Anushka Shetty: ತಂದೆಯ ಕೆನ್ನೆಗೆ ಮುತ್ತಿಟ್ಟು ಬರ್ತ್​ಡೇ ವಿಶ್ ತಿಳಿಸಿದ ನಟಿ ಅನುಷ್ಕಾ ಶೆಟ್ಟಿ

ತಂದೆ ವಿಟ್ಟಲ್ ಶೆಟ್ಟಿ ಅವರ ಜನ್ಮದಿನವನ್ನು ಅನುಷ್ಕಾ ಶೆಟ್ಟಿ ಆಚರಿಸಿದ್ದಾರೆ. ಕೇಕ್ ಕತ್ತರಿಸಿ ಇಡೀ ಕುಟುಂಬ ಸಂಭ್ರಮಿಸಿದೆ. ತಂದೆಯ ಕೆನ್ನೆಗೆ ಅನುಷ್ಕಾ ಶೆಟ್ಟಿ ಮುತ್ತಿಟ್ಟಿದ್ದಾರೆ.

Anushka Shetty: ತಂದೆಯ ಕೆನ್ನೆಗೆ ಮುತ್ತಿಟ್ಟು ಬರ್ತ್​ಡೇ ವಿಶ್ ತಿಳಿಸಿದ ನಟಿ ಅನುಷ್ಕಾ ಶೆಟ್ಟಿ
ಕುಟುಂಬದ ಜೊತೆ ಅನುಷ್ಕಾ ಶೆಟ್ಟಿ
Follow us
ರಾಜೇಶ್ ದುಗ್ಗುಮನೆ
|

Updated on: Apr 21, 2023 | 7:53 AM

ನಟಿ ಅನುಷ್ಕಾ ಶೆಟ್ಟಿ ಅವರು ಚಿತ್ರರಂಗದಲ್ಲಿ ಮೊದಲಿನಷ್ಟು ಆ್ಯಕ್ಟೀವ್ ಆಗಿಲ್ಲ. ‘ಬಾಹುಬಲಿ’ (Bahubali) ಹಾಗೂ ‘ಬಾಹುಬಲಿ 2’ ಸಿನಿಮಾ ರಿಲೀಸ್ ಆದ ಬಳಿಕ ಅವರು ಸಾಕಷ್ಟು ಜನಪ್ರಿಯತೆ ಪಡೆದರು. ಆದರೆ, ಈ ಖ್ಯಾತಿಯನ್ನು ಅವರಿಗೆ ಉಳಿಸಿಕೊಳ್ಳೋಕೆ ಆಗಿಲ್ಲ. 2018ರಲ್ಲಿ ತೆರೆಗೆ ಬಂದ ‘ಭಾಗಮತಿ’ ಚಿತ್ರವೇ ಕೊನೆ. ಇದಾದ ಬಳಿಕ ಅವರು ಮಾಡಿದ್ದು ಒಂದು ಸಿನಿಮಾ ಮಾತ್ರ. ಆ ಚಿತ್ರ ಕೂಡ ಸೋತಿದೆ. ಈ ಬಗ್ಗೆ ಅವರಿಗೆ ಬೇಸರ ಇಲ್ಲ. ಆಗೊಂದು ಈಗೊಂದು ಸಿನಿಮಾ ಮಾಡುತ್ತಾ, ಕುಟುಂಬದ ಕಡೆ ಹೆಚ್ಚು ಗಮನ ನೀಡುತ್ತಾ ಅವರು ಹಾಯಾಗಿದ್ದಾರೆ. ಈಗ ಅನುಷ್ಕಾ ಶೆಟ್ಟಿ(Anushka Shetty)  ತಂದೆಯ ಬರ್ತ್​ಡೇನ ಅದ್ದೂರಿಯಾಗಿ ಆಚರಿಸಿದ್ದಾರೆ. ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ತಂದೆ ವಿಟ್ಟಲ್ ಶೆಟ್ಟಿ ಅವರ ಜನ್ಮದಿನವನ್ನು ಅನುಷ್ಕಾ ಶೆಟ್ಟಿ ಆಚರಿಸಿದ್ದಾರೆ. ಕೇಕ್ ಕತ್ತರಿಸಿ ಇಡೀ ಕುಟುಂಬ ಸಂಭ್ರಮಿಸಿದೆ. ತಂದೆಯ ಕೆನ್ನೆಗೆ ಅನುಷ್ಕಾ ಶೆಟ್ಟಿ ಮುತ್ತಿಟ್ಟಿದ್ದಾರೆ. ಈ ಚಿತ್ರವನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್ ಮಾಡಿದ್ದಾರೆ. ಫ್ಯಾಮಿಲಿ ಫೋಟೋ ನೋಡಿ ಫ್ಯಾನ್ಸ್ ಸಂಭ್ರಮಿಸಿದ್ದಾರೆ. ಅನುಷ್ಕಾ ತಂದೆಗೆ ಅಭಿಮಾನಿಗಳ ಕಡೆಯಿಂದ ವಿಶ್ ಸಿಕ್ಕಿದೆ.

