ತೆಲುಗಿನಲ್ಲಿ ಬರ್ತಿದೆ ‘ಉಗ್ರಂ’ ಸಿನಿಮಾ; ಹೀರೋ ಯಾರು? ನಿರ್ದೇಶನ ಯಾರದ್ದು?

Ugram Movie: ತೆಲುಗು ಸಿನಿಮಾದ ಶೀರ್ಷಿಕೆ ವಿನ್ಯಾಸ ಕನ್ನಡದ ‘ಉಗ್ರಂ’ ರೀತಿಯೇ ಇದೆ. ಫಸ್ಟ್​ ಲುಕ್​ ಪೋಸ್ಟರ್​ ಬಿಡುಗಡೆ ಮಾಡಲಾಗಿದ್ದು, ಅಲ್ಲರಿ ನರೇಶ್​ ಅವರು ಆಕ್ರೋಶ ಭರಿತವಾಗಿ ಪೋಸ್​ ನೀಡಿದ್ದಾರೆ.

ತೆಲುಗಿನಲ್ಲಿ ಬರ್ತಿದೆ ‘ಉಗ್ರಂ’ ಸಿನಿಮಾ; ಹೀರೋ ಯಾರು? ನಿರ್ದೇಶನ ಯಾರದ್ದು?
ಅಲ್ಲರಿ ನರೇಶ್
Follow us
TV9 Web
| Updated By: ಮದನ್​ ಕುಮಾರ್​

Updated on:Aug 22, 2022 | 12:16 PM

ಸಿನಿಮಾ ಗೆಲ್ಲಬೇಕು ಎಂದರೆ ಹಲವು ವಿಚಾರಗಳು ಮುಖ್ಯವಾಗುತ್ತವೆ. ಶೀರ್ಷಿಕೆಯಂತೂ ಆಕರ್ಷಕವಾಗಿ ಇರಬೇಕು. ಸಖತ್​ ಕ್ಯಾಚಿ ಆದಂತಹ ಟೈಟಲ್​ಗಳಿಗೆ ಸದಾ ಬೇಡಿಕೆ ಇದ್ದೇ ಇರುತ್ತದೆ. ಬೇರೆ ಭಾಷೆಯಲ್ಲಿ ಸೂಪರ್ ಹಿಟ್​ ಆದ ಸಿನಿಮಾದ ಶೀರ್ಷಿಕೆಯನ್ನು ಇಟ್ಟುಕೊಂಡು ಇನ್ನೊಂದು ಭಾಷೆಯಲ್ಲಿ ಚಿತ್ರ ಮಾಡಿದ ಉದಾಹರಣೆಗಳು ಕೂಡ ಸಾಕಷ್ಟಿದೆ. ಈಗ ತೆಲುಗು ಮಂದಿ ‘ಉಗ್ರಂ’ (Ugram Movie) ಟೈಟಲ್​ ಮೇಲೆ ಕಣ್ಣು ಇಟ್ಟಿದ್ದಾರೆ. ಕನ್ನಡದಲ್ಲಿ ನಟ ಶ್ರೀಮುರಳಿ ಅವರಿಗೆ ಹೊಸ ಇಮೇಜ್​ ನೀಡಿದ ಚಿತ್ರ ಇದು. ಪ್ರಶಾಂತ್​ ನೀಲ್​ (Prashanth Neel) ನಿರ್ದೇಶನದ ಚೊಚ್ಚಲ ಸಿನಿಮಾ ‘ಉಗ್ರಂ’. ಈಗ ಇದೇ ಶೀರ್ಷಿಕೆಯನ್ನು ಬಳಸಿಕೊಂಡು ತೆಲುಗಿನಲ್ಲಿ ಒಂದು ಸಿನಿಮಾ ಮಾಡಲಾಗುತ್ತಿದೆ. ಖ್ಯಾತ ನಟ ಅಲ್ಲರಿ ನರೇಶ್​ (Allari Naresh) ಅವರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಅಲ್ಲರಿ ನರೇಶ್​ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಅವರಿಗೆ ಯಶಸ್ಸು ಸಿಕ್ಕಿರಲಿಲ್ಲ. 2021ರ ಫೆಬ್ರವರಿಯಲ್ಲಿ ತೆರೆಕಂಡ ‘ನಾಂದಿ’ ಸಿನಿಮಾ ಅವರಿಗೆ ಗೆಲುವು ತಂದುಕೊಟ್ಟಿತು. ಆ ಚಿತ್ರಕ್ಕೆ ವಿಜಯ್​ ಕನಕಮೆಡಲ ನಿರ್ದೇಶನ ಮಾಡಿದ್ದರು. ಈಗ ಇದೇ ನಟ-ನಿರ್ದೇಶಕರು ಮತ್ತೆ ಒಂದಾಗಿ ಸಿನಿಮಾ ಮಾಡುತ್ತಿದ್ದಾರೆ. ಅವರ ಹೊಸ ಚಿತ್ರಕ್ಕೆ ‘ಉಗ್ರಂ’ ಎಂದು ಹೆಸರು ಇಡಲಾಗಿದೆ. ಈ ಸಿನಿಮಾದ ಕಥೆ ಏನು ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.

