AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕಾಕ್​​ಟೇಲ್ 2’ ಚಿತ್ರದಲ್ಲಿ ರಶ್ಮಿಕಾ ಮೂಲೆಗುಂಪು​; ಹಿಂದಿ ಉಚ್ಚಾರಣೆ ಬಗ್ಗೆಯೂ ಟೀಕೆ

ಬಾಲಿವುಡ್‌ನ ಬಹುನಿರೀಕ್ಷಿತ 'ಕಾಕ್‌ಟೇಲ್ 2' ಸಿನಿಮಾ ಅದ್ದೂರಿಯಾಗಿ ಬಿಡುಗಡೆಯಾಗಿ ಭರ್ಜರಿ ಪ್ರತಿಕ್ರಿಯೆ ಪಡೆದಿದೆ. ತರಣ್ ಆದರ್ಶ್ ರಶ್ಮಿಕಾ ಮಂದಣ್ಣ ಅವರ ಹಿಂದಿ ಡೈಲಾಗ್ ಡೆಲಿವರಿ ಸುಧಾರಣೆಗೆ ಸಲಹೆ ನೀಡಿದ್ದು, ಇದು ಚರ್ಚೆಗೆ ಕಾರಣವಾಗಿದೆ. ಆದ್ರೆ, ಕೃತಿ ಸನೋನ್ ಮತ್ತು ಶಾಹಿದ್ ಕಪೂರ್ ತಮ್ಮ ನಟನೆಗೆ ಮೆಚ್ಚುಗೆ ಪಡೆದಿದ್ದಾರೆ. ಈ ರೋಮ್ಯಾಂಟಿಕ್ ಡ್ರಾಮಾ ಬಾಕ್ಸ್ ಆಫೀಸ್‌ನಲ್ಲಿ ಯಶಸ್ಸು ಕಾಣುವ ನಿರೀಕ್ಷೆಯಿದೆ.

‘ಕಾಕ್​​ಟೇಲ್ 2’ ಚಿತ್ರದಲ್ಲಿ ರಶ್ಮಿಕಾ ಮೂಲೆಗುಂಪು​; ಹಿಂದಿ ಉಚ್ಚಾರಣೆ ಬಗ್ಗೆಯೂ ಟೀಕೆ
ಕಾಕ್​​ಟೇಲ್ 2 ತಂಡ
ರಾಜೇಶ್ ದುಗ್ಗುಮನೆ
|

Updated on:Jun 19, 2026 | 10:35 AM

Share

ಬಾಲಿವುಡ್‌ನ ಬಹುನಿರೀಕ್ಷಿತ ರೋಮ್ಯಾಂಟಿಕ್ ಡ್ರಾಮಾ ಸಿನಿಮಾ ‘ಕಾಕ್‌ಟೇಲ್ 2’ (Cocktail 2) ಇಂದು (ಜೂನ್ 19, 2026) ಅದ್ದೂರಿಯಾಗಿ ಬಿಡುಗಡೆಯಾಗಿದೆ. ಶಾಹಿದ್ ಕಪೂರ್, ಕೃತಿ ಸನೋನ್ ಹಾಗೂ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರದ ಮೊದಲ ವಿಮರ್ಶೆ ಹೊರಬಿದ್ದಿದ್ದು, ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಆದರೆ, ಚಿತ್ರದಲ್ಲಿ ನಟಿಸಿರುವ ಕನ್ನಡತಿ ರಶ್ಮಿಕಾ ಮಂದಣ್ಣ ಅವರ ಪರ್ಫಾಮೆನ್ಸ್ ಬಗ್ಗೆ ಬಾಲಿವುಡ್‌ನ ಖ್ಯಾತ ಟ್ರೇಡ್ ಅನಾಲಿಟಿಕ್ಸ್ ತರಣ್ ಆದರ್ಶ್ ನೀಡಿರುವ ಕಾಮೆಂಟ್ ಈಗ ಚರ್ಚೆಗೆ ಕಾರಣವಾಗಿದೆ.