ಇದನ್ನೂ ಓದಿ:  ‘ಕಾಂತಾರ’ ನೋಡಿ ಅನುಷ್ಕಾ ಶೆಟ್ಟಿ ಫಿದಾ; ರಿಷಬ್​ ಬಗ್ಗೆ ಸ್ಪೆಷಲ್​ ಮಾತುಗಳನ್ನು ಹೇಳಿದ ಸ್ಟಾರ್​ ನಟಿ

ಅನುಷ್ಕಾ ಮದುವೆ ವಿಚಾರದಲ್ಲಿ ಅವರ ತಂದೆ-ತಾಯಿಗೆ ಬೇಸರ ಇದೆ. ಅನುಷ್ಕಾ ಶೆಟ್ಟಿಗೆ ಈಗ 41 ವರ್ಷ. ಆದರೆ, ಇನ್ನೂ ಅವರು ಮದುವೆ ಆಗಿಲ್ಲ. ಪ್ರಭಾಸ್ ಜೊತೆ ಅನುಷ್ಕಾ ವಿವಾಹ ಆಗಲಿದ್ದಾರೆ ಎನ್ನಲಾಗಿತ್ತು. ‘ಬಾಹುಬಲಿ’ ಹಾಗೂ ‘ಬಾಹುಬಲಿ 2’ ಚಿತ್ರದಲ್ಲಿ ಇವರು ಒಟ್ಟಾಗಿ ನಟಿಸಿದ್ದರು. ಹೀಗಾಗಿ, ಇವರ ಮಧ್ಯೆ ಆಪ್ತತೆ ಬೆಳೆಯಿತು. ಆದರೆ, ಇವರ ಪ್ರೀತಿ ಮದುವೆವರೆಗೆ ಹೋಗಲೇ ಇಲ್ಲ. ಅವರು ಇನ್ನುಮುಂದೆ ಮದುವೆ ಆಗುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.

ಇದನ್ನೂ ಓದಿ:  ಟ್ರೋಲ್​ಗೆ ಹೆದರದೆ ಹೊಸ ಸಿನಿಮಾದ ಪೊಸ್ಟರ್ ಬಿಡುಗಡೆ ಮಾಡಿದ ಅನುಷ್ಕಾ ಶೆಟ್ಟಿ

ಅನುಷ್ಕಾ ಶೆಟ್ಟಿ ಅವರು ಮೂಲತಃ ಕನ್ನಡದವರು. ಅವರ ಊರು ಮಂಗಳೂರು. ಶಿಕ್ಷಣ ಪಡೆದಿದ್ದು ಬೆಂಗಳೂರಿನಲ್ಲಿ. ಆದರೆ ಅವರು ಸಿನಿಮಾ ಜರ್ನಿ ಆರಂಭಿಸಿದ್ದು ತೆಲುಗು ಚಿತ್ರರಂಗದಲ್ಲಿ. ಬಳಿಕ ತಮಿಳು ಸಿನಿಮಾಗಳಿಂದಲೂ ಅವಕಾಶ ಬಂತು. ಅಲ್ಲಿಯೂ ಅವರು ಭರ್ಜರಿ ಗೆಲುವು ಪಡೆದುಕೊಂಡರು. ಒಂದಕ್ಕಿಂತ ಒಂದು ಡಿಫರೆಂಟ್​ ಪಾತ್ರಗಳನ್ನು ಮಾಡಿರುವ ಅವರನ್ನು ಕೋಟ್ಯಂತರ ಅಭಿಮಾನಿಗಳು ಆರಾಧಿಸುತ್ತಾರೆ. ಸದ್ಯ ಅನುಷ್ಕಾ ಕೈಯಲ್ಲಿ ಒಂದು ಸಿನಿಮಾ ಇದೆ. ‘ಮಿಸ್​ ಶೆಟ್ಟಿ ಮಿಸ್ಟರ್​ ಪೊಲಿಶೆಟ್ಟಿ’ ಚಿತ್ರದಲ್ಲಿ ಅವರು ನಟಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