AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

100 ಕೋಟಿ ರೂ. ಸುರಿದು ಹೊಸ ಮನೆ ನಿರ್ಮಿಸುತ್ತಿದ್ದಾರೆ ಅಲ್ಲು ಅರ್ಜುನ್; ಹೇಗಿರಲಿದೆ ನಿವಾಸ?

ಅಲ್ಲು ಅರ್ಜುನ್ ಜುಬ್ಲಿ ಹಿಲ್ಸ್‌ನಲ್ಲಿ 80-100 ಕೋಟಿ ರೂ. ವೆಚ್ಚದಲ್ಲಿ ಐಷಾರಾಮಿ ಹೊಸ ಮನೆ ನಿರ್ಮಿಸುತ್ತಿದ್ದಾರೆ. 4,000 ಸ್ಕ್ವೇರ್ ಯಾರ್ಡ್ ಜಾಗದಲ್ಲಿ ಮನೆ, ಗಾರ್ಡನ್, ಸ್ವಿಮ್ಮಿಂಗ್ ಪೂಲ್ ಇರಲಿದೆ. ಇದು ಅವರ ಕನಸಿನ ಮನೆ. ಸದ್ಯ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಚಿರಂಜೀವಿ ಅವರ ಮನೆಯ ಪಕ್ಕದಲ್ಲೇ ಈ ಅದ್ದೂರಿ ನಿವಾಸ ತಲೆ ಎತ್ತುತ್ತಿದೆ.

100 ಕೋಟಿ ರೂ. ಸುರಿದು ಹೊಸ ಮನೆ ನಿರ್ಮಿಸುತ್ತಿದ್ದಾರೆ ಅಲ್ಲು ಅರ್ಜುನ್; ಹೇಗಿರಲಿದೆ ನಿವಾಸ?
ಅಲ್ಲು ಅರ್ಜುನ್
ರಾಜೇಶ್ ದುಗ್ಗುಮನೆ
|

Updated on: Apr 23, 2026 | 12:14 PM

Share

ಅಲ್ಲು ಅರ್ಜುನ್ (Allu Arjun) ಸಾಲು ಸಾಲು ಯಶಸ್ಸು ಕಾಣುತ್ತಿದ್ದಾರೆ. ‘ಪುಷ್ಪ’, ‘ಪುಷ್ಪ 2’ ದೊಡ್ಡ ಯಶಸ್ಸು ಕಂಡಿದೆ. ಈಗ ಅವರು ‘ರಾಕಾ’ ಸಿನಿಮಾ ಕೆಲಸದಲ್ಲಿ ಬ್ಯುಸಿ ಇದ್ದಾರೆ. ಹೀಗಿರುವಾಗಲೇ ಅವರು ಹೈದರಾಬಾದ್​​ನ ಜುಬ್ಲಿ ಹಿಲ್ಸ್​​ನಲ್ಲಿ ದೊಡ್ಡ ಮನೆ ನಿರ್ಮಾಣ ಮಾಡುತ್ತಿದ್ದಾರೆ ಎಂದು ವರದಿ ಆಗಿದೆ. ಸದ್ಯ ಅವರು ಜುಬ್ಲಿ ಹಿಲ್ಸ್​​ನಲ್ಲೇ ವಾಸವಿದ್ದಾರೆ. ಅದೇ ಭಾಗದಲ್ಲಿ ಈಗ ಹೊಸ ಮನೆ ಕೂಡ ನಿರ್ಮಾಣ ಆಗುತ್ತಿದೆ. ಇದು ಅವರ ಡ್ರೀಮ್ ಹೌಸ್ ಎನ್ನಲಾಗಿದೆ.

