‘ಅನಿಮಲ್’ ನಿರ್ದೇಶಕ ಅನುಭವಿಸಿದ್ದು ಒಂದೆರಡಲ್ಲ; ಬಾಲಿವುಡ್​ ಅವರನ್ನು ಹೀಗೆಲ್ಲ ಟ್ರೀಟ್ ಮಾಡಿದೆ..

ಸಂದೀಪ್ ರೆಡ್ಡಿ ವಂಗ ಸಂದರ್ಶನ ಒಂದರಲ್ಲಿ ಮಾತನಾಡಿದ್ದಾರೆ. ‘ನಾನು ಹೆಚ್ಚು ದೂರುತ್ತೇನೆ ಎಂದು ಎಲ್ಲರಿಗೂ ಅನಿಸಬಾರದು. ಹೀಗಾಗಿ, ನಾನು ಅನುಭವಿಸಿದ ಎಲ್ಲಾ ವಿಚಾರಗಳನ್ನು ಹೇಳಿಕೊಳ್ಳಲು ಬಯಸೊಲ್ಲ’ ಎಂದಿದ್ದಾರೆ ಅವರು.

‘ಅನಿಮಲ್’ ನಿರ್ದೇಶಕ ಅನುಭವಿಸಿದ್ದು ಒಂದೆರಡಲ್ಲ; ಬಾಲಿವುಡ್​ ಅವರನ್ನು ಹೀಗೆಲ್ಲ ಟ್ರೀಟ್ ಮಾಡಿದೆ..
ಸಂದೀಪ್ ರೆಡ್ಡಿ ವಂಗ
Follow us
ರಾಜೇಶ್ ದುಗ್ಗುಮನೆ
|

Updated on: Jan 17, 2024 | 11:44 AM

ನಿರ್ದೇಶಕ ಸಂದೀಪ್ ರೆಡ್ಡಿ ವಂಗ ಅವರು ‘ಅನಿಮಲ್’ ಸಿನಿಮಾದಿಂದ (Animal Movie) ದೊಡ್ಡ ಯಶಸ್ಸು ಕಂಡಿದ್ದಾರೆ. ಈ ಚಿತ್ರ ಸಾಕಷ್ಟು ವಿವಾದಗಳನ್ನು ಕೂಡ ಮಾಡಿದೆ. ಈ ಸಿನಿಮಾ ಫಿಲ್ಮ್​ಫೇರ್​ ಅವಾರ್ಡ್​ನಲ್ಲಿ 19 ವಿಭಾಗಗಳಲ್ಲಿ ನಾಮಿನೇಟ್ ಆಗಿದೆ. ಈ ಬಗ್ಗೆ ಅವರಿಗೆ ಖುಷಿ ಇದೆ. ಇದರ ಜೊತೆಗೆ ಚಿತ್ರರಂಗ ಹೊರಗಿನಿಂದ ಬಂದವರನ್ನು ಯಾವ ರೀತಿಯಲ್ಲಿ ನೋಡುತ್ತದೆ ಎಂಬುದನ್ನು ಅವರು ಹೇಳಿದ್ದಾರೆ. ‘ಚಿತ್ರರಂಗದಲ್ಲಿ ಇರುವವರು ತಮ್ಮ ಸುತ್ತ ಮುತ್ತಲಿನವರನ್ನು ಪ್ರಮೋಟ್ ಮಾಡಲು ಹೆಚ್ಚು ಆಸಕ್ತಿ ತೋರಿಸುತ್ತಾರೆ. ಹೊರಗಿನಿಂದ ಬಂದವರನ್ನು ಅವರು ಪ್ರಮೋಟ್ ಮಾಡುವುದಿಲ್ಲ’ ಎಂದಿದ್ದಾರೆ  ಸಂದೀಪ್ ರೆಡ್ಡಿ ವಂಗ.

