‘ನಿಮ್ಮ ಮಗನನ್ನು ನಾವು ಲಾಂಚ್ ಮಾಡ್ತೀವಿ’: ಶಾರುಖ್​ ಖಾನ್​ ಬಳಿ ಘಟಾನುಘಟಿಗಳ ಮನವಿ

ಶಾರುಖ್​ ಖಾನ್​ ಪುತ್ರ ಆರ್ಯನ್​ ಖಾನ್​ ಗಮನವೆಲ್ಲ ಸದ್ಯಕ್ಕೆ ನಿರ್ದೇಶನದ ಮೇಲಿದೆ. ‘ಸ್ಟಾರ್​ಡಮ್​’ ವೆಬ್​ ಸರಣಿಗೆ ಅವರು ಆ್ಯಕ್ಷನ್​-ಕಟ್​ ಹೇಳುತ್ತಿದ್ದಾರೆ. ಆದರೆ ಅವರನ್ನು ಹೀರೋ ಮಾಡಬೇಕು ಎಂದು ಬಾಲಿವುಡ್​ನ ಅನೇಕ ನಿರ್ಮಾಪಕರು ಪ್ರಯತ್ನಿಸುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಶಾರುಖ್​ ಖಾನ್​ ಬಳಿ ಮಾತುಕಥೆ ಮಾಡಲಾಗುತ್ತಿದೆ ಎಂದು ವರದಿ ಆಗಿದೆ.

‘ನಿಮ್ಮ ಮಗನನ್ನು ನಾವು ಲಾಂಚ್ ಮಾಡ್ತೀವಿ’: ಶಾರುಖ್​ ಖಾನ್​ ಬಳಿ ಘಟಾನುಘಟಿಗಳ ಮನವಿ
ಆರ್ಯನ್​ ಖಾನ್, ಶಾರುಖ್​ ಖಾನ್
Follow us
ಮದನ್​ ಕುಮಾರ್​
|

Updated on: Sep 04, 2024 | 10:51 PM

ಬಾಲಿವುಡ್​ನಲ್ಲಿ ಶಾರುಖ್​ ಖಾನ್​ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ಈಗ ಅವರ ಮಕ್ಕಳು ಕೂಡ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಶಾರುಖ್​ ಖಾನ್​ ಅವರ ಮಗಳು ಸುಹಾನಾ ಖಾನ್​ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಶಾರುಖ್​ ಪುತ್ರ ಆರ್ಯನ್​ ಖಾನ್​ ನಟನೆ ಬದಲಿಗೆ ನಿರ್ದೇಶನದತ್ತ ಆಸಕ್ತಿ ಬೆಳೆಸಿಕೊಂಡಿದ್ದಾರೆ. ಈಗಾಗಲೇ ಅವರು ನಿರ್ದೇಶಕನ ಚೇರ್​ನಲ್ಲಿ ಕುಳಿತಿದ್ದಾರೆ. ಆದರೆ ನೋಡಲು ಅಪ್ಪನ ರೀತಿಯೇ ಹೀರೋ ಲುಕ್​ ಹೊಂದಿರುವ ಆರ್ಯನ್​ ಖಾನ್​ನನ್ನು ಹೀರೋ ಆಗಿ ಲಾಂಚ್​ ಮಾಡಬೇಕು ಎಂದು ಅನೇಕ ನಿರ್ಮಾಪಕರು ಕಾಯುತ್ತಿದ್ದಾರೆ.

ಶಾರುಖ್​ ಖಾನ್​ ಮಗನನ್ನು ಲಾಂಚ್ ಮಾಡುವುದು ಎಂದರೆ ನಿಜಕ್ಕೂ ಹೆಮ್ಮೆಯ ವಿಚಾರ. ಅದು ಪ್ರತಿಷ್ಠೆಯ ಪ್ರಶ್ನೆ ಕೂಡ ಹೌದು. ಹಾಗಾಗಿ ಅಂಥ ದೊಡ್ಡ ಅವಕಾಶ ಯಾರಿಗೆ ಸಿಗಲಿದೆ ಎಂಬ ಕೌತುಕ ಮೂಡಿದೆ. ವರದಿಗಳ ಪ್ರಕಾರ, ಬಾಲಿವುಡ್​ ಘಟಾನುಘಟಿ ನಿರ್ಮಾಪಕರು ಎನಿಸಿಕೊಂಡ ಕರಣ್​ ಜೋಹರ್​, ಆದಿತ್ಯ ಚೋಪ್ರಾ, ಫರ್ಹಾ ಖಾನ್​, ರಾಕೇಶ್​ ಓಂ ಪ್ರಕಾಶ್​ ಮೆಹ್ರಾ ಮುಂತಾದವರು ಈಗಾಗಲೇ ಶಾರುಖ್​ ಖಾನ್​ ಬಳಿ ಈ ಬಗ್ಗೆ ಮಾತನಾಡಿದ್ದಾರಂತೆ.

