ಆರಾಧ್ಯಾ ಬಚ್ಚನ್ ಸೇರಿ ಬಾಲಿವುಡ್ನಲ್ಲಿದ್ದಾರೆ 9 ಶ್ರೀಮಂತ ಸ್ಟಾರ್ ಕಿಡ್ಗಳು
ಸಾಕಷ್ಟು ಶ್ರೀಮಂತ ದಂಪತಿ ಕೂಡ ಬಾಲಿವುಡ್ನಲ್ಲಿ ಇದ್ದಾರೆ. ಇದರಿಂದ ಸಹಜವಾಗಿ ಅವರ ಮಕ್ಕಳಿಗೂ ಶ್ರೀಮಂತಿಕೆ ಬಂದಿರುತ್ತದೆ. ಈ ರೀತಿ ಶ್ರೀಮಂತ ಸ್ಟಾರ್ ಕಿಡ್ಗಳು ಅನೇಕರಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.

ಬಾಲಿವುಡ್ನಲ್ಲಿ (Bollywood News) ದೊಡ್ಡ ದೊಡ್ಡ ಸ್ಟಾರ್ಗಳು ಇದ್ದಾರೆ. ಸಿನಿಮಾ ಜೊತೆಗೆ ಬ್ರ್ಯಾಂಡ್ಗಳ ಪ್ರಚಾರದಿಂದ ಸೆಲೆಬ್ರಿಟಿಗಳಿಗೆ ಹಣ ಬರುತ್ತದೆ. ಹೀಗಾಗಿ, ಸಾಕಷ್ಟು ಶ್ರೀಮಂತ ದಂಪತಿ ಕೂಡ ಬಾಲಿವುಡ್ನಲ್ಲಿ ಇದ್ದಾರೆ. ಇದರಿಂದ ಸಹಜವಾಗಿ ಅವರ ಮಕ್ಕಳಿಗೂ ಶ್ರೀಮಂತಿಕೆ ಬಂದಿರುತ್ತದೆ. ಈ ರೀತಿ ಶ್ರೀಮಂತ ಸ್ಟಾರ್ ಕಿಡ್ಗಳು ಅನೇಕರಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.
ಆರಾಧ್ಯಾ ಬಚ್ಚನ್
ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ಮಗಳು, ಅಮಿತಾಭ್ ಮೊಮ್ಮಗಳು ಆದ ಆರಾಧ್ಯಾ ಬಚ್ಚನ್ಗೆ ಸಾಕಷ್ಟು ಜನಪ್ರಿಯತೆ ಇದೆ. ಈಕೆ ಸಾಕಷ್ಟು ಚಾರ್ಮಿಂಗ್ ಲುಕ್ ಹೊಂದಿದ್ದಾಳೆ. ಆರಾಧ್ಯಾ ಇನ್ನೂ ಶಿಕ್ಷಣ ಪಡೆಯುತ್ತಿದ್ದಾಳೆ.
ಅಬ್ರಾಮ್ ಖಾನ್
ಶಾರುಖ್ ಖಾನ್ ಅವರ ಮಗ ಅಬ್ರಾಮ್ ಖಾನ್ಗೆ ಇನ್ನೂ ಸಣ್ಣ ವಯಸ್ಸು. ಈತನಿಗೆ ಹೊರಗಿನ ಪ್ರಪಂಚದ ಬಗ್ಗೆ ಅಷ್ಟಾಗಿ ಜ್ಞಾನ ಇಲ್ಲ. ಇವನು ಕೂಡ ರಿಚ್ ಸ್ಟಾರ್ ಕಿಡ್. ಇವನ ಜೊತೆ ಆರ್ಯನ್ ಖಾನ್ ಹಾಗೂ ಸುಹಾನಾ ಖಾನ್ ಕೂಡ ರಿಚ್ ಕಿಡ್ ಎನಿಸಿಕೊಂಡಿದ್ದಾರೆ.
ಆರ್ಯನ್ ಖಾನ್
ಆರ್ಯನ್ ಖಾನ್ ಅವರು ಶಾರುಖ್ ಖಾನ್ ಹಾಗೂ ಗೌರಿ ಖಾನ್ ಅವರ ಮಗ. ಅವರು ಸಖತ್ ಹ್ಯಾಂಡ್ಸಮ್. ಈಗಾಗಲೇ ನಿರ್ದೇಶನದಲ್ಲಿ ತೊಡಗಿಕೊಂಡಿದ್ದಾರೆ. ಅವರು ಆ್ಯಕ್ಷನ್ ಕಟ್ ಹೇಳುತ್ತಿರುವ ವೆಬ್ ಸೀರಿಸ್ ‘ಸ್ಟಾರ್ಡಂ’ ಶೂಟಿಂಗ್ ಹಂತದಲ್ಲಿದೆ. ಮಗನ ವೆಬ್ ಸೀರಿಸ್ಗೆ ಅವರೇ ಬೆಂಬಲವಾಗಿ ನಿಂತಿದ್ದಾರೆ.
