AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಧಮಾಲ್ 4’ ಟ್ರೇಲರ್ ರಿಲೀಸ್: ಅಜಯ್ ದೇವಗನ್ ಗ್ಯಾಂಗ್‌ನಿಂದ ಮತ್ತೆ ಕಾಮಿಡಿ ಹಂಗಾಮಾ

‘ಧಮಾಲ್’ ಸರಣಿಯ 3 ಸಿನಿಮಾಗಳನ್ನು ನೋಡಿ ಎಂಜಾಯ್ ಮಾಡಿದ್ದ ಪ್ರೇಕ್ಷಕರು ಈಗ ‘ಧಮಾಲ್ 4’ ನೋಡಲು ಕಾದಿದ್ದಾರೆ. ಜುಲೈ 10ರಂದು ಬಿಡುಗಡೆ ಆಗಲಿರುವ ಈ ಸಿನಿಮಾದ ಟ್ರೇಲರ್ ಈಗ ರಿಲೀಸ್ ಆಗಿದೆ. ಟ್ರೇಲರ್​ನಲ್ಲಿಯೇ ಭರ್ಜರಿ ಕಾಮಿಡಿ ದೃಶ್ಯಗಳಿವೆ. ಇಂದ್ರ ಕುಮಾರ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ.

‘ಧಮಾಲ್ 4’ ಟ್ರೇಲರ್ ರಿಲೀಸ್: ಅಜಯ್ ದೇವಗನ್ ಗ್ಯಾಂಗ್‌ನಿಂದ ಮತ್ತೆ ಕಾಮಿಡಿ ಹಂಗಾಮಾ
Dhamaal 4 Movie Movie PosterImage Credit source: T-Series
ಮದನ್​ ಕುಮಾರ್​
|

Updated on:Jun 12, 2026 | 10:34 PM

Share

ಬಾಲಿವುಡ್‌ನ ಅತ್ಯಂತ ಯಶಸ್ವಿ ಕಾಮಿಡಿ ಫ್ರಾಂಚೈಸಿಗಳಲ್ಲಿ ಒಂದಾದ ‘ಧಮಾಲ್’ ಸರಣಿಯ ಬಹುನಿರೀಕ್ಷಿತ ‘ಧಮಾಲ್ 4’ ಚಿತ್ರದ ಟ್ರೇಲರ್ (Dhamaal 4 Trailer) ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಮುಂಬೈ ಹೊರವಲಯದ ಪ್ರಸಿದ್ಧ ಅಮ್ಯೂಸ್‌ಮೆಂಟ್ ಪಾರ್ಕ್ ‘ಇಮ್ಯಾಜಿಕಾ’ದಲ್ಲಿ ಚಿತ್ರತಂಡವು ವಿಭಿನ್ನವಾದ ಇಮರ್ಸಿವ್ ಶೈಲಿಯಲ್ಲಿ ಟ್ರೇಲರ್ ಲಾಂಚ್ ಮಾಡಿದ್ದು, ಸಿನಿಪ್ರೇಮಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ. ಈ ಬಹುನಿರೀಕ್ಷಿತ ಸಿನಿಮಾದ ಬಿಡುಗಡೆಗಾಗಿ ಅಭಿಮಾನಿಗಳು ಕಾದಿದ್ದಾರೆ. ಕಾಮಿಡಿ ಪ್ರಿಯರಿಗೆ ‘ಧಮಾಲ್ 4’ (Dhamaal 4) ಸಿನಿಮಾ ಮೇಲೆ ಸಖತ್ ನಿರೀಕ್ಷೆ ಇದೆ.

ಚಿತ್ರದ ಟ್ರೇಲರ್ ಎಂದಿನಂತೆ ನಗು, ಸಾಹಸ ಮತ್ತು ಗೊಂದಲಗಳ ಮಹಾಪೂರವನ್ನೇ ಹೊತ್ತು ತಂದಿದೆ. ಇಡೀ ಕುಟುಂಬ ಒಟ್ಟಿಗೆ ಕುಳಿತು ನಗುವಂತಹ ಕಚಗುಳಿ ಇಡುವ ದೃಶ್ಯಗಳು ಟ್ರೇಲರ್‌ನಲ್ಲಿ ಹೈಲೈಟ್ ಆಗಿವೆ. ಈ ಬಾರಿ ಧಮಾಲ್ ಗ್ಯಾಂಗ್‌ಗೆ ಬಂಗಾರದ ಬೆಟ್ಟದಂತಹ ದೊಡ್ಡ ನಿಧಿಯೊಂದರ ಸುಳಿವು ಸಿಗುತ್ತದೆ. ಅದನ್ನು ಹುಡುಕಿಕೊಂಡು ಹೊರಡುವ ಇಡೀ ಗ್ಯಾಂಗ್ ಸಿಕ್ಕಿಬೀಳುವ ಹಾಸ್ಯಾಸ್ಪದ ಸನ್ನಿವೇಶಗಳು, ಕಾಡಿನ ಸಾಹಸಗಳು ಮತ್ತು ಅನಿರೀಕ್ಷಿತ ಟ್ವಿಸ್ಟ್‌ಗಳು ಟ್ರೇಲರ್‌ನಲ್ಲಿ ಭರಪೂರ ಮನರಂಜನೆ ನೀಡುವ ಭರವಸೆ ಮೂಡಿಸಿವೆ.