ಇದನ್ನೂ ಓದಿ:  ವಿದೇಶಿ ಬಂಗಾರದ ನಾಣ್ಯದ ಮೇಲೆ ಶಾರುಖ್​ ಖಾನ್​ ಹೆಸರು, ಚಿತ್ರ: ಇದು ವಿಶೇಷ ಗೌರವ

‘ನಿಮ್ಮ ಮಗ ಆರ್ಯನ್​ ಖಾನ್​ನನ್ನು ನಾವು ಹೀರೋ ಆಗಿ ಲಾಂಚ್​ ಮಾಡುತ್ತೇವೆ’ ಎಂದು ದೊಡ್ಡ ದೊಡ್ಡ ನಿರ್ಮಾಪಕರು ಶಾರುಖ್​ ಖಾನ್​ ಬಳಿ ಬಂದು ಕೇಳಿಕೊಂಡಿದ್ದಾರೆ ಎನ್ನಲಾಗಿದೆ. ಆದರೆ ಶಾರುಖ್​ ಖಾನ್​ ಅವರು ಈ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಯಾಕೆಂದರೆ, ಮಗ ‘ಸ್ಟಾರ್​ಡಮ್​’ ವೆಬ್​ಸರಣಿಯ ನಿರ್ದೇಶನದ ಕೆಲಸವನ್ನು ಮೊದಲು ಮುಗಿಸಲಿ ಎಂಬುದು ಅವರ ಉದ್ದೇಶ.

ಇದನ್ನೂ ಓದಿ: ಶಾರುಖ್​, ಸಲ್ಮಾನ್​, ಆಮಿರ್​ ಜೊತೆ ಯಾಕೆ ನಟಿಸಿಲ್ಲ? ಅಸಲಿ ಕಾರಣ ತಿಳಿಸಿದ ಶ್ರದ್ಧಾ ಕಪೂರ್​

