AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

52 ವರ್ಷಗಳಿಂದ ಸಲ್ಮಾನ್ ಖಾನ್ ಕೇವಲ 1 ಬಿಎಚ್​​ಕೆ ಮನೆಯಲ್ಲಿ ವಾಸಿಸುತ್ತಿರುವುದೇಕೆ ಗೊತ್ತಾ?

ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಕಳೆದ 52 ವರ್ಷಗಳಿಂದ ವಾಸವಿರುವ ಮುಂಬೈನ ಬಾಂದ್ರಾದ ಗ್ಯಾಲಕ್ಸಿ ಅಪಾರ್ಟ್‌ಮೆಂಟ್ ಬಿಡಲಿದ್ದಾರೆ ಎಂಬ ವರದಿಗಳು ಭಾರಿ ಕುತೂಹಲ ಮೂಡಿಸಿವೆ. ಇಂದು ಸಾವಿರಾರು ಕೋಟಿ ಒಡೆಯರಾದರೂ ಸಲ್ಮಾನ್ ಖಾನ್ ಅವರು ಕೇವಲ 1 BHK ಫ್ಲಾಟ್‌ನಲ್ಲೇ ಉಳಿದುಕೊಂಡಿರುವುದರ ಹಿಂದಿನ ರಹಸ್ಯ ಇಲ್ಲಿದೆ. ಅವರ ತಂದೆ ಸಲೀಂ ಖಾನ್ ಇಂದೋರ್‌ನಿಂದ ಬಂದು ತಿಂಗಳಿಗೆ 55 ರೂಪಾಯಿ ಬಾಡಿಗೆ ಕೋಣೆಯಿಂದ ಈ ಐತಿಹಾಸಿಕ ಮನೆಯನ್ನು ಖರೀದಿಸುವವರೆಗಿನ ಸಂಪೂರ್ಣ ಹೋರಾಟದ ಕಥೆ ಇಲ್ಲಿದೆ.

52 ವರ್ಷಗಳಿಂದ ಸಲ್ಮಾನ್ ಖಾನ್ ಕೇವಲ 1 ಬಿಎಚ್​​ಕೆ ಮನೆಯಲ್ಲಿ ವಾಸಿಸುತ್ತಿರುವುದೇಕೆ ಗೊತ್ತಾ?
ಸಲ್ಮಾನ್ ಖಾನ್
ರಾಜೇಶ್ ದುಗ್ಗುಮನೆ
|

Updated on: Jul 02, 2026 | 9:19 AM

Share

ಮುಖ್ಯಾಂಶಗಳು

  • ಕೋಟಿ ಕೋಟಿ ಆಸ್ತಿ ಇದ್ದರೂ ಸಾಧಾರಣ 1 BHK ಫ್ಲಾಟ್ ಅಲ್ಲೇ ವಾಸ
  • ಗ್ಯಾಲಕ್ಸಿ ಅಪಾರ್ಟ್‌ಮೆಂಟ್ ಬಿಟ್ಟು ಕದಲದ ಸಲ್ಮಾನ್ ಖಾನ್
  • ಅಂದು ಕೇವಲ ಒಂದೂವರೆ ಲಕ್ಷ, ಇಂದು 100 ಕೋಟಿಗೂ ಅಧಿಕ ಬೆಲೆ

ಬಾಂದ್ರಾದಲ್ಲಿರುವ ಗ್ಯಾಲಕ್ಸಿ ಅಪಾರ್ಟ್‌ಮೆಂಟ್ ಕೇವಲ ಒಂದು ಕಟ್ಟಡವಲ್ಲ. ಇದು ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಸ್ಟಾರ್‌ಡಮ್‌ಗೆ ಸಾಕ್ಷಿಯಾದ ಐತಿಹಾಸಿಕ ಸ್ಥಳ. ಸಲ್ಮಾನ್ ಖಾನ್ ಇಲ್ಲಿ ಕಳೆದ 52 ವರ್ಷಗಳಿಂದ ವಾಸವಾಗಿದ್ದಾರೆ. ಈಗ ಅವರು ಈ ಮನೆಯನ್ನು ಬಿಟ್ಟು ಬೇರೆಡೆ ಹೋಗಲಿದ್ದಾರೆ ಎಂಬ ವರದಿಗಳು ಕೇಳಿಬರುತ್ತಿವೆ. ಈ ಅಪಾರ್ಟ್‌ಮೆಂಟ್ ಸಲ್ಮಾನ್ ತಂದೆ ಹಾಗೂ ಖ್ಯಾತ ಲೇಖಕ ಸಲೀಂ ಖಾನ್ ಅವರ ಸುದೀರ್ಘ ಹೋರಾಟದ ಸಂಕೇತವಾಗಿದೆ.

ಸಲೀಂ ಖಾನ್ ಅವರು ಇಂದೋರ್‌ನಿಂದ ಮುಂಬೈಗೆ ದೊಡ್ಡ ಕನಸು ಹೊತ್ತು ಬಂದಿದ್ದರು. ಆರಂಭದ ದಿನಗಳಲ್ಲಿ ಅವರು ಪ್ರೇಮ ಪತ್ರಗಳನ್ನು ಬರೆಯುವ ಕೆಲಸ ಮಾಡುತ್ತಿದ್ದರು. ಇಂದೋರ್‌ನಲ್ಲಿ ನಡೆದ ಮದುವೆಯೊಂದರಲ್ಲಿ ಮುಂಬೈನ ನಿರ್ಮಾಪಕ ಕೆ. ಅಮರನಾಥ್ ಅವರು ಸಲೀಂ ಅವರನ್ನು ಗುರುತಿಸಿದರು. ಅವರು ಸಲೀಂ ಅವರಿಗೆ ಸಿನಿಮಾದಲ್ಲಿ ನಟಿಸುವಂತೆ ಆಫರ್ ನೀಡಿದರು. ನಂತರ ಸಲೀಂ ಖಾನ್ ಮುಂಬೈಗೆ ಬಂದು ‘ಬರಾತ್’ (1960) ಸಿನಿಮಾದಲ್ಲಿ ಸಣ್ಣ ಪಾತ್ರದಲ್ಲಿ ನಟಿಸಿದರು.

ತಿಂಗಳಿಗೆ 55 ರೂಪಾಯಿ

ಮುಂಬೈನಲ್ಲಿ ಸಲೀಂ ಖಾನ್ ಅವರ ಆರಂಭದ ದಿನಗಳು ಸುಲಭವಾಗಿರಲಿಲ್ಲ. ಅವರು ಮರಿನಾ ಗೆಸ್ಟ್ ಹೌಸ್‌ನಲ್ಲಿ ವಾಸವಿದ್ದರು. ತಿಂಗಳಿಗೆ 55 ರೂಪಾಯಿ ಬಾಡಿಗೆ ಇತ್ತು. ಅಲ್ಲಿ ಒಂದು ಕೋಣೆಯಲ್ಲಿ ಇಬ್ಬರು ಇರಬೇಕಾಗಿತ್ತು. ಜೊತೆಯಲ್ಲಿದ್ದ ವ್ಯಕ್ತಿ ಜೋರಾಗಿ ಗೊರಕೆ ಹೊಡೆಯುತ್ತಿದ್ದ ಕಾರಣ ಸಲೀಂ ಅವರಿಗೆ ನಿದ್ದೆ ಬರುತ್ತಿರಲಿಲ್ಲ. ಸ್ವಂತವಾಗಿ ಒಂದು ಇಡೀ ಕೋಣೆಯನ್ನು ಬಾಡಿಗೆಗೆ ಪಡೆಯುವುದೇ ಅವರ ಮೊದಲ ಗುರಿಯಾಗಿತ್ತು. ಆದರೆ ಅದಕ್ಕಾಗಿ ಅವರು ತಮ್ಮ ಕುಟುಂಬದ ಬಳಿ ಹಣ ಕೇಳಲಿಲ್ಲ.

ಇದನ್ನೂ ಓದಿ: ಗ್ಯಾಲಕ್ಸಿ ಅಪಾರ್ಟ್‌ಮೆಂಟ್ ತೊರೆಯಲಿದ್ದಾರಾ ಸಲ್ಮಾನ್ ಖಾನ್? ಆರು ಅಂತಸ್ತಿನ ಹೊಸ ಮನೆ ನಿರ್ಮಾಣಕ್ಕೆ ಸಜ್ಜು

