ಮನಿಷ್ ಮಲ್ಹೋತ್ರಾ ದೀಪಾವಳಿ ಪಾರ್ಟಿಯಲ್ಲಿ ಅಭಿಷೇಕ್-ಐಶ್ವರ್ಯಾ ಜೊತೆಯಾಗಿ ಭಾಗಿ
ಬಾಲಿವುಡ್‌ನ ಖ್ಯಾತ ಡಿಸೈನರ್ ಮನಿಷ್ ಮಲ್ಹೋತ್ರಾ ಆಯೋಜಿಸಿದ್ದ ದೀಪಾವಳಿ ಪಾರ್ಟಿಯಲ್ಲಿ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ದೀರ್ಘಕಾಲದ ಬಳಿಕ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಅಕ್ಷಯ್ ಕುಮಾರ್, ಕರೀನಾ ಕಪೂರ್ ಸೇರಿದಂತೆ ಅನೇಕ ಬಾಲಿವುಡ್ ತಾರೆಯರು ಈ ಅದ್ಧೂರಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಿದ್ದಾರೆ.

ಮುಖ್ಯಾಂಶಗಳು
- ದೀರ್ಘಕಾಲದ ಬಳಿಕ ಒಟ್ಟಿಗೆ ಕಾಣಿಸಿಕೊಂಡ ಅಭಿಷೇಕ್-ಐಶ್ವರ್ಯಾ
- ಮನಿಷ್ ಮಲ್ಹೋತ್ರಾ ದೀಪಾವಳಿ ಪಾರ್ಟಿಯಲ್ಲಿ ಬಾಲಿವುಡ್ ತಾರೆಯರ ಅಬ್ಬರ
- ಕುಟುಂಬ ಸಮೇತ ಪಾರ್ಟಿಗೆ ಆಗಮಿಸಿದ ಸ್ಟಾರ್ ಸೆಲೆಬ್ರಿಟಿಗಳು
ಹಬ್ಬದ ಸೀಸನ್ ಆರಂಭವಾಗಿದ್ದು, ಬಾಲಿವುಡ್ ಸೆಲೆಬ್ರಿಟಿಗಳು ಉಡುಪುಗಳಲ್ಲಿ ಕಂಗೊಳಿಸುತ್ತಿದ್ದಾರೆ. ಗುರುವಾರ ಸಂಜೆ ಖ್ಯಾತ ಫ್ಯಾಷನ್ ಡಿಸೈನರ್ ಮನಿಷ್ ಮಲ್ಹೋತ್ರಾ ತಮ್ಮ ವಾರ್ಷಿಕ ದೀಪಾವಳಿ ಪಾರ್ಟಿಯನ್ನು ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ದೀರ್ಘಕಾಲದ ಬಳಿಕ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇಬ್ಬರೂ ಕ್ಯಾಮೆರಾ ಕಣ್ಣಿಗೆ ಒಟ್ಟಾಗಿ ಪೋಸ್ ನೀಡಿದ್ದಾರೆ.
ಅಭಿಷೇಕ್ ಮತ್ತು ಐಶ್ವರ್ಯಾ ಕಳೆದ ಕೆಲವು ತಿಂಗಳುಗಳಲ್ಲಿ ವಿಮಾನ ನಿಲ್ದಾಣದಲ್ಲಿ ಕೆಲವೊಮ್ಮೆ ಮಾತ್ರ ಜೊತೆಯಾಗಿ ಕಾಣಿಸಿಕೊಂಡಿದ್ದರು. ಆದರೆ ಬಹಳ ದಿನಗಳ ನಂತರ ಅವರು ಫೋಟೋಗಳಿಗೆ ಪೋಸ್ ನೀಡಿದ್ದಾರೆ. ಇವರನ್ನು ಒಟ್ಟಿಗೆ ನೋಡಿದ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಈ ಸುಂದರ ಕ್ಷಣದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
View this post on Instagram
ಅಕ್ಷಯ್ ಕುಮಾರ್ ತಮ್ಮ ಪತ್ನಿ ಟ್ವಿಂಕಲ್ ಖನ್ನಾ ಹಾಗೂ ಮಗ ಆರವ್ ಜೊತೆ ಪಾರ್ಟಿಗೆ ಆಗಮಿಸಿದ್ದರು. ಕುಟುಂಬ ಸಮೇತರಾಗಿ ಬಂದ ಅವರು ಕ್ಯಾಮೆರಾಗೆ ಫೋಸ್ ನೀಡಿದರು. ಗೌರಿ ಖಾನ್ ಅವರು ಶಾರುಖ್ ಖಾನ್ ಇಲ್ಲದೆ ಬಂದಿದ್ದರು. ಆದರೆ ಅವರ ಮಗಳು ಸುಹಾನಾ ಖಾನ್ ಪ್ರತ್ಯೇಕವಾಗಿ ಕಾಣಿಸಿಕೊಂಡರು. ಕರೀನಾ ಕಪೂರ್ ತಮ್ಮ ಪತ್ನಿ ಸೈಫ್ ಅಲಿ ಖಾನ್ ಜೊತೆ ಬಂದಿದ್ದರು.
ಪತಿ ಗೌತಮ್ ಹತಿರಾಮಣಿ ಜೊತೆ ವಿಚ್ಛೇದನ ಘೋಷಿಸಿದ್ದ ಗಾಯಕಿ ಕನಿಕಾ ಕಪೂರ್ ಕೂಡ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಪರಿಣಿತಿ ಚೋಪ್ರಾ ತಮ್ಮ ಪತಿ ರಾಘವ್ ಚಡ್ಡಾ ಜೊತೆ ಬಂದಿದ್ದರು. ಸೊನಾಕ್ಷಿ ಸಿನ್ಹಾ ಹಾಗೂ ಅವರ ಪತಿ ಜಹೀರ್ ಇಕ್ಬಾಲ್ ಕೂಡ ಫೋಟೋಗಳಿಗೆ ಪೋಸ್ ನೀಡಿದರು.
ಇದನ್ನೂ ಓದಿ: ಶಿಶಿರ್ ಶಾಸ್ತ್ರಿ – ಐಶ್ವರ್ಯಾ ಶಿಂಧೋಗಿ ಎಂಗೇಜ್‌ಮೆಂಟ್; ಕೊನೆಗೂ ಪ್ರೀತಿ ವಿಷಯ ರಿವೀಲ್ ಮಾಡಿದ ಜೋಡಿ
ಈ ಹಬ್ಬದ ಸಂಭ್ರಮದಲ್ಲಿ ಕಾಜೋಲ್, ಕರಿಷ್ಮಾ ಕಪೂರ್, ಸೋನಾಲಿ ಬೇಂದ್ರೆ ಭಾಗವಹಿಸಿದ್ದರು. ಶಾನಯಾ ಕಪೂರ್, ತಮನ್ನಾ ಭಾಟಿಯಾ, ಮಲೈಕಾ ಅರೋರಾ ಬಂದಿದ್ದರು. ಶಿಲ್ಪಾ ಶೆಟ್ಟಿ ಹಾಗೂ ವಿಕಿ ಕೌಶಲ್ ಸೇರಿದಂತೆ ಅನೇಕ ತಾರೆಯರು ಈ ಅದ್ಧೂರಿ ಪಾರ್ಟಿಯ ಮೆಜಗನ್ನು ಹೆಚ್ಚಿಸಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:03 am, Fri, 6 November 26