ಆರ್ಯನ್​ ಖಾನ್​ ನಿರ್ದೇಶನ ಮಾಡುತ್ತಿರುವ ವೆಬ್​ ಸಿರೀಸ್​ ಎಂಬ ಕಾರಣದಿಂದ ‘ಸ್ಟಾರ್​ಡಮ್​’ ಬಗ್ಗೆ ಸಖತ್​ ನಿರೀಕ್ಷೆ ಮೂಡಿದೆ. 2025ರಲ್ಲಿ ಇದು ರಿಲೀಸ್​ ಆಗಲಿದೆ. ಇನ್ನು, ಶಾರುಖ್​ ಖಾನ್​ ಅವರು ‘ಕಿಂಗ್​’ ಸಿನಿಮಾದ ಶೂಟಿಂಗ್​ ಆರಂಭಿಸಲು ಸಕಲ ತಯಾರಿ ಮಾಡಿಕೊಂಡಿದ್ದಾರೆ. ಆ ಸಿನಿಮಾಗೆ ಸುಜಯ್​ ಘೋಷ್​ ನಿರ್ದೇಶನ ಮಾಡಲಿದ್ದಾರೆ. ಆ ಸಿನಿಮಾದಲ್ಲಿ ಸುಹಾನಾ ಖಾನ್​ ಕೂಡ ಅಭಿನಯಿಸುತ್ತಾರೆ ಎಂಬುದು ವಿಶೇಷ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಎನ್ಕೌಂಟರ್ ಮಾಡಿಸುವ ಪ್ರಯತ್ನ ಅಂತ ರವಿ ಭಾವಿಸಿದ್ದರೆ ತನಿಖೆಯಾಗಲಿ: ಸಚಿವ
ಎನ್ಕೌಂಟರ್ ಮಾಡಿಸುವ ಪ್ರಯತ್ನ ಅಂತ ರವಿ ಭಾವಿಸಿದ್ದರೆ ತನಿಖೆಯಾಗಲಿ: ಸಚಿವ
ಅಪಘಾತದಲ್ಲಿ ಮೃತಪಟ್ಟ ಬಾಸ್​ ಬಗ್ಗೆ ಸಿಬ್ಬಂದಿಗಳ ನೋವಿನ ಮಾತು
ಅಪಘಾತದಲ್ಲಿ ಮೃತಪಟ್ಟ ಬಾಸ್​ ಬಗ್ಗೆ ಸಿಬ್ಬಂದಿಗಳ ನೋವಿನ ಮಾತು
ಜಿಮ್‌ಗೆ ನುಗ್ಗಿದ ಕೋತಿ: ಎದ್ನೋ ಬಿದ್ನೋ ಓಡಿದ ಬಾಡಿ ಬಿಲ್ಡರ್ಸ್!
ಜಿಮ್‌ಗೆ ನುಗ್ಗಿದ ಕೋತಿ: ಎದ್ನೋ ಬಿದ್ನೋ ಓಡಿದ ಬಾಡಿ ಬಿಲ್ಡರ್ಸ್!
ಪ್ರಕರಣ ಈಗ ಹಕ್ಕು ಭಾಧ್ಯತಾ ಸಮಿತಿ ಮುಂದಿದೆ: ಸತೀಶ್ ಜಾರಕಿಹೊಳಿ
ಪ್ರಕರಣ ಈಗ ಹಕ್ಕು ಭಾಧ್ಯತಾ ಸಮಿತಿ ಮುಂದಿದೆ: ಸತೀಶ್ ಜಾರಕಿಹೊಳಿ
ಅಶ್ಲೀಲ ಪದಬಳಕೆ ಕಂಡುಬಂದರೆ ಅದನ್ನು ಎಥಿಕ್ಸ್ ಕಮಿಟಿಗೆ ರವಾನೆ: ಹೊರಟ್ಟಿ
ಅಶ್ಲೀಲ ಪದಬಳಕೆ ಕಂಡುಬಂದರೆ ಅದನ್ನು ಎಥಿಕ್ಸ್ ಕಮಿಟಿಗೆ ರವಾನೆ: ಹೊರಟ್ಟಿ
ಪ್ರಧಾನಿ ಮೋದಿಯನ್ನ ಭೇಟಿಯಾದ 101 ವರ್ಷದ ಐಎಫ್‌ಎಸ್ ಅಧಿಕಾರಿ
ಪ್ರಧಾನಿ ಮೋದಿಯನ್ನ ಭೇಟಿಯಾದ 101 ವರ್ಷದ ಐಎಫ್‌ಎಸ್ ಅಧಿಕಾರಿ
ವಕ್ಫ್ ಬೋರ್ಡ್ ಭೂಕಬಳಿಕೆ ಸಮರ್ಥವಾಗಿ ಸದನದಲ್ಲಿ ಮಂಡಿಸಿದ್ದೇವೆ: ಅಶೋಕ
ವಕ್ಫ್ ಬೋರ್ಡ್ ಭೂಕಬಳಿಕೆ ಸಮರ್ಥವಾಗಿ ಸದನದಲ್ಲಿ ಮಂಡಿಸಿದ್ದೇವೆ: ಅಶೋಕ
ಡಿವೈಡರ್​ಗೆ ಗುದ್ದಿ ಕಾರಿನ ಮೇಲೆ ಕಂಟೇನರ್​ ಬೀಳುತ್ತಿರುವ ಭಯಾನಕ ದೃಶ್ಯ!
ಡಿವೈಡರ್​ಗೆ ಗುದ್ದಿ ಕಾರಿನ ಮೇಲೆ ಕಂಟೇನರ್​ ಬೀಳುತ್ತಿರುವ ಭಯಾನಕ ದೃಶ್ಯ!
ರಾಮಾಯಣ ಮತ್ತು ಮಹಾಭಾರತಕ್ಕೆ ಮೋದಿ ಸಹಿ
ರಾಮಾಯಣ ಮತ್ತು ಮಹಾಭಾರತಕ್ಕೆ ಮೋದಿ ಸಹಿ
ಕಾನೂನು ಕೈಗೆತ್ತಿಕೊಳ್ಳಬಾರದು ಅಂತ ಸಹಿಸಿಕೊಂಡೆ: ಮೃಣಾಲ್ ಹೆಬ್ಬಾಳ್ಕರ್
ಕಾನೂನು ಕೈಗೆತ್ತಿಕೊಳ್ಳಬಾರದು ಅಂತ ಸಹಿಸಿಕೊಂಡೆ: ಮೃಣಾಲ್ ಹೆಬ್ಬಾಳ್ಕರ್