AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಆಸ್ಕರ್ ವೇದಿಕೆಯಲ್ಲಿ ನಿಂತು ತಮಿಳಿನಲ್ಲಿ ಮಾತನಾಡಬೇಕು’; ಆಸೆ ಹೇಳಿಕೊಂಡ ಅಟ್ಲಿ

ವಿಜಯ್ ಸೇತುಪತಿ ನಟನೆಯ 'ಬತ್ತಾ' ಸಿನಿಮಾವನ್ನು ಆಸ್ಕರ್‌ಗೆ ಒಯ್ಯುವ ಕನಸನ್ನು ನಿರ್ದೇಶಕ ಅಟ್ಲೀ ವ್ಯಕ್ತಪಡಿಸಿದ್ದಾರೆ. ಆಸ್ಕರ್ ವೇದಿಕೆಯಲ್ಲಿ ತಮಿಳಿನಲ್ಲೇ ಭಾಷಣ ಮಾಡುವ ಬಯಕೆ ಹೊಂದಿರುವ ಅವರು, ಅಲ್ಲು ಅರ್ಜುನ್ ಅಭಿನಯದ 'ರಾಕಾ' ಚಿತ್ರದ ಸಂಗೀತಕ್ಕೆ ಹಾಲಿವುಡ್ ತಂತ್ರಜ್ಞರು ಫಿದಾ ಆಗಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

‘ಆಸ್ಕರ್ ವೇದಿಕೆಯಲ್ಲಿ ನಿಂತು ತಮಿಳಿನಲ್ಲಿ ಮಾತನಾಡಬೇಕು’; ಆಸೆ ಹೇಳಿಕೊಂಡ ಅಟ್ಲಿ
ಅಟ್ಲಿ ಹಾಗೂ ಪತ್ನಿ ಪ್ರಿಯಾ
 ಶ್ರೀಲಕ್ಷ್ಮೀ ಎಚ್
| Edited By: |

Updated on: Oct 06, 2026 | 8:19 AM

Share

ಚಿತ್ರರಂಗದ ಯಶಸ್ವಿ ನಿರ್ದೇಶಕ ಅಟ್ಲೀ ಅವರು ‘ಬತ್ತಾ’ ಸಿನಿಮಾವನ್ನು ಆಸ್ಕರ್ ಪ್ರಶಸ್ತಿ ರೇಸ್‌ಗೆ ಕೊಂಡೊಯ್ಯುವ ದೊಡ್ಡ ಕನಸನ್ನು ಬಿಚ್ಚಿಟ್ಟಿದ್ದಾರೆ. ವಿಜಯ್ ಸೇತುಪತಿ ಅಭಿನಯದ ಈ ಸಿನಿಮಾ ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯಲಿದೆ ಎಂಬ ಭರವಸೆ ಅವರಿಗಿದೆ. ಆಸ್ಕರ್ ವೇದಿಕೆಯಲ್ಲಿ ನಿಂತು ಸಂಪೂರ್ಣವಾಗಿ ತಮಿಳಿನಲ್ಲೇ ಭಾಷಣ ಮಾಡುವುದು ಅವರ ಆಸೆ. ಈ ಮಾತುಗಳು ಈಗ ಇಡೀ ಚಿತ್ರರಂಗದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿವೆ.

ಇತ್ತೀಚೆಗೆ ನಡೆದ ‘ಬತ್ತಾ’ ಸಿನಿಮಾದ ಯಶಸ್ಸಿನ ಸಂಭ್ರಮಾಚರಣೆ ಸಮಾರಂಭದಲ್ಲಿ ಅಟ್ಲೀ ಭಾಗವಹಿಸಿದ್ದರು. ಅವರು ಈ ಚಿತ್ರಕ್ಕೆ ನಿರ್ಮಾಪಕರು. ತಮ್ಮ ಶಾಲಾ ದಿನಗಳ ನೆನಪನ್ನು ಹಂಚಿಕೊಳ್ಳುತ್ತಾ ತಮ್ಮ ಯಶಸ್ಸಿನ ಹಾದಿಯನ್ನು ನೆನಪಿಸಿಕೊಂಡರು. ಶಾರುಖ್ ಖಾನ್ ಮತ್ತು ವಿಜಯ್ ಜೊತೆ ಸಿನಿಮಾ ಮಾಡುತ್ತೇನೆ ಎಂದರೆ ಶಾಲೆಯಲ್ಲಿದ್ದಾಗ ಎಲ್ಲರೂ ನಗುತ್ತಿದ್ದರು. ಆದರೆ ಇಂದು ಅದು ನಿಜವಾಗಿದೆ. ಅದೇ ರೀತಿ ಆಸ್ಕರ್ ಅಂಗಳಕ್ಕೂ ಸುಲಭವಾಗಿ ತಲುಪಬಹುದು ಎಂದು ಅಟ್ಲೀ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅಲ್ಲು ಅರ್ಜುನ್ ನಟನೆಯ ತಮ್ಮ ಮುಂದಿನ ‘ರಾಕಾ’ ಚಿತ್ರದ ಬಗ್ಗೆಯೂ ಅವರು ವಿಶೇಷ ಮಾಹಿತಿ ಹಂಚಿಕೊಂಡಿದ್ದಾರೆ. ಹ್ಯಾನ್ಸ್ ಝಿಮ್ಮರ್ ಹಾಗೂ ಲಡ್ವಿಗ್ ಅವರಂತಹ ಜಾಗತಿಕ ಸಂಗೀತ ದಿಗ್ಗಜರು ಕೆಲಸ ಮಾಡುವ ಲಂಡನ್ ಸ್ಟುಡಿಯೋದಲ್ಲಿ ಸಂಗೀತ ಸಂಯೋಜನೆ ನಡೆಸಲಾಗಿದೆ. ಅಲ್ಲಿ ಕೆಲಸ ಮಾಡುವ ಹಾಲಿವುಡ್ ತಂತ್ರಜ್ಞರು ಯುವ ಸಂಗೀತ ನಿರ್ದೇಶಕ ಸಾಯಿ ಅಭ್ಯಂಕರ್ ಅವರ ಕೆಲಸವನ್ನು ನೋಡಿ ಆಶ್ಚರ್ಯಚಕಿತರಾಗಿದ್ದಾರೆ. ಇದು ತಮಿಳು ಜನರಿಗೆ ಹೆಮ್ಮೆಯ ವಿಷಯವಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಸಾಯಿ ಅಭ್ಯಂಕರ್ ಎದುರಿಸುತ್ತಿರುವ ನೆಪೋಟಿಸಂ ಆರೋಪಗಳಿಗೆ ಅಟ್ಲೀ ತಕ್ಕ ಉತ್ತರ ನೀಡಿದ್ದಾರೆ. ಸಾಯಿ ಕೇವಲ ಹಿನ್ನೆಲೆಯನ್ನಷ್ಟೇ ನೆಚ್ಚಿಕೊಂಡು ಬಂದಿಲ್ಲ. ಅವರ ಪ್ರತಿಭೆ ಅಪಾರವಾಗಿದೆ ಎಂದು ಅಟ್ಲೀ ಸಮರ್ಥಿಸಿಕೊಂಡಿದ್ದಾರೆ. ಅವರು ಕೇವಲ ಒಂದೆರಡು ಸೂಪರ್ ಹಿಟ್ ಹಾಡುಗಳಿಗೆ ಸೀಮಿತವಾಗದೆ ಭಾರತೀಯ ಸಂಗೀತವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲಿದ್ದಾರೆ ಎಂದು ಅಟ್ಲೀ ಹೊಗಳಿದ್ದಾರೆ.

ಇದನ್ನೂ ಓದಿ: ‘ರಾಕಾ’ ಸಿನಿಮಾ ಮೂಲಕ ಗಿನ್ನೆಸ್ ದಾಖಲೆ ಬರೆದ ಅಲ್ಲು ಅರ್ಜುನ್, ಅಟ್ಲಿ

ಬಾಲಾಜಿ ತರಾಣೀಥರನ್ ನಿರ್ದೇಶನದ ‘ಬತ್ತಾ’ ಸಿನಿಮಾ 1986ರ ಮದ್ರಾಸ್ ಹಿನ್ನೆಲೆಯಲ್ಲಿ ಸಾಗುತ್ತದೆ. ಗ್ಯಾಂಗ್‌ಸ್ಟರ್ ಒಬ್ಬ ಎಂಟು ವರ್ಷದ ಬಾಲಕನಿಂದ ಶಾಲೆಯ ಶೌಚಾಲಯದಲ್ಲಿ ಆಕಸ್ಮಿಕವಾಗಿ ಲಾಕ್ ಆಗುವ ವಿಶಿಷ್ಟ ಕಥಾಹಂದರ ಇಲ್ಲಿದೆ. ವಿಜಯ್ ಸೇತುಪತಿ ಮತ್ತು ಬಾಲ ನಟ ಸಾಯಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಲಿಜೋಮೋಲ್ ಜೋಸ್ ನಾಯಕಿಯಾಗಿ ಅಭಿನಯಿಸಿದ್ದು, ಅಟ್ಲೀ ಅವರ ‘ಎ ಫಾರ್ ಆಪಲ್ ಸ್ಟುಡಿಯೋಸ್’ ಈ ಚಿತ್ರವನ್ನು ನಿರ್ಮಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
 ಶ್ರೀಲಕ್ಷ್ಮೀ ಎಚ್
ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More