ಮದುವೆಯಾದ ಎರಡೇ ತಿಂಗಳಿಗೆ ನೇಹಾ ಕಕ್ಕರ್​ನಿಂದ ಅಭಿಮಾನಿಗಳಿಗೆ ಸಿಹಿ ಸುದ್ದಿ..

ಸಿಂಗರ್ ಕಪಲ್ ನೇಹಾ ಕಕ್ಕರ್ ಮತ್ತು ರೋಹನ್ ಪ್ರೀತ್ ಸಿಂಗ್​ಗೆ ಬಾಲಿವುಡ್​ನ ಸಿನಿಮಾ ಮಂದಿ, ಗಾಯಕರಿಂದ ಶುಭಾಶಯಗಳ ಸುರಿ ಮಳೆಯೇ ಹರಿದು ಬರುತ್ತಿದೆ. ಹೌದು ನೇಹಾ ಕಕ್ಕರ್ ಸಾಮಾಜಿಕ ಜಾಲತಾಣದಲ್ಲಿ ಬೇಬಿ ಬಂಪ್ ಫೋಟೋವನ್ನು ಫೋಸ್ಟ್ ಮಾಡಿದ್ದಾರೆ. ಇದರಂತೆ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಂತೆ ಕಾಣುತ್ತಿದೆ.

  • TV9 Web Team
  • Published On - 11:57 AM, 18 Dec 2020
ಮದುವೆಯಾದ ಎರಡೇ ತಿಂಗಳಿಗೆ ನೇಹಾ ಕಕ್ಕರ್​ನಿಂದ ಅಭಿಮಾನಿಗಳಿಗೆ ಸಿಹಿ ಸುದ್ದಿ..
ನೇಹಾ ಕಕ್ಕರ್ ಮತ್ತು ಪತಿ ರೋಹನ್ ಪ್ರೀತ್ ಸಿಂಗ್

ತನ್ನ ಸುಮಧುರ ಗಾಯನದ ಮೂಲಕ ಅಭಿಮಾನಿ ಬಳಗವನ್ನು ಸಂಪಾದಿಸಿರುವ ನೇಹಾ ಕಕ್ಕರ್ ಮದುವೆಯಾದ ಎರಡೇ ತಿಂಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ತಮ್ಮ ಇನ್​ಸ್ಟಾಗ್ರಾಂನಲ್ಲಿ ಖಾತೆಯಲ್ಲಿ ಹಂಚಿಕೊಂಡ ಆ ಒಂದು ಪಿಕ್ ಈಗ ನೇಹಾ ಅಭಿಮಾನಿ ಬಳಗಕ್ಕೆ ಅಚ್ಚರಿ ಮೂಡಿಸಿದೆ.

ಸಿಂಗರ್ ಕಪಲ್ ನೇಹಾ ಕಕ್ಕರ್ ಮತ್ತು ರೋಹನ್ ಪ್ರೀತ್ ಸಿಂಗ್​ಗೆ ಬಾಲಿವುಡ್​ನ ಸಿನಿಮಾ ಮಂದಿ, ಗಾಯಕರಿಂದ ಶುಭಾಶಯಗಳ ಸುರಿ ಮಳೆಯೇ ಹರಿದು ಬರುತ್ತಿದೆ. ಹೌದು ನೇಹಾ ಕಕ್ಕರ್ ಸಾಮಾಜಿಕ ಜಾಲತಾಣದಲ್ಲಿ ಬೇಬಿ ಬಂಪ್ ಫೋಟೋವನ್ನು ಫೋಸ್ಟ್ ಮಾಡಿದ್ದಾರೆ. ಇದರಂತೆ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಂತೆ ಕಾಣುತ್ತಿದೆ.

ಇನ್​ಸ್ಟಾಗ್ರಾಂನಲ್ಲಿ #KhyaalRakhyaKar (ಕಾಳಜಿ ವಹಿಸು) ಎಂದು ಬರೆದು ಪತಿ ಜೊತೆಗೆ ಬೇಬಿ ಬಂಪ್ ತೋರಿಸುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಆದರೆ ಅವರು ಗರ್ಭಿಣಿಯಾಗಿರುವುದಾಗಿ ಎಲ್ಲೂ ಹೇಳಿಲ್ಲ. ಇದಕ್ಕೆ ಉತ್ತರವಾಗಿ ಪತಿ ರೋಹನ್ ಪ್ರೀತ್ ಸಿಂಗ್​ “Ab Toh Kuch Zyada Hi Khyaal Rakhna Parhega Nehuuuu, (ಇನ್ನು ಮುಂದೆ ಹೆಚ್ಚಿನ ಕಾಳಜಿಯೇ ವಹಿಸಬೇಕಾಗುತ್ತೆ ನೇಹೂ) ಎಂದು ಕಾಮೆಂಟ್ ಸೆಕ್ಷೆನ್​ನಲ್ಲಿ ಬರೆದಿದ್ದಾರೆ.

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಂದ, ಹಿತೈಷಿಗಳಿಂದ ಅಭಿನಂದನೆಯ ಮಹಾಪುರವೇ ಹರಿದು ಬರುತ್ತಿದೆ. ಸಿಂಗರ್ ಕಪಲ್ ನೇಹಾ ಕಕ್ಕರ್ ಮತ್ತು ರೋಹನ್ ಪ್ರೀತ್ ಸಿಂಗ್ ಇದೇ ವರ್ಷದ ಅಕ್ಟೋಬರ್​ 24ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯ ನಂತರ ಈ ಜೋಡಿ ಹನಿಮೂನ್​ಗೆ ದುಬೈಗೆ ಹಾರಿದ್ದರು.