‘ಕ್ರಿಶ್ 4’ ಸಿನಿಮಾಗೆ ಪ್ರಿಯಾಂಕಾ ಚೋಪ್ರಾ ನಾಯಕಿ? ಬಾಲಿವುಡ್ ಕಡೆಗೆ ಮತ್ತೆ ಒಲವು

ಕಳೆದ ಒಂದಷ್ಟು ವರ್ಷಗಳಿಂದ ಹಾಲಿವುಡ್​ನಲ್ಲೇ ಬ್ಯುಸಿ ಆಗಿರುವ ಪ್ರಿಯಾಂಕಾ ಚೋಪ್ರಾ ಅವರು ಈಗ ಮತ್ತೆ ಹಿಂದಿ ಚಿತ್ರದತ್ತ ಗಮನ ಹರಿಸಿದ್ದಾರೆ. ಹೃತಿಕ್ ರೋಷನ್ ನಟನೆಯ ‘ಕ್ರಿಶ್ 4’ ಸಿನಿಮಾಗೆ ಪ್ರಿಯಾಂಕಾ ಚೋಪ್ರಾ ನಾಯಕಿ ಆಗುತ್ತಾರೆ ಎನ್ನಲಾಗಿದೆ. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿ ಆಗಿದೆ. ಆದರೆ ಚಿತ್ರತಂಡದವರು ಅಧಿಕೃತ ಹೇಳಿಕೆ ನೀಡುವುದು ಬಾಕಿ ಇದೆ.

‘ಕ್ರಿಶ್ 4’ ಸಿನಿಮಾಗೆ ಪ್ರಿಯಾಂಕಾ ಚೋಪ್ರಾ ನಾಯಕಿ? ಬಾಲಿವುಡ್ ಕಡೆಗೆ ಮತ್ತೆ ಒಲವು
Priyanka Chopra, Hrithik Roshan

Updated on: Apr 11, 2025 | 6:53 PM

ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಅವರು ಹಿಂದಿ ಸಿನಿಮಾಗಳಲ್ಲಿ ನಟಿಸದೇ ಬಹಳ ಸಮಯ ಆಗಿದೆ. ಅವರು ಬಾಲಿವುಡ್​ಗೆ (Bollywood) ಕಮ್​ಬ್ಯಾಕ್ ಮಾಡಬೇಕು ಎಂಬುದು ಅಭಿಮಾನಿಗಳ ಆಸೆ. ಆದರೆ ಹಲವು ವರ್ಷಗಳಿಂದ ಪ್ರಿಯಾಂಕಾ ಚೋಪ್ರಾ ಅವರು ಹಿಂದಿ ಸಿನಿಮಾವನ್ನು ಒಪ್ಪಿಕೊಳ್ಳುತ್ತಿಲ್ಲ. ಬದಲಿಗೆ, ಹಾಲಿವುಡ್​ ಪ್ರಾಜೆಕ್ಟ್​ಗಳಲ್ಲೇ ಅವರು ಬ್ಯುಸಿ ಆಗಿದ್ದಾರೆ. ಈಗ ಮತ್ತೆ ಅವರಿಗೆ ಹಿಂದಿ ಚಿತ್ರರಂಗದ ಮೇಲೆ ಒಲವು ಮೂಡಿರುವ ಸೂಚನೆ ಸಿಕ್ಕಿದೆ. ‘ಕ್ರಿಶ್ 4’ ಸಿನಿಮಾ (Krrish 4) ಮೂಲಕ ಅವರು ಬಾಲಿವುಡ್​ಗೆ ಮರಳುತ್ತಿದ್ದಾರೆ ಎಂದು ಸುದ್ದಿ ಆಗಿದೆ. ಈ ಬಗ್ಗೆ ಇಲ್ಲಿದೆ ಇನ್ನಷ್ಟು ಮಾಹಿತಿ..

‘ಕ್ರಿಶ್’ ಮತ್ತು ‘ಕ್ರಿಶ್ 3’ ಸಿನಿಮಾಗಳಲ್ಲಿ ಪ್ರಿಯಾಂಕಾ ಚೋಪ್ರಾ ಅವರು ನಟಿಸಿದ್ದರು. ಆದ್ದರಿಂದ ಈ ಚಿತ್ರತಂಡದ ಜೊತೆ ಅವರಿಗೆ ಪರಿಚಯ ಚೆನ್ನಾಗಿದೆ. ಹೃತಿಕ್ ರೋಷನ್ ಅವರು ‘ಕ್ರಿಶ್ 4’ ಆಫರ್ ನೀಡಿದಾಗ ಪ್ರಿಯಾಂಕಾ ಚೋಪ್ರಾ ಅವರು ಎರಡನೇ ಆಲೋಚನೆ ಮಾಡದೇ ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯಕ್ಕೆ ಚಿತ್ರತಂಡದ ಕಡೆಯಿಂದ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಹೃತಿಕ್ ರೋಷನ್ ತಂದೆ ರಾಕೇಶ್ ರೋಷನ್ ಅವರು ‘ಕ್ರಿಶ್ 3’ ಸಿನಿಮಾಗೆ ನಿರ್ದೇಶನ ಮಾಡಿದ್ದರು. ಈಗ ‘ಕ್ರಿಶ್ 4’ ಚಿತ್ರಕ್ಕೆ ಸ್ವತಃ ಹೃತಿಕ್ ರೋಷನ್ ಅವರು ಆ್ಯಕ್ಷನ್-ಕಟ್ ಹೇಳಲು ಮುಂದಾಗಿದ್ದಾರೆ. ಆದ್ದರಿಂದ ಅಭಿಮಾನಿಗಳಿಗೆ ವಿಶೇಷ ನಿರೀಕ್ಷೆ ಮೂಡಿದೆ.

ಇದನ್ನೂ ಓದಿ
ಸೀಬೆಕಾಯಿ ಮಾರುವ ಮಹಿಳೆಯ ಪ್ರಾಮಾಣಿಕತೆಗೆ ಮಾರು ಹೋದ ಪ್ರಿಯಾಂಕಾ
ಪ್ರಿಯಾಂಕಾ ಚೋಪ್ರಾಗಾಗಿ ಬೇಲಿ ಹಾರಿ ಮನೆಗೆ ನುಗ್ಗಿದ್ದ ಹುಡುಗ
ಖಿನ್ನತೆಯಿಂದ ಜೀವನವೇ ಬೇಡ ಎಂದುಕೊಂಡಿದ್ದ ನಟಿ ಈಗ ಬದುಕುತ್ತಿರುವ ರೀತಿ ನೋಡಿ
ಪ್ರಿಯಾಂಕಾ ಚೋಪ್ರಾ-ನಿಕ್ ಜೋನಸ್ ವಿವಾಹ ವಾರ್ಷಿಕೋತ್ಸವ ಹೀಗಿತ್ತು

ಪ್ರಿಯಾಂಕಾ ಚೋಪ್ರಾ ಅವರು ಈಗಾಗಲೇ ಭಾರತೀಯ ಚಿತ್ರರಂಗಕ್ಕೆ ಮರಳಿದ್ದಾರೆ. ಮಹೇಶ್ ಬಾಬು, ರಾಜಮೌಳಿ ