AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಆಲ್ಫಾ’ ಚಿತ್ರಕ್ಕೆ ಮೊದಲ ದಿನ 9 ಸಾವಿರ ಶೋ; ಗಳಿಕೆ ಮಾತ್ರ ಒಂದಂಕಿ?

ಯಶ್ ರಾಜ್ ಫಿಲ್ಮ್ಸ್ ನಿರ್ಮಾಣದ, ಆಲಿಯಾ ಭಟ್ ನಟನೆಯ 'ಆಲ್ಫಾ' ಚಿತ್ರಕ್ಕೆ ದೇಶಾದ್ಯಂತ 9,000 ಕ್ಕೂ ಹೆಚ್ಚು ಶೋಗಳು ಸಿಕ್ಕಿವೆ. ಆದರೆ, ಮೊದಲ ದಿನದ ಗಳಿಕೆ ಕೇವಲ 7 ಕೋಟಿ ರೂಪಾಯಿ ಆಸುಪಾಸಿನಲ್ಲಿರಲಿದೆ ಎಂದು ಅಂದಾಜಿಸಲಾಗಿದೆ. ಭಾರಿ ಸ್ಕ್ರೀನ್‌ಗಳನ್ನು ಪಡೆದರೂ ಬಾಕ್ಸ್ ಆಫೀಸ್‌ನಲ್ಲಿ ನಿರಾಶೆ ಮೂಡಿಸಿರುವುದು ಚಿತ್ರರಂಗದಲ್ಲಿ ಅಚ್ಚರಿ ಮೂಡಿಸಿದೆ. ಈ ಮಹಿಳಾ ಪ್ರಧಾನ ಚಿತ್ರಕ್ಕೆ ನಿರೀಕ್ಷಿತ ಆರಂಭಿಕ ಓಪನಿಂಗ್ ಸಿಕ್ಕಿಲ್ಲ.

‘ಆಲ್ಫಾ’ ಚಿತ್ರಕ್ಕೆ ಮೊದಲ ದಿನ 9 ಸಾವಿರ ಶೋ; ಗಳಿಕೆ ಮಾತ್ರ ಒಂದಂಕಿ?
ಆಲ್ಫಾ Image Credit source: Alpha
ರಾಜೇಶ್ ದುಗ್ಗುಮನೆ
|

Updated on: Jul 03, 2026 | 8:39 AM

Share

ಮುಖ್ಯಾಂಶಗಳು

  • ಯಶ್ ರಾಜ್ ಫಿಲ್ಮ್ಸ್ ಪ್ರಭಾವದಿಂದ 9000 ಶೋ ಹಾಗೂ 2750 ಸ್ಕ್ರೀನ್‌ಗಳಲ್ಲಿ ಅಬ್ಬರಿಸಿದ ಆಲ್ಫಾ
  • 9 ಸಾವಿರ ಶೋಗಳು ಸಿಕ್ಕಿದ್ದರೂ ಆಲ್ಫಾ ಸಿನಿಮಾ ಕೇವಲ 7 ಕೋಟಿ ರೂಪಾಯಿ ಗಳಿಸುತ್ತಿರುವುದರ ಹಿಂದಿನ ಅಸಲಿ ಕಾರಣ
  • ವೆಲ್‌ಕಮ್ ಟು ದಿ ಜಂಗಲ್, ಕಾಕ್‌ಟೇಲ್ 2 ಚಿತ್ರಗಳ ನಡುವೆ ಆಲಿಯಾ ಭಟ್ ಚಿತ್ರದ ಗಳಿಕೆಯ ಮೇಲೆ ಬಿದ್ದ ಪ್ರಭಾವ

ಯಶ್ ರಾಜ್ ಫಿಲ್ಮ್ಸ್ ನಿರ್ಮಾಣದ ಬಹುನಿರೀಕ್ಷಿತ ಸ್ಪೈ ಥ್ರಿಲ್ಲರ್ ‘ಆಲ್ಫಾ’ ಸಿನಿಮಾ ಇಂದು (ಜುಲೈ 3) ತೆರೆಗೆ ಬಂದಿದೆ. ಆಲಿಯಾ ಭಟ್, ಶಾರ್ವರಿ, ಬಾಬಿ ಡಿಯೋಲ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಚಿತ್ರಕ್ಕೆ ದೇಶಾದ್ಯಂತ ಭರ್ಜರಿ ಸ್ಕ್ರೀನ್‌ಗಳು ಸಿಕ್ಕಿವೆ. ವೈಆರ್‌ಎಫ್ ತನ್ನ ಬಲವನ್ನು ಉಪಯೋಗಿಸಿ ಹೆಚ್ಚಿನ ಥಿಯೇಟರ್ ಪಡೆದುಕೊಂಡಿದೆ. ಈ ಮೂಲಕ ಈ ಚಿತ್ರಕ್ಕೆ ದಾಖಲೆಯ ಬಿಡುಗಡೆಯನ್ನು ತಂದುಕೊಟ್ಟಿದೆ. ಆದಾಗ್ಯೂ ಸಿನಿಮಾದ ಗಳಿಕೆ ಮಾತ್ರ ಒಂದಂಕಿಗೆ ಸೀಮಿತವಾಗಲಿದೆ ಎನ್ನಲಾಗುತ್ತಿದೆ.

