‘ಫಾದರ್ಸ್​ ಡೇ’ ದಿನ ಅಲ್ಲು ಅರ್ಜುನ್​ಗೆ ಮಕ್ಕಳಿಂದ ಸರ್​ಪ್ರೈಸ್​; ಭಾವುಕರಾದ ನಟ

ಅಲ್ಲು ಅರ್ಜುನ್ ಅವರ ಮಕ್ಕಳಾದ ಅಯಾನ್ ಮತ್ತು ಅರ್ಹ, ತಮ್ಮ ತಂದೆಗೆ ಫಾದರ್ಸ್ ಡೇ ಹಬ್ಬದಂದು ಚಾಕೊಲೇಟ್ ಕೇಕ್‌ನಿಂದ ಸರ್‌ಪ್ರೈಸ್ ನೀಡಿದ್ದಾರೆ. ಅಲ್ಲು ಅರ್ಜುನ್ ಈ ವಿಚಾರವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡು ಮಕ್ಕಳಿಗೆ ಧನ್ಯವಾದ ಹೇಳಿದ್ದಾರೆ ಮತ್ತು ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದೂ ಹೇಳಿದ್ದಾರೆ. ಅಲ್ಲು ಅರ್ಜುನ್ 'AA22 X A6' ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು, ಈ ಕಾರಣಕ್ಕಾಗಿ ಮಕ್ಕಳಿಂದ ದೂರವಿದ್ದಾರೆ ಎಂದು ತಿಳಿದುಬಂದಿದೆ.

‘ಫಾದರ್ಸ್​ ಡೇ’ ದಿನ ಅಲ್ಲು ಅರ್ಜುನ್​ಗೆ ಮಕ್ಕಳಿಂದ ಸರ್​ಪ್ರೈಸ್​; ಭಾವುಕರಾದ ನಟ
ಅಲ್ಲು ಅರ್ಜುನ್ ಮತ್ತು ಕುಟುಂಬ
Updated By: ರಾಜೇಶ್ ದುಗ್ಗುಮನೆ

Updated on: Jun 15, 2025 | 2:18 PM

ಇಂದು (ಜೂನ್ 15) ವಿಶ್ವ ತಂದೆಯರ ದಿನ. ಈ ವೇಳೆ ಜನ ಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಎಲ್ಲರೂ ತಮ್ಮ ತಂದೆಯನ್ನು ನೆನಪು ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಅಲ್ಲು ಅರ್ಜುನ್ (Allu Arjun) ಮಕ್ಕಳಾದ ಅಯಾನ್ ಮತ್ತು ಅರ್ಹ ಕೂಡ ಇದಕ್ಕೆ ಭಿನ್ನವಾಗಿಲ್ಲ. ಅವರು ತಂದೆಗೆ ‘ಫಾದರ್ಸ್ ಡೇ’ ಶುಭಾಶಯ ತಿಳಿಸಿದ್ದಾರೆ. ಅಲ್ಲದೆ ತಂದೆಗೆ ಒಂದು ಸರ್​ಪ್ರೈಸ್ ಕೊಟ್ಟಿದ್ದಾರೆ. ಈ ವಿಚಾರವನ್ನು ಅಲ್ಲು ಅರ್ಜುನ್ ಅವರು ಇನ್​ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡು ಧನ್ಯವಾದ ಹೇಳಿದ್ದಾರೆ.

ಅಲ್ಲು ಅರ್ಜುನ್ ಮಕ್ಕಳು ತಂದೆಗಾಗಿ ಚಾಕೋಲೇಟ್ ಕೇಕ್​ನ ಇಟ್ಟಿದ್ದಾರೆ. ಈ ಕೇಕ್​ ಮೇಲೆ ಚೆರಿ ಹಣ್ಣುಗಳನ್ನು ಇಟ್ಟಿದ್ದಾರೆ. ಈ ಕೇಕ್​ನ ಅವರ ತಂದೆಗಾಗಿ ಅವರೇ ಮಾಡಿದಂತೆ ಕಾಣುತ್ತದೆ. ಈ ಕೇಕ್ ಮೇಲೆ ‘ಹ್ಯಾಪಿ ಫಾದರ್ಸ್ ಡೇ’ ಎಂದು ಅವರು ಹೇಳಿದ್ದಾರೆ. ಈ ಫೋಟೋನ ಇನ್​ಸ್ಟಾಗ್ರಾಮ್ ಸ್ಟೇಟಸ್​ನಲ್ಲಿ ಹಂಚಿಕೊಂಡಿರುವ ಅವರು, ‘ಥ್ಯಾಂಕ್​ ಯೂ ಅಯಾನ್ ಮತ್ತು ಅರ್ಹ. ನಾನು ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ’ ಎಂದು ಅವರು ಹೇಳಿದ್ದಾರೆ.