ಖ್ಯಾತ ಲೇಖಕನಾಗಿ ಗ್ಯಾಲಕ್ಸಿ ಫ್ಲಾಟ್ ಖರೀದಿ

ನಟನೆಯಲ್ಲಿ ಭವಿಷ್ಯವಿಲ್ಲ ಎಂದು ತಿಳಿದ ಮೇಲೆ ಸಲೀಂ ಖಾನ್ ಅವರು ಬರವಣಿಗೆಯತ್ತ ಮುಖ ಮಾಡಿದರು. ಜಾವೇದ್ ಅಖ್ತರ್ ಅವರೊಂದಿಗೆ ಜೊತೆಯಾಗಿ ಬರೆದ ‘ಜಂಜೀರ್’ (1973) ಸಿನಿಮಾ ಭಾರಿ ಯಶಸ್ಸು ಕಂಡಿತು. ಮುಂಬೈಗೆ ಬಂದು 14 ವರ್ಷಗಳ ಹೋರಾಟದ ನಂತರ ಅವರು ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನಲ್ಲಿ ಮೊದಲ ಫ್ಲಾಟ್ ಖರೀದಿಸಿದರು. ಆಗ ಆ ಫ್ಲಾಟ್‌ನ ಬೆಲೆ ಸುಮಾರು 50 ಸಾವಿರದಿಂದ 1.5 ಲಕ್ಷ ರೂಪಾಯಿ ಇರಬಹುದು ಎಂದು ಅಂದಾಜಿಸಲಾಗಿದೆ. ಇಂದು ಈ ಇಡೀ ಆಸ್ತಿಯ ಮೌಲ್ಯ 100 ಕೋಟಿ ರೂಪಾಯಿಗೂ ಅಧಿಕವಾಗಿದೆ.

ಸೂಪರ್‌ಸ್ಟಾರ್ ಆದರೂ ಸಲ್ಮಾನ್ ಖಾನ್ 1 BHK ಮನೆಯಲ್ಲೇ ಉಳಿದಿದ್ದೇಕೆ?