ಅಲ್ಲು ಅರ್ಜುನ್ ಅವರ ಹೊಸ ಮನೆ ನಿರ್ಮಾಣಕ್ಕೆ 80-100 ಕೋಟಿ ರೂಪಾಯಿ ಖರ್ಚು ಮಾಡುತ್ತಿದ್ದಾರೆ ಎನ್ನಲಾಗಿದೆ. ಅವರ ಮನೆಯ ಜಾಗ ಸುಮಾರು 4 ಸಾವಿರ ಸ್ಕ್ವೇರ್ ಯಾರ್ಡ್ ಅಲ್ಲಿ ಇರಲಿದೆ. ಇದರಲ್ಲಿ ಮನೆ, ಗಾರ್ಡನ್, ಪ್ಲೇಯಿಂಗ್ ಏರಿಯಾ, ಸ್ವಿಮಿಂಗ್ ಪೂಲ್ ಎಲ್ಲವೂ ಸೇರಿರಲಿದೆ. ಅದ್ಭುತ ವಾಸ್ತುಶಿಲ್ಪವನ್ನು ಇದು ಹೊಂದಿರಲಿದೆ. ಈಗಾಗಲೇ ಮನೆ ನಿರ್ಮಾಣ ಕಾರ್ಯ ಆರಂಭವಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಖ್ಯಾತ ನಟ ಚಿರಂಜೀವಿ ನಿವಾಸ ಕೂಡ ಜುಬ್ಲಿ ಹಿಲ್ಸ್​​ನಲ್ಲೇ ಇದೆ. ಈ ಮನೆಯ ಪಕ್ಕದಲ್ಲೇ ಅಲ್ಲು ಅರ್ಜುನ್ ಹೊಸ ನಿವಾಸ ರೆಡಿ ಆಗುತ್ತಿದೆ. ಈ ಮೂಲಕ ಅಲ್ಲು ಅರ್ಜುನ್ ಹಾಗೂ ಚಿರಂಜೀವಿ ನೆರೆಹೊರೆಯವಲಾಗಲಿದ್ದಾರೆ. ಸಂಬಂಧದಲ್ಲಿ ಅಲ್ಲು ಅರ್ಜುನ್​​ಗೆ ಚಿರಂಜೀವಿ ಮಾವ ಆಗಬೇಕು. ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ಸಹೋದರಿಯನ್ನು ಚಿರಂಜೀವಿಗೆ ಕೊಟ್ಟು ಮದುವೆ ಮಾಡಲಾಗಿದೆ.

ಇದನ್ನೂ ಓದಿ: ಮುಂಬೈನಲ್ಲಿ ಐಷಾರಾಮಿ ಮನೆ ಬಾಡಿಗೆಗೆ ಪಡೆದ ಅಲ್ಲು ಅರ್ಜುನ್: ತಿಂಗಳ ಬಾಡಿಗೆ ಎಷ್ಟು ಗೊತ್ತೆ?

