AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಶಕ್ತಿಮಾನ್ ಪಾತ್ರಕ್ಕೆ ರಣವೀರ್ ಸಿಂಗ್‌ ಬೇಡ ಎಂದಿದ್ದು ನನ್ನ ಮೂರ್ಖತನ’: ಮುಕೇಶ್ ಖನ್ನಾ

ನಟ ರಣವೀರ್ ಸಿಂಗ್ ಅವರಿಗೆ ಶಕ್ತಿಮಾನ್ ಪಾತ್ರ ಮಾಡುವ ಆಸೆಯಿತ್ತು. ಆದರೆ ಅವರಿಗೆ ಮುಖೇಶ್ ಖನ್ನಾ ಒಪ್ಪಿಗೆ ನೀಡಲಿಲ್ಲ. ಅದರಿಂದ ಮುಖೇಶ್ ಖನ್ನಾಗೆ ಕೋಟ್ಯಂತರ ರೂಪಾಯಿ ನಷ್ಟ ಆಯಿತು. ತಮ್ಮ ಆ ನಿರ್ಧಾರದ ಬಗ್ಗೆ ಅವರು ಮುಕ್ತವಾಗಿ ಮಾತನಾಡಿದ್ದಾರೆ. ಆ ಕುರಿತು ಇಲ್ಲಿದೆ ಮಾಹಿತಿ..

‘ಶಕ್ತಿಮಾನ್ ಪಾತ್ರಕ್ಕೆ ರಣವೀರ್ ಸಿಂಗ್‌ ಬೇಡ ಎಂದಿದ್ದು ನನ್ನ ಮೂರ್ಖತನ’: ಮುಕೇಶ್ ಖನ್ನಾ
Ranveer Singh, Mukesh Khanna
ಮದನ್​ ಕುಮಾರ್​
|

Updated on: Aug 27, 2026 | 9:52 PM

Share

ಭಾರತೀಯ ಕಿರುತೆರೆ ಇತಿಹಾಸದಲ್ಲಿ ‘ಶಕ್ತಿಮಾನ್’ (Shaktimaan) ಬೃಹತ್ ಮೈಲಿಗಲ್ಲು ಸೃಷ್ಟಿಸಿದ ಸೂಪರ್‌ಹೀರೋ ಧಾರಾವಾಹಿ. ಈ ಐಕಾನಿಕ್ ಧಾರಾವಾಹಿಯ ಕಥೆಯನ್ನು ಸಿನಿಮಾ ರೂಪದಲ್ಲಿ ತೆರೆಗೆ ತರಲು 2022ರಲ್ಲೇ ತಯಾರಿ ಆರಂಭವಾಗಿತ್ತು. ಬಾಲಿವುಡ್ ನಟ ರಣವೀರ್ ಸಿಂಗ್ (Ranveer Singh) ಶಕ್ತಿಮಾನ್ ಪಾತ್ರ ಮಾಡಲಿದ್ದಾರೆ ಎಂಬ ಸುದ್ದಿ ಜೋರಾಗಿ ಹರಿದಾಡುತ್ತಿತ್ತು. ಆದರೆ, ಮೂಲ ಶಕ್ತಿಮಾನ್ ಖ್ಯಾತಿಯ ಮುಕೇಶ್ ಖನ್ನಾ (Mukesh Khanna) ಅವರು ರಣವೀರ್ ಆಯ್ಕೆಯನ್ನು ಸತತವಾಗಿ ವಿರೋಧಿಸುತ್ತಲೇ ಬಂದಿದ್ದಾರೆ.

ಇತ್ತೀಚೆಗೆ ಸುಭೋಜಿತ್ ಘೋಷ್ ಅವರ ಪಾಡ್‌ಕಾಸ್ಟ್‌ನಲ್ಲಿ ಭಾಗವಹಿಸಿದ್ದ ಮುಕೇಶ್ ಖನ್ನಾ ಅವರು ಈ ವಿಷಯದ ಬಗ್ಗೆ ಮಾತನಾಡಿದ್ದಾರೆ. ರಣವೀರ್ ಸಿಂಗ್ ಅವರನ್ನು ಶಕ್ತಿಮಾನ್ ಪಾತ್ರದಿಂದ ದೂರವಿಟ್ಟಿರುವುದು ವ್ಯಾಪಾರದ ದೃಷ್ಟಿಯಿಂದ ದೊಡ್ಡ ಮೂರ್ಖತನ ಇರಬಹುದು, ಇದರಿಂದ ಕೋಟ್ಯಂತರ ರೂಪಾಯಿ ಆಫರ್ ಕಳೆದುಕೊಂಡಿದ್ದೇನೆ ಎಂದು ಮುಕೇಶ್ ಖನ್ನಾ ಮುಕ್ತವಾಗಿ ಒಪ್ಪಿಕೊಂಡಿದ್ದಾರೆ.

ರಣವೀರ್ ಸಿಂಗ್ ಬಗ್ಗೆ ಮಾತನಾಡಿದ ಮುಕೇಶ್ ಖನ್ನಾ, ‘ರಣವೀರ್ ಸಿಂಗ್ ಅತ್ಯುತ್ತಮ ನಟ ಎಂಬುದರಲ್ಲಿ ಅನುಮಾನವಿಲ್ಲ. ಅವರು ‘ಪದ್ಮಾವತ್’ ಚಿತ್ರದಲ್ಲಿ ಖಿಲ್ಜಿ, ‘ಗುಲ್ಲಿ ಬಾಯ್’ ಅಥವಾ ‘ಧುರಂಧರ್’ ಪಾತ್ರಗಳನ್ನು ಅದ್ಭುತವಾಗಿ ನಿರ್ವಹಿಸಬಹುದು. ಅವರಿಗೆ ಕಿಲ್ವಿಶ್ (ವಿಲನ್) ಪಾತ್ರ ಮಾಡಲು ಸಾಧ್ಯವಿದೆ. ಆದರೆ ಶಕ್ತಿಮಾನ್ ಪಾತ್ರಕ್ಕಲ್ಲ. ಶಕ್ತಿಮಾನ್ ಪಾತ್ರಕ್ಕೆ ಸಕಾರಾತ್ಮಕವಾದ ಮುಖ ಮತ್ತು ಇಮೇಜ್ ಬೇಕು. ರಣವೀರ್ ಮುಖದಲ್ಲಿ ತುಂಟತನ ಮತ್ತು ತಂಟೆಕೋರತನ ಕಾಣಿಸುತ್ತದೆ. ಹೀಗಾಗಿ ಆ ಪಾತ್ರಕ್ಕೆ ಅವರು ಸೂಕ್ತವಲ್ಲ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ರಣವೀರ್ ಸಿಂಗ್ ಅವರಿಗೆ ಶಕ್ತಿಮಾನ್ ಪಾತ್ರ ಮಾಡುವ ಆಸೆಯಿತ್ತು. ಮುಕೇಶ್ ಖನ್ನಾ ಅವರನ್ನು ಒಪ್ಪಿಸಲು ಸುಮಾರು ಮೂರು ಗಂಟೆಗಳ ಕಾಲ ಮಾತುಕತೆ ನಡೆಸಿದ್ದರು. ‘ದೇವ್ ಆನಂದ್ ಅವರ ನಂತರ ನಾನು ರಣವೀರ್ ಅವರಷ್ಟು ಶಕ್ತಿಶಾಲಿ ಮತ್ತು ಎನರ್ಜಿಟಿಕ್ ನಟನನ್ನು ನೋಡಿರಲಿಲ್ಲ. ಅವರು ಚಡಪಡಿಸುತ್ತಾ, ನೆಲದ ಮೇಲೆ ಕುಳಿತು ಕಥೆ ವಿವರಿಸುತ್ತಿದ್ದರು. ಆ ನಂತರ ಆದಿತ್ಯ ಚೋಪ್ರಾ ಕೂಡ ನಮ್ಮೊಂದಿಗೆ ಸೇರಿಕೊಂಡರು. ರಣವೀರ್ ಉತ್ಸಾಹ ನೋಡಿ ಅವರಿಗೆ ನೋ ಹೇಳಲು ನನಗೂ ಸಂಕಟವಾಯಿತು’ ಎಂದು ಮುಕೇಶ್ ನೆನಪಿಸಿಕೊಂಡಿದ್ದಾರೆ.

ಇದನ್ನೂ ಓದಿ: ಹುಡುಗಿ ಸಿಕ್ಕರೆ ಮದುವೆ ಆಗ್ತೀನಿ: 67ನೇ ವಯಸ್ಸಿನಲ್ಲಿ ಆಸೆ ತಿಳಿಸಿದ ‘ಶಕ್ತಿಮಾನ್’ ನಟ ಮುಕೇಶ್ ಖನ್ನಾ

ತಮ್ಮ ನಿರ್ಧಾರದಿಂದಾಗಿ ಹಣ ಕಳೆದುಕೊಂಡಿದ್ದನ್ನು ಒಪ್ಪಿಕೊಂಡ ಮುಕೇಶ್ ಖನ್ನಾ, ‘ವ್ಯವಹಾರದ ದೃಷ್ಟಿಯಲ್ಲಿ ನೋಡುವುದಾದರೆ ನಾನು ಮೂರ್ಖನಂತೆ ವರ್ತಿಸುತ್ತಿದ್ದೇನೆ ನಿಜ. ಲಕ್ಷಗಳಲ್ಲ, ಕೋಟಿ ರೂಪಾಯಿಗಳ ಚೆಕ್ ಅನ್ನು ನಾನು ತಡೆಹಿಡಿದಿದ್ದೇನೆ. ನನ್ನ ಕಚೇರಿಯವರೇ ‘ಸರ್, ಚೆಕ್ ತಗೊಳ್ಳಿ, ಆಮೇಲೆ ಜಗಳ ಆಡೋಣ’ ಎಂದಿದ್ದರು. ಆದರೆ ಮೌಲ್ಯಗಳಿಗಿಂತ ಹಣ ದೊಡ್ಡದಲ್ಲ. ಶಕ್ತಿಮಾನ್ ಸಿನಿಮಾವನ್ನು ನನ್ನನ್ನು ಸಂಪರ್ಕಿಸಿ ನಿರ್ಮಿಸಬೇಕು ಎಂದು ಹೇಳಿದ್ದೆ. ಆದರೆ ಅವರು ನಿಯಮಗಳನ್ನು ಬದಲಾಯಿಸಿ, ತಮ್ಮಿಷ್ಟದಂತೆ ಮಾಡಲು ಹೊರಟಿದ್ದರು. ನಾಳೆ ಶಕ್ತಿಮಾನ್‌ನನ್ನು ಡಿಸ್ಕೋದಲ್ಲಿ ಕುಣಿಸಿದರೆ ನಾನು ಸಹಿಸುವುದಿಲ್ಲ. ಶಕ್ತಿಮಾನ್ ಪರಂಪರೆಯನ್ನು ಉಳಿಸುವುದು ನನ್ನ ಜವಾಬ್ದಾರಿ’ ಎಂದು ಖಡಕ್ ಆಗಿ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಕುಮಾರಸ್ವಾಮಿಯ ಸ್ಟಿಂಗ್ ಆಪರೇಷನ್ ಮಾತು
ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಕುಮಾರಸ್ವಾಮಿಯ ಸ್ಟಿಂಗ್ ಆಪರೇಷನ್ ಮಾತು
'ನನ್ನನ್ನು ಬಂಧಿಸಿರಲಿಲ್ಲ, ಅಪಹರಿಸಿದ್ದರು'; ಯೂಟ್ಯೂಬರ್ ಧ್ರುವ್ ರಾಠೀ
'ನನ್ನನ್ನು ಬಂಧಿಸಿರಲಿಲ್ಲ, ಅಪಹರಿಸಿದ್ದರು'; ಯೂಟ್ಯೂಬರ್ ಧ್ರುವ್ ರಾಠೀ
ಚಿನ್ನದ ಸಿಂಹಾಸನವೇರಿದ ಯದುವೀರ ಒಡೆಯರ್:ಮೈಸೂರು ಅರಮನೆಯಲ್ಲಿ ಖಾಸಗಿ ದರ್ಬಾರ್
ಚಿನ್ನದ ಸಿಂಹಾಸನವೇರಿದ ಯದುವೀರ ಒಡೆಯರ್:ಮೈಸೂರು ಅರಮನೆಯಲ್ಲಿ ಖಾಸಗಿ ದರ್ಬಾರ್
ಚೆನ್ನೈನ ಜಲಕಂಠೇಶ್ವರ ಸ್ವಾಮಿ ದೇಗುಲದಲ್ಲಿ ಪ್ರಧಾನಿ ಮೋದಿ ವಿಶೇಷ ಪೂಜೆ
ಚೆನ್ನೈನ ಜಲಕಂಠೇಶ್ವರ ಸ್ವಾಮಿ ದೇಗುಲದಲ್ಲಿ ಪ್ರಧಾನಿ ಮೋದಿ ವಿಶೇಷ ಪೂಜೆ
ಚೆನ್ನೈನಲ್ಲಿ ಮೋದಿ ರೋಡ್‌ ಶೋ: 13 ಸಾವಿರ ಕೋಟಿ ರೂ. ಯೋಜನೆಗಳಿಗೆ ಚಾಲನೆ
ಚೆನ್ನೈನಲ್ಲಿ ಮೋದಿ ರೋಡ್‌ ಶೋ: 13 ಸಾವಿರ ಕೋಟಿ ರೂ. ಯೋಜನೆಗಳಿಗೆ ಚಾಲನೆ
ತುಮಕೂರು: ದಸರಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿದ್ಧಗಂಗಾ ಶ್ರೀಗಳು
ತುಮಕೂರು: ದಸರಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿದ್ಧಗಂಗಾ ಶ್ರೀಗಳು
ನೇಪಾಳದ ಬುಧಿ ಗಂಡಕಿ ನದಿಯಲ್ಲಿ ಹಠಾತ್ ಪ್ರವಾಹ
ನೇಪಾಳದ ಬುಧಿ ಗಂಡಕಿ ನದಿಯಲ್ಲಿ ಹಠಾತ್ ಪ್ರವಾಹ
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ವಿಧ್ಯುಕ್ತ ಚಾಲನೆ
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ವಿಧ್ಯುಕ್ತ ಚಾಲನೆ
ಮೈಸೂರು ದಸರಾ ಉದ್ಘಾಟನೆಗೂ ಮುನ್ನ ಅವಘಡ: ಮುರಿದುಬಿದ್ದ ನಂದಿ ಧ್ವಜ ಕಂಬ!
ಮೈಸೂರು ದಸರಾ ಉದ್ಘಾಟನೆಗೂ ಮುನ್ನ ಅವಘಡ: ಮುರಿದುಬಿದ್ದ ನಂದಿ ಧ್ವಜ ಕಂಬ!
ದಸರಾ ಉದ್ಘಾಟನೆಗೂ ಮುನ್ನ ಚಾಮುಂಡೇಶ್ವರಿ ದರ್ಶನ ಪಡೆದ ಗವಿಸಿದ್ದೇಶ್ವರ ಶ್ರೀ
ದಸರಾ ಉದ್ಘಾಟನೆಗೂ ಮುನ್ನ ಚಾಮುಂಡೇಶ್ವರಿ ದರ್ಶನ ಪಡೆದ ಗವಿಸಿದ್ದೇಶ್ವರ ಶ್ರೀ