AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಪುಷ್ಪ 2’ ಸಿನಿಮಾದ ಜಾತರ ಸೀನ್​ ಬಗ್ಗೆ ನಟ ತಾರಕ್ ಪೊನ್ನಪ್ಪ ಮಾತು

Tarak Ponnappa: ‘ಪುಷ್ಪ 2’ ಸಿನಿಮಾನಲ್ಲಿ ಹಲವು ಕನ್ನಡಿಗರು ನಟಿಸಿದ್ದಾರೆ. ಅದರಲ್ಲೂ ತಾರಕ್ ಪೊನ್ನಪ್ಪ ನಿರ್ವಹಿಸಿರುವ ಬುಗ್ಗಾ ರೆಡ್ಡಿ ಪಾತ್ರಕ್ಕೆ ತೀವ್ರ ಪ್ರಶಂಸೆ ವ್ಯಕ್ತವಾಗಿದೆ. ‘ಪುಷ್ಪ 2’ ಸಿನಿಮಾಕ್ಕೆ ಆಯ್ಕೆ ಆಗಿದ್ದು ಹೇಗೆ, ಸಿನಿಮಾದಲ್ಲಿ ನಟಿಸಿದ ಅನುಭವ ಇನ್ನಿತರೆ ವಿಷಯಗಳ ಬಗ್ಗೆ ಅವರು ಮಾತನಾಡಿದ್ದಾರೆ.

‘ಪುಷ್ಪ 2’ ಸಿನಿಮಾದ ಜಾತರ ಸೀನ್​ ಬಗ್ಗೆ ನಟ ತಾರಕ್ ಪೊನ್ನಪ್ಪ ಮಾತು
ತಾರಕ್ ಪೊನ್ನಪ್ಪ
ಮಂಜುನಾಥ ಸಿ.
|

Updated on: Dec 15, 2024 | 10:43 AM

Share

ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿದೆ. ಕೇವಲ ನಾಲ್ಕೇ ದಿನಕ್ಕೆ ಈ ಸಿನಿಮಾ 1000 ಕೋಟಿ ಕಲೆಕ್ಷನ್ ದಾಟಿದೆ. ಸಿನಿಮಾದ ಹಲವು ಸನ್ನಿವೇಶಗಳು ಮಾಸ್ ಪ್ರೇಕ್ಷಕರನ್ನು ಸಖತ್ ಸೆಳೆದಿವೆ. ಅದರಲ್ಲಿ ಒಂದು ಜಾತರ ಸೀನ್. ಸಿನಿಮಾ ಬಿಡುಗಡೆ ಆಗುವ ಮುಂಚೆಯೇ ಈ ಜಾತರ ಸೀನ್ ಬಗ್ಗೆ ಸಖತ್ ಹೈಪ್ ಹುಟ್ಟುಹಾಕಲಾಗಿತ್ತು. ಜಾತರ ಸೀನ್​ನಲ್ಲಿ ಕನ್ನಡದ ನಟ ತಾರಕ್ ಪೊನ್ನಪ್ಪ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅರ್ಧ ತಲೆ ಬೋಳಿಸಿಕೊಂಡು, ಕತ್ತೆಯ ಮೇಲೆ ಕುಳಿತುಕೊಂಡು ಸಾಕಷ್ಟು ಶ್ರಮ ಪಟ್ಟಿದ್ದಾರೆ. ಸೀನ್ ಅದ್ಭುತವಾಗಿ ಬರಲು ಕಾರಣ ಆಗಿದ್ದಾರೆ. ಇದೀಗ ತಾರಕ್ ಪೊನ್ನಪ್ಪ ಜಾತರ ಸೀನ್​ ಬಗ್ಗೆ, ‘ಪುಷ್ಪ 2’ ಸಿನಿಮಾದಲ್ಲಿ ನಟಿಸಿದ ಅನುಭವದ ಬಗ್ಗೆ ಮಾತನಾಡಿದ್ದಾರೆ.

