14 ಜನ ಸತ್ತ ದಿನವೇ ಕುಣಿದು ಕುಪ್ಪಳಿಸಿದ ನಟಿ; ಉಗಿಯುತ್ತಿದ್ದಾರೆ ನೆಟ್ಟಿಗರು
ದಯವಿಟ್ಟು ಈ ವಿಡಿಯೋ ಡಿಲೀಟ್ ಮಾಡಿ ಎಂದು ಅನೇಕರು ಮನ್ನಾರಾ ಚೋಪ್ರಾಗೆ ಕಿವಿಮಾತು ಹೇಳಿದ್ದಾರೆ. ಆದರೆ ಅದಕ್ಕೆ ನಟಿ ಪ್ರತಿಕ್ರಿಯೆ ನೀಡಿಲ್ಲ. ಮುಂಬೈನ ಮಳೆಯಲ್ಲಿ ಅವರು ನಲಿದಾಡಿದ್ದಾರೆ. ಅದೇ ದಿನ ಹಲವರ ಪ್ರಾಣ ಹೋಗಿದೆ. ಮನ್ನಾರಾ ಚೋಪ್ರಾ ಹಂಚಿಕೊಂಡ ರೀಲ್ಸ್ ನೋಡಿ ನೆಟ್ಟಿಗರು ಗರಂ ಆಗಿದ್ದಾರೆ.
ನಟಿ ಮನ್ನಾರಾ ಚೋಪ್ರಾ (Mannara Chopra) ಅವರು ಮಳೆಯಲ್ಲಿ ಕುಣಿದು ಕುಪ್ಪಳಿಸಿದ್ದಾರೆ. ಮಳೆ ಬಂದಿದೆ ಎಂಬ ಖುಷಿಗೆ ಅವರು ಡ್ಯಾನ್ಸ್ ಮಾಡಿದ್ದಾರೆ. ಬಾಲ್ಕನಿಯಲ್ಲಿ ನೆನೆಯುತ್ತಾ ಅವರು ರೀಲ್ಸ್ (Mannara Chopra Reels) ಮಾಡಿದ್ದು, ಅದನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಇದನ್ನು ಇಷ್ಟಪಡಬಹುದು ಎಂದು ಮನ್ನಾರಾ ಚೋಪ್ರಾ ಊಹಿಸಿದ್ದರು. ಆದರೆ ಆಗಿರುವುದೇ ಬೇರೆ. ನಟಿಯ ರೀಲ್ಸ್ ನೋಡಿದ ನೆಟ್ಟಿಗರು ಹಿಗ್ಗಾಮುಗ್ಗಾ ಟ್ರೋಲ್ (Troll) ಮಾಡಿದ್ದಾರೆ. ಕಮೆಂಟ್ಗಳ ಮೂಲಕ ನಟಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಮುಂಬೈ ಜನರಿಗೆ ನಟಿಯ ಈ ರೀಲ್ಸ್ನಿಂದ ತುಂಬ ಕೋಪ ಬಂದಿದೆ.
ಅಷ್ಟಕ್ಕೂ ಮನ್ನಾರಾ ಚೋಪ್ರಾ ಮಾಡಿದ ತಪ್ಪೇನು? ಮೇ 13ರಂದು ಮನ್ನಾರಾ ಚೋಪ್ರಾ ಅವರು ಚಿತ್ರೀಕರಣದ ನಡುವೆ ಖುಷಿ ಖುಷಿಯಾಗಿ ಡ್ಯಾನ್ಸ್ ಮಾಡಿದರು. ಮುಂಬೈನಲ್ಲಿ ಈ ವರ್ಷದ ಮೊದಲ ಮಳೆ ಎಂಬ ಕಾರಣಕ್ಕೆ ಅವರು ಇಷ್ಟೆಲ್ಲ ಖುಷಿಯಾಗಿ ಕುಣಿದಾಡಿದ್ದಾರೆ. ಆದರೆ ಅದೇ ದಿನ ಬಿರುಗಾಳಿ ಮತ್ತು ಮಳೆಯ ಅವಾಂತರದಿಂದ ಹಲವರ ಪ್ರಾಣ ಹೋಗಿದೆ.
ಇದನ್ನೂ ಓದಿ: ತಲೆ ಬೋಳಿಸಿಕೊಂಡ್ರಾ ಉರ್ಫಿ ಜಾವೇದ್? ಫೋಟೋ ನೋಡಿ ಹಿಗ್ಗಾಮುಗ್ಗ ಉಗಿದ ನೆಟ್ಟಿಗರು
ಮುಂಬೈನಲ್ಲಿ ಬಿರುಗಾಳಿ ಸಹಿತ ಮಳೆಗೆ ಬೃಹತ್ ಬಿಲ್ಬೋರ್ಡ್ ನೆಲಕ್ಕೆ ಉರುಳಿದ್ದರಿಂದ 14 ಜನರ ಪ್ರಾಣ ಹೋಗಿದೆ. ಅನೇಕರಿಗೆ ಗಾಯಗಳು ಆಗಿವೆ. ರಕ್ಷಣಾ ಕಾರ್ಯ ನಡೆಯುತ್ತಿದೆ. ಸಾವಿರಾರು ಜನರ ಬದುಕು ಕಷ್ಟದಲ್ಲಿದೆ. ಎಲ್ಲರೂ ಶೋಕದಲ್ಲಿ ಇರುವಾಗ ಮನ್ನಾರಾ ಚೋಪ್ರಾ ಅವರು ಈ ರೀತಿ ಖುಷಿಯಾಗಿ ಮಳೆಯಲ್ಲಿ ಕುಣಿದಾಡಿ ರೀಲ್ಸ್ ಮಾಡಿರುವುದು ಜನರ ಕೋಪಕ್ಕೆ ಕಾರಣ ಆಗಿದೆ.
View this post on Instagram
ಮನ್ನಾರಾ ಚೋಪ್ರಾ ಹಂಚಿಕೊಂಡ ವಿಡಿಯೋ ನೋಡಿದ ಬಹುತೇಕರು ನೆಗೆಟಿವ್ ಆಗಿ ಕಮೆಂಟ್ ಮಾಡಿದ್ದಾರೆ. ‘ನಾಚಿಕೆಗೇಡಿನ ನಟಿಗೆ ಇಂದು ಎಷ್ಟು ಜನ ಸತ್ತಿದ್ದಾರೆ ಎಂಬುದು ತಿಳಿದಿಲ್ಲ’ ಎಂದು ನೆಟ್ಟಿಗರೊಬ್ಬರು ಖಾರವಾಗಿ ಟೀಕಿಸಿದ್ದಾರೆ. ‘ಮಳೆಯಲ್ಲಿ ಇಂಥ ಶ್ರೀಮಂತರಿಗೆ ಡ್ಯಾನ್ಸ್ ಮಾಡುವ ಬಯಕೆ. ಬಾಕಿ ಎಲ್ಲರೂ ಚಿಂತೆಯಲ್ಲಿದ್ದಾರೆ. 14 ಜನರು ಸತ್ತಿರುವಾಗ ಡ್ಯಾನ್ಸ್ ಮಾಡುವ ಅವಶ್ಯಕತೆ ಏನಿದೆ? ಇಂಥವರಿಗೆ ಜನರ ಕಷ್ಟ ಆರ್ಥ ಆಗಲ್ಲ’ ಎಂಬಿತ್ಯಾದಿ ಕಮೆಂಟ್ಗಳು ಬಂದಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.