AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾಸನ ಡಿಸಿ, ಸಚಿವ ಶಿವಲಿಂಗೇಗೌಡ ವಿರುದ್ಧ ಲಂಚದ ಆರೋಪ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಕೇಂದ್ರ ಸಚಿವ ಕುಮಾರಸ್ವಾಮಿ

ಹಾಸನ ಡಿಸಿ ಹಾಗೂ ಸಚಿವ ಕೆ.ಎಂ. ಶಿವಲಿಂಗೇಗೌಡ ವಿರುದ್ಧ ಭ್ರಷ್ಟಾಚಾರದ ಗಂಭೀರ ಆರೋಪ ಮಾಡಿರುವ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಡಿಸಿ ಪಿಎ ಅವರದ್ದು ಎನ್ನಲಾದ 70 ಲಕ್ಷಕ್ಕೂ ಅಧಿಕ ಲಂಚದ ವಾಟ್ಸಾಪ್ ಚಾಟ್‌ಗಳನ್ನು ಸುದ್ದಿಗೋಷ್ಠಿಯಲ್ಲಿ ಬಹಿರಂಗಪಡಿಸಿದ್ದಾರೆ. ಈ ಎಲ್ಲ ದಾಖಲೆಗಳನ್ನು ತನಗೆ ಯಾರೋ ಒಬ್ಬರು ಕೊಟ್ಟು ಹೋಗಿದ್ದಾರೆ ಎಂದು ತಿಳಿಸಿದ ಅವರು, ಈ ರೀತಿ ಪ್ರತಿ ಜಿಲ್ಲೆಗಳಲ್ಲಿಯೂ ನಡೆಯುತ್ತಿದೆ. ಈ ಚಾಟ್​​ಗಳ ಬಗ್ಗೆ ಡಿಜಿ ಮತ್ತು ಐಜಿಪಿ ಡಾ.ಎಂ.ಎ.ಸಲೀಂ ಅವರು ತನಿಖೆ ಮಾಡಿಸ್ತಾರಾ? ಎಂದು ಪ್ರಶ್ನಿಸಿದ್ದಾರೆ.

ಹಾಸನ ಡಿಸಿ, ಸಚಿವ ಶಿವಲಿಂಗೇಗೌಡ ವಿರುದ್ಧ ಲಂಚದ ಆರೋಪ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಕೇಂದ್ರ ಸಚಿವ ಕುಮಾರಸ್ವಾಮಿ
ಹಾಸನ ಡಿಸಿ, ಸಚಿವ ಶಿವಲಿಂಗೇಗೌಡ ವಿರುದ್ಧ ಲಂಚದ ಆರೋಪ
ಮಂಜುನಾಥ ಕೆಬಿ
| Edited By: |

Updated on:Nov 08, 2026 | 12:41 PM

Share

ಹಾಸನ, ನವೆಂಬರ್​​ 08: ಹಾಸನ ಡಿಸಿ ಮತ್ತು ಸಚಿವ ಶಿವಲಿಂಗೇಗೌಡ ವಿರುದ್ಧ ಕೇಂದ್ರ ಸಚಿವ ಹೆಚ್​.ಡಿ.ಕುಮಾರಸ್ವಾಮಿ ಲಂಚದ ಆರೋಪ ಮಾಡಿದ್ದಾರೆ. ಹಾಸನ ಡಿಸಿ ಪಿಎ ಶಶಿಕಿರಣ್ ಅವರದ್ದು ಎನ್ನಲಾದ ವಾಟ್ಸಾಪ್ ಚಾಟ್ ಪ್ರಿಂಟ್​​ನ ಕುಮಾರಸ್ವಾಮಿ ಓದಿ ಹೇಳಿದ್ದು,  ಇದು ಒಂದು ಜಿಲ್ಲೆ ಅಲ್ಲ. ಎಲ್ಲಾ ಕಡೆ ಇದೇ ವಾತಾವರಣ ಇದೆ.  ಸಿಎಂ 10 ರೂ. ಲಂಚ ಕೇಳಿದರೂ ಫೋನ್‌ ಕರೆ ಮಾಡಿ ಅಂತಾರೆ. ಆದ್ರೆ ಇಲ್ಲಿನ ಸಚಿವರು ಗೌರವಯುತವಾಗಿ ಕೊಡಿ ಎಂದಿದ್ದರು ಎಂದವರು ವಾಗ್ದಾಳಿ ನಡೆಸಿದ್ದಾರೆ.

ಡಿಸಿ-ಸಚಿವರ ಮೇಲಿನ ಆರೋಪವೇನು?

ಡಿಸಿ ಅವರ ಪಿಎ ಶಶಿಕಿರಣ್​​ ಅವರ ವಾಟ್ಯಾಪ್​​ ಚಾಟ್​​ ಪ್ರಕಾರ, ಮೂರು ಕ್ರಷರ್​​ ಫೈಲ್​​ ಬಗ್ಗೆ ಚರ್ಚೆ ನಡೆದಿದೆ. ಕಳೆದ ಮೂರು ವರ್ಷದಿಂದ ನಿಮ್‌ ಹತ್ತಿರ ಎಷ್ಟು ಕೆಲಸ ಮಾಡಿಸಿದ್ದೇನೆ. ಕೇಳಿದ ಹಾಗೆ ಹಣ ಕೊಟ್ಟಿದ್ದೀನಿ, ಈಗ ಇಷ್ಟೊಂದು ಹಣ ಕೇಳ್ತಿದ್ದೀರಿ ಎಂದು ಇನ್ನೊಂದು ಕಡೆಯಿಂದ ಮೆಸೇಜ್​​ ಬಂದಿದೆ. ಅದಕ್ಕೆ ಈ ಕಡೆಯಿಂದ, ನೀವು ಕೊಡವಷ್ಟು ದುಡ್ಢನ್ನು ನಾವು ಡಿಸಿಯವರಿಗೆ ಕೊಡಬೇಕು. ಮಿಕ್ಕಿದ ಸಣ್ಣ ಹಣದಲ್ಲಿ ನಾನು ನನ್ನ ಸೆಕ್ಷನ್​ಗೆ ಹಂಚಬೇಕು. ಎಲ್ಲರಿಗೂ ಕೊಟ್ಟು ಮಿಕ್ಕೋದು ಮೂರು ನಾಮ ಮಾತ್ರ ಎಂದಿದ್ದಾರೆ. ಏಪ್ರಿಲ್​​ ಅಲ್ಲಿ ಒಂದು ಕೆಲಸಕ್ಕೆ ಹಠ ಹಿಡಿದು 15 ಲಕ್ಷ ಇಸ್ಕೊಂಡ್ರು. ಕೇಳಿದ್ರೆ ಡಿಸಿ ಮೇಡಂ ಒಂದು ರೂಪಾಯಿ ಕಡಿಮೆ ಆದರೂ ಆಗಲ್ಲ ಅಂತಾರೆ. ಇನ್ನೇನು ಡಿಸಿ ಮೇಡಂ ತಾನು ಇಸ್ಕೋತೀನಿ ಎಂದು ಪ್ರೆಸ್​​ಮೀಟ್​​ ಮಾಡಿ ಹೇಳ್ತಾರಾ? ಹಿಂದೆ ಇದ್ದ ಸತ್ಯಭಾಮ ಅವರೇ ಪರವಾಗಿಲ್ಲ. ಸ್ವಲ್ಪ ಮಾತ್ರ ಕೆಲಸ ಹೇಳೋರು. ದುಡ್ಡು ಅಷ್ಟೇ ಕಡಿಮೆ. ಈ ಡಿಸಿ ಬಂದಮೇಲೆ ನಮಗೂ ಖರ್ಚು ಮಾಡಿ ಸಾಕಾಗಿದೆ ಎಂದು ಹೇಳಿದ್ದು ಕೂಡ ಚಾಟ್​​ಗಳಲ್ಲಿವೆ. ಆಗ ಇನ್ನೊಂದು ಕಡೆಯವರು, ಅವೆಲ್ಲ ಬಿಡಿ ಸರ್​​. ಆ ಮೂರು ಫೈಲ್​ದು ಒಂದು ಫೈನಲ್​​ ಅಮೌಂಟ್​​ ಹೇಳಿ ಎಂದಿದ್ದಾರೆ. ಅದಕ್ಕೆ ಹೇಳಿದ್ನಲ್ಲ ಹೋದ ವಾರವೇ, ಒಟ್ಟು 60 ಲಕ್ಷ ಕೊಡೋದಿದ್ದರೆ ಮಾತಾಡಿ. ಇಲ್ಲಂದ್ರೆ ಹಿಂಸೆಕೊಡಬೇಡಿ ಎಂದು ಇವರು ಹೇಳಿದ್ದಾರೆ. ಸಚಿವರು, ಸಂದರ ಬಳಿ ಬೇಕಿದ್ರೆ ಹೇಳಿಸುತ್ತೀನಿ ಎಂದಿದ್ದಕ್ಕೆ, ಶಿವಲಿಂಗೇಗೌಡರು ಡಿಸಿ ಬದಲಾವಣೆ ಮಾಡಿಸ್ತೀನಿ ಅಂತಿದ್ದರು. ಕೊನೆಗೆ ಡಿಸಿ ಮೇಡಂ ಅರಸೀಕೆರೆ ತಹಶೀಲ್ದಾರ್​​ ಸಂತೋಷ್​​ ಕಡೆ ಮಾತಾಡಿಸಿ 75 ಲಕ್ಷ ಕೊಟ್ಟು ಸುಮ್ಮನಿರಿಸಿದ್ದು. ಆ ಹಣವನ್ನು ನಾನು ಎಲ್ಲೆಲ್ಲೋ ಹೊಂದಿಸಿ ಕೊಟ್ಟುಬಂದೆ ಎಂದು ಹೇಳಿರುವುದು ಇದರಲ್ಲಿವೆ ಎಂದು ಕುಮಾರಸ್ವಾಮಿ ಓದಿ ಹೇಳಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ಪದಾಧಿಕಾರಿಗಳಿಗೆ ಸಚಿವ ಶಿವಲಿಂಗೇಗೌಡ ಭರ್ಜರಿ ಗಿಫ್ಟ್