2021 ರಲ್ಲಿ ಮೈತ್ರಿ ಮೂವೀಸ್​ನ ತಂಡದವರಿಗೆ ಕರೆ ಮಾಡಿ ಅವಕಾಶ ಇದ್ದರೆ ಹೇಳಿದ್ದರಂತೆ ತಾರಕ್ ಪೊನ್ನಪ್ಪ. ಅದಾದ ಕೆಲವೇ ದಿನಗಳಲ್ಲಿ ಸುಕುಮಾರ್ ತಂಡದವರು ಕರೆ ಮಾಡಿ ಭೇಟಿ ಮಾಡುವಂತೆ ಹೇಳಿದರಂತೆ. ಸುಕುಮಾರ್ ಮೊದಲ ಬಾರಿಗೆ ತಾರಕ್ ಅನ್ನು ನೋಡಿದಾಗ ನಿಮ್ಮ ಕಣ್ಣು ಚೆನ್ನಾಗಿದೆ ಎಂದರಂತೆ. ಅದಾದ ಬಳಿಕ ಲುಕ್ ಟೆಸ್ಟ್ ಮಾಡಿ ತಾರಕ್ ಅವರನ್ನು ರೋಲ್​ಗೆ ಓಕೆ ಮಾಡಿದ್ದಾರೆ. ಅದಾದ ಬಳಿಕ ತಾರಕ್ ಅನ್ನು ಬುಗ್ಗಾ ರೆಡ್ಡಿ ಪಾತ್ರಕ್ಕೆ ಓಕೆ ಮಾಡಿದ್ದಾರೆ.

ತಾರಕ್ ಪೊನ್ನಪ್ಪ ಪಾತ್ರದ ಚಿತ್ರೀಕರಣ ಪ್ರಾರಂಭವಾಗಿದ್ದೆ ಜಾತ್ರೆ ಸೀನ್​ ಮೂಲಕ ಅಂತೆ. ಸುಕುಮಾರ್ ತಮಗೆ ಕೆಲವು ಸಣ್ಣ-ಪುಟ್ಟ ಸಲಹೆಗಳು ನೀಡಿದರು ಅವು ನನಗೆ ಬಹಳ ಸಹಾಯವಾಯ್ತು. ಅಲ್ಲದೆ ನಾನು ಸಹ ನನ್ನ ಡೈಲಾಗ್ ಡೆಲಿವರಿ, ಬಾಡಿ ಲಾಂಗ್ವೆಜ್​ಗೆ ಹೊಂದುವಂತೆ ಕೆಲವು ಬದಲಾವಣೆ ಮಾಡಿಕೊಂಡರಂತೆ. ‘ಸುಕುಮಾರ್ ಅವರೊಟ್ಟಿಗೆ ಕೆಲಸ ಮಾಡಿದ್ದು ಅದ್ಭುತ ಅನುಭವ‘ ಎಂದಿದ್ದಾರೆ ಪೊನ್ನಪ್ಪ.

ಇದನ್ನೂ ಓದಿ:ಅಲ್ಲು ಅರ್ಜುನ್ ಮನೆಗೆ ಬಂದಿದ್ದ ಸಿನಿಮಾ ತಾರೆಯರು: ಚಿತ್ರಗಳ ನೋಡಿ

ಅಲ್ಲು ಅರ್ಜುನ್ ಅವರೊಟ್ಟಿಗೆ ಕೆಲಸ ಮಾಡುವುದು ಬಹಳ ಸುಲಭವಾಗಿತ್ತು ಎಂದಿರುವ ತಾರಕ್ ಪೊನ್ನಪ್ಪ. ಅಲ್ಲು ಅರ್ಜುನ್ ಅವರನ್ನು ಹೊಡೆಯುವ ಸೀನ್​ ತುಸು ನರ್ವಸ್ ಆಗಿದ್ದೆ ಅದನ್ನು ಹೊರತುಪಡಿಸಿದರೆ ನಾನು ಆರಾಮವಾಗಿ ಪಾತ್ರವನ್ನು ನಿರ್ವಹಿಸಿದೆ. ನಾನು ಪಾತ್ರಕ್ಕೆ ಚೆನ್ನಾಗಿ ಹೋಮ್​ ವರ್ಕ್ ಮಾಡಿಕೊಂಡಿದ್ದೆ ಹಾಗಾಗಿ ನನಗೆ ಸುಲಭವಾಯ್ತು. ನನ್ನ ಧ್ವನಿಯನ್ನು ಸಹ ಈ ಪಾತ್ರಕ್ಕಾಗಿ ಬದಲಾವಣೆ ಮಾಡಿಕೊಂಡಿದ್ದೆ. ಅಲ್ಲು ಅರ್ಜುನ್ ಸಹ ಸಹನಟರನ್ನು ಬಹಳ ಕಂಫರ್ಟ್ ಆಗಿ ನೋಡಿಕೊಂಡರು’ ಎಂದಿದ್ದಾರೆ.

