AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾಧುರಿ ದೀಕ್ಷಿತ್​ಗೆ ಕನಸಲ್ಲೂ ಬಂದು ಕಾಡುತ್ತಿದ್ದ ಈ ಕ್ರಿಕೆಟಿಗ

ಮಾಧುರಿ ದೀಕ್ಷಿತ್ ಅವರ 59ನೇ ಜನ್ಮದಿನದಂದು, ಬಾಲಿವುಡ್‌ನ 'ಧಕ್ ಧಕ್ ಗರ್ಲ್' ಬಗ್ಗೆ ಹಲವು ಆಸಕ್ತಿಕರ ವಿಚಾರಗಳು ಸುದ್ದಿಯಾಗಿವೆ. ಮಾಧುರಿ ಅವರು ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ಅವರ ಮೇಲೆ ತಮಗೆ ಕ್ರಶ್ ಇತ್ತು ಎಂದು ಹಳೆಯ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದರು. ಅಲ್ಲದೆ, 'ಹಮ್ ಆಪ್ಕೆ ಹೈ ಕೌನ್' ಚಿತ್ರಕ್ಕಾಗಿ ಸಲ್ಮಾನ್ ಖಾನ್ ಅವರಿಗಿಂತ ಹೆಚ್ಚು ಸಂಭಾವನೆ ಪಡೆದು ದಾಖಲೆ ನಿರ್ಮಿಸಿದ್ದು ಸಹ ಚರ್ಚೆಯಲ್ಲಿದೆ.

ಮಾಧುರಿ ದೀಕ್ಷಿತ್​ಗೆ ಕನಸಲ್ಲೂ ಬಂದು ಕಾಡುತ್ತಿದ್ದ ಈ ಕ್ರಿಕೆಟಿಗ
ಮಾಧುರಿ ದೀಕ್ಷಿತ್
 ಶ್ರೀಲಕ್ಷ್ಮೀ ಎಚ್
| Edited By: |

Updated on:May 15, 2026 | 12:10 PM

Share

ಬಾಲಿವುಡ್‌ನ ‘ಧಕ್ ಧಕ್ ಗರ್ಲ್’ ಮಾಧುರಿ ದೀಕ್ಷಿತ್ ಅವರಿಗೆ (Madhuri Dixit) ಇಂದು (ಮೇ 15) 59ನೇ ಜನ್ಮದಿನದ ಸಂಭ್ರಮ. ದಶಕಗಳ ಕಾಲ ತಮ್ಮ ನಟನೆ ಮತ್ತು ನೃತ್ಯದ ಮೂಲಕ ಭಾರತೀಯ ಚಿತ್ರರಂಗವನ್ನು ಆಳಿದ ಮಾಧುರಿ, ಇಂದಿಗೂ ಸೌಂದರ್ಯ ಮತ್ತು ಪ್ರತಿಭೆಯ ವಿಷಯದಲ್ಲಿ ಹೊಸ ತಲೆಮಾರಿನ ನಟಿಯರಿಗೆ ಸ್ಫೂರ್ತಿಯಾಗಿದ್ದಾರೆ. ಮಾಧುರಿ ಅವರ ಜನ್ಮದಿನದ ಈ ಸಂದರ್ಭದಲ್ಲಿ ಅವರ ಹಳೆಯ ಸಂದರ್ಶನವೊಂದು ಸಖತ್ ಸುದ್ದಿಯಾಗುತ್ತಿದೆ. ಈ ಹಿಂದೆ ನೀಡಿದ್ದ ಸಂದರ್ಶನವೊಂದರಲ್ಲಿ ಮಾಧುರಿ ಅವರು ತಮಗೆ ಭಾರತೀಯ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ಅವರ ಮೇಲೆ ಕ್ರಶ್ ಇತ್ತು ಎಂಬ ವಿಷಯವನ್ನು ಬಹಿರಂಗಪಡಿಸಿದ್ದರು.