ಸಂದರ್ಶನ ಒಂದರಲ್ಲಿ ಸಂದೀಪ್ ರೆಡ್ಡಿ ವಂಗ ಮಾತನಾಡಿದ್ದಾರೆ. ‘ನಾನು ಹೆಚ್ಚು ದೂರುತ್ತೇನೆ ಎಂದು ಎಲ್ಲರಿಗೂ ಅನಿಸಬಾರದು. ಹೀಗಾಗಿ, ನಾನು ಅನುಭವಿಸಿದ ಎಲ್ಲಾ ವಿಚಾರಗಳನ್ನು ಹೇಳಿಕೊಳ್ಳಲು ಬಯಸುವುದಿಲ್ಲ. ಇದು ನಿಜಕ್ಕೂ ಪ್ರಾಣಿಗಳ ರೀತಿಯ ವರ್ತನೆ. ಪ್ರಾಣಿಗಳು ತಮ್ಮ ಜಾಗವನ್ನು ಆಗ್ರಮಿಸಿಕೊಳ್ಳಲು ಬರುತ್ತಿದ್ದಾರೆ ಎಂದು ತಿಳಿದಾಗ ಎದುರಾಳಿಗಳ ವಿರುದ್ಧ ಅವು ತಿರುಗಿ ಬೀಳುತ್ತವೆ’ ಎಂದಿದ್ದಾರೆ ಸಂದೀಪ್ ರೆಡ್ಡಿ ವಂಗ.

‘ಅವಾರ್ಡ್ ​ಶೋಗಳನ್ನೇ ನೋಡಿ. ಎಲ್ಲರೂ ಅವರವರ ಗೆಳೆಯರನ್ನೇ ಪ್ರಮೋಟ್ ಮಾಡುತ್ತಾರೆ. ಅವಾರ್ಡ್ ಫಂಕ್ಷನ್ ಏನು ಅನ್ನೋದು ಎಲ್ಲರಿಗೂ ಗೊತ್ತು. ಬಾಲಿವುಡ್​ಗೆ ಬಂದ ಬಳಿಕ ನಾನು ಏನೆಲ್ಲ ಎದುರಿಸಿದ್ದೀನಿ ಅನ್ನೋದನ್ನು ರಾತ್ರಿ ಬೆಳಗ್ಗಿನವರೆಗೆ ನಾನು ಹೇಳಬಹುದು. ಅಷ್ಟು ನನ್ನ ಜೀವನದಲ್ಲಿ ಘಟಿಸಿದೆ. ಆದರೆ, ನನಗೆ ಮಗುವಿನಂತೆ ಅಳೋಕೆ ಇಷ್ಟ ಇಲ್ಲ’ ಎಂದಿದ್ದಾರೆ ಅವರು.

ಇದನ್ನೂ ಓದಿ: ಒಟಿಟಿಯಲ್ಲಿ ಸದ್ಯಕ್ಕೆ ರಿಲೀಸ್ ಆಗಲ್ಲ ‘ಅನಿಮಲ್’? ನಿರ್ಮಾಣ ಸಂಸ್ಥೆಯಿಂದಲೇ ಚಿತ್ರದ ಮೇಲೆ ಬಿತ್ತು ಕೇಸ್

‘ಅನಿಮಲ್’ ಸಿನಿಮಾ ಪಾಸಿಟಿವ್ ಹಾಗೂ ನೆಗೆಟಿವ್ ಎರಡೂ ರೀತಿಯ ವಿಮರ್ಶೆ ಪಡೆದಿದೆ. ಅನೇಕರು ಈ ಚಿತ್ರವನ್ನು ಸಾಕಷ್ಟು ಟೀಕೆ ಮಾಡಿದ್ದಾರೆ. ಇನ್ನೂ ಕೆಲವರು ಈ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಈ ಚಿತ್ರದಲ್ಲಿ ಹೆಣ್ಣುಮಕ್ಕಳ ಗೌರವ ಕಳೆಯುವಂಥ ದೃಶ್ಯಗಳು ಇವೆ ಎಂದು ಅನೇಕರು ಆರೋಪಿಸಿದ್ದರು. ಈ ಸಿನಿಮಾ ಫಿಲ್ಮ್​ಫೇರ್​ನಲ್ಲಿ ಬರೋಬ್ಬರಿ 19 ವಿಭಾಗಗಳಲ್ಲಿ ನಾಮಿನೇಟ್ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್