ಅಲ್ಲು ಅರ್ಜುನ್ ಅವರು ಮಕ್ಕಳನ್ನು ತುಂಬಾನೇ ಪ್ರೀತಿ ಮಾಡುತ್ತಾರೆ. ಅವರು ಆಗಾಗ ಮಕ್ಕಳ ಜೊತೆ ವೆಕೇಶ್ ತೆರಳುತ್ತಾರೆ. ಸಿನಿಮಾ ಕೆಲಸಗಳಲ್ಲಿ ಬಿಡುವು ಮಾಡಿಕೊಂಡು ಅವರು ವಿದೇಶಕ್ಕೆ ತೆರಳುತ್ತಾರೆ. ಈ ವೇಳೆ ಅವರ ಪತ್ನಿ ಸ್ನೇಹಾ ರೆಡ್ಡಿ ಕೂಡ ಸಾಥ್ ನೀಡುತ್ತಾರೆ. ಈಗ ಅಲ್ಲು ಅರ್ಜುನ್ ಅವರು ಸಿನಿಮಾ ಕೆಲಸಗಳ ಕಾರಣಕ್ಕೆ ಮಕ್ಕಳ ಜೊತೆ ಇಲ್ಲ ಎಂದು ಹೇಳಲಾಗುತ್ತಿದೆ. ಈ ಕಾರಣದಿಂದಲೇ ಅವರು ಮಿಸ್ ಯೂ ಹೇಳಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ
ಸಲ್ಮಾನ್ ಖಾನ್​ ವೃತ್ತಿ ಜೀವನದ ಅತಿ ಕೆಟ್ಟ ಚಿತ್ರಗಳಿವು..
ದಾಖಲೆ ಬೆಲೆಗೆ ‘ಘಾಟಿ’ ಚಿತ್ರದ ಹಕ್ಕು ಮಾರಾಟ
‘ಸರಿಗಮಪ’ ಗೆಲುವಿನ ಬಳಿಕೆ ಮರೆಯದೇ ಪುನೀತ್ ಸಮಾಧಿಗೆ ಭೇಟಿ ನೀಡಿದ ಶಿವಾನಿ
ನಿಶಾ ರವಿಕೃಷ್ಣನ್​ಗೆ ತೆಲುಗು ಕಿರುತೆರೆಯಲ್ಲಿ ಎದುರಾದ ಕಷ್ಟಗಳು ಒಂದೆರಡಲ್ಲ

ಈ ಮೊದಲು ‘ಪುಷ್ಪ 2’ ಚಿತ್ರಕ್ಕೆ ಅಲ್ಲು ಅರ್ಜುನ್ ಅವರು ಉದ್ದನೆಯ ಗಡ್ಡ ಬಿಟ್ಟಿದ್ದರು. ಈ ಗಡ್ಡದಿಂದ ಅವರಿಗೆ ಸಾಕಷ್ಟು ಸಮಸ್ಯೆ ಆಗಿತ್ತಂತೆ. ಏಕೆಂದರೆ ಮಕ್ಕಳು ಮುತ್ತು ಕೊಡಲು ತಮ್ಮ ಬಳಿ ಬರುತ್ತಲೇ ಇರಲಿಲ್ಲ ಎಂದು ಹೇಳಿದ್ದರು. ಈ ಕಾರಣದಿಂದಲೇ ಗಡ್ಡ ಶೇವ್ ಮಾಡಲು ಅವರು ಬಯಸಿದ್ದರು.

ಇದನ್ನೂ ಓದಿ: ಮಲಯಾಳಂ ಯುವ ನಿರ್ದೇಶಕನಿಗೆ ಕಾಲ್​ಶೀಟ್ ಕೊಟ್ಟ ಅಲ್ಲು ಅರ್ಜುನ್?

ಅಲ್ಲು ಅರ್ಜುನ್ ಅವರು ‘AA22 X A6’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಇದಕ್ಕಾಗಿ ಅವರು ಟ್ರಾನ್ಸ್​ಫಾರ್ಮೇಷನ್ ಮಾಡಿಕೊಳ್ಳುತ್ತಿದ್ದಾರೆ. ಅವರು ಈ ಚಿತ್ರಕ್ಕಾಗಿ ತಮ್ಮ ಬಾಡಿಯನ್ನು ಬಲ್ಕ್ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ಈ ಸಿನಿಮಾಗಾಗಿ ದೀಪಿಕಾ ಪಡುಕೋಣೆ ಎಂಟ್ರಿಕೊಟ್ಟಿದ್ದಾರೆ. ಈ ವಿಡಿಯೋನ ಅವರು ಇತ್ತೀಚೆಗೆ ಹಂಚಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Published On - 2:17 pm, Sun, 15 June 25