ಈ ಎಲ್ಲ ದಾಖಲೆಗಳನ್ನು ತನಗೆ ಯಾರೋ ಒಬ್ಬರು ಕೊಟ್ಟು ಹೋಗಿದ್ದಾರೆ ಎಂದು ತಿಳಿಸಿದ ಕುಮಾರಸ್ವಾಮಿ, ಈ ರೀತಿ ಪ್ರತಿ ಜಿಲ್ಲೆಗಳಲ್ಲಿಯೂ ನಡೆಯುತ್ತಿದೆ. ಈ ಚಾಟ್​​ಗಳ ಬಗ್ಗೆ ಡಿಜಿ ಮತ್ತು ಐಜಿಪಿ ಡಾ.ಎಂ.ಎ.ಸಲೀಂ ಅವರು ತನಿಖೆ ಮಾಡಿಸ್ತಾರಾ? ಯಾರು ಈ ಮಧ್ಯವರ್ತಿಗಳು? ಯಾರ್ಯಾರಿಗೆ ದುಡ್ಡು ಹೋಗ್ತಿದೆ? ಹಾಸನಕ್ಕೆ ಬಂದ ಸಿಎಂ ಈ ಬಗ್ಗೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್​​ ಈ ಬಗ್ಗೆ ಕಡಿವಾಣ ಹಾಕ್ತಾರೋ ಇಲ್ಲವೋ ಎಂದು ಕೇಳಬೇಕಿದೆ. ಇಂತಹ ವಿಚಾರವನ್ನು ಮಾತನಾಡಿ ಮಾತನಾಡಿ ಬೇಸರ ಆಗಿದೆ. ಯಾರೂ ಅನ್ಯತಾ ಭಾವಿಸಬೇಡಿ. ಸರ್ಕಾರದಲ್ಲಿ ಏನು ನಡೆಯುತ್ತಿದೆ ಅದನ್ನು ಜನರ ಮುಂದೆ ಇಟ್ಟಿದ್ದೇನೆ ಎಂದವರು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 12:28 pm, Sun, 8 November 26