ಮಾಧುರಿಗಿಂತ ಗವಾಸ್ಕರ್ ಸುಮಾರು 17 ವರ್ಷ ದೊಡ್ಡವರಾಗಿದ್ದರೂ, ಅವರ ಆಟ ಮತ್ತು ವ್ಯಕ್ತಿತ್ವಕ್ಕೆ ಮಾಧುರಿ ಫಿದಾ ಆಗಿದ್ದರು. ‘ನಾನು ಸುನಿಲ್ ಗವಾಸ್ಕರ್ ಅವರ ಮೇಲೆ ಕ್ರೇಜ್ -ಇದೆ. ಅವರು ತುಂಬಾ ಸುಂದರವಾಗಿದ್ದಾರೆ, ಅವರ ಹಿಂದೆ ಓಡಬೇಕು ಎನಿಸುತ್ತದೆ. ಅವರು ನನ್ನ ಕನಸಿನಲ್ಲೂ ಬರುತ್ತಾರೆ’ ಎಂದು ನಟಿ ಅಂದು ಮುಕ್ತವಾಗಿ ಹೇಳಿಕೊಂಡಿದ್ದರು.

90ರ ದಶಕದಲ್ಲಿ ಮಾಧುರಿ ದೀಕ್ಷಿತ್ ಅವರ ಕ್ರೇಜ್ ಎಷ್ಟಿತ್ತೆಂದರೆ, ಅವರು ಸಂಭಾವನೆ ವಿಷಯದಲ್ಲಿ ಸೂಪರ್‌ಸ್ಟಾರ್ ನಟರನ್ನೇ ಹಿಂದಿಕ್ಕಿದ್ದರು. ಇದಕ್ಕೆ ಅತ್ಯುತ್ತಮ ಉದಾಹರಣೆ ‘ಹಮ್ ಆಪ್ಕೆ ಹೈ ಕೌನ್’ ಸಿನಿಮಾ. 1994ರ ಈ ಬ್ಲಾಕ್‌ಬಸ್ಟರ್ ಚಿತ್ರಕ್ಕಾಗಿ ಮಾಧುರಿ ಬರೋಬ್ಬರಿ 2.7 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದರು. ವರದಿಗಳ ಪ್ರಕಾರ, ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ಸಲ್ಮಾನ್ ಖಾನ್ ಅವರಿಗಿಂತಲೂ ಮಾಧುರಿ ಅವರೇ ಹೆಚ್ಚು ಹಣ ಪಡೆದಿದ್ದರು. ಆ ಕಾಲಕ್ಕೆ ಈ ಮೊತ್ತವು ಬಾಲಿವುಡ್‌ನಲ್ಲಿ ಅತಿ ದೊಡ್ಡ ದಾಖಲೆಯಾಗಿತ್ತು.

ಇದನ್ನೂ ಓದಿ: ಸೀರಿಯಲ್ ಕಿಲ್ಲರ್ ಆದ ಮಾಧುರಿ ದೀಕ್ಷಿತ್; ಹೊಸ ಅವತಾರದಲ್ಲಿ ಧಕ್ ಧಕ್ ಗರ್ಲ್

ಸದ್ಯ ಮಾಧುರಿ ಬೆಳ್ಳಿತೆರೆಯಿಂದ ಸ್ವಲ್ಪ ದೂರವಿದ್ದರೂ, ರಿಯಾಲಿಟಿ ಶೋಗಳು ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. 59ರ ಪ್ರಾಯದಲ್ಲೂ ಅವರ ಫಿಟ್‌ನೆಸ್ ಮತ್ತು ನಗು ಅಭಿಮಾನಿಗಳನ್ನು ಮಂತ್ರಮುಗ್ಧರನ್ನಾಗಿಸುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 12:10 pm, Fri, 15 May 26

Follow Us
Shreelaxmi H
Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More