‘ಆಲ್ಫಾ’ ಚಿತ್ರವು ಭಾರತದಾದ್ಯಂತ ಒಟ್ಟು 2,750 ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗುತ್ತಿದೆ. ಮಹಿಳಾ ಪ್ರಧಾನ ಸಿನಿಮಾ ಒಂದಕ್ಕೆ ಈ ಮಟ್ಟದ ದೊಡ್ಡ ಓಪನಿಂಗ್ ಸಿಕ್ಕಿರುವುದು ಇದೇ ಮೊದಲು ಎನ್ನಲಾಗಿದೆ. ಶಿವ ರವೈಲ್ ನಿರ್ದೇಶನದ ಈ ಚಿತ್ರಕ್ಕೆ ದೇಶಾದ್ಯಂತ ಬರೋಬ್ಬರಿ 9,000 ಶೋಗಳು ಸಿಕ್ಕಿವೆ. ಕಳೆದ ಒಂದು ವರ್ಷದಲ್ಲಿ ತೆರೆಕಂಡ ಹಲವು ದೊಡ್ಡ ಸಿನಿಮಾಗಳಿಗಿಂತಲೂ ಇದು ಅತ್ಯುತ್ತಮ ಶೋ ಕೌಂಟ್ ಆಗಿದೆ.

ಭಾರೀ ಪೈಪೋಟಿ

ಹಿಂದಿ ಬಾಕ್ಸ್ ಆಫೀಸ್‌ನಲ್ಲಿ ಈ ವಾರ ಭಾರಿ ಪೈಪೋಟಿ ಇದೆ. ‘ವೆಲ್‌ಕಮ್ ಟು ದಿ ಜಂಗಲ್’ ಮತ್ತು ‘ಕಾಕ್‌ಟೇಲ್ 2’ ನಂತಹ ಚಿತ್ರಗಳು ಈಗಾಗಲೇ ರಿಲೀಸ್ ಆಗಿ ಮೆಚ್ಚುಗೆ ಪಡೆದಿವೆ. ಇಷ್ಟೊಂದು ಪೈಪೋಟಿ ಇದ್ದರೂ ವೈಆರ್‌ಎಫ್ ತನ್ನ ಪ್ರಭಾವದಿಂದ ‘ಆಲ್ಫಾ’ ಚಿತ್ರಕ್ಕೆ ಹೆಚ್ಚಿನ ಸ್ಕ್ರೀನ್‌ಗಳನ್ನು ಗಿಟ್ಟಿಸಿಕೊಂಡಿದೆ. ವೀಕೆಂಡ್‌ನಲ್ಲಿ ಸಿನಿಮಾ ಕಲೆಕ್ಷನ್ ಹೆಚ್ಚಾಗಲು ಇದು ನೆರವಾಗಲಿದೆ.