Follow Us
ಮಂಜುನಾಥ ಕೆಬಿ
ಮಂಜುನಾಥ ಕೆಬಿ

ಮಂಜುನಾಥ ಕೆಬಿ ಪತ್ರಿಕೋದ್ಯಮದಲ್ಲಿ ಕಳೆದ 17 ವರ್ಷಗಳಿಂದ ಸೇವೆ ಮಾಡುತ್ತಿದ್ದೇನೆ. ಕರುನಾಡಿನ ಹೆಮ್ಮೆಯ ಸುದ್ದಿ ವಾಹಿನಿ ಟಿವಿ9 ಕನ್ನಡ ಜೊತೆಗೆ 15ನೇ ವರ್ಷದ ಪಯಣ ನನ್ನದು. ಓದಿದ್ದು, ಮೈಸೂರು ವಿವಿಯಲ್ಲಿ ಕಾನೂನು ಪದವಿ, ಎರಡು ವರ್ಷ ವಕೀಲ ವೃತ್ತಿ ಬಳಿಕ ಮಾಧ್ಯಮ ಕ್ಷೇತ್ರಕ್ಕೆ ಆಗಮಿಸಿ ಟಿವಿ9 ವಾಹಿನಿ ಮೂಲಕ ಸಮಸ್ಯೆಗೆ ಧ್ವನಿಯಾಗಿ ಕಾಯಕ. ಕೊಡಗಿನಲ್ಲಿ ಐದುವರೆ ವರ್ಷ ವರದಿಗಾರನಾಗಿ ಕರ್ತವ್ಯ ನಿರ್ವಹಿಸಿದ್ದು, ಇದೀಗ ಹಾಸನದ ಹಿರಿಯ ವರದಿಗಾರನಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದೇನೆ.

Read More
ಬೆಂಗಳೂರಲ್ಲಿ ವಿಮಾನ ಕ್ಯಾನ್ಸಲ್‌ಗೆ ಪ್ರಯಾಣಿಕರು ಗರಂ, ಸಿಬ್ಬಂದಿಗೆ ತರಾಟೆ
ಬೆಂಗಳೂರಲ್ಲಿ ವಿಮಾನ ಕ್ಯಾನ್ಸಲ್‌ಗೆ ಪ್ರಯಾಣಿಕರು ಗರಂ, ಸಿಬ್ಬಂದಿಗೆ ತರಾಟೆ
ಮಂಜನ ಮತ್ತೆ ಬಿಗ್​​ಬಾಸ್​ಗೆ ಸ್ವಾಗತಿಸಿದ ಕಿಚ್ಚ ಸುದೀಪ್: ವಿಡಿಯೋ ನೋಡಿ
ಮಂಜನ ಮತ್ತೆ ಬಿಗ್​​ಬಾಸ್​ಗೆ ಸ್ವಾಗತಿಸಿದ ಕಿಚ್ಚ ಸುದೀಪ್: ವಿಡಿಯೋ ನೋಡಿ
ಕಾರ್ತಿಕ ಮಾಸದ ಆರಂಭದಲ್ಲೇ ಈ 4 ರಾಶಿಗಳಿಗೆ ರಾಜಯೋಗ! ನಿಮ್ಮ ರಾಶಿ ಹೇಗಿದೆ?
ಕಾರ್ತಿಕ ಮಾಸದ ಆರಂಭದಲ್ಲೇ ಈ 4 ರಾಶಿಗಳಿಗೆ ರಾಜಯೋಗ! ನಿಮ್ಮ ರಾಶಿ ಹೇಗಿದೆ?
ದೀಪಾವಳಿ ಹಬ್ಬದ ಖರೀದಿ ಭರಾಟೆ:  ಕೆ.ಆರ್.ಮಾರ್ಕೆಟ್‌ನಲ್ಲಿ ಜನಸಾಗರ
ದೀಪಾವಳಿ ಹಬ್ಬದ ಖರೀದಿ ಭರಾಟೆ:  ಕೆ.ಆರ್.ಮಾರ್ಕೆಟ್‌ನಲ್ಲಿ ಜನಸಾಗರ
ಇಂದು ಈ ರಾಶಿಯವರು ಸಂಗಾತಿಯ ಸಲಹೆಯನ್ನು ಪಡೆದು ನಿರ್ಧಾರ ತೆಗೆದುಕೊಳ್ಳಿ
ಇಂದು ಈ ರಾಶಿಯವರು ಸಂಗಾತಿಯ ಸಲಹೆಯನ್ನು ಪಡೆದು ನಿರ್ಧಾರ ತೆಗೆದುಕೊಳ್ಳಿ
ದೇವಿರಮ್ಮ ಬೆಟ್ಟದಿಂದ ಜಾರಿಬಿದ್ದ ಯುವಕ: ಗಂಭೀರ ಗಾಯ
ದೇವಿರಮ್ಮ ಬೆಟ್ಟದಿಂದ ಜಾರಿಬಿದ್ದ ಯುವಕ: ಗಂಭೀರ ಗಾಯ
ಕರ್ನಾಟಕದ ಡಿಪಿಆರ್‌ ತಿರಸ್ಕರಿಸಲು ಪ್ರಧಾನಿಗೆ ತಮಿಳುನಾಡು ಸಿಎಂ ಪತ್ರ
ಕರ್ನಾಟಕದ ಡಿಪಿಆರ್‌ ತಿರಸ್ಕರಿಸಲು ಪ್ರಧಾನಿಗೆ ತಮಿಳುನಾಡು ಸಿಎಂ ಪತ್ರ
ಪೋಲೆಂಡ್‌ನ ಕ್ರಾಕೋವ್‌ನಲ್ಲಿ ಗುಂಡಿನ ದಾಳಿ; 5 ಜನ ಸಾವು
ಪೋಲೆಂಡ್‌ನ ಕ್ರಾಕೋವ್‌ನಲ್ಲಿ ಗುಂಡಿನ ದಾಳಿ; 5 ಜನ ಸಾವು
ಸ್ಟಿಂಗ್​​​ನಿಂದ ಕರ್ನಾಟಕ ತಲೆ ತಗ್ಗಿಸುವಂತಾಗಿದೆ ಎಂದ ಡಾ. ಕೆ. ಸುಧಾಕರ್
ಸ್ಟಿಂಗ್​​​ನಿಂದ ಕರ್ನಾಟಕ ತಲೆ ತಗ್ಗಿಸುವಂತಾಗಿದೆ ಎಂದ ಡಾ. ಕೆ. ಸುಧಾಕರ್
ವೈಷ್ಣವಿ ಸಾವಿಗೆ ಕಾರಣವಾಯ್ತಾ ಅರಮನೆ ರಸ್ತೆಯ ಪ್ರೀ-ವೆಡ್ಡಿಂಗ್ ಶೂಟಿಂಗ್?
ವೈಷ್ಣವಿ ಸಾವಿಗೆ ಕಾರಣವಾಯ್ತಾ ಅರಮನೆ ರಸ್ತೆಯ ಪ್ರೀ-ವೆಡ್ಡಿಂಗ್ ಶೂಟಿಂಗ್?