‘ಧಮಾಲ್ 4’ ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಒಂದಾಗಿದೆ. ಅಜಯ್ ದೇವ್ಗನ್, ಅರ್ಶದ್ ವಾರ್ಸಿ, ರಿತೇಶ್ ದೇಶ್‌ಮುಖ್, ಜಾವೇದ್ ಜಾಫೇರಿ ಮತ್ತು ಸಂಜಯ್ ಮಿಶ್ರಾ ಮುಖ್ಯ ಭೂಮಿಕೆಯಲ್ಲಿ ಮರಳಿದ್ದಾರೆ. ಇವರ ಜೊತೆಗೆ ಇಶಾ ಗುಪ್ತಾ, ಸಂಜೀದಾ ಶೇಖ್, ಅಂಜಲಿ ಆನಂದ್, ಉಪೇಂದ್ರ ಲಿಮಾಯೆ, ವಿಜಯ್ ಪಾಟ್ಕರ್ ಮತ್ತು ರವಿ ಕಿಶನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

‘ಧಮಾಲ್ 4’ ಸಿನಿಮಾದ ಟ್ರೇಲರ್:

ಈ ಚಿತ್ರವನ್ನು ಹಿರಿಯ ನಿರ್ದೇಶಕ ಇಂದ್ರ ಕುಮಾರ್ ನಿರ್ದೇಶಿಸಿದ್ದು, ಅಜಯ್ ದೇವ್ಗನ್, ಭೂಷಣ್ ಕುಮಾರ್, ಕ್ರಿಷಣ್ ಕುಮಾರ್ ಸೇರಿದಂತೆ ಪ್ರಮುಖರು ಜಂಟಿಯಾಗಿ ಟಿ-ಸೀರಿಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದಾರೆ. ಜುಲೈ 10ರಂದು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಈ ಮೊದಲಿನ 3 ಸಿನಿಮಾಗಳ ರೀತಿಯೇ ‘ಧಮಾಲ್ 4’ ಕೂಡ ಭರ್ಜರಿ ಮನರಂಜನೆ ನೀಡುವ ನಿರೀಕ್ಷೆ ಇದೆ.

ಇದನ್ನೂ ಓದಿ: ‘ಕಾಲಾ ಹಿರಣ್’ ಟೀಸರ್: ವಿವಾದಿತ ಸಿನಿಮಾದಲ್ಲಿ ಸಲ್ಮಾನ್ ಖಾನ್ ರೀತಿಯೇ ಕಾಣುವ ನಟ

ಧಮಾಲ್ ಸರಣಿಯ ಇತಿಹಾಸ:

ಧಮಾಲ್ (2007): ನಾಲ್ಕು ಜನ ಸೋಮಾರಿ ಗೆಳೆಯರು ಗೋವಾದಲ್ಲಿ ಬಚ್ಚಿಟ್ಟ ಕೋಟ್ಯಂತರ ರೂಪಾಯಿ ನಿಧಿಯನ್ನು ಹುಡುಕುವ ಕಥೆಯೊಂದಿಗೆ ಈ ಸರಣಿ ಆರಂಭವಾಗಿ ಸೂಪರ್ ಹಿಟ್ ಆಗಿತ್ತು. ಇದರಲ್ಲಿ ಸಂಜಯ್ ದತ್ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದರು.

ಡಬಲ್ ಧಮಾಲ್ (2011): ಮೊದಲ ಭಾಗದ ಮುಂದುವರಿದ ಕಥೆಯಾಗಿ ತೆರೆಕಂಡು ಯಶಸ್ವಿಯಾಗಿತ್ತು.

ಟೋಟಲ್ ಧಮಾಲ್ (2019): ಹೊಸ ಪಾತ್ರಗಳು ಮತ್ತು ಅಜಯ್ ದೇವ್ಗನ್ ಎಂಟ್ರಿಯೊಂದಿಗೆ ಸ್ಟ್ಯಾಂಡ್-ಅಲೋನ್ ರಿಬೂಟ್ ಆಗಿ ಬಂದು ಭರ್ಜರಿ ಕಲೆಕ್ಷನ್ ಮಾಡಿತ್ತು. ಈಗ ಅದೇ ಯಶಸ್ಸಿನ ಸರಣಿಯಲ್ಲಿ ನಾಲ್ಕನೇ ಭಾಗವಾಗಿ ‘ಧಮಾಲ್ 4’ ಬಾಕ್ಸ್ ಆಫೀಸ್ ಧೂಳೀಪಟ ಮಾಡಲು ಸಜ್ಜಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 9:53 pm, Fri, 12 June 26

