AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​ ಬಾಸ್​ ಮನೆಯಲ್ಲಿ ನಮಗೆ ಒತ್ತಡ ಹೇರುತ್ತಾರೆ! ಶಂಕರ್​ ಅಶ್ವತ್ಥ್​ ಹೀಗೆ ಹೇಳಿದ್ದು ಯಾಕೆ?

ಬಿಗ್​ ಬಾಸ್​ ಮನೆಯಲ್ಲಿ ಯಾವುದು ನಿಜ? ಯಾವುದು ನಾಟಕ ಎಂಬ ಬಗ್ಗೆ ಶಂಕರ್​ ಅಶ್ವತ್ಥ್​ ವಿವರ ನೀಡಿದ್ದಾರೆ. ಟಿವಿ9 ಜೊತೆ ಮಾತನಾಡಿರುವ ಅವರು ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಬಿಗ್​ ಬಾಸ್​ ಮನೆಯಲ್ಲಿ ನಮಗೆ ಒತ್ತಡ ಹೇರುತ್ತಾರೆ! ಶಂಕರ್​ ಅಶ್ವತ್ಥ್​ ಹೀಗೆ ಹೇಳಿದ್ದು ಯಾಕೆ?
ಬಿಗ್​ ಬಾಸ್​ನಲ್ಲಿ ಶಂಕರ್​ ಅಶ್ವತ್ಥ್​
ಮದನ್​ ಕುಮಾರ್​
| Edited By: |

Updated on: Apr 07, 2021 | 7:32 AM

Share

ಹಿರಿಯ ನಟ ಶಂಕರ್ ಅಶ್ವತ್ಥ್​ ಅವರ ಬಿಗ್​ ಬಾಸ್​ ಜರ್ನಿ ಅಂತ್ಯವಾಗಿದೆ. ಐದು ವಾರಗಳ ಕಾಲ ಸಕ್ರಿಯವಾಗಿದ್ದ ಅವರು ಈಗ ಎಲಿಮಿನೇಟ್​ ಆಗಿ ಹೊರಬಂದಿದ್ದಾರೆ. ದೊಡ್ಮನೆಯಿಂದ ಔಟ್​ ಆದ ಬಳಿಕ ಟಿವಿ9 ಜೊತೆ ಮಾತನಾಡಿರುವ ಶಂಕರ್​ ಅಶ್ವತ್ಥ್​ ಅವರು ಅನೇಕ ವಿಚಾರಗಳ ಬಗ್ಗೆ ಬಾಯಿ ಬಿಟ್ಟಿದ್ದಾರೆ. ಬಿಗ್​ ಬಾಸ್​ ಮನೆಯಲ್ಲಿ ಏನೆಲ್ಲ ನಡೆಯುತ್ತದೆ ಎಂಬುದನ್ನು ಅವರು ತಿಳಿಸಿದ್ದಾರೆ. ನಮ್ಮ ಮೇಲೆ ಅಸ್ವಾಭಾವಿಕವಾದ ಒತ್ತಡ ಹೇರಲಾಗುತ್ತದೆ ಎಂದಿದ್ದಾರೆ ಶಂಕರ್​ ಅಶ್ವತ್ಥ್​.

ಅಷ್ಟಕ್ಕೂ ಶಂಕರ್​ ಅಶ್ವತ್ಥ್​ ಹೀಗೆ ಹೇಳಲು ಕಾರಣ ಇದೆ. ಬಿಗ್​ ಬಾಸ್​ಮನೆಯಲ್ಲಿ ನೀವು ಕಲಿತ ವಿಷಯ ಏನು ಎಂಬ ಪ್ರಶ್ನೆಗೆ ಉತ್ತರವಾಗಿ ಅವರು ಈ ವಿಚಾರ ಹಂಚಿಕೊಂಡಿದ್ದಾರೆ. ‘ಅಸ್ವಾಭಾವಿಕವಾದ ಒತ್ತಡವನ್ನು ನಮ್ಮ ಮೇಲೆ ಹೇರುತ್ತಾರೆ. ಆದರೆ ಆ ಒತ್ತಡವನ್ನು ನಾವೇ ಕಡಿಮೆ ಮಾಡಿಕೊಳ್ಳುವುದು ಹೇಗೆ ಎಂಬ ಮಾರ್ಗವನ್ನೂ ಬಿಗ್​ ಬಾಸ್​ ತೋರಿಸುತ್ತಾರೆ. ಊಟ-ತಿಂಡಿ, ಟಾಸ್ಕ್​ ಮತ್ತು ಇತರೆ ಸೌಲಭ್ಯಗಳ ವಿಚಾರದಲ್ಲಿ ಒತ್ತಡ ಹೇರುತ್ತಾರೆ. ಆ ಒತ್ತಡದಿಂದ ನಾವೇ ಹೊರಗೆ ಬರಬೇಕು. ಬೇರೆ ಎಲ್ಲಿಯೂ ಈ ರೀತಿ ಮಾಡುವುದಿಲ್ಲ. ಇಂಥ ಪರಿಸ್ಥಿತಿಯಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡು ಒತ್ತಡ ಹೇಗೆ ನಿಭಾಯಿಸಿಕೊಳ್ಳಬೇಕು ಎಂಬ ಪಾಠವನ್ನು ಪ್ರತಿಯೊಬ್ಬರೂ ಕಲಿಯುತ್ತಾರೆ’ ಎಂದು ಶಂಕರ್​ ಅಶ್ವತ್ಥ್​ ಹೇಳಿದ್ದಾರೆ.

ಬಿಗ್​ ಬಾಸ್​ ಮನೆಯಲ್ಲಿ ನಡೆಯುವ ಲವ್​ ಸ್ಟೋರಿಗಳೆಲ್ಲ ನಿಜವೇ? ಈ ಪ್ರಶ್ನೆಗೆ ಶಂಕರ್​ ಅಶ್ವತ್ಥ್​ ಉತ್ತರಿಸಿದ್ದಾರೆ. ‘ಎಲ್ಲರೂ ಕಳ್ಳರೇ. ಲವ್​ ಮಾಡುತ್ತೀನಿ ಅಂತ ಹೇಳ್ತಾರೆ. ಆಮೇಲೆ ನಾಮ ಹಾಕ್ತಾರೆ. ಗೆಲ್ಲುವ ಕುದುರೆಯ ಬಾಲ ಹಿಡಿಯುವವರು ಇರುತ್ತಾರೆ. ಕ್ಯಾಮರಾ ಕಣ್ಣಿಗೆ ಮೋಸ ಮಾಡಲು ಹೋಗುತ್ತಾರೆ. ಆದರೆ ಆಮೇಲೆ ಅವರು ತೆಗೆದುಕೊಳ್ಳುವ ನಿರ್ಣಯವನ್ನು ಪ್ರೇಕ್ಷಕರು ನೋಡುತ್ತಿರುತ್ತಾರೆ. ಅದನ್ನು ಗಮನಿಸಿದರೆ ಪ್ರೇಕ್ಷಕರಿಗೆ ಎಲ್ಲವೂ ಗೊತ್ತಾಗುತ್ತದೆ’ ಎಂಬುದು ಶಂಕರ್​ ಅಶ್ವತ್ಥ್​ ಅಭಿಪ್ರಾಯ.

‘ಬಿಗ್​ ಬಾಸ್​ ಮನೆಯೊಳಗೆ ಇರುವ ಕೆಲವರು ನನ್ನನ್ನು ತಂದೆ ಸ್ಥಾನದಲ್ಲಿ ನೋಡಿದರು. ಅದೇ ದೃಷ್ಟಿಯಿಂದ ಮಾತನಾಡಿಸಿದರು. ಆ ಭಾಗ್ಯ ನನಗೆ ಸಿಕ್ಕಿತು. ನಾನೂ ಒಬ್ಬ ನಟ. ಹಾಗಾಗಿ ನನ್ನ ಎದುರು ಯಾರು ನಾಟಕ ಮಾಡುತ್ತಿದ್ದಾರೆ? ಯಾರು ಎಷ್ಟು ಡೋಂಗಿ ಎಂಬುದು ನನಗೆ ಗೊತ್ತಾಗುತ್ತದೆ. ಒಂದು ಹಂತದಲ್ಲಾದರೂ ಒಳ್ಳೆಯ ಸಂಸ್ಕೃತಿಯ ಜನರು ಎಂಬುದು ಗೊತ್ತಾಯಿತು. ಹಾಗಾಗಿ ನನಗೆ ಬಾಂಧವ್ಯ ಬೆಳೆಯಿತು’ ಎಂದು ಶಂಕರ್​ ಅಶ್ವತ್ಥ್​ ಹೇಳಿದ್ದಾರೆ.

ಇದನ್ನೂ ಓದಿ: Shankar Ashwath: ಸುದೀಪ್​ ಎದುರಲ್ಲೇ ಹೆಂಡತಿ ಬಳಿ ಕ್ಷಮೆ ಕೇಳಿದ ಶಂಕರ್​ ಅಶ್ವತ್ಥ್​! ಅಂಥ ತಪ್ಪು ಏನಾಯ್ತು?

ಬಿಗ್​ ಬಾಸ್​ ಮನೆಯಲ್ಲಿರುವ ಮಹಿಳಾ ಸ್ಪರ್ಧಿಗಳ ಬಗ್ಗೆ ಶಂಕರ್​ ಅಶ್ವತ್ಥ್ ಬೇಸರ!

(Bigg Boss Kannada : Actor Shankar Ashwath Talks about his experience of BBK8)

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More