AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಡೆಗೂ ‘ಎಮರ್ಜೆನ್ಸಿ’ ಸಿನಿಮಾಗೆ ಬಿಡುಗಡೆ ದಿನಾಂಕ ನಿಗದಿ ಮಾಡಿದ ಕಂಗನಾ

ಎಲ್ಲವೂ ಪ್ಲ್ಯಾನ್ ಪ್ರಕಾರವೇ ನಡೆದಿದ್ದರೆ ಕಂಗನಾ ರಣಾವತ್ ನಟನೆಯ ‘ಎಮರ್ಜೆನ್ಸಿ’ ಸಿನಿಮಾ ಈಗಾಗಲೇ ಬಿಡುಗಡೆ ಆಗಿರಬೇಕಿತ್ತು. ಆದರೆ ವಿವಾದಗಳು ಸುತ್ತಿಕೊಂಡ ಕಾರಣದಿಂದ ಈ ಸಿನಿಮಾದ ಬಿಡುಗಡೆ ಮುಂದಕ್ಕೆ ಹೋಗಿತ್ತು. ಈಗ ಕಂಗನಾ ರಣಾವತ್ ಅವರು ಚಿತ್ರದ ರಿಲೀಸ್ ದಿನಾಂಕವನ್ನು ಅನೌನ್ಸ್ ಮಾಡಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

ಕಡೆಗೂ ‘ಎಮರ್ಜೆನ್ಸಿ’ ಸಿನಿಮಾಗೆ ಬಿಡುಗಡೆ ದಿನಾಂಕ ನಿಗದಿ ಮಾಡಿದ ಕಂಗನಾ
ಕಂಗನಾ ರಣಾವತ್
ಮದನ್​ ಕುಮಾರ್​
|

Updated on: Nov 18, 2024 | 8:14 PM

Share

ಬಾಲಿವುಡ್​ ನಟಿ ಕಂಗನಾ ರಣಾವತ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಎಮರ್ಜೆನ್ಸಿ’ ಬಗ್ಗೆ ಒಂದು ಬಿಗ್ ನ್ಯೂಸ್ ಹೊರಬಿದ್ದಿದೆ. ಈ ಸಿನಿಮಾಗೆ ಕಡೆಗೂ ರಿಲೀಸ್ ಡೇಟ್​ ಫಿಕ್ಸ್ ಆಗಿದೆ. ಈ ಮೊದಲು ಅನೇಕ ಬಾರಿ ‘ಎಮರ್ಜೆನ್ಸಿ’ ಚಿತ್ರದ ರಿಲೀಸ್ ಮುಂದೂಡಿಕೆ ಆಗಿತ್ತು. ಇನ್ನೇನು ರಿಲೀಸ್ ಆಗಬೇಕು ಎಂಬಷ್ಟರಲ್ಲಿ ಒಂದಷ್ಟು ವಿವಾದಗಳು ಸುತ್ತಿಕೊಂಡಿದ್ದವು. ಈಗ ಎಲ್ಲ ವಿಘ್ನಗಳನ್ನು ನಿವಾರಿಸಿಕೊಂಡು ಸಿನಿಮಾ ಬಿಡುಗಡೆ ಮಾಡಲು ಕಂಗನಾ ರಣಾವತ್ ನಿರ್ಧರಿಸಿದ್ದಾರೆ. 2025ರ ಜನವರಿ 17ರಂದು ‘ಎಮರ್ಜೆನ್ಸಿ’ ಚಿತ್ರ ಬಿಡುಗಡೆ ಆಗಲಿದೆ.

