಟಿಯಲ್ಲಿ ಮೆಗಾ ಸ್ಟಾರ್​ ಚಿರಂಜೀವಿ, ಪ್ರಿನ್ಸ್ ಮಹೇಶ್ ಬಾಬು, ರಾಮ್ ಚರಣ್​, ನಾಗಾರ್ಜುನ, ಅಖಿಲ್ ಅಕ್ಕಿನೇನಿ ಮುಂತಾದವರು ಭಾಗಿಯಾಗಿದ್ದಾರೆ. ಮಹೇಶ್​ ಬಾಬು ಪತ್ನಿ ನಮ್ರತಾ ಶಿರೋಡ್ಕರ್, ರಾಮ್ ಚರಣ್ ಪತ್ನಿ ಉಪಾಸನಾ ಕೊನಿಡೆಲಾ ಕೂಡ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಎಲ್ಲರನ್ನೂ ಒಂದೇ ಫ್ರೇಮ್​ನಲ್ಲಿ ನೋಡಿ ಅಭಿಮಾನಿಗಳಿಗೆ ಖುಷಿ ಆಗಿದೆ.

ಈ ಎಲ್ಲ ಸ್ಟಾರ್​ ಕಲಾವಿದರು ಅವರವರ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಆದ್ದರಿಂದ ಎಲ್ಲರೂ ಒಟ್ಟಿಗೆ ಸೇರಲು ಸಮಯ ಮಾಡಿಕೊಳ್ಳುವುದು ಕಷ್ಟ. ಹೀಗೆ ಎಲ್ಲರನ್ನೂ ಒಂದೇ ಜಾಗದಲ್ಲಿ ಸೇರಿಸಬೇಕು ಎಂದರೆ ಏನಾದರೂ ವಿಶೇಷ ಸಂದರ್ಭ ಒದಗಿಬರಲೇಬೇಕು. ಹಾಗಾದರೆ ಈಗ ಏನು ಅಂತಹ ವಿಶೇಷ? ಸ್ನೇಹಿತರ ಬರ್ತ್​ಡೇ ಪಾರ್ಟಿ. ಹೌದು, ಉದ್ಯಮಿಯೊಬ್ಬರ ಹುಟ್ಟುಹಬ್ಬದ ಪಾರ್ಟಿ ಸಲುವಾಗಿ ಈ ಎಲ್ಲ ಸ್ಟಾರ್ ಕಲಾವಿದರ ಮಾಲ್ಡೀವ್ಸ್​ಗೆ ತೆರಳಿದ್ದಾರೆ.

ಹಿರಿಯ ನಟರಾದ ಮೆಗಾ ಸ್ಟಾರ್​ ಚಿರಂಜೀವಿ ಮತ್ತು ನಾಗಾರ್ಜುನ ಅವರು ಈಗಿನ ಕಾಲದ ಟ್ರೆಂಡ್​ಗೆ ತಕ್ಕಂತಹ ಬಟ್ಟೆ ಧರಿಸಿ ಮಿಂಚಿದ್ದಾರೆ. ಆ ಕಾರಣದಿಂದಲೂ ಈ ಫೋಟೋ ವೈರಲ್ ಆಗುತ್ತಿದೆ. ಇನ್ನು, ಮಹೇಶ್ ಬಾಬು ಅವರು ತಮ್ಮ ಹೊಸ ಸಿನಿಮಾಗಾಗಿ ಉದ್ದ ಕೂದಲು ಬಿಡುತ್ತಿದ್ದಾರೆ. ಈಗ ವೈರಲ್ ಆಗಿರುವ ಫೋಟೋದಲ್ಲಿ ಅವರ ಲುಕ್​ ಗಮನ ಸೆಳೆಯುತ್ತಿದೆ.

ಇದನ್ನೂ ಓದಿ: ಮೆಗಾಸ್ಟಾರ್ ಚಿರಂಜೀವಿಗೆ ಮತ್ತೊಂದು ಗರಿ, ಜೀವಮಾನ ಶ್ರೇಷ್ಠ ಗೌರವ ನೀಡಿದ ಐಫಾ

ಮಹೇಶ್ ಬಾಬು ಮತ್ತು ರಾಮ್ ಚರಣ್ ಅವರು ಫ್ಯಾಮಿಲಿಗೆ ಹೆಚ್ಚು ಸಮಯ ನೀಡುತ್ತಾರೆ. ಹಾಗಾಗಿ ಮಾಲ್ಡೀವ್ಸ್​ ಪಾರ್ಟಿಯಲ್ಲಿ ಕೂಡ ಕುಟುಂಬ ಸಮೇತರಾಗಿ ಕಾಣಿಸಿಕೊಂಡಿದ್ದಾರೆ. ರಾಮ್ ಚರಣ್ ಅವರು ‘ಗೇಮ್ ಚೇಂಜರ್’ ಸಿನಿಮಾದಲ್ಲಿ ನಟಿಸಿದ್ದು, ಅದರ ಬಿಡುಗಡೆಯಾಗಿ ಅಭಿಮಾನಿಗಳು ಕಾದಿದ್ದಾರೆ. ಮಾಲ್ಡೀವ್ಸ್ ಪಾರ್ಟಿಯಿಂದ ಇನ್ನಷ್ಟು ಫೋಟೋಗಳು ಹೊರಬರಲಿ ಎಂದು ಫ್ಯಾನ್ಸ್ ನಿರೀಕ್ಷಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.