Follow Us
ಇಂದು ಈ ರಾಶಿಯವರಿಗೆ ಉದ್ಯೋಗಾವಕಾಶ!
ಇಂದು ಈ ರಾಶಿಯವರಿಗೆ ಉದ್ಯೋಗಾವಕಾಶ!
ಕೇಂದ್ರ ಶಿಕ್ಷಣ ಖಾತೆಯ ಹೆಚ್ಚುವರಿ ಹೊಣೆ ಬಗ್ಗೆ ಪ್ರಲ್ಹಾದ್ ಜೋಶಿ ಏನಂದ್ರು?
ಕೇಂದ್ರ ಶಿಕ್ಷಣ ಖಾತೆಯ ಹೆಚ್ಚುವರಿ ಹೊಣೆ ಬಗ್ಗೆ ಪ್ರಲ್ಹಾದ್ ಜೋಶಿ ಏನಂದ್ರು?
ಚಿಕ್ಕಬಳ್ಳಾಪುರದಲ್ಲಿ ಕೈ ಕೈ ಮಿಲಾಹಿಸಿಕೊಂಡ ಕಾಂಗ್ರೆಸ್ ಕಾರ್ಯಕರ್ತರು
ಚಿಕ್ಕಬಳ್ಳಾಪುರದಲ್ಲಿ ಕೈ ಕೈ ಮಿಲಾಹಿಸಿಕೊಂಡ ಕಾಂಗ್ರೆಸ್ ಕಾರ್ಯಕರ್ತರು
ಪೊಲೀಸರಿಂದ ಪಾಕ್ ಮೂಲದ 400ಕ್ಕೂ ಹೆಚ್ಚು ಸೋಷಿಯಲ್ ಮೀಡಿಯಾ ಖಾತೆ ಬ್ಲಾಕ್
ಪೊಲೀಸರಿಂದ ಪಾಕ್ ಮೂಲದ 400ಕ್ಕೂ ಹೆಚ್ಚು ಸೋಷಿಯಲ್ ಮೀಡಿಯಾ ಖಾತೆ ಬ್ಲಾಕ್
ಇದು ಸರ್ಕಾರಕ್ಕೆ ವಿದ್ಯಾರ್ಥಿಗಳು, ವಿಪಕ್ಷದ ಎಚ್ಚರಿಕೆ; ರಾಹುಲ್ ಗಾಂಧಿ
ಇದು ಸರ್ಕಾರಕ್ಕೆ ವಿದ್ಯಾರ್ಥಿಗಳು, ವಿಪಕ್ಷದ ಎಚ್ಚರಿಕೆ; ರಾಹುಲ್ ಗಾಂಧಿ
ಅತ್ತ ಪ್ರಧಾನ್ ರಾಜೀನಾಮೆ: ಇತ್ತ ರಾಜ್ಯದ ಸಂಪುಟ ವಿಸ್ತರಣೆ ಸನ್ನಿಹಿತ
ಅತ್ತ ಪ್ರಧಾನ್ ರಾಜೀನಾಮೆ: ಇತ್ತ ರಾಜ್ಯದ ಸಂಪುಟ ವಿಸ್ತರಣೆ ಸನ್ನಿಹಿತ
ಸರ್ಕಾರ ಸಿಜೆಪಿಯ ಎಲ್ಲಾ ಬೇಡಿಕೆಗಳನ್ನೂ ಒಪ್ಪಿಕೊಂಡಿದೆ; ಸಚಿವ ಜೆ.ಪಿ ನಡ್ಡಾ
ಸರ್ಕಾರ ಸಿಜೆಪಿಯ ಎಲ್ಲಾ ಬೇಡಿಕೆಗಳನ್ನೂ ಒಪ್ಪಿಕೊಂಡಿದೆ; ಸಚಿವ ಜೆ.ಪಿ ನಡ್ಡಾ
ಬರದ ಬಗ್ಗೆ ಈಗಾಗಲೇ ಪ್ರಧಾನಿ ಮೋದಿ ಸಹ ಎಚ್ಚರಿಕೆ ನೀಡಿದ್ದಾರೆ ಎಂದ ಡಿಕೆಶಿ
ಬರದ ಬಗ್ಗೆ ಈಗಾಗಲೇ ಪ್ರಧಾನಿ ಮೋದಿ ಸಹ ಎಚ್ಚರಿಕೆ ನೀಡಿದ್ದಾರೆ ಎಂದ ಡಿಕೆಶಿ
ಸಿಜೆಪಿ ಜೊತೆಗಿನ ಕೇಂದ್ರದ ಸಂಧಾನ ಸಕ್ಸಸ್, ಜಿರಳೆ ಪಾರ್ಟಿ ಹೋರಾಟ ವಾಪಸ್!
ಸಿಜೆಪಿ ಜೊತೆಗಿನ ಕೇಂದ್ರದ ಸಂಧಾನ ಸಕ್ಸಸ್, ಜಿರಳೆ ಪಾರ್ಟಿ ಹೋರಾಟ ವಾಪಸ್!
10 ವರ್ಷ ಜೈಲು, 10 ಕೋಟಿ ರೂ ದಂಡ ಎಂದ ಸಚಿವ ಜೋಶಿ
10 ವರ್ಷ ಜೈಲು, 10 ಕೋಟಿ ರೂ ದಂಡ ಎಂದ ಸಚಿವ ಜೋಶಿ