ಶಹ್ರಾನ್ ದತ್
ಸಂಜತ್ ದತ್ ಹಾಗೂ ಮಾನ್ಯತಾ ದತ್ ಮಗ ಶಹ್ರಾನ್ ದತ್ ಹಾಗೂ ಮಗಳು ಇಖ್ರಾ ದತ್ ಶ್ರೀಮಂತ ಸ್ಟಾರ್ ಕಿಡ್ ಎನಿಸಿಕೊಂಡಿದ್ದಾರೆ. ಇವರ ತಾತ ಸುನಿಲ್ ದತ್ ಹಾಗೂ ಅಜ್ಜಿ ನರ್ಗಿಸ್ ದತ್ ಬಾಲಿವುಡ್ನಲ್ಲಿ ಜನಪ್ರಿಯತೆ ಪಡೆದಿದ್ದಾರೆ.
ವಿಯಾನ್ ಕುಂದ್ರಾ
ಶಿಲ್ಪಾ ಶೆಟ್ಟಿ ಹಾಗೂ ರಾಜ್ ಕುಂದ್ರಾ ಮಗ ವಿಯಾನ್ ಕುಂದ್ರಾ ಅವರು ಶ್ರೀಮಂತ ಸ್ಟಾರ್ ಕಿಡ್ಗಳಲ್ಲಿ ಒಬ್ಬರು. ಈತನ ಹೆಸರಲ್ಲಿ ಸೋಶಿಯಲ್ ಮೀಡಿಯಾ ಖಾತೆ ಇದೆ. ಇದನ್ನು ಪಾಲಕರು ನೋಡಿಕೊಳ್ಳುತ್ತಿದ್ದಾರೆ.
ಆರವ್ ಕುಮಾರ್
ಅಕ್ಷಯ್ ಕುಮಾರ್ ಹಾಗೂ ಟ್ವಿಂಕಲ್ ಖನ್ನಾ ಅವರ ಹಿರಿಯ ಮಗ ಆರವ್ ಕುಮಾರ್ ವಿದೇಶದಲ್ಲಿ ಶಿಕ್ಷಣ ಪಡೆದಿದ್ದಾರೆ. ಅವರಿಗೆ ಗೋಲ್ಡ್ ಮೆಡಲ್ ಕೂಡ ಸಿಕ್ಕಿದೆ.
ಯುಗ್ ದೇವಗನ್
ಅಜಯ್ ದೇವಗನ್ ಹಾಗೂ ಕಾಜೋಲ್ ದೇವಗನ್ ಮಗ ಯುಗ್ ದೇವಗನ್ ಅವರು ಚೋಟಾ ಭೀಮ್ನ ದೊಡ್ಡ ಅಭಿಮಾನಿ. ಈತ ಕೂಡ ಶ್ರೀಮಂತ ಸ್ಟಾರ್ ಕಿಡ್. ಈತನಿಗೆ ನೈಸಾ ಹೆಸರಿನ ಅಕ್ಕ ಇದ್ದಾರೆ. ಇವರು ಏಳು ವರ್ಷ ದೊಡ್ಡವರು.
ಇದನ್ನೂ ಓದಿ: ಕೊನೆಯ ಹಂತದಲ್ಲಿದೆ ಆರ್ಯನ್ ಖಾನ್ ವೆಬ್ ಸೀರಿಸ್ ಶೂಟಿಂಗ್; ಯಾವಾಗ ರಿಲೀಸ್?
ತೈಮೂರ್ ಅಲಿ ಖಾನ್
ಕರೀನಾ ಕಪೂರ್ ಹಾಗೂ ಸೈಫ್ ಅಲಿ ಖಾನ್ ಅವರ ಮಗ ತೈಮೂರ್ ಅಲಿ ಖಾನ್ ಸಖತ್ ಹ್ಯಾಂಡ್ಸಮ್. ಈತ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆ ಆಗಿದ್ದ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:30 pm, Sat, 11 May 24



