ಈ ಸ್ಟಾರ್​​ ನಟರ ಮಕ್ಕಳಿಗೆ ಚಿತ್ರರಂಗದಲ್ಲಿ ಸಿಗಲೇ ಇಲ್ಲ ಯಶಸ್ಸು; ಮಾಡಿದ ಸಿನಿಮಾಗಳೆಲ್ಲ ಫ್ಲಾಪ್

|

Updated on: Feb 27, 2023 | 11:07 PM

Bollywood | Nepotism: ಉತ್ತಮ ಸಿನಿಮಾಗಳನ್ನು ಮಾಡಿ ಗೆಲ್ಲಬೇಕು ಎನ್ನುವ ಉದ್ದೇಶ ಇಟ್ಟುಕೊಂಡೇ ಅನೇಕರು ಚಿತ್ರರಂಗಕ್ಕೆ ಬರುತ್ತಾರೆ. ಆದರೆ, ಎಲ್ಲರಿಗೂ ವಿಜಯಲಕ್ಷ್ಮಿ ಒಲಿಯುವುದಿಲ್ಲ.

ಈ ಸ್ಟಾರ್​​ ನಟರ ಮಕ್ಕಳಿಗೆ ಚಿತ್ರರಂಗದಲ್ಲಿ ಸಿಗಲೇ ಇಲ್ಲ ಯಶಸ್ಸು; ಮಾಡಿದ ಸಿನಿಮಾಗಳೆಲ್ಲ ಫ್ಲಾಪ್
ಜಾನ್ವಿ ಕಪೂರ್​, ತುಷಾರ್​ ಕಪೂರ್​, ಅನನ್ಯಾ ಪಾಂಡೆ, ಅರ್ಜುನ್​ ಕಪೂರ್​
Follow us on

ಬಣ್ಣದ ಲೋಕ ತುಂಬಾನೇ ವಿಚಿತ್ರ. ಎಷ್ಟೇ ಶ್ರಮ ಹಾಕಿದರೂ ಕೆಲವೊಮ್ಮೆ ಅದೃಷ್ಟ ಕೈ ಹಿಡಿಯದೇ ಇದ್ದರೆ ಮಕಾಡೆ ಮಲಗುವುದು ಗ್ಯಾರಂಟಿ. ಸ್ಟಾರ್ ನಟರ ಮಕ್ಕಳನ್ನೂ (Star Kids) ಪ್ರೇಕ್ಷಕರು ಮುಲಾಜಿಲ್ಲದೆ ರಿಜೆಕ್ಟ್ ಮಾಡಿದ ಉದಾಹರಣೆ ಸಾಕಷ್ಟಿದೆ. ಚಿತ್ರರಂಗದಲ್ಲಿ (Film Industry) ನೆಲೆ ಕಂಡುಕೊಳ್ಳಬೇಕು ಎಂದರೆ ಒಳ್ಳೆಯ ಸಿನಿಮಾ ಮಾಡಬೇಕು. ಉತ್ತಮ ಸಿನಿಮಾಗಳನ್ನು ನೀಡಬೇಕು ಎನ್ನುವ ಉದ್ದೇಶ ಇಟ್ಟುಕೊಂಡೇ ಅನೇಕರು ಚಿತ್ರರಂಗಕ್ಕೆ ಬರುತ್ತಾರೆ. ಆದರೆ, ಎಲ್ಲರನ್ನೂ ಚಿತ್ರರಂಗ ಸ್ವಾಗತಿಸುವುದಿಲ್ಲ. ಬಾಲಿವುಡ್​ನಲ್ಲಿ (Bollywood) ಯಶಸ್ಸು ಕಾಣಬೇಕು ಅಂತ ಬಂದು ಸೋಲು ಅನುಭವಿಸಿದ ಸ್ಟಾರ್ ಕುಟುಂಬದವರ ಪಟ್ಟಿ ಇಲ್ಲಿದೆ.

ಸೋನಮ್ ಕಪೂರ್

2007ರಲ್ಲಿ ರಿಲೀಸ್ ಆದ ರಣಬೀರ್ ಕಪೂರ್ ನಟನೆಯ ‘ಸಾವರಿಯಾ’ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು ನಟಿ ಸೋನಂ ಕಪೂರ್. ಸ್ಟಾರ್ ಹೀರೋ ಅನಿಲ್ ಕಪೂರ್ ಮಗಳಾದ ಕಾರಣ ಅವರಿಗೆ ಬಣ್ಣದ ಲೋಕದ ಬಾಗಿಲು ಬೇಗ ತೆರೆಯಿತು. ಆದರೆ, ಗೆಲುವು? ಮರೀಚಿಕೆ ಆಗಿಯೇ ಉಳಿಯಿತು. ಅವರ ಸಿನಿಮಾಗಳು ಗೆದ್ದಿದ್ದಕ್ಕಿಂತ ಸೋತಿದ್ದೇ ಹೆಚ್ಚು. ಅವರು ಫ್ಲಾಪ್ ಸ್ಟಾರ್ ಎಂದೇ ಫೇಮಸ್. ಸದ್ಯ ಮಗುವಿನ ಆರೈಕೆಯಲ್ಲಿ ಸೋನಮ್ ಬ್ಯುಸಿ ಇದ್ದಾರೆ. ಹೊಸ ಚಿತ್ರಗಳನ್ನು ಅವರು ಒಪ್ಪಿಕೊಳ್ಳುತ್ತಿಲ್ಲ.