ರಶ್ಮಿಕಾ ಹಿಂದಿ ಡೈಲಾಗ್ ಡೆಲಿವರಿ ಬಗ್ಗೆ ತರಣ್ ಆದರ್ಶ್ ಹೇಳಿದ್ದೇನು?

ಸಿನಿಮಾ ವೀಕ್ಷಿಸಿದ ಬಳಿಕ ಎಕ್ಸ್ (ಟ್ವಿಟರ್) ಖಾತೆಯಲ್ಲಿ ತಮ್ಮ ವಿಮರ್ಶೆ ಹಂಚಿಕೊಂಡಿರುವ ತರಣ್ ಆದರ್ಶ್, ರಶ್ಮಿಕಾ ಮಂದಣ್ಣ ಅವರ ನಟನೆಯ ಬಗ್ಗೆ ಕೆಲವು ನೆಗೆಟಿವ್ ಅಂಶಗಳನ್ನು ಪ್ರಸ್ತಾಪಿಸಿದ್ದಾರೆ. ‘ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಅವರಿಗೆ ನಟಿಸಲು ಹೆಚ್ಚಿನ ಸ್ಕೋಪ್ ಸಿಕ್ಕಿಲ್ಲ. ಅಷ್ಟೇ ಅಲ್ಲದೆ, ಅವರು ತಮ್ಮ ಹಿಂದಿ ಭಾಷೆಯ ಉಚ್ಚಾರಣೆಯ ಕಡೆಗೆ ಇನ್ನು ಹೆಚ್ಚಿನ ಗಮನ ಹರಿಸಬೇಕಾದ ಹಾಗೂ ಸುಧಾರಿಸಿಕೊಳ್ಳಬೇಕಾದ ಅಗತ್ಯವಿದೆ’ ಎಂದು ಆದರ್ಶ್ ಬರೆದುಕೊಂಡಿದ್ದಾರೆ. ಇದರಿಂದಾಗಿ ರಶ್ಮಿಕಾ ಅಭಿಮಾನಿಗಳಿಗೆ ಸಣ್ಣ ಮಟ್ಟದ ನಿರಾಸೆಯಾಗಿದೆ.

ಕೃತಿ-ಶಾಹಿದ್ ನಟನೆಗೆ ಭರ್ಜರಿ ಮಾರ್ಕ್ಸ್

ರಶ್ಮಿಕಾ ಅವರಿಗೆ ಹೆಚ್ಚಿನ ಸ್ಕೋಪ್ ಸಿಗದೇ ಇದ್ದರೂ, ಚಿತ್ರದ ಮತ್ತೊಬ್ಬ ನಾಯಕಿ ಕೃತಿ ಸನೋನ್ ಅವರಿಗೆ ಇದು ವೃತ್ತಿಜೀವನದ ‘ಅತ್ಯುತ್ತಮ ಪ್ರದರ್ಶನ’ ಎಂದು ತರಣ್ ಆದರ್ಶ್ ಹೊಗಳಿದ್ದಾರೆ. ಇನ್ನು ನಾಯಕ ನಟ ಶಾಹಿದ್ ಕಪೂರ್ ಅವರು ಕಾಮಿಡಿ ಸನ್ನಿವೇಶಗಳೆರಡರಲ್ಲೂ ಅದ್ಭುತವಾಗಿ ನಟಿಸುವ ಮೂಲಕ ತಮ್ಮ ಪಾತ್ರಕ್ಕೆ ಸಂಪೂರ್ಣ ನ್ಯಾಯ ಒದಗಿಸಿದ್ದಾರೆ ಮತ್ತು ಕ್ಲೈಮ್ಯಾಕ್ಸ್ ಹಂತದಲ್ಲಿ ಧೂಳೆಬ್ಬಿಸಿದ್ದಾರೆ ಎಂದು ವಿಮರ್ಶೆಯಲ್ಲಿ ತಿಳಿಸಲಾಗಿದೆ.

ಹೇಗಿದೆ ‘ಕಾಕ್‌ಟೇಲ್ 2’ ಸಿನಿಮಾ?

ಹೋಮಿ ಅದಜಾನಿಯಾ ನಿರ್ದೇಶನದ ಈ ಚಿತ್ರವು 2012ರ ಮೊದಲ ಭಾಗಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲದಂತೆ ವಿಭಿನ್ನವಾದ ಆಧುನಿಕ ಪ್ರೇಮಕಥೆಯನ್ನು ಹೊಂದಿದೆ. ಇಟಲಿಯಲ್ಲಿ ಚಿತ್ರೀಕರಿಸಲಾದ ಚಿತ್ರದ ಮೊದಲ ಭಾಗವು ವಿಶುವಲ್ ಆಗಿ ಮತ್ತು ಸಾಂಗ್ಸ್ ವಿಷಯದಲ್ಲಿ ಅತ್ಯಂತ ಶ್ರೀಮಂತವಾಗಿ ಮೂಡಿಬಂದಿದೆ. ಪ್ರೀ-ಕ್ಲೈಮ್ಯಾಕ್ಸ್‌ನಲ್ಲಿ ಕಥೆ ಸ್ವಲ್ಪ ನಿಧಾನವೆನಿಸಿದರೂ, ಒಟ್ಟಾರೆಯಾಗಿ ಸಿನಿಮಾ ಪ್ರೇಕ್ಷಕರಿಗೆ ಸಂಪೂರ್ಣ ತೃಪ್ತಿ ನೀಡಲಿದ್ದು, ಬಾಕ್ಸ್ ಆಫೀಸ್‌ನಲ್ಲಿ ‘ವಿನ್ನರ್’ ಆಗಿ ಹೊರಹೊಮ್ಮಲಿದೆ ಎಂದು ಆರಂಭಿಕ ವಿಮರ್ಶೆಗಳು ಹೇಳುತ್ತಿವೆ.

ಇದನ್ನೂ ಓದಿ: ‘ಕಾಕ್‌ಟೇಲ್ 2’ ಚಿತ್ರದಲ್ಲಿ ಸಲಿಂಗಿಗಳ ಪಾತ್ರ ಮಾಡಿದ್ದಾರಾ ರಶ್ಮಿಕಾ ಮಂದಣ್ಣ, ಕೃತಿ ಸನನ್?

ದಿನೇಶ್ ವಿಜನ್ ಮತ್ತು ಲವ್ ರಂಜನ್ ಜಂಟಿಯಾಗಿ ನಿರ್ಮಿಸಿರುವ ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಅವರ ಹಿಂದಿ ಡೈಲಾಗ್ ಡೆಲಿವರಿ ಬಾಕ್ಸ್ ಆಫೀಸ್ ಗಳಿಕೆಯ ಮೇಲೆ ಏನಾದರೂ ಪ್ರಭಾವ ಬೀರುತ್ತಾ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 10:33 am, Fri, 19 June 26

