ಬಾಯ್ಫ್ರೆಂಡ್ ವಿಚಾರ ಬಂದಾಗ ಅನಿಖಾ ಸುರೇಂದ್ರನ್ ರಿಯಾಕ್ಷನ್ ನೋಡಿ
ಅನಿಖಾ ಸುರೇಂದ್ರನ್ ಅವರ ವಯಸ್ಸು, ಗೆಳೆಯ, ಮತ್ತು ಚಲನಚಿತ್ರ ವೃತ್ತಿಜೀವನದ ಬಗ್ಗೆ ಈ ಲೇಖನ ತಿಳಿಸುತ್ತದೆ. ಬಾಲ ಕಲಾವಿದೆಯಾಗಿ ಪ್ರಾರಂಭಿಸಿದ ಅವರು 'ವಿಶ್ವಾಸಂ' ಚಿತ್ರದ ಮೂಲಕ ಖ್ಯಾತಿ ಪಡೆದರು. ಅವರ ಸಾಮಾಜಿಕ ಜಾಲತಾಣದಲ್ಲಿ ಅಪಾರ ಅಭಿಮಾನಿಗಳಿದ್ದಾರೆ. ಅವರು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದು, ಗೆಳೆಯನ ಬಗ್ಗೆ ವದಂತಿಗಳಿಗೆ ತೆರೆ ಎಳೆದಿದ್ದಾರೆ.

ಮಲಯಾಳಂ ಹಾಗೂ ತಮಿಳು ಚಿತ್ರರಂಗದಲ್ಲೇ ತಮ್ಮದೇ ಛಾಪು ಮೂಡಿಸಿದವರು ಅನಿಖಾ ಸುರೇಂದ್ರನ್. ಅವರಿಗೆ ಸಾಕಷ್ಟು ಬೇಡಿಕೆ ಸೃಷ್ಟಿ ಆಗಿದೆ. ಅವರಿಗೆ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಸಿಕ್ಕಿದೆ. ಅವರ ಸಾಮಾಜಿಕ ಜಾಲತಾಣದಲ್ಲಿ ಹಿಂಬಾಲಕರ ಸಂಖ್ಯೆ ಕೂಡ ಹೆಚ್ಚಿದ್ದಾರೆ. ಅವರು ಈಗ ಬಾಯ್ಫ್ರೆಂಡ್ ವಿಚಾರವಾಗಿ ಮಾತನಾಡಿದ್ದಾರೆ. ಅವರಿಗೆ ಬಾಯ್ಫ್ರೆಂಡ್ ಇದ್ದಾನಾ? ಅವರ ಮೊಬೈಲ್ ಸಂಖ್ಯೆ ಎಷ್ಟು? ಆ ಬಗ್ಗೆ ಇಲ್ಲಿದೆ ವಿವರ.
ಅನಿಖಾ ಸುರೇಂದ್ರನ್ ಅವರು ಬಾಲ ಕಲಾವಿದೆಯಾಗಿ ಚಿತ್ರರಂಗಕ್ಕೆ ಕಾಲಿಟ್ಟವರು. 2019ರಲ್ಲಿ ರಿಲೀಸ್ ಆದ ತಮಿಳಿನ ‘ವಿಶ್ವಾಸಂ’ ಚಿತ್ರದಲ್ಲಿ ಅವರು ಅಜಿತ್ ಹಾಗೂ ನಯನತಾರಾ ಮಗಳಿನ ಪಾತ್ರ ಮಾಡಿ ಭೇಷ್ ಎನಿಸಿಕೊಂಡರು. ಈ ಚಿತ್ರ ಸೂಪರ್ ಡೂಪರ್ ಹಿಟ್ ಆಯಿತು. ಆ ಬಳಿಕ ಅವರನ್ನು ಹಿಡಿಯುವ ಮಾತೇ ಇರಲಿಲ್ಲ.
ಈಗ ಅನಿಖಾ ಅವರು ಹೀರೋಯಿನ್ ಆಗಿ ಕಾಣಿಸಿಕೊಳ್ಳುತ್ತಾ ಇದ್ದಾರೆ. ಅವರಿಗೆ ಇನ್ನೂ 20 ವರ್ಷ ವಯಸ್ಸು. ಅವರು ಒಳ್ಳೆಯ ಸಿನಿಮಾಗಳನ್ನು ನೀಡುತ್ತಾ ಇದ್ದಾರೆ. ಜೊತೆಗೆ ಡಿಗ್ರೀ ಕೂಡ ಪಡೆಯುತ್ತಾ ಇದ್ದಾರೆ.
View this post on Instagram
‘ನನಗೆ 20 ವರ್ಷ’ ಎಂದು ಅನಿಖಾ ಹೇಳಿದ್ದಾರೆ. ಮನೆಯ ಅಡ್ರೆಸ್ ಹಾಗೂ ಮೊಬೈಲ್ ನಂಬರ್ ಬಗ್ಗೆ ಕೇಳಿದಾಗ ಶಾಕ್ ಆದರು ಅನಿಖಾ. ಅವರು ಇದನ್ನು ಹೇಳಲು ನಿರಾಕರಿಸಿದರು. ಬಾಯ್ಫ್ರೆಂಡ್ ಇದ್ದಾನಾ ಎನ್ನುವ ವಿಚಾರ ಬಂದಾಗ ಅನಿಖಾ ಕಡೆಯಿಂದ ಇಲ್ಲ ಎನ್ನುವ ಉತ್ತರ ಬಂದಿದೆ. ಈ ಮೂಲಕ ಅವರು ಎಲ್ಲಾ ವದಂತಿಗೆ ತೆರೆ ಎಳೆದಿದ್ದಾರೆ.
ಇದನ್ನೂ ಓದಿ: ಕಾಲೇಜ್ಗೆ ಹೋಗ್ತಾ ಇರೋದಕ್ಕೆ ಪ್ರೂಫ್ ಕೊಟ್ಟ ನಟಿ ಅನಿಖಾ
ಅನಿಖಾ ಅವರು ಸದ್ಯ ತಮಿಳು ಚಿತ್ರರಂಗದಲ್ಲಿ ಬ್ಯುಸಿ ಇದ್ದಾರೆ. ಇಲ್ಲಿ ಅವರಿಗೆ ಹಲವು ಆಫರ್ಗಳು ಬರುತ್ತಿವೆ. ‘ವಾಸುವಿನ್ ಗುರ್ಬಿಂಗಳ್’ ಚಿತ್ರದಲ್ಲಿ ಅವರು ನಟಿಸುತ್ತಾ ಇದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅನಿಖಾ ಆ್ಯಕ್ಟೀವ್ ಆಗಿದ್ದಾರೆ. ಹಲವು ರೀತಿಯ ಶೂಟ್ಗಳನ್ನು ಮಾಡಿಸುತ್ತಾ ಅವರು ಗಮನ ಸೆಳೆಯುತ್ತಾ ಇದ್ದಾರೆ. ಅವರ ಹಿಂಬಾಲಕರ ಸಂಖ್ಯೆ ಹೆಚ್ಚಿದೆ. ಮುಂದಿನ ದಿನಗಳಲ್ಲಿ ನಾಯಕಿ ಆಗಿ ಇನ್ನಷ್ಟು ಸಿನಿಮಾಗಳನ್ನು ಅವರು ಮಾಡುವ ಅವಕಾಶ ಇದೆ. ಈ ಅವಕಾಶಗಳನ್ನು ಹೇಗೆ ಬಳಸಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:57 am, Sat, 1 March 25