ಇದನ್ನೂ ಓದಿ
ಬಾಲಿವುಡ್​ನವರೂ ಕೆಟ್ಟ ಸಿನಿಮಾ ಮಾಡ್ತಾರೆ, ನಾವ್ಯಾಕೆ ಅವರಿಗೆ ರೇಂಜ್​ ಕೊಡಬೇಕು? ಸುದೀಪ್ ನೇರ ಪ್ರಶ್ನೆ
ಬಾಲಿವುಡ್​ಗಿತ್ತು ಅಂಡರ್​​ವರ್ಲ್ಡ್​​ ಸಂಪರ್ಕ; ಕರಾಳ ಸತ್ಯ ಬಿಚ್ಚಿಟ್ಟ ಖ್ಯಾತ ನಟಿ
ಬಾಲಿವುಡ್​ vs ಸೌತ್ ಎಂದರೆ ನನಗೆ ಸಿಟ್ಟೇ ಬರುತ್ತದೆ; ಅಕ್ಷಯ್ ಕುಮಾರ್ ನೇರ ನುಡಿ
ಸೌತ್​ ಚಿತ್ರಗಳ ಎದುರು ಬಾಲಿವುಡ್​ ಎಡವಿದ್ದು ಎಲ್ಲಿ? ಉತ್ತರ ಹುಡುಕಿದ ‘ಕೆಜಿಎಫ್​ 2’ ಅಧೀರ ಸಂಜಯ್​ ದತ್​

ಇದನ್ನೂ ಓದಿ: Tom Hanks: ಹಾಲಿವುಡ್​ನಲ್ಲೂ ನೆಪೋಟಿಸಂ; ಮಗನಿಗೆ ಅವಕಾಶ ನೀಡಿದ್ದನ್ನು ಸಮರ್ಥಿಸಿಕೊಂಡ ಟಾಮ್​ ಹ್ಯಾಂಕ್ಸ್​

ಅರ್ಜುನ್ ಕಪೂರ್

ಬೋನಿ ಕಪೂರ್ ಅವರ ಮಗ ಅರ್ಜುನ್ ಕಪೂರ್ ಅವರು ನಟಿ ಮಲೈಕಾ ಅರೋರಾ ಜೊತೆ ಸುತ್ತಾಟ ನಡೆಸುತ್ತಾ ಸುದ್ದಿಯಲ್ಲಿದ್ದಾರೆ. ಅವರು ಸಿನಿಮಾಗಿಂತ ವೈಯಕ್ತಿಕ ಜೀವನದ ಮೂಲಕವೇ ಹೆಚ್ಚು ಸುದ್ದಿ ಆಗುತ್ತಾರೆ. ಚಿತ್ರರಂಗದಲ್ಲಿ ಹೆಚ್ಚಿನ ಶ್ರಮ ಹಾಕುವ ಪ್ರಯತ್ನ ಮಾಡುತ್ತಿಲ್ಲ. ಅರ್ಜುನ್ ಕಪೂರ್ ನಟಿಸಿದ ‘2 ಸ್ಟೇಟ್ಸ್​’ ಹಾಗೂ ‘ಗುಂಡೇ’ ಚಿತ್ರಗಳು ಮಾತ್ರ ಕಮರ್ಷಿಯಲ್ ಹಿಟ್ ಎನಿಸಿಕೊಂಡಿವೆ. ಉಳಿದೆಲ್ಲವೂ ಫ್ಲಾಪ್ ಸಾಲಿನಲ್ಲಿದೆ.

ಇದನ್ನೂ ಓದಿ: Nepotism: ಡಾಲಿ ಮೇಲೆ ನೆಪೋಟಿಸಂ ಆರೋಪ; ಪ್ರೇಮ್​ ಪುತ್ರಿಗೆ ಚಾನ್ಸ್​ ನೀಡಿದ್ದಕ್ಕೆ ನೆಟ್ಟಿಗರ ಟೀಕೆ

ಇಮ್ರಾನ್ ಖಾನ್

ಆಮಿರ್ ಖಾನ್ ಅವರ ಸಂಬಂಧಿ ಇಮ್ರಾನ್ ಖಾನ್ ಕೂಡ ಚಿತ್ರರಂಗದಲ್ಲಿ ಅದೃಷ್ಟಪರೀಕ್ಷೆ ಮಾಡಿದ್ದರು. ಬಾಲ ಕಲಾವಿದನಾಗಿ ನಟಿಸುವ ಅವಕಾಶ ಅವರಿಗೆ ದೊರೆತಿತ್ತು. ನಂತರ ಹೀರೋ ಆಗಿಯೂ ಮಿಂಚುವ ಪ್ರಯತ್ನ ಮಾಡಿದರು. ಆದರೆ, ಸಿನಿಮಾಗಳು ಅವರ ಕೈ ಹಿಡಿಯಲೇ ಇಲ್ಲ.