ಸಿನಿಮಾ ಬಿಡುಗಡೆ ಆದ ಮೇಲೆ ಜನ ಹೆಚ್ಚು ಪ್ರೀತಿ ತೋರುತ್ತಿದ್ದಾರೆ. ನನ್ನ ಪಾತ್ರದ ಬಗ್ಗೆ ವಿಶೇಷ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಮೊದಲೆಲ್ಲ ಜನ ವಿಲನ್​ಗಳನ್ನು ಬೈಯ್ಯುತ್ತಿದ್ದರು, ಆದರೆ ಈಗಿನ ಪ್ರೇಕ್ಷಕರು ಬುದ್ಧಿವಂತರಾಗಿದ್ದು, ಅವರು ಪಾತ್ರವನಲ್ಲ, ನಟನ ಪ್ರತಿಭೆಯನ್ನು ಮೆಚ್ಚಿಕೊಳ್ಳುತ್ತಾರೆ. ಹಲವಾರು ಮಂದಿ ಬಂದು ನನ್ನ ಪಾತ್ರದ ಡೈಲಾಗ್​ ಅನ್ನು ಹೇಳಿ ತುಂಬಾ ಚೆನ್ನಾಗಿ ನಟಿಸಿದ್ದೀರಿ ಎಂದಿದ್ದಾರೆ ಎಂದಿದ್ದಾರೆ ತಾರಕ್ ಪೊನ್ನಪ್ಪ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಕೆರೆಯಂತಾದ ರಾಜ್ಯ ಹೆದ್ದಾರಿ; ಜೀವ ಕೈಯಲ್ಲಿ ಹಿಡಿದು ಸವಾರರ ಸಂಚಾರ!
ಕೆರೆಯಂತಾದ ರಾಜ್ಯ ಹೆದ್ದಾರಿ; ಜೀವ ಕೈಯಲ್ಲಿ ಹಿಡಿದು ಸವಾರರ ಸಂಚಾರ!
ಬೋಳು ತಲೆಯಿದ್ದವರಿಗೆ ಅದೃಷ್ಟವೋ ಅದೃಷ್ಟ! ಯಾಕೆ ಗೊತ್ತಾ?
ಬೋಳು ತಲೆಯಿದ್ದವರಿಗೆ ಅದೃಷ್ಟವೋ ಅದೃಷ್ಟ! ಯಾಕೆ ಗೊತ್ತಾ?
ಇಂದು ಈ ರಾಶಿಯವರು ಸ್ನೇಹಿತರೊಂದಿಗೆ ಹಣಕಾಸು ವ್ಯವಹಾರ ಮಾಡಬೇಡಿ
ಇಂದು ಈ ರಾಶಿಯವರು ಸ್ನೇಹಿತರೊಂದಿಗೆ ಹಣಕಾಸು ವ್ಯವಹಾರ ಮಾಡಬೇಡಿ
ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ಎಐಎಡಿಎಂಕೆಗೆ ಬೆಂಬಲ ಘೋಷಿಸಿದ ಎಎಂಎಂಕೆ
ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ಎಐಎಡಿಎಂಕೆಗೆ ಬೆಂಬಲ ಘೋಷಿಸಿದ ಎಎಂಎಂಕೆ
ಪ್ರಜಾಕೀಯ ಜೊತೆ ಜೊತೆಗೆ ರಾಜ್ಯ ರಾಜಕಾರಣದ ಬಗ್ಗೆ ಉಪ್ಪಿ ಮಾತು
ಪ್ರಜಾಕೀಯ ಜೊತೆ ಜೊತೆಗೆ ರಾಜ್ಯ ರಾಜಕಾರಣದ ಬಗ್ಗೆ ಉಪ್ಪಿ ಮಾತು
ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ಔಟಾದ ರಹಾನೆ, ರಘುವಂಶಿ
ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ಔಟಾದ ರಹಾನೆ, ರಘುವಂಶಿ
ಬಂಗಾಳದ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ
ಬಂಗಾಳದ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು