92 ವರ್ಷಗಳ ಹಿಂದೆ ಬಂದ ಸಿನಿಮಾದಲ್ಲಿತ್ತು 4 ನಿಮಿಷಗಳ ಲಿಪ್ ಲಾಕ್ ದೃಶ್ಯ; ಸೃಷ್ಟಿ ಆಗಿತ್ತು ವಿವಾದ
1933ರಲ್ಲಿ ಬಿಡುಗಡೆಯಾದ ‘ಕರ್ಮ’ ಚಿತ್ರದಲ್ಲಿ ದೇವಿಕಾ ರಾಣಿ ಮತ್ತು ಹಿಮಾಂಶು ರಾಯ್ ನಡುವಿನ ನಾಲ್ಕು ನಿಮಿಷಗಳ ಲಿಪ್ ಲಾಕ್ ದೃಶ್ಯ ಭಾರತೀಯ ಸಿನಿಮಾ ಇತಿಹಾಸದಲ್ಲಿ ಮಹತ್ವದ ಘಟ್ಟ. ಆ ಸಮಯದಲ್ಲಿ ವಿವಾದಕ್ಕೆ ಕಾರಣವಾದ ಈ ದೃಶ್ಯವು ದೇವಿಕಾ ರಾಣಿಯ ಧೈರ್ಯವನ್ನು ಪ್ರತಿಬಿಂಬಿಸುತ್ತದೆ.

ಇತ್ತೀಚಿನ ದಿನಗಳಲ್ಲಿ ಸಿನಿಮಾಗಳಲ್ಲಿ ಪ್ರಣಯ ದೃಶ್ಯಗಳು ಮತ್ತು ಲಿಪ್ ಲಾಕ್ ದೃಶ್ಯಗಳು ತುಂಬಾನೇ ಸಾಮಾನ್ಯವಾಗಿದೆ. ಅದು ದೊಡ್ಡ ವಿಚಾರ ಎನಿಸುವುದೇ ಇಲ್ಲ. ನಾಯಕಿಯರು ಕೂಡ ಲಿಪ್ ಲಾಕ್ ದೃಶ್ಯಗಳನ್ನು ಮಾಡಬೇಕು ಎಂದು ಬಂದಾಗ ಹಿಂದೆ ಸರಿಯುವುದಿಲ್ಲ. ಆ್ಯಕ್ಷನ್ ಸಿನಿಮಾ ಆಗಿರಲಿ, ಫ್ಯಾಮಿಲಿ ಎಂಟರ್‌ಟೈನರ್ ಆಗಿರಲಿ, ಮಾಸ್ ಸಿನಿಮಾ (Movie) ಆಗಿರಲಿ ಪ್ರಣಯ ದೃಶ್ಯಗಳನ್ನು ನೋಡುತ್ತಲೇ ಇರುತ್ತೇವೆ. ಭಾರತೀಯ ಸಿನಿಮಾದಲ್ಲಿ ಮೊದಲ ಲಿಪ್ ಲಾಕ್ ದೃಶ್ಯ ಯಾವ ಸಿನಿಮಾದಲ್ಲಿ ಇತ್ತು ಗೊತ್ತಾ? ಮೊದಲ ಲಿಪ್ ಲಾಕ್ ದೃಶ್ಯ ಯಾವಾಗ ಪರಿಚಯಿಸಲಾಯಿತು? ಯಾವ ಸಿನಿಮಾದಲ್ಲಿ? ಅದು ಭಾರತೀಯ ಸಿನಿಮಾದಲ್ಲಿಯೇ ಅತಿ ಉದ್ದದ ಚುಂಬನ ದೃಶ್ಯವೂ ಹೌದು. ನಾಲ್ಕು ನಿಮಿಷಗಳ ಕಾಲ ಲಿಪ್ ಲಾಕ್ ದೃಶ್ಯವಿ ಇತ್ತು.
ಭಾರತೀಯ ಚಿತ್ರರಂಗದಲ್ಲಿ ಮೊದಲ ಲಿಪ್ ಲಾಕ್ ದೃಶ್ಯವು 1933ರಲ್ಲಿ ಬಿಡುಗಡೆಯಾದ ‘ಕರ್ಮ’ ಚಿತ್ರದಲ್ಲಿತ್ತು. ನಟಿ ದೇವಿಕಾ ರಾಣಿ ಮತ್ತು ಹಿಮಾಂಶು ರಾಯ್ ಈ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. ಕರ್ಮ ಚಿತ್ರದಲ್ಲಿ ದೇವಿಕಾ ರಾಣಿ ಮತ್ತು ಹಿಮಾಂಶು ರಾಯ್ ನಡುವಿನ ಈ ದೃಶ್ಯವು ಭಾರತೀಯ ಸಿನಿಮಾ ಇತಿಹಾಸದಲ್ಲಿ ಒಂದು ಮೈಲಿಗಲ್ಲಾಯಿತು. ಈ ಸಿನಿಮಾದ ಲಿಪ್ ಲಾಕ್ ದೃಶ್ಯ ಸುಮಾರು ನಾಲ್ಕು ನಿಮಿಷಗಳ ಕಾಲ ಇತ್ತು ಎಂದು ಹೇಳಲಾಗುತ್ತಿದೆ. ಆ ಸಮಯದಲ್ಲಿ ಅದು ತುಂಬಾ ವಿವಾದಾತ್ಮಕವೂ ಆಯಿತು.
‘ಕರ್ಮ’ ಹಿಂದಿ-ಇಂಗ್ಲಿಷ್ ದ್ವಿಭಾಷಾ ಚಿತ್ರವಾಗಿದ್ದು, ದೇವಿಕಾ ರಾಣಿಯವರ ಪತಿಯೂ ಆಗಿರುವ ಹಿಮಾಂಶು ರಾಯ್ ಇದನ್ನು ನಿರ್ಮಿಸಿದ್ದಾರೆ. ಈ ಚಿತ್ರದ ನಂತರ, ಚಲನಚಿತ್ರಗಳಲ್ಲಿ ಲಿಪ್ ಲಾಕ್ ತುಂಬಾ ಸಾಮಾನ್ಯವಾಗಿತ್ತು. ದೇವಿಕಾ ರಾಣಿ ಭಾರತದ ಮೊದಲ ಮಹಿಳಾ ಸೂಪರ್ ಸ್ಟಾರ್ ಕೂಡ ಹೌದು. ಆ ಸಮಯದಲ್ಲಿ ಅವರು ತುಂಬಾ ಧೈರ್ಯದಿಂದ ವರ್ತಿಸುವ ಮೂಲಕ ಎಲ್ಲರನ್ನೂ ಮೆಚ್ಚಿಸಿದರು. ಆ ಸಮಯದಲ್ಲಿ ಅವರು ಬಹಳಷ್ಟು ಟೀಕೆಗಳನ್ನು ಪಡೆದರು. ಅದು ಅವಳ ಇಮೇಜ್ ಮೇಲೆ ಪರಿಣಾಮ ಬೀರಿತು.
ಇದನ್ನೂ ಓದಿ: ಹೃತಿಕ್ ರೋಷನ್-ದೀಪಿಕಾ ಚುಂಬನ ದೃಶ್ಯಕ್ಕೆ ಆಕ್ಷೇಪ: ‘ಫೈಟರ್’ ವಿರುದ್ಧ ದೂರು
ದೇವಿಕಾ ರಾಣಿ ಅವರು ಮೃತಪಟ್ಟೇ 30 ವರ್ಷಗಳು ಕಳೆದಿವೆ. 1994ರಲ್ಲಿ ದೇವಿಕಾ ರಾಣಿ ನಿಧನ ಹೊಂದಿದರು. ಆಗ ಅವರಿಗೆ 85 ವರ್ಷ ವಯಸ್ಸಾಗಿತ್ತು. ಈಗಲೂ ತೆರೆಮೇಲೆ ಬರುವ ಕೆಲವು ಲಿಪ್ಲಾಕ್ ದೃಶ್ಯಗಳು ವಿವಾದವನ್ನು ಹುಟ್ಟುಹಾಕುತ್ತವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.