ಸಲ್ಮಾನ್ ಖಾನ್ ಅವರಿಗೆ ಎಂಟು ವರ್ಷ ವಯಸ್ಸಾಗಿದ್ದಾಗ ಅವರ ಕುಟುಂಬ ಈ ಮನೆಗೆ ಬಂದಿತ್ತು. ಸಲ್ಮಾನ್ ಖಾನ್ ಅವರು ಇಂದು ಸಾವಿರಾರು ಕೋಟಿ ರೂಪಾಯಿ ಒಡೆಯರಾಗಿದ್ದಾರೆ. ಆದರೂ ಅವರು ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನ ಮೊದಲ ಮಹಡಿಯಲ್ಲಿರುವ ಅತ್ಯಂತ ಸಾಧಾರಣವಾದ 1 BHK ಮನೆಯಲ್ಲಿಯೇ ವಾಸಿಸುತ್ತಿದ್ದಾರೆ. ಅವರ ತಂದೆ-ತಾಯಿ ಮೇಲಿನ ಮಹಡಿಯಲ್ಲಿ ವಾಸವಿದ್ದಾರೆ. ದೇಶದ ಅತಿ ದೊಡ್ಡ ಸೂಪರ್‌ಸ್ಟಾರ್ ಆದ ಮೇಲೆಯೂ ಅವರು ಈ ಸಣ್ಣ ಮನೆ ಬಿಟ್ಟು ಕದಲಿಲ್ಲ. ಸದ್ಯ ಈ ಸಿಂಗಲ್ ಬೆಡ್‌ರೂಮ್ ಮನೆಯ ಮೌಲ್ಯವೇ ಸುಮಾರು 16 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಸಲ್ಮಾನ್ ಖಾನ್​​ಗೆ ಈ ಮನೆಯ ಮೇಲೆ ವಿಶೇಷ ಪ್ರೀತಿ ಇದೆ. ಈ ಮನೆಯನ್ನು ಅದೃಷ್ಟ ಎಂದು ಕೂಡ ಪರಿಗಣಿಸುತ್ತಾರೆ. ಹೀಗಾಗಿ, ಈ ಮನೆ ಬಿಟ್ಟು ಅವರು ಕದಲಲಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
RSSಗೇ ಹೆದರಲಿಲ್ಲ, ನಿಮಗೆ ಹೆದರ್ತೀನಾ?: ಹೆಚ್​​ಡಿಕೆಗೆ ಪ್ರಿಯಾಂಕ್ ಕೌಂಟರ್​
RSSಗೇ ಹೆದರಲಿಲ್ಲ, ನಿಮಗೆ ಹೆದರ್ತೀನಾ?: ಹೆಚ್​​ಡಿಕೆಗೆ ಪ್ರಿಯಾಂಕ್ ಕೌಂಟರ್​
ದಸರಾ: ಪ್ರಶಾಂತ ಆನೆಯ ಆಯ್ಕೆ ಎಷ್ಟು ಸವಾಲಾಗಿತ್ತು? ವಿವರಿಸಿದ ಸಿಸಿಎಫ್
ದಸರಾ: ಪ್ರಶಾಂತ ಆನೆಯ ಆಯ್ಕೆ ಎಷ್ಟು ಸವಾಲಾಗಿತ್ತು? ವಿವರಿಸಿದ ಸಿಸಿಎಫ್
ಹಿಂದಿ ಸರಿಗಮಪದಲ್ಲಿ ಮಿಂಚು ಹರಿಸಿದ ಕನ್ನಡತಿ ಶಿವಾನಿ ಸ್ವಾಮಿ
ಹಿಂದಿ ಸರಿಗಮಪದಲ್ಲಿ ಮಿಂಚು ಹರಿಸಿದ ಕನ್ನಡತಿ ಶಿವಾನಿ ಸ್ವಾಮಿ
ಖಾಸಗಿ ಬಸ್​​ ಅಪಘಾತ: 15 ಮಂದಿಗೆ ಗಂಭೀರ ಗಾಯ
ಖಾಸಗಿ ಬಸ್​​ ಅಪಘಾತ: 15 ಮಂದಿಗೆ ಗಂಭೀರ ಗಾಯ
₹90 ಲಕ್ಷ ಹೂವಿನ ಅಲಂಕಾರ: ಹಾಸನಾಂಬೆ ಜಾತ್ರೆ ಖರ್ಚು ಕೇಳಿ ರೇವಣ್ಣ ಶಾಕ್!
₹90 ಲಕ್ಷ ಹೂವಿನ ಅಲಂಕಾರ: ಹಾಸನಾಂಬೆ ಜಾತ್ರೆ ಖರ್ಚು ಕೇಳಿ ರೇವಣ್ಣ ಶಾಕ್!
ಅಂಕಿತಾ ಭಂಡಾರಿ ಕೊಲೆ, ಪೋಷಕರ ಪ್ರತಿಭಟನೆಗೆ ರಾಹುಲ್, ಪ್ರಿಯಾಂಕಾ ಸಾಥ್
ಅಂಕಿತಾ ಭಂಡಾರಿ ಕೊಲೆ, ಪೋಷಕರ ಪ್ರತಿಭಟನೆಗೆ ರಾಹುಲ್, ಪ್ರಿಯಾಂಕಾ ಸಾಥ್
ಒಳಗೊಳಗೆ ಮಸಲತ್ತು ಮಾಡಿದ ಗಾನವಿ; ತಮ್ಮ ತಂಡಕ್ಕೆ ಮೋಸ?
ಒಳಗೊಳಗೆ ಮಸಲತ್ತು ಮಾಡಿದ ಗಾನವಿ; ತಮ್ಮ ತಂಡಕ್ಕೆ ಮೋಸ?
ಕೇಂದ್ರ ಸರ್ಕಾರದ ನಿರ್ಧಾರ ಸ್ವಾಗತಿಸಿದ ಕಬ್ಬು ಬೆಳೆಗಾರರು
ಕೇಂದ್ರ ಸರ್ಕಾರದ ನಿರ್ಧಾರ ಸ್ವಾಗತಿಸಿದ ಕಬ್ಬು ಬೆಳೆಗಾರರು
ಅಗ್ನಿ ಪರೀಕ್ಷೆಗೆ 18 ಕಿಲೋಮೀಟರ್ ನಡೆದುಕೊಂಡು ಹೋಗಿದ್ದೆ: ಕಷ್ಟ ನೆನೆದ ಮಂಜ
ಅಗ್ನಿ ಪರೀಕ್ಷೆಗೆ 18 ಕಿಲೋಮೀಟರ್ ನಡೆದುಕೊಂಡು ಹೋಗಿದ್ದೆ: ಕಷ್ಟ ನೆನೆದ ಮಂಜ
ಮಂಡ್ಯ ಎಳನೀರು ವ್ಯಾಪಾರಿಗಳಿಗೆ ಮಹಾ ದೋಖಾ: 25 ಲಕ್ಷಕ್ಕೂ ಹೆಚ್ಚು ಹಣ ವಂಚನೆ
ಮಂಡ್ಯ ಎಳನೀರು ವ್ಯಾಪಾರಿಗಳಿಗೆ ಮಹಾ ದೋಖಾ: 25 ಲಕ್ಷಕ್ಕೂ ಹೆಚ್ಚು ಹಣ ವಂಚನೆ