ಒಂದೂವರೆ ಲಕ್ಷ ಕೊಟ್ಟರು; ಸಂಭಾವನೆ ಬಗ್ಗೆ ಮಲ್ಲಮ್ಮ ಮಾತು
Bigg Boss Kannada 12: ಬಿಗ್ಬಾಸ್ ಕನ್ನಡ ರಿಯಾಲಿಟಿ ಶೋನಿಂದ ಕಳೆದ ವಾರ ಮಲ್ಲಮ್ಮ ಹೊರಬಂದಿದ್ದಾರೆ. ಮಲ್ಲಮ್ಮ ವಯಸ್ಸಿನ ಮಿತಿಗಳನ್ನು ಮೀರಿ ಬಹಳ ಚೆನ್ನಾಗಿ ಆಡಿದ್ದರು. ಆದರೆ ಅನಿವಾರ್ಯವಾಗಿ ಹೊರಬರಲೇ ಬೇಕಾಯ್ತು. ಇದೀಗ ಮಲ್ಲಮ್ಮ ಬಿಗ್ಬಾಸ್ ಶೋನ ಅನುಭವಗಳ ಬಗ್ಗೆ ಮಾತನಾಡಿದ್ದು, ಜೊತೆಗೆ ತಮಗೆ ಶೋನಿಂದ ಸಿಕ್ಕ ಸಂಭಾವನೆ ಬಗ್ಗೆಯೂ ಮಾತನಾಡಿದ್ದಾರೆ.

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ (Bigg Boss Kannada) ಮಲ್ಲಮ್ಮ ಅವರು ಪ್ರಮುಖ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದರು. ಕೇವಲ ಐದನೇ ವಾರಕ್ಕೆ ಅವರು ದೊಡ್ಮನೆಯಿಂದ ಹೊರಕ್ಕೆ ಹೋಗಬೇಕಾದ ಪರಿಸ್ಥಿತಿ ಬಂತು. ಬಿಗ್ ಬಾಸ್ ಮನೆಯಲ್ಲಿ ನೀಡಿದ ಸಂಭಾವನೆ ಬಗ್ಗೆ ಈಗ ಅವರು ಮಾತನಾಡಿದ್ದಾರೆ. ಎಷ್ಟು ಸಂಭಾವನೆ ನೀಡಿದರು ಎಂಬ ವಿಚಾರವನ್ನು ಅವರು ರಿವೀಲ್ ಮಾಡಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.
ಮಲ್ಲಮ್ಮ ಅವರು ‘ಬಿಗ್ ಬಾಸ್’ನಿಂದ ಬಂದ ಬಳಿಕ ಸಾಕಷ್ಟು ಕಡೆಗಳಲ್ಲಿ ಸಂದರ್ಶನಗಳನ್ನು ನೀಡಿದರು. ಈ ವೇಳೆ ಅವರು ಹಲವು ವಿಚಾರಗಳನ್ನು ಹಂಚಿಕೊಂಡರು. ‘ಬಾಸ್’ ಹೆಸರಿನ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಅವರು ಸಂಭಾವನೆ ವಿಚಾರ ಮಾತನಾಡಿದರು.
‘ನನಗೆ ಒಂದೂವರೆ ಲಕ್ಷ ಕೊಟ್ಟಿದ್ದಾರೆ. ಸಾಲ ಇದೆ. ಅದನ್ನು ತೀರಿಸಬೇಕು. ಈ ಹಣವನ್ನು ಅದಕ್ಕೆ ಬಳಸುತ್ತೇನೆ. ಆದರೂ ಸಾಲ ಉಳಿಯುತ್ತೆ. ಬೇರೆ ಏನಾದರೂ ಮಾಡಬೇಕು. ಇನ್ನೂ ಸ್ವಲ್ಪ ದಿನ ಇದ್ದಿದ್ದರೆ ಸಾಲ ತೀರುತ್ತಿತ್ತು’ ಎಂದು ಮಲ್ಲಮ್ಮ ಅವರು ಹೇಳಿದರು.
ಮಲ್ಲಮ್ಮ ಮಾತನಾಡಿರುವುದು ಮನೆಯಲ್ಲಿ ಇದ್ದಿದ್ದಕ್ಕೆ ನೀಡಿದ ಸಂಭಾವನೆ ವಿಚಾರ ಅಲ್ಲ. ಬದಲಿಗೆ ಮನೆಯಿಂದ ಹೊರ ಬಂದ ಬಳಿಕ ಅವರಿಗೆ ನೀಡುವ ಸಂಭಾವನೆ ವಿಚಾರದ ಬಗ್ಗೆ. ಅವರಿಗೆ ದೊಡ್ಮನೆಯಲ್ಲಿ ಇದ್ದಿದ್ದಕ್ಕೆ ಎಷ್ಟು ಸಂಭಾವನೆ ನೀಡಿದರು ಎಂಬುದರ ವಿಚಾರ ಇನ್ನೂ ರಿವೀಲ್ ಆಗಿಲ್ಲ. ಅದನ್ನು ಸಾಮಾನ್ಯವಾಗಿ ಯಾವ ಸ್ಪರ್ಧಿಗಳು ಹೇಳಿಕೊಳ್ಳುವುದಿಲ್ಲ.
ಮಲ್ಲಮ್ಮನ ಬಗ್ಗೆ
ಮಲ್ಲಮ್ಮ ಅವರು ಯಾದಗಿರಿ ಜಿಲ್ಲೆಯವರು. ಬೆಂಗಳೂರಿಗೆ ಕೆಲಸಕ್ಕೋಸ್ಕರ ಬಂದರು. ಅವರು ಮಾತನಾಡುವ ವಿಡಿಯೋಗಳನ್ನು ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡರು. ಆ ಬಳಿಕ ಅವರಿಗೆ ಸಾಕಷ್ಟು ಜನಪ್ರಿಯತೆ ಸಿಕ್ಕಿತು. ಅವರು ತಮ್ಮದೇ ಇನ್ಸ್ಟಾಗ್ರಾಮ್, ಯೂಟ್ಯೂಬ್ ಚಾನೆಲ್ ಮಾಡಿಕೊಂಡು ವಿಡಿಯೋಗಳನ್ನು ಮಾಡಿ ಹಾಕಲು ಆರಂಭಿಸಿದರು. ಅಂದಿನಿಂದ ಮಲ್ಲಮ್ಮ ಅವರು ಮತ್ತಷ್ಟು ಫೇಮಸ್ ಆದರು. ಈಗ ಮಲ್ಲಮ್ಮ ಅವರ ಹಿಂಬಾಲಕರ ಸಂಖ್ಯೆ ಹೆಚ್ಚಾಗಿದೆ. ದೊಡ್ಮನೆಯಲ್ಲಿ ಅವರು ಮಾತು ಕಡಿಮೆ ಆಡಿದರು ಎಂಬ ಅಭಿಪ್ರಾಯವೂ ಇದೆ. ಇದು ಕೂಡ ಅವರಿಗೆ ಹಿನ್ನಡೆ ಉಂಟು ಮಾಡಿತು ಎನ್ನಬಹುದು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:34 am, Thu, 6 November 25