Follow Us
ಬಿಗ್ ಬಾಸ್ ಕಾಂಪಿಟೇಷನ್​ ವಿಡಿಯೋ ಕಳುಹಿಸಲು ಕೊನೆಯ ದಿನಾಂಕ ತಿಳಿಸಿದ ಕಲರ್ಸ್
ಬಿಗ್ ಬಾಸ್ ಕಾಂಪಿಟೇಷನ್​ ವಿಡಿಯೋ ಕಳುಹಿಸಲು ಕೊನೆಯ ದಿನಾಂಕ ತಿಳಿಸಿದ ಕಲರ್ಸ್
ತಾಯಿ ಆನೆ ಮಡಿಲಲ್ಲಿ ಮಲಗಿದ್ದ ಮರಿಗಳ ಕ್ಯೂಟ್ ದೃಶ್ಯ ವೈರಲ್
ತಾಯಿ ಆನೆ ಮಡಿಲಲ್ಲಿ ಮಲಗಿದ್ದ ಮರಿಗಳ ಕ್ಯೂಟ್ ದೃಶ್ಯ ವೈರಲ್
ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ದುರಂತ: ಬಿಹಾರ, ತಮಿಳುನಾಡಿನ ಇಬ್ಬರು ನಾಪತ್ತೆ
ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ದುರಂತ: ಬಿಹಾರ, ತಮಿಳುನಾಡಿನ ಇಬ್ಬರು ನಾಪತ್ತೆ
ಮೂಗು ಹೇಳುತ್ತೆ ನಿಮ್ಮ ವ್ಯಕ್ತಿತ್ವ! ಸಾಮುದ್ರಿಕ ಶಾಸ್ತ್ರ ಹೇಳೋದೇನು ನೋಡಿ
ಮೂಗು ಹೇಳುತ್ತೆ ನಿಮ್ಮ ವ್ಯಕ್ತಿತ್ವ! ಸಾಮುದ್ರಿಕ ಶಾಸ್ತ್ರ ಹೇಳೋದೇನು ನೋಡಿ
ಈ ರಾಶಿಯವರಿಗೆ ಮಧ್ಯಾಹ್ನ 12:20 ರಿಂದ ಶುಭ ಕಾಲ ಆರಂಭ
ಈ ರಾಶಿಯವರಿಗೆ ಮಧ್ಯಾಹ್ನ 12:20 ರಿಂದ ಶುಭ ಕಾಲ ಆರಂಭ
ಪ್ರಿಯ ಮಿತ್ರ ನರೇಂದ್ರ; ಹಿಂದಿಯಲ್ಲೇ ಮೋದಿಗೆ ವಿದಾಯ ಹೇಳಿದ ಮ್ಯಾಕ್ರನ್
ಪ್ರಿಯ ಮಿತ್ರ ನರೇಂದ್ರ; ಹಿಂದಿಯಲ್ಲೇ ಮೋದಿಗೆ ವಿದಾಯ ಹೇಳಿದ ಮ್ಯಾಕ್ರನ್
ಬಿಜೆಪಿ ಶಾಸಕರೇ ಅವರ ವಿರುದ್ಧ ಇದ್ದಾರೆ ಎಂದ ಸುರ್ಜೇವಾಲಾ
ಬಿಜೆಪಿ ಶಾಸಕರೇ ಅವರ ವಿರುದ್ಧ ಇದ್ದಾರೆ ಎಂದ ಸುರ್ಜೇವಾಲಾ
ಜೈಲಲ್ಲಿ ಪವಿತ್ರಾ ಗೌಡಗೆ ಕೆಲಸ ಮಾಡಿಕೊಡಲು ಆಳುಗಳು ಇದ್ದಾರೆ: ಸಂಧ್ಯಾ ಆರೋಪ
ಜೈಲಲ್ಲಿ ಪವಿತ್ರಾ ಗೌಡಗೆ ಕೆಲಸ ಮಾಡಿಕೊಡಲು ಆಳುಗಳು ಇದ್ದಾರೆ: ಸಂಧ್ಯಾ ಆರೋಪ
ವಡೋದರಾದಲ್ಲಿ 4 ಕೋಟಿಗೂ ಅಧಿಕ ಮೌಲ್ಯದ ಅಕ್ರಮ ಆಲ್ಕೋಹಾಲ್ ಬಾಟಲಿಗಳ ಧ್ವಂಸ
ವಡೋದರಾದಲ್ಲಿ 4 ಕೋಟಿಗೂ ಅಧಿಕ ಮೌಲ್ಯದ ಅಕ್ರಮ ಆಲ್ಕೋಹಾಲ್ ಬಾಟಲಿಗಳ ಧ್ವಂಸ
ಪರಿಷತ್‌ ಚುನಾವಣೆ: ಗೆಲುವು ಬೆನ್ನಲ್ಲೇ ತಿಪ್ಪಣ್ಣಪ್ಪ ಕಮಕನೂರು ಭಾವುಕ
ಪರಿಷತ್‌ ಚುನಾವಣೆ: ಗೆಲುವು ಬೆನ್ನಲ್ಲೇ ತಿಪ್ಪಣ್ಣಪ್ಪ ಕಮಕನೂರು ಭಾವುಕ