ಇದನ್ನೂ ಓದಿ: ಸಲ್ಮಾನ್ ಜೊತೆ ನಟಿಸಲು ಬಹಳ ಆತಂಕಿತರಾಗಿದ್ದ ಆಯುಷ್ ಶರ್ಮಾ; ಇದಕ್ಕೆ ನೆಪೋಟಿಸಂ ಅಪವಾದವೂ ಕಾರಣವಂತೆ!

ಉದಯ್ ಚೋಪ್ರಾ

ಯಶ್ ರಾಜ್ ಫಿಲ್ಮ್ಸ್​ನ ಸ್ಥಾಪಕ ಯಶ್ ಚೋಪ್ರಾ​ ಅವರ ಮಗ ಆದಿತ್ಯ ಚೋಪ್ರಾ ದೊಡ್ಡ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಅವರ ಮತ್ತೋರ್ವ ಮಗ ಉದಯ್ ಚೋಪ್ರಾ ಅತಿ ದೊಡ್ಡ ಫ್ಲಾಪ್ ಸ್ಟಾರ್ ಆಗಿದ್ದಾರೆ. ‘ಧೂಮ್​’ ಚಿತ್ರದಲ್ಲಿ ಅವರು ಮಾಡಿದ ಅಲಿ ಪಾತ್ರ ಮಾತ್ರ ಜನರಿಗೆ ನೆನಪಿದೆ. ಉಳಿದಂತೆ ಅವರ ಯಾವ ಚಿತ್ರಗಳೂ ಗೆಲುವು ಕಂಡಿಲ್ಲ.

ಇದನ್ನೂ ಓದಿ: ‘ಚಿತ್ರರಂಗದಲ್ಲಿ ನೆಪೋಟಿಸಂಗಿಂತಲೂ ಈ ಸಮಸ್ಯೆ ಬಹಳ ಅಪಾಯಕಾರಿ’; ಮುಕ್ತವಾಗಿ ಹೇಳಿಕೊಂಡ ನವಾಜುದ್ದೀನ್ ಸಿದ್ದಿಕಿ

ತುಷಾರ್ ಕಪೂರ್

ಜಿತೇಂದ್ರ ಕಪೂರ್ ಮಗ ಹಾಗೂ ಏಕ್ತಾ ಕಪೂರ್ ಸಹೋದರ ತುಷಾರ್ ಕಪೂರ್ ಕೂಡ ಬಾಲಿವುಡ್​ನಲ್ಲಿ ಫ್ಲಾಪ್ ಹೀರೋ ಎನಿಸಿಕೊಂಡಿದ್ದಾರೆ. ಅವರು ಹಲವು ಸಿನಿಮಾ ಮಾಡಿದರೂ ಜನರಿಗೆ ಇಷ್ಟವಾಗಿಲ್ಲ. ಅವರ ನಟನೆಯ ‘ಗೋಲ್​ಮಾಲ್​’ ಚಿತ್ರ ಮಾತ್ರ ಜನರಲ್ಲಿ ನೆನಪಿನಲ್ಲಿದೆ.

ಜಾನ್ವಿ, ಅನನ್ಯಾ, ಸಾರಾ

ನಟಿಯರಾದ ಜಾನ್ವಿ ಕಪೂರ್, ಸಾರಾ ಅಲಿ ಖಾನ್ ಹಾಗೂ ಅನನ್ಯಾ ಪಾಂಡೆ ಈ ಮೂವರು ಸ್ಟಾರ್​ ಕುಟುಂಬದ ಹಿನ್ನೆಲೆ ಹೊಂದಿರುವವರು. ಇವರು ಈಗತಾನೇ ಚಿತ್ರರಂಗಕ್ಕೆ ಬಂದಿದ್ದಾರೆ ನಿಜ. ಆದರೆ, ಒಂದೇ ಒಂದು ದೊಡ್ಡ ಹಿಟ್ ನೀಡಲು ಇವರಿಂದ ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಇವರ ಕಡೆಯಿಂದ ಹಿಟ್ ಚಿತ್ರ ಬರಬಹುದು ಎಂಬುದು ಪ್ರೇಕ್ಷಕರ ನಿರೀಕ್ಷೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.