ಮನೆ ನಿರ್ಮಾಣ ಪೂರ್ಣಗೊಂಡ ಬಳಿಕ ಅಲ್ಲು ಅರ್ಜುನ್ ಹೊಸ ಮನೆಗೆ ಶಿಫ್ಟ್ ಆಗಬಹುದು. ಅಲ್ಲು ಅರ್ಜುನ್ ಅವರು ಪ್ರತಿ ವರ್ಷ ಬರ್ತ್​​ಡೇ ಸಂದರ್ಭದಲ್ಲಿ ಅಭಿಮಾನಿಗಳನ್ನು ಮನೆ ಬಳಿ ಭೇಟಿ ಆಗುತ್ತಾರೆ. ಈಗ ಹೊಸ ನಿವಾಸದಲ್ಲಿ ಅಭಿಮಾನಿಗಳನ್ನು ನೋಡಲು ಗ್ಯಾಲರಿ ಕೂಡ ನಿರ್ಮಾಣ ಮಾಡಬಹುದೇ ಎಂಬ ಪ್ರಶ್ನೆ ಮೂಡಿದೆ. ಅಲ್ಲು ಅರ್ಜುನ್ ಅವರು ‘ರಾಕಾ’ ಸಿನಿಮಾ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಈ ಚಿತ್ರಕ್ಕೆ ದೀಪಿಕಾ ಪಡುಕೋಣೆ ನಾಯಕಿ ಆದರೆ, ಅಟ್ಲೀ ನಿರ್ದೇಶಕರಾಗಿದ್ದಾರೆ. ಈ ಸಿನಿಮಾ ಶೂಟ್​​ಗಾಗಿ ಅಲ್ಲು ಅರ್ಜುನ್ ಅವರು ಮುಂಬೈಗೆ ತೆರಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
SIR ಬಗ್ಗೆ ಭಯ ಬೇಡ: ಧೈರ್ಯ ಹೇಳಿದ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್
SIR ಬಗ್ಗೆ ಭಯ ಬೇಡ: ಧೈರ್ಯ ಹೇಳಿದ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್
ಅಡ್ಡಮತದಾನ ಮಾಡಿಲ್ಲವೆಂದು ಧರ್ಮಸ್ಥಳದಲ್ಲಿ ಹೆಚ್.ಕೆ ಸುರೇಶ್ ಪ್ರಮಾಣ!
ಅಡ್ಡಮತದಾನ ಮಾಡಿಲ್ಲವೆಂದು ಧರ್ಮಸ್ಥಳದಲ್ಲಿ ಹೆಚ್.ಕೆ ಸುರೇಶ್ ಪ್ರಮಾಣ!
ಎಲ್ಲರೂ ಮತಪಟ್ಟಿಯಲ್ಲಿ ತಮ್ಮ ಹೆಸರು ಇರುವಂತೆ ನೋಡಿಕೊಳ್ಳಿ ಎಂದ ಡಿಕೆಶಿ!
ಎಲ್ಲರೂ ಮತಪಟ್ಟಿಯಲ್ಲಿ ತಮ್ಮ ಹೆಸರು ಇರುವಂತೆ ನೋಡಿಕೊಳ್ಳಿ ಎಂದ ಡಿಕೆಶಿ!
ಬೆಂಗಳೂರಿನಲ್ಲಿ ಫುಟ್​ಪಾತ್ ಅತಿಕ್ರಮಣ ತೆರವಿಗೆ ಇಂದೇ ಗಡುವು
ಬೆಂಗಳೂರಿನಲ್ಲಿ ಫುಟ್​ಪಾತ್ ಅತಿಕ್ರಮಣ ತೆರವಿಗೆ ಇಂದೇ ಗಡುವು
ಮತದಾರರ ಪಟ್ಟಿ ಪರಿಷ್ಕರಣೆ: ಸಿಎಂ ಮನೆಯಿಂದಲೇ ಎಸ್​ಐಆರ್​ಗೆ ಚಾಲನೆ!
ಮತದಾರರ ಪಟ್ಟಿ ಪರಿಷ್ಕರಣೆ: ಸಿಎಂ ಮನೆಯಿಂದಲೇ ಎಸ್​ಐಆರ್​ಗೆ ಚಾಲನೆ!
ವಿವಾಹಿತೆ ಜೊತೆ ಪರಾರಿಯಾದ ಯುವಕನ ಮನೆ ಧ್ವಂಸ: ಕಮಿಷನರ್​​ ಏನಂದ್ರು?
ವಿವಾಹಿತೆ ಜೊತೆ ಪರಾರಿಯಾದ ಯುವಕನ ಮನೆ ಧ್ವಂಸ: ಕಮಿಷನರ್​​ ಏನಂದ್ರು?
ದಾವಣಗೆರೆ ಜಿಲ್ಲಾ ಆಸ್ಪತ್ರೆಯಲ್ಲಿ ಭಾರಿ ಅಗ್ನಿ ಅವಘಡ
ದಾವಣಗೆರೆ ಜಿಲ್ಲಾ ಆಸ್ಪತ್ರೆಯಲ್ಲಿ ಭಾರಿ ಅಗ್ನಿ ಅವಘಡ
ನೋಡಿ, ಎಂಥಾ ಅದ್ಭುತ ದೃಶ್ಯ! ಒಂದೇ ಮರದ ಮೇಲೆ ಕುಳಿತ ಎರಡು ಚಿರತೆಗಳು
ನೋಡಿ, ಎಂಥಾ ಅದ್ಭುತ ದೃಶ್ಯ! ಒಂದೇ ಮರದ ಮೇಲೆ ಕುಳಿತ ಎರಡು ಚಿರತೆಗಳು
ಅಡ್ಡಮತದಾನ ಮಾಡಿಲ್ಲ: ಬೇಲೂರು ಬಿಜೆಪಿ ಶಾಸಕ ಸುರೇಶ್ ಆಣೆ-ಪ್ರಮಾಣ
ಅಡ್ಡಮತದಾನ ಮಾಡಿಲ್ಲ: ಬೇಲೂರು ಬಿಜೆಪಿ ಶಾಸಕ ಸುರೇಶ್ ಆಣೆ-ಪ್ರಮಾಣ
ಕಾರವಾರದಲ್ಲಿ ಅಬ್ಬರಿಸಿದ ಮಳೆರಾಯ; ಹಲವೆಡೆ ರಸ್ತೆಗಳು ಜಲಾವೃತ!
ಕಾರವಾರದಲ್ಲಿ ಅಬ್ಬರಿಸಿದ ಮಳೆರಾಯ; ಹಲವೆಡೆ ರಸ್ತೆಗಳು ಜಲಾವೃತ!