ಮಾಜಿ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಅವರ ಜೀವನದ ಕುರಿತು ‘ಎಮರ್ಜೆನ್ಸಿ’ ಸಿನಿಮಾ ಸಿದ್ಧವಾಗಿದೆ. ಈ ಸಿನಿಮಾದಲ್ಲಿ ಕಂಗನಾ ಅವರು ಇಂದಿರಾ ಗಾಂಧಿಯ ಪಾತ್ರವನ್ನು ಮಾಡಿದ್ದಾರೆ. ನಟನೆ ಜೊತೆಗೆ ನಿರ್ದೇಶನವನ್ನೂ ಕಂಗನಾ ರಣಾವತ್ ಅವರೇ ಮಾಡಿದ್ದಾರೆ. ಮುಂದಿನ ವರ್ಷ ಜನವರಿಯಲ್ಲಿ ಈ ಸಿನಿಮಾ ತೆರೆಕಾಣಲಿದ್ದು, ಪೋಸ್ಟರ್ ಮೂಲಕ ಕಂಗನಾ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಸಾಮಾನ್ಯವಾಗಿ ಪ್ರತಿ ವರ್ಷ ಜನವರಿಯಲ್ಲಿ ದೊಡ್ಡ ದೊಡ್ಡ ಸಿನಿಮಾಗಳು ಬಿಡುಗಡೆ ಆಗುತ್ತವೆ. ಸಂಕ್ರಾಂತಿ ಹಬ್ಬ ಮತ್ತು ಗಣರಾಜ್ಯೋತ್ಸವದ ಪ್ರಯುಕ್ತ ಸ್ಟಾರ್​ ಸಿನಿಮಾಗಳ ರಿಲೀಸ್ ಆಗುತ್ತವೆ. ಅವುಗಳ ನಡುವೆ ‘ಎಮರ್ಜೆನ್ಸಿ’ ಚಿತ್ರ ಬಿಡುಗಡೆ ಆದರೆ ಬಾಕ್ಸ್ ಆಫೀಸ್​ನಲ್ಲಿ ಕ್ಲ್ಯಾಶ್ ಆಗಲಿದೆ. ಈ ಸಿನಿಮಾದಲ್ಲಿ ವಿಶಾಖ್ ನಾಯರ್, ಅನುಪಮ್ ಖೇರ್, ಶ್ರೇಯಸ್ ತಲ್ಪಡೆ, ಮಿಲಿಂದ್ ಸೋಮನ್ ಮುಂತಾದವರು ನಟಿಸಿದ್ದಾರೆ. ಬಿಡುಗಡೆ ಆದ ಬಳಿಕ ಕೂಡ ವಿವಾದ ಆಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಮನೆ ಮಾರಿ 3 ಕೋಟಿ ರೂಪಾಯಿ ಬೆಲೆಯ ಕಾರು ಖರೀದಿಸಿದ ಕಂಗನಾ ರಣಾವತ್

ವಿವಾದಾತ್ಮಕ ಅಂಶಗಳು ಇವೆ ಎಂಬ ಕಾರಣಕ್ಕಾಗಿ ‘ಎಮರ್ಜೆನ್ಸಿ’ ಸಿನಿಮಾಗೆ ಸೆನ್ಸಾರ್​ ಪ್ರಮಾಣಪತ್ರ ಸಿಗುವುದು ವಿಳಂಬ ಆಯಿತು. ಅನೇಕ ಕಟ್​ಗಳನ್ನು ಮಾಡಿದ ಬಳಿಕ ಚಿತ್ರಕ್ಕೆ ಪ್ರಮಾಣಪತ್ರ ನೀಡಲಾಗಿದೆ. ಸಿನಿಮಾದಲ್ಲಿ ರಾಜಕೀಯದ ಕಥಾವಸ್ತು ಇರುವುದರಿಂದ ಎಲ್ಲರ ಕಣ್ಣು ಈ ಚಿತ್ರದ ಮೇಲಿದೆ. ಈಗ ಕಂಗನಾ ಅವರು ಬಿಜೆಪಿ ಪಕ್ಷದ ಸಂಸದೆ ಆಗಿದ್ದಾರೆ. ರಾಜಕೀಯದಲ್ಲಿ ಅವರು ಬ್ಯುಸಿ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.