ಇದನ್ನೂ ಓದಿ: ‘ಆಲ್ಫಾ’ ಸಿನಿಮಾ ಸಂಭಾವನೆಯಲ್ಲಿ ಎಲ್ಲರನ್ನೂ ಮೀರಿಸಿದ ಆಲಿಯಾ ಭಟ್

ಆದರೆ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಸಿನಿಮಾ ರಿಲೀಸ್ ಆಗುತ್ತಿದ್ದರೂ ಚಿತ್ರದ ಗಳಿಕೆ ಮಾತ್ರ ನಿರಾಶಾದಾಯಕವಾಗಿದೆ. 9 ಸಾವಿರ ಶೋಗಳು ಸಿಕ್ಕಿದ್ದರೂ ಮೊದಲ ದಿನದ ಕಲೆಕ್ಷನ್ ಕೇವಲ 7 ಕೋಟಿ ರೂಪಾಯಿ ಆಸುಪಾಸಿನಲ್ಲಿರುವ ಮುನ್ಸೂಚನೆ ಇದೆ. ಈಗಾಗಲೇ ಮಲ್ಟಿಪ್ಲೆಕ್ಸ್‌ಗಳಲ್ಲಿ ಕೇವಲ 35 ಸಾವಿರ ಟಿಕೆಟ್‌ಗಳು ಮಾತ್ರ ಮಾರಾಟವಾಗಿವೆ. ಭರ್ಜರಿ ಪ್ರದರ್ಶನ ಕಂಡರೂ ಆರಂಭಿಕ ಗಳಿಕೆ ಇಷ್ಟೊಂದು ಕಡಿಮೆ ಇರುವುದು ಚಿತ್ರರಂಗದಲ್ಲಿ ಅಚ್ಚರಿ ಮೂಡಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಚಿತ್ರದುರ್ಗದ ಮಂಕಿಮ್ಯಾನ್ ಜ್ಯೋತಿರಾಜ್​​ಗೆ ಮದುವೆ ಫಿಕ್ಸ್: ಹುಡುಗಿ ಯಾರು?
ಚಿತ್ರದುರ್ಗದ ಮಂಕಿಮ್ಯಾನ್ ಜ್ಯೋತಿರಾಜ್​​ಗೆ ಮದುವೆ ಫಿಕ್ಸ್: ಹುಡುಗಿ ಯಾರು?
ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಕೇಸ್: ಪೊಲೀಸರ ವಿರುದ್ಧದ ತನಿಖೆ ಕ್ಲೋಸ್
ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಕೇಸ್: ಪೊಲೀಸರ ವಿರುದ್ಧದ ತನಿಖೆ ಕ್ಲೋಸ್
ಭಯೋತ್ಪಾದಕರಿಗೆ ಆಪರೇಷನ್ ಸಿಂಧೂರ್ ಪ್ರಬಲ ಸಂದೇಶ ರವಾನಿಸಿದೆ; ರಾಷ್ಟ್ರಪತಿ
ಭಯೋತ್ಪಾದಕರಿಗೆ ಆಪರೇಷನ್ ಸಿಂಧೂರ್ ಪ್ರಬಲ ಸಂದೇಶ ರವಾನಿಸಿದೆ; ರಾಷ್ಟ್ರಪತಿ
'ಜಮ್ಮು ಕಾಶ್ಮೀರ, ಲಡಾಖ್​ ಭಾರತದ ಅವಿಭಾಜ್ಯ ಅಂಗ'; ವಿದೇಶಾಂಗ ಸಚಿವಾಲಯ
'ಜಮ್ಮು ಕಾಶ್ಮೀರ, ಲಡಾಖ್​ ಭಾರತದ ಅವಿಭಾಜ್ಯ ಅಂಗ'; ವಿದೇಶಾಂಗ ಸಚಿವಾಲಯ
ಮನೆ ಮುಂದೆ ವಾಹನ ಪಾರ್ಕಿಂಗ್‌ಗೆ ಶುಲ್ಕ: ಜಿಬಿಎ ನಿಯಮಕ್ಕೆ ಸಿಟಿ ಮಂದಿ ಕಿಡಿ
ಮನೆ ಮುಂದೆ ವಾಹನ ಪಾರ್ಕಿಂಗ್‌ಗೆ ಶುಲ್ಕ: ಜಿಬಿಎ ನಿಯಮಕ್ಕೆ ಸಿಟಿ ಮಂದಿ ಕಿಡಿ
ಸಾರಿಗೆ ನೌಕರರಿಗೆ ವರಮಹಾಲಕ್ಷ್ಮಿ ಹಬ್ಬದ ಗಿಫ್ಟ್‌; ಹಿಂಬಾಕಿ ಬಿಡುಗಡೆ
ಸಾರಿಗೆ ನೌಕರರಿಗೆ ವರಮಹಾಲಕ್ಷ್ಮಿ ಹಬ್ಬದ ಗಿಫ್ಟ್‌; ಹಿಂಬಾಕಿ ಬಿಡುಗಡೆ
ಯತೀಂದ್ರ ಸಿದ್ದರಾಮಯ್ಯನವರನ್ನ ವಿಶೇಷವಾಗಿ ಪರಿಚಯಿಸಿದ ಡಿಕೆಶಿ
ಯತೀಂದ್ರ ಸಿದ್ದರಾಮಯ್ಯನವರನ್ನ ವಿಶೇಷವಾಗಿ ಪರಿಚಯಿಸಿದ ಡಿಕೆಶಿ
ಜೈಲಾಧಿಕಾರಿಗಳಿಗೆ ಅಲೋಕ್ ಕುಮಾರ್ ಕ್ಲಾಸ್!
ಜೈಲಾಧಿಕಾರಿಗಳಿಗೆ ಅಲೋಕ್ ಕುಮಾರ್ ಕ್ಲಾಸ್!
RSS ಚಟುವಟಿಕೆಗಳಿಗೆ ಬ್ರೇಕ್ ಆರೋಪ: ವಿಧೇಯಕದ ಅಂಶ ಬಿಚ್ಚಿಟ್ಟ ಗೃಹ ಸಚಿವ
RSS ಚಟುವಟಿಕೆಗಳಿಗೆ ಬ್ರೇಕ್ ಆರೋಪ: ವಿಧೇಯಕದ ಅಂಶ ಬಿಚ್ಚಿಟ್ಟ ಗೃಹ ಸಚಿವ
‘ಮುಂಗಾರು ಮಳೆ’ ಸಿನಿಮಾ ಆಗಲು ಕಾರಣನಾದೆ: ನಾಗತಿಹಳ್ಳಿ ಚಂದ್ರಶೇಖರ್
‘ಮುಂಗಾರು ಮಳೆ’ ಸಿನಿಮಾ ಆಗಲು ಕಾರಣನಾದೆ: ನಾಗತಿಹಳ್ಳಿ ಚಂದ್ರಶೇಖರ್