ಇದನ್ನೂ ಓದಿ
Image
Prashanth Neel: ಕಿಚ್ಚ ಸುದೀಪ್​, ‘ವಿಕ್ರಾಂತ್ ರೋಣ’ ತಂಡಕ್ಕೆ ವಿಶ್ ಮಾಡಿದ ‘ಕೆಜಿಎಫ್​ 2’ ನಿರ್ದೇಶಕ ಪ್ರಶಾಂತ್​ ನೀಲ್​
Image
ಪ್ರಭಾಸ್​ ವರ್ಸಸ್​ ಪ್ರಭಾಸ್​: ‘ಸಲಾರ್​’ ಚಿತ್ರದಲ್ಲಿ ಡಬಲ್​ ರೋಲ್​ ಮಾಡಿಸುತ್ತಾರಾ ಪ್ರಶಾಂತ್​ ನೀಲ್​?
Image
ನಾಯಕಿ ಪ್ರಧಾನ ಸಿನಿಮಾ ಮಾಡ್ತಾರಾ ಪ್ರಶಾಂತ್​ ನೀಲ್​? ಇಂಥ ಗಾಸಿಪ್​ ಹರಡಲು ಕಾರಣ ಇಲ್ಲಿದೆ..
Image
3 ಚಿತ್ರಗಳ ಪೋಸ್ಟರ್​ ಒಟ್ಟಿಗೆ ಜೋಡಿಸಿದ ಪ್ರಶಾಂತ್​ ನೀಲ್​; ಫ್ಯಾನ್ಸ್​ ತಲೆಯಲ್ಲಿ ಮೂಡಿದೆ ದೊಡ್ಡ ಪ್ರಶ್ನೆ

ಕನ್ನಡದ ‘ಉಗ್ರಂ’ ಸಿನಿಮಾಗೂ ಈ ತೆಲುಗು ಚಿತ್ರಕ್ಕೂ ಏನಾದರೂ ಲಿಂಕ್​ ಇರಬಹುದೇ ಎಂಬ ಕೌತುಕ ಮನೆ ಮಾಡಿದೆ. ಈ ಸಿನಿಮಾದ ಶೀರ್ಷಿಕೆ ವಿನ್ಯಾಸ ಕೂಡ ಕನ್ನಡದ ‘ಉಗ್ರಂ’ ರೀತಿಯೇ ಇದೆ. ಸದ್ಯ ಈ ಚಿತ್ರದ ಫಸ್ಟ್​ ಲುಕ್​ ಪೋಸ್ಟರ್​ ಬಿಡುಗಡೆ ಮಾಡಲಾಗಿದೆ. ಅಲ್ಲರಿ ನರೇಶ್​ ಅವರು ಆಕ್ರೋಶ ಭರಿತವಾಗಿ ಪೋಸ್​ ನೀಡಿದ್ದಾರೆ. ಅವರ ಬೆನ್ನಿಗೆ ಚಾಕು ಹಾಕಲಾಗಿದೆ. ಮೈಯೆಲ್ಲ ರಕ್ತಸಿಕ್ತ ಆಗಿದ್ದರೂ ಕೂಡ ಅವರು ಆರ್ಭಟಿಸುತ್ತಿರುವ ರೀತಿಯಲ್ಲಿ ಈ ಫಸ್ಟ್​ ಲುಕ್​ ಮೂಡಿಬಂದಿದೆ. ಆ ಮೂಲಕ ‘ಉಗ್ರಂ’ ಸಿನಿಮಾ ಕೌತುಕ ಮೂಡಿಸಿದೆ.

ಕನ್ನಡದ ‘ಉಗ್ರಂ’ ಚಿತ್ರ 2014ರಲ್ಲಿ ತೆರೆಕಂಡಿತು. ಮೊದಲ ನಿರ್ದೇಶನದಲ್ಲೇ ಪ್ರಶಾಂತ್​ ನೀಲ್​ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದರು. ಆ ಸಿನಿಮಾದ ಕಥೆಯನ್ನೇ ಇಟ್ಟುಕೊಂಡು ಅವರು ‘ಸಲಾರ್​’ ಚಿತ್ರ ಮಾಡುತ್ತಿದ್ದಾರೆ ಎಂಬ ಗಾಸಿಪ್​ ಕೂಡ ಇದೆ. ಅದರ ಬೆನ್ನಲೇ ‘ಉಗ್ರಂ’ ಶೀರ್ಷಿಕೆ ಟಾಲಿವುಡ್​ನಲ್ಲಿ ಮರುಬಳಕೆ ಆಗುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 12:16 pm, Mon, 22 August 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