AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿವಾದದ ಮಧ್ಯೆಯೂ ಕಮಾಯಿ ನಿಲ್ಲಿಸದ ‘ಪುಷ್ಪ 2’; ಗಳಿಕೆಯಲ್ಲಿ ದಾಖಲೆ

‘ಪುಷ್ಪ 2’ ಸಿನಿಮಾ ಭಾನುವಾರ (ಡಿಸೆಂಬರ್ 16) ಒಳ್ಳೆಯ ಗಳಿಕೆ ಮಾಡಿದೆ. ಈ ಚಿತ್ರ ಎರಡನೇ ಭಾನುವಾr 75 ಕೋಟಿ ರೂಪಾಯಿ ಗಳಿಕೆ ಮಾಡಿದೆ. 11ನೇ ದಿನ ಸಿನಿಮಾ ಇಷ್ಟು ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಮಾಡುತ್ತದೆ ಎಂದರೆ ಅದು ನಿಜಕ್ಕೂ ದೊಡ್ಡ ಕಲೆಕ್ಷನ್ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಈ ಚಿತ್ರದ ಒಟ್ಟಾರೆ ಗಳಿಕೆ ಬಗ್ಗೆ ಇಲ್ಲಿದೆ ವಿವರ.

ವಿವಾದದ ಮಧ್ಯೆಯೂ ಕಮಾಯಿ ನಿಲ್ಲಿಸದ ‘ಪುಷ್ಪ 2’; ಗಳಿಕೆಯಲ್ಲಿ ದಾಖಲೆ
Pushpa 2
ರಾಜೇಶ್ ದುಗ್ಗುಮನೆ
|

Updated on:Dec 16, 2024 | 11:57 AM

Share

‘ಪುಷ್ಪ 2’ ಸಿನಿಮಾ ಇತ್ತೀಚೆಗೆ ಸಾಕಷ್ಟು ಸುದ್ದಿಯಲ್ಲಿ ಇದೆ. ಇದಕ್ಕೆ ಕಾರಣ ಹಲವು. ಈ ಸಿನಿಮಾ ಉತ್ತಮ ಗಳಿಕೆ ಮಾಡುತ್ತಿರುವುದು ಒಂದು ಕಡೆಯಾದರೆ, ಈ ಸಿನಿಮಾದ ಹೀರೋ ಅಲ್ಲು ಅರ್ಜುನ್ ಅರೆಸ್ಟ್ ಆಗಿದ್ದು ಮತ್ತೊಂದು ಕಡೆ. ಸಿನಿಮಾ ವಿವಾದಗಳ ಮಧ್ಯೆಯೂ ಭರ್ಜರಿ ಗಳಿಕೆ ಮಾಡುವುದನ್ನು ಮುಂದುವರಿಸಿದೆ. ಈ ಸಿನಿಮಾ ಭಾನುವಾರ ಬಾಕ್ಸ್ ಆಫೀಸ್​ನಲ್ಲಿ ಒಳ್ಳೆಯ ಕಮಾಯಿ ಮಾಡಿದೆ. ಚಿತ್ರದ ಒಟ್ಟಾರೆ ಗಳಿಕೆ 1,322 ರೂಪಾಯಿ ಆಗಿದೆ ಅನ್ನೋದು ವಿಶೇಷ.

‘ಪುಷ್ಪ 2’ ಸಿನಿಮಾ ಭಾನುವಾರ (ಡಿಸೆಂಬರ್ 16) ಒಳ್ಳೆಯ ಗಳಿಕೆ ಮಾಡಿದೆ. ಈ ಚಿತ್ರ ಎರಡನೇ ಭಾನುವಾr 75 ಕೋಟಿ ರೂಪಾಯಿ ಗಳಿಕೆ ಮಾಡಿದೆ. 11ನೇ ದಿನ ಸಿನಿಮಾ ಇಷ್ಟು ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಮಾಡುತ್ತದೆ ಎಂದರೆ ಅದು ನಿಜಕ್ಕೂ ದೊಡ್ಡ ಕಲೆಕ್ಷನ್ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಈ ಸಿನಿಮಾ ಭಾನುವಾರ ತೆಲುಗು ವರ್ಷನ್ 16 ಕೋಟಿ ರೂಪಾಯಿ ಬಾಚಿಕೊಂಡರೆ, ಹಿಂದಿ ವರ್ಷನ್​ನಿಂದ 55 ಕೋಟಿ ರೂಪಾಯಿ ಆಗಿದೆ.

ಸದ್ಯ ಭಾರತದ ಬಾಕ್ಸ್ ಆಫೀಸ್​ನಲ್ಲಿ ಸಿನಿಮಾದ ಗಳಿಕೆ 900 ಕೋಟಿ ರೂಪಾಯಿ ಆಗಿದೆ. ವಿಶ್ವ ಬಾಕ್ಸ್ ಆಫೀಸ್​ನಲ್ಲಿ ಚಿತ್ರ 1300 ಕೋಟಿ ರೂಪಾಯಿ ಬಾಚಿಕೊಂಡಿದೆ. ಶೀಘ್ರವೇ ಭಾರತದ ಕಲೆಕ್ಷನ್​ನಲ್ಲಿ ಚಿತ್ರ 1000 ಕೋಟಿ ರೂಪಾಯಿ ಬಾಚಿಕೊಳ್ಳೋ ಸಾಧ್ಯತೆ ಇದೆ. ಈ ಮೂಲಕ ಸಿನಿಮಾ ದಾಖಲೆ ಬರೆಯಲಿದೆ.

ಸದ್ಯ ಎದ್ದಿರೋ ವಿವಾದ ಚಿತ್ರದ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಈ ಚಿತ್ರವನ್ನು ವೀಕ್ಷಣೆ ಮಾಡುವವರು ನಿರಂತರವಾಗಿ ಸಿನಿಮಾ ನೋಡುವ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ. ಉತ್ತರ ಭಾರತದ ಮಂದಿ ಚಿತ್ರಕ್ಕೆ ಹೆಚ್ಚು ಆಕರ್ಷಿತರಾಗಿದ್ದಾರೆ. ಈ ಕಾರಣಕ್ಕೆ ಉತ್ತರ ಭಾರತದಲ್ಲಿ ಸಿನಿಮಾ ಹೆಚ್ಚು ಕಲೆಕ್ಷನ್ ಮಾಡುತ್ತಿದೆ.

ಇದನ್ನೂ ಓದಿ: ‘ಪುಷ್ಪ 2’ ಸಿನಿಮಾದ ಜಾತರ ಸೀನ್​ ಬಗ್ಗೆ ನಟ ತಾರಕ್ ಪೊನ್ನಪ್ಪ ಮಾತು

ಹೈದರಾಬಾದ್​ನ ಸಂಧ್ಯಾ ಥಿಯೇಟರ್​ನಲ್ಲಿ ನಡೆದ ಕಾಲ್ತುಳಿತಕ್ಕೂ ಅಲ್ಲು ಅರ್ಜುನ್​ಗೂ ಲಿಂಕ್ ಮಾಡಲಾಗಿತ್ತು. ಈ ಕಾರಣಕ್ಕೆ ಅವರನ್ನು ಬಂಧಿಸಲಾಗಿತ್ತು. ಸದ್ಯ ಅವರು ಮಧ್ಯಂತರ ಜಾಮೀನು ಪಡೆದು ಹೊರಕ್ಕೆ ಬಂದಿದ್ದಾರೆ. ಜನರು ತೋರಿದ ಪ್ರೀತಿಗೆ ಧನ್ಯವಾದ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:57 am, Mon, 16 December 24

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More