‘ಪೂರ್ತಿ ಕಥೆ ಗೊತ್ತಿಲ್ಲ ಅಂದ್ರೆ ಬಾಯಿ ಮುಚ್ಕೊಂಡಿರಿ’; ವರ್ಷದ ಬಳಿಕ ಮೌನ ಮುರಿದ ಶಿಲ್ಪಾ ಶೆಟ್ಟಿ ಪತಿ

| Updated By: ರಾಜೇಶ್ ದುಗ್ಗುಮನೆ

Updated on: Sep 21, 2022 | 4:19 PM

ಶಿಲ್ಪಾ ಶೆಟ್ಟಿ ಬಾಲಿವುಡ್​ನಲ್ಲಿ ಈ ಮೊದಲಿನಿಂದಲೂ ಗುರುತಿಸಿಕೊಂಡಿದ್ದಾರೆ. ಅವರಿಗೆ ಸಮಾಜದಲ್ಲಿ ಸಾಕಷ್ಟು ಗೌರವ ಇದೆ. ಆದರೆ, ರಾಜ್​​ ಕುಂದ್ರಾ ಅರೆಸ್ಟ್ ಆದ ನಂತರದಲ್ಲಿ ಅವರು ತಲೆತಗ್ಗಿಸಬೇಕಾದ ಪರಿಸ್ಥಿತಿ ಬಂತು.

‘ಪೂರ್ತಿ ಕಥೆ ಗೊತ್ತಿಲ್ಲ ಅಂದ್ರೆ ಬಾಯಿ ಮುಚ್ಕೊಂಡಿರಿ’; ವರ್ಷದ ಬಳಿಕ ಮೌನ ಮುರಿದ ಶಿಲ್ಪಾ ಶೆಟ್ಟಿ ಪತಿ
ರಾಜ್​ ಕುಂದ್ರಾ-ಶಿಲ್ಪಾ
Follow us on

ಶಿಲ್ಪಾ ಶೆಟ್ಟಿ (Shilpa Shetty) ಪತಿ ರಾಜ್​ ಕುಂದ್ರಾ ಅವರು ಅಶ್ಲೀಲ ಸಿನಿಮಾ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಜೈಲುವಾಸ ಅನುಭವಿಸಿದ್ದರು. ನಂತರ ಜಾಮೀನಿನ ಮೇಲೆ ಅವರನ್ನು ಬಿಡುಗಡೆ ಮಾಡಲಾಯಿತು. ಅವರು ಬಿಡುಗಡೆ ಹೊಂದಿ ಒಂದು ವರ್ಷ ಕಳೆದಿದೆ. ಈವರೆಗೆ ರಾಜ್​ ಕುಂದ್ರಾ (Raj Kundra) ಅವರು ಈ ಬಗ್ಗೆ ಮಾತನಾಡಿಲ್ಲ. ಸಾರ್ವಜನಿಕವಾಗಿ ಅವರು ಎಲ್ಲಿಯೂ ಮುಖ ತೋರಿಸಿಲ್ಲ.  ಈಗ ವರ್ಷದ ಬಳಿಕ ಅವರು ಮೌನ ಮುರಿದಿದ್ದಾರೆ. ‘ಅಸಲಿ ಕಥೆ ಗೊತ್ತಿಲ್ಲ ಎಂದರೆ ಬಾಯಿ ಮುಚ್ಕೊಂಡಿರಿ’ ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನು ಕೆಲವರು ಟ್ರೋಲ್ ಮಾಡಿದ್ದಾರೆ.

ಶಿಲ್ಪಾ ಶೆಟ್ಟಿ ಬಾಲಿವುಡ್​ನಲ್ಲಿ ಈ ಮೊದಲಿನಿಂದಲೂ ಗುರುತಿಸಿಕೊಂಡಿದ್ದಾರೆ. ಅವರಿಗೆ ಸಮಾಜದಲ್ಲಿ ಸಾಕಷ್ಟು ಗೌರವ ಇದೆ. ಆದರೆ, ರಾಜ್​​ ಕುಂದ್ರಾ ಅರೆಸ್ಟ್ ಆದ ನಂತರದಲ್ಲಿ ಅವರು ತಲೆತಗ್ಗಿಸಬೇಕಾದ ಪರಿಸ್ಥಿತಿ ಬಂತು. ತೀವ್ರ ಟೀಕೆಯನ್ನು ಅವರು ಅನುಭವಿಸಿದರು. ಕೆಲ ಸಮಯ ಸೋಶಿಯಲ್ ಮೀಡಿಯಾದಿಂದಲೂ ಶಿಲ್ಪಾ ಶೆಟ್ಟಿ ದೂರ ಉಳಿದರು. ಇಬ್ಬರೂ ವಿಚ್ಛೇದನ ಪಡೆಯಲಿದ್ದಾರೆ ಎಂಬ ಸುದ್ದಿ ಕೂಡ ಹರಿದಾಡಿತು. ಈಗ ಅವರ ಜೀವನ ಮೊದಲ ಸ್ಥಿತಿಗೆ ಮರಳಿದೆ. ಈ ಘಟನೆ ನಡೆದು ಒಂದು ವರ್ಷದ ಬಳಿಕ ರಾಜ್​ ಕುಂದ್ರಾ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ
Ganesh Chaturthi: ಮುಖ ಮುಚ್ಕೊಂಡು ಗಣೇಶನ ಹಬ್ಬ ಮಾಡುತ್ತಿರುವ ರಾಜ್​ ಕುಂದ್ರಾ; ಕುಂಟುತ್ತಿರುವ ಶಿಲ್ಪಾ ಶೆಟ್ಟಿ
Shilpa Shetty: ಶೂಟಿಂಗ್ ವೇಳೆ ಅವಘಡ; ಮುರಿಯಿತು ಶಿಲ್ಪಾ ಶೆಟ್ಟಿ ಕಾಲು
Shamita Shetty: ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿ ಬಾಳಲ್ಲಿ ಬ್ರೇಕಪ್​; ರಾಕೇಶ್​ ಬಾಪಟ್​ ಜತೆಗಿನ ಸಂಬಂಧ ಅಂತ್ಯ
Shamita Shetty: ಲವ್​ ಮಾಡಿದ್ದು ಸಾಕಾಯ್ತು, ಇನ್ಮುಂದೆ ಜಸ್ಟ್​ ಫ್ರೆಂಡ್ಸ್​; ರಾಕೇಶ್​ ಬಾಪಟ್​ ಜತೆ ಶಿಲ್ಪಾ ಶೆಟ್ಟಿ ತಂಗಿಯ ಬ್ರೇಕಪ್​

ಮುಖ ಮುಚ್ಚಿಕೊಂಡಿರುವ ಫೋಟೋವನ್ನು ರಾಜ್​ ಕುಂದ್ರಾ ಪೋಸ್ಟ್ ಮಾಡಿದ್ದಾರೆ. ಈ ಫೋಟೋಗೆ ‘ಅಸಲಿ ಕಥೆ ಗೊತ್ತಿಲ್ಲ ಎಂದರೆ ಬಾಯಿ ಮುಚ್ಕೊಂಡಿರಿ’ ಎಂದು ಬರೆಯಲಾಗಿದೆ. ‘ಆರ್ಥರ್​ ರಸ್ತೆಯ ಜೈಲಿನಿಂದ ಹೊರಬಿದ್ದು ಒಂದು ವರ್ಷ. ಕಾಲ ಬಂದಾಗ ಎಲ್ಲದಕ್ಕೂ ನ್ಯಾಯ ಸಿಗಲಿದೆ. ಶೀಘ್ರವೇ ಸತ್ಯ ಹೊರಬೀಳಲಿದೆ. ಒಳ್ಳೆಯದನ್ನು ಬಯಸಿದ ಎಲ್ಲರಿಗೂ ಧನ್ಯವಾದ. ಟ್ರೋಲ್ ಮಾಡಿದ ಎಲ್ಲರಿಗೂ ಧನ್ಯವಾದ. ಅವರು ನನ್ನನ್ನು ಮತ್ತಷ್ಟು ಗಟ್ಟಿ ಮಾಡಿದ್ದಾರೆ’ ಎಂದು ಬರೆದುಕೊಂಡಿದ್ದಾರೆ ರಾಜ್ ಕುಂದ್ರಾ.

ಇದನ್ನೂ ಓದಿ: ಶಿಲ್ಪಾ ಶೆಟ್ಟಿಗೆ ಕಾಡಿತ್ತು ಆ್ಯಂಟಿ ಫಾಸ್ಫೋಲಿಪಿಡ್​ ಸಿಂಡ್ರೋಮ್​; ಈ ಕಾಯಿಲೆಯ ಲಕ್ಷಣಗಳೇನು?

ಶಿಲ್ಪಾ ಶೆಟ್ಟಿ ಅವರು ಇತ್ತೀಚೆಗೆ ಗಣೇಶನ ಪೂಜೆ ಮಾಡಿದ್ದರು. ಈ ವೇಳೆ ರಾಜ್​ ಕುಂದ್ರಾ ಅವರು ಮುಖ ಮುಚ್ಚಿಕೊಂಡು ಬಂದಿದ್ದರು. ಕೆಲವರು ರಾಜ್​ ಕುಂದ್ರಾ ಅವರನ್ನು ಹೇಡಿ ಎಂದು ಕರೆದಿದ್ದರು. ಇನ್ನೂ ಅನೇಕರು ‘ತಪ್ಪು ಮಾಡಿಲ್ಲ ಎಂದರೆ ತಲೆ ಏಕೆ ತಗ್ಗಿಸುತ್ತೀರಿ’ ಎಂದು ಪ್ರಶ್ನೆ ಮಾಡಿದ್ದರು.