AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Adipurush: ಕಳಪೆ ಗ್ರಾಫಿಕ್ಸ್​ ಪ್ರಭಾವ; ಮತ್ತೆ ಮುಂದಕ್ಕೆ ಹೋಯ್ತು ‘ಆದಿಪುರುಷ್​’ ಚಿತ್ರದ ರಿಲೀಸ್​ ದಿನಾಂಕ

Adipurush New Release Date: ಗ್ರಾಫಿಕ್ಸ್​ ವಿಚಾರದಲ್ಲಿ ‘ಆದಿಪುರುಷ್’ ತಂಡ ಎಡವಿತ್ತು. ಆ ತಪ್ಪನ್ನು ಸರಿಪಡಿಸಿಕೊಳ್ಳಲು ನಿರ್ದೇಶಕರು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿದ್ದಾರೆ. ಅದರಿಂದ ರಿಲೀಸ್​ ಡೇಟ್​ ಮುಂದಕ್ಕೆ ಹೋಗಿದೆ.

Adipurush: ಕಳಪೆ ಗ್ರಾಫಿಕ್ಸ್​ ಪ್ರಭಾವ; ಮತ್ತೆ ಮುಂದಕ್ಕೆ ಹೋಯ್ತು ‘ಆದಿಪುರುಷ್​’ ಚಿತ್ರದ ರಿಲೀಸ್​ ದಿನಾಂಕ
ಪ್ರಭಾಸ್
TV9 Web
| Edited By: |

Updated on:Nov 07, 2022 | 11:49 AM

Share

ನಟ ಪ್ರಭಾಸ್​ ಅವರು ‘ಆದಿಪುರುಷ್​’ (Adipurush) ಚಿತ್ರದಲ್ಲಿ ರಾಮನ ಪಾತ್ರ ಮಾಡುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ಸಿನಿಮಾ 2023ರ ಜನವರಿ ತಿಂಗಳಲ್ಲಿ ರಿಲೀಸ್​ ಆಗುತ್ತಿತ್ತು. ಆದರೆ ಈಗ ಬಿಡುಗಡೆ ದಿನಾಂಕವನ್ನು (Adipurush Release Date) ಮುಂದೂಡಲಾಗಿದೆ. ಈ ಕುರಿತು ಸ್ವತಃ ಚಿತ್ರದ ನಿರ್ದೇಶಕ ಓಂ ರಾವತ್​ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಈ ರೀತಿ ಆಗಿದ್ದಕ್ಕೆ ಕಾರಣ ಏನು ಎಂಬುದನ್ನು ಕೂಡ ಅವರು ವಿವರಿಸಿದ್ದಾರೆ. ಪ್ರಭಾಸ್​ (Prabhas) ಅವರನ್ನು ರಾಮನ ಅವತಾರಲ್ಲಿ ತೆರೆ ಮೇಲೆ ನೋಡಬೇಕು ಎಂದು ಕಾದಿದ್ದ ಅಭಿಮಾನಿಗಳು ಇನ್ನಷ್ಟು ದಿನ ಕಾಯುವುದು ಅನಿವಾರ್ಯ ಆಗಿದೆ. ಇದರಿಂದ ಕೆಲವರಿಗೆ ಬೇಸರ ಆಗಿದೆ. ಆದರೆ ಇನ್ನೊಂದು ವರ್ಗದ ಪ್ರೇಕ್ಷಕರು ನಿಟ್ಟುಸಿರು ಬಿಟ್ಟಿದ್ದಾರೆ.

ರಾಮಾಯಣದ ಕಥೆಯನ್ನು ಇಟ್ಟುಕೊಂಡು ‘ಆದಿಪುರುಷ್​’ ಚಿತ್ರ ಮಾಡಲಾಗುತ್ತಿದೆ. ಈ ಸಿನಿಮಾದಲ್ಲಿ ಪ್ರಭಾಸ್​ ಅವರಿಗೆ ರಾಮನ ಪಾತ್ರವಿದೆ. ಸೀತೆಯಾಗಿ ಕೃತಿ ಸನೋನ್​ ಅಭಿನಯಿಸುತ್ತಿದ್ದಾರೆ. ರಾವಣನ ಪಾತ್ರದಲ್ಲಿ ಸೈಫ್​ ಅಲಿ ಖಾನ್​ ಅಬ್ಬರಿಸಲಿದ್ದಾರೆ. ಪೌರಾಣಿಕ ಸಿನಿಮಾಗಳನ್ನು ಕಟ್ಟಿಕೊಡಲು ಅತ್ಯಾಧುನಿಕ ಗ್ರಾಫಿಕ್ಸ್​ ತಂತ್ರಜ್ಞಾನ ಬಳಸಬೇಕಾಗುತ್ತದೆ. ಈ ವಿಚಾರದಲ್ಲಿ ‘ಆದಿಪುರುಷ್’ ತಂಡ ಎಡವಿತ್ತು.

ಇದನ್ನೂ ಓದಿ
Image
Prabhas: ದೊಡ್ಡಪ್ಪನ ನಿಧನದ ನೋವಿಟ್ಟುಕೊಂಡು ಕೆಲಸಕ್ಕೆ ಬಂದ ಪ್ರಭಾಸ್​; ‘ಸಲಾರ್​’ ಶೂಟಿಂಗ್​ ಮತ್ತೆ ಶುರು
Image
Prabhas: ದೊಡ್ಡಪ್ಪನ ಅಂತ್ಯ ಸಂಸ್ಕಾರಕ್ಕೆ ಬಂದ ಫ್ಯಾನ್ಸ್​ಗೆ ಊಟದ ವ್ಯವಸ್ಥೆ ಮಾಡಿಸಿ ಕಾಳಜಿ ತೋರಿದ ಪ್ರಭಾಸ್​
Image
ಪ್ರಭಾಸ್​ ವರ್ಸಸ್​ ಪ್ರಭಾಸ್​: ‘ಸಲಾರ್​’ ಚಿತ್ರದಲ್ಲಿ ಡಬಲ್​ ರೋಲ್​ ಮಾಡಿಸುತ್ತಾರಾ ಪ್ರಶಾಂತ್​ ನೀಲ್​?
Image
‘ರಾಧೆ ಶ್ಯಾಮ್​’ ಸೋಲಿಗೆ 2 ಮುಖ್ಯ ಕಾರಣ ತಿಳಿಸಿದ ಪ್ರಭಾಸ್​; ಪ್ರೇಕ್ಷಕರು ಈ ನೆಪವನ್ನೆಲ್ಲ ಒಪ್ಪುತ್ತಾರಾ?

ಅಕ್ಟೋಬರ್​ 2ರಂದು ಅದ್ದೂರಿಯಾಗಿ ಅಯೋಧ್ಯೆಯಲ್ಲಿ ‘ಆದಿಪುರುಷ್’ ಚಿತ್ರದ ಟೀಸರ್​ ಬಿಡುಗಡೆ ಮಾಡಲಾಗಿತ್ತು. ಇದನ್ನು ಎಲ್ಲರೂ ಮೆಚ್ಚಿಕೊಳ್ಳುತ್ತಾರೆ ಎಂದು ಚಿತ್ರತಂಡ ಭಾವಿಸಿತ್ತು. ಆದರೆ ಆಗಿದ್ದೇ ಬೇರೆ. ಟೀಸರ್​ನಲ್ಲಿ ಕಳಪೆ ಗ್ರಾಫಿಕ್ಸ್​ ಇದೆ ಎಂಬ ಕಾರಣಕ್ಕೆ ಜನರು ಹಿಗ್ಗಾಮುಗ್ಗಾ ಟ್ರೋಲ್​ ಮಾಡಿದರು. ಅದರ ಪರಿಣಾಮವಾಗಿ ಚಿತ್ರತಂಡ ಗಟ್ಟಿ ನಿರ್ಧಾರ ತೆಗೆದುಕೊಂಡಿದೆ.

ನಿರ್ದೇಶಕ ಓಂ ರಾವತ್​ ಹೇಳಿದ್ದೇನು?

‘ಆದಿಪುರುಷ್​ ಒಂದು ಸಿನಿಮಾ ಅಲ್ಲ. ರಾಮನ ಬಗ್ಗೆ ನಮಗೆ ಇರುವ ಭಕ್ತಿ ಮತ್ತು ಸಂಸ್ಕೃತಿ-ಇತಿಹಾಸದ ಬಗ್ಗೆ ನಮಗೆ ಇರುವ ಬದ್ಧತೆಯನ್ನು ಇದು ಪ್ರತಿನಿಧಿಸುತ್ತದೆ. ಪ್ರೇಕ್ಷಕರಿಗೆ ಸಂಪೂರ್ಣ ದೃಶ್ಯ ವೈಭವವನ್ನು ನೀಡಲು ಚಿತ್ರತಂಡಕ್ಕೆ ಇನ್ನಷ್ಟು ಸಮಯ ಬೇಕಾಗಿದೆ. ಹಾಗಾಗಿ ‘ಆದಿಪುರುಷ್​’ ಚಿತ್ರ ಜೂನ್​ 16ರಂದು ರಿಲೀಸ್​ ಆಗಲಿದೆ. ಭಾರತವು ಹೆಮ್ಮೆ ಪಡುವಂತಹ ಸಿನಿಮಾ ಮಾಡಲು ನಾವು ಪಣತೊಟ್ಟಿದ್ದೇವೆ. ನಾವು ಮುಂದುವರಿಯಲು ನಿಮ್ಮ ಪ್ರೀತಿ, ಬೆಂಬಲ ಇರಲಿ’ ಎಂದು ಓಂ ರಾವತ್​ ಟ್ವೀಟ್​ ಮಾಡಿದ್ದಾರೆ.

ಚಿತ್ರತಂಡದ ಈ ನಿರ್ಧಾರದಿಂದ ಗ್ರಾಫಿಕ್ಸ್​ ದೃಶ್ಯಗಳು ಉತ್ತಮ ಗುಣಮಟ್ಟದಲ್ಲಿ ಮೂಡಿಬರಲಿದೆ ಎಂಬ ಕಾರಣಕ್ಕೆ ಪ್ರಭಾಸ್​ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಆದರೆ, ಇನ್ನೂ ಹಲವು ತಿಂಗಳು ಕಾಯಬೇಕಲ್ಲ ಎಂದು ಕೆಲವು ಅಭಿಮಾನಿಗಳಿಗೆ ಬೇಸರ ಆಗಿದೆ. ಈ ಚಿತ್ರಕ್ಕೆ ಭೂಷಣ್​ ಕುಮಾರ್​ ಮತ್ತು ಕ್ರಿಷನ್​ ಕುಮಾರ್​ ಬಂಡವಾಳ ಹೂಡುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 11:49 am, Mon, 7 November 22

ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?