AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಧಾಕಡ್’ ಹೀನಾಯ ಸೋಲಿನ ನಂತರ ಕಂಗನಾಗೆ ಟಾರ್ಚರ್​; ಬೇರೆಯವರನ್ನು ಟೀಕಿಸಿ ತೃಪ್ತಿಪಟ್ಟುಕೊಂಡ ನಟಿ

‘ಧಾಕಡ್’ ಸಿನಿಮಾದ ಬಜೆಟ್ 100 ಕೋಟಿ ಸಮೀಪದಲ್ಲಿದೆ. ಆದರೆ, ಈ ಚಿತ್ರ ಕಲೆಕ್ಷನ್ ಮಾಡಿದ್ದು ಕೇವಲ 2.58 ಕೋಟಿ ರೂಪಾಯಿ. ಒಟಿಟಿ ಹಕ್ಕು, ಟಿವಿ ಹಕ್ಕು ಎಲ್ಲವೂ ಸೇರಿದರೂ ನಿರ್ಮಾಪಕರಿಗೆ 70 ಕೋಟಿ ರೂಪಾಯಿಗೂ ಅಧಿಕ ನಷ್ಟ ಆಗಿದೆ ಎನ್ನುವ ವರದಿಗಳು ಬಿತ್ತರ ಆಗುತ್ತಿವೆ.

‘ಧಾಕಡ್’ ಹೀನಾಯ ಸೋಲಿನ ನಂತರ ಕಂಗನಾಗೆ ಟಾರ್ಚರ್​; ಬೇರೆಯವರನ್ನು ಟೀಕಿಸಿ ತೃಪ್ತಿಪಟ್ಟುಕೊಂಡ ನಟಿ
ಕಂಗನಾ
TV9 Web
| Edited By: |

Updated on: Jul 08, 2022 | 6:30 AM

Share

ನಟಿ ಕಂಗನಾ ರಣಾವತ್ (Kangana Ranaut) ನಟನೆಯ ‘ಧಾಕಡ್’ ಸಿನಿಮಾ (Dhaakad Movie) ಬಾಕ್ಸ್ ಆಫೀಸ್​ನಲ್ಲಿ ಕೆಲವೇ ಕೆಲವು ಕೋಟಿ ಕಲೆಕ್ಷನ್ ಮಾಡಿ ಆಟ ಮುಗಿಸಿದೆ. ಲೇಡಿ ಸೂಪರ್ ಸ್ಟಾರ್ ರೀತಿ ಬಿಂಬಿಸಿಕೊಳ್ಳುತ್ತಿದ್ದ ಕಂಗನಾಗೆ ಈ ಚಿತ್ರದಿಂದ ತೀವ್ರಮುಖಭಂಗ ಆಗಿದೆ. ಹಾಗಂತ ಕಂಗನಾ ಸುಮ್ಮನೆ ಕೂತಿಲ್ಲ. ತಮ್ಮ ತಂಟೆಗೆ ಬಂದವರಿಗೆ, ಸಿನಿಮಾ ಸೋತಿದೆ ಎಂದವರಿಗೆ ತಿರುಗೇಟು ನೀಡುತ್ತಿದ್ದಾರೆ. ‘ಧಾಕಡ್’ ಸೋಲಿನ ನಂತರದಲ್ಲಿ ಅವರಿಗೆ ಟಾರ್ಚರ್ ಶುರುವಾಗಿದೆ. ಹೆಜ್ಜೆಹೆಜ್ಜೆಗೂ ಈ ಸೋಲಿನ ಬಗೆಗಿನ ಆರ್ಟಿಕಲ್ ಕಾಣಿಸುತ್ತಿದೆ. ಈ ಬಗ್ಗೆ ಕಂಗನಾ ಮೌನ ಮುರಿದಿದ್ದಾರೆ.

‘ಧಾಕಡ್’ ಸಿನಿಮಾದ ಬಜೆಟ್ 100 ಕೋಟಿ ಸಮೀಪದಲ್ಲಿದೆ. ಆದರೆ, ಈ ಚಿತ್ರ ಕಲೆಕ್ಷನ್ ಮಾಡಿದ್ದು ಕೇವಲ 2.58 ಕೋಟಿ ರೂಪಾಯಿ. ಒಟಿಟಿ ಹಕ್ಕು, ಟಿವಿ ಹಕ್ಕು ಎಲ್ಲವೂ ಸೇರಿದರೂ ನಿರ್ಮಾಪಕರಿಗೆ 70 ಕೋಟಿ ರೂಪಾಯಿಗೂ ಅಧಿಕ ನಷ್ಟ ಆಗಿದೆ ಎನ್ನುವ ವರದಿಗಳು ಬಿತ್ತರ ಆಗುತ್ತಿವೆ. ಇದೆಲ್ಲವೂ ಕಂಗನಾ ಗಮನಕ್ಕೆ ಬಂದಿದೆ. ಈ ಕಾರಣಕ್ಕೆ ಅವರು ಉಳಿದ ಚಿತ್ರಗಳ ಬಗ್ಗೆ ಟೀಕೆ ಮಾಡಿ ತೃಪ್ತಿಪಟ್ಟುಕೊಂಡಿದ್ದಾರೆ.

ರಣವೀರ್ ಸಿಂಗ್ ನಟನೆಯ ‘83’, ಆಲಿಯಾ ಭಟ್ ನಟನೆಯ ‘ಗಂಗೂಬಾಯಿ ಕಾಠಿಯಾವಾಡಿ’, ವರುಣ್ ಧವನ್ ಅಭಿನಯದ ‘ಜುಗ್​ಜುಗ್​ ಜಿಯೋ’ ಸಾಧಾರಣ ಕಲೆಕ್ಷನ್ ಮಾಡಿದೆ. ಪ್ರಭಾಸ್ ನಟನೆಯ ‘ರಾಧೆ ಶ್ಯಾಮ್​’ ಚಿತ್ರ ಹೀನಾಯ ಸೋಲು ಕಂಡಿದೆ. ಈ ಬಗ್ಗೆ ಪ್ರಕಟವಾದ ಆರ್ಟಿಕಲ್​ನ ಸ್ಕ್ರೀನ್​ಶಾಟ್ ಪೋಸ್ಟ್ ಮಾಡಿರುವ ಕಂಗನಾ ರಣಾವತ್ ಉದ್ದನೆಯ ಸಾಲನ್ನು ಬರೆದುಕೊಂಡಿದ್ದಾರೆ.

ಇದನ್ನೂ ಓದಿ
Image
‘ಧಾಕಡ್​’ ಸೋಲಿನ ಬೆನ್ನಲ್ಲೇ ಮಹತ್ವದ ಕೆಲಸಕ್ಕೆ ಮುಂದಾದ ಕಂಗನಾ ರಣಾವತ್
Image
ಕಂಗನಾ ನಟನೆಯ ‘ಧಾಕಡ್​’ ಚಿತ್ರ ನೋಡಲು ಒಬ್ಬರೂ ಬರಲಿಲ್ಲ; ಹಲವು ಕಡೆಗಳಲ್ಲಿ ಶೋ ಕ್ಯಾನ್ಸಲ್​
Image
‘ಧಾಕಡ್​’ ರಿಲೀಸ್​ಗೂ ಮುನ್ನ ತಿರುಮಲಕ್ಕೆ ಬಂದು ವೆಂಕಟೇಶ್ವರನ ದರ್ಶನ ಪಡೆದ ಕಂಗನಾ ರಣಾವತ್​
Image
ಕಂಗನಾ ರಣಾವತ್​ ಯಾಕಿನ್ನೂ ಮದುವೆ ಆಗಿಲ್ಲ? ಅದಕ್ಕೆ ಕಾರಣ ಆಗಿದ್ದು ಒಂದೇ ಒಂದು ಗಾಸಿಪ್​; ಏನದು?

‘ಧಾಕಡ್ ಸಿನಿಮಾ ಫ್ಲಾಪ್ ಆಯಿತು ಎನ್ನುವ ಬಗ್ಗೆ ನಿತ್ಯ ಹಲವು ಆರ್ಟಿಕಲ್ ಓದುತ್ತಿದ್ದೇನೆ. ಆದರೆ ಯಾರೊಬ್ಬರೂ ಈ ದೊಡ್ಡ ಡಿಸಾಸ್ಟರ್​ಗಳ ಬಗ್ಗೆ ಮಾತನಾಡುತ್ತಿಲ್ಲ. ಇದಕ್ಕೆ ಏನಾದರೂ ನಿರ್ದಿಷ್ಟ ಕಾರಣವಿದೆಯೇ?’ ಎಂದು ಪ್ರಶ್ನೆ ಮಾಡಿದ್ದಾರೆ ಕಂಗನಾ.

‘ಧಾಕಡ್​’ ಕಂಗನಾ ರಣಾವತ್ ವೃತ್ತಿ ಜೀವನದಲ್ಲೇ ಅತಿ ಕೆಟ್ಟ ಸಿನಿಮಾ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಬಗ್ಗೆ ಹಲವು ಆರ್ಟಿಕಲ್​ಗಳು ಪ್ರಕಟಗೊಂಡಿವೆ. ಈ ಚಿತ್ರ ಮೊದಲ ಮೂರು ದಿನ ತಲಾ 50 ಲಕ್ಷ ರೂಪಾಯಿ ಮಾತ್ರ ಕಲೆಕ್ಷನ್ ಮಾಡಿದೆ. ಇತ್ತೀಚೆಗೆ ಈ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಯಿತು. ಅಲ್ಲಿಯೂ ಜನರು ಇದನ್ನು ಮೆಚ್ಚಿಕೊಂಡಿಲ್ಲ.

Follow Us
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?
ವಿಜಯ್​​ರನ್ನು ದೇವರೇ ಕಾಪಾಡಬೇಕು ಎಂದ ಹೆಚ್​​ಡಿಕೆ: ಕಾರಣ ಇಲ್ಲಿದೆ
ವಿಜಯ್​​ರನ್ನು ದೇವರೇ ಕಾಪಾಡಬೇಕು ಎಂದ ಹೆಚ್​​ಡಿಕೆ: ಕಾರಣ ಇಲ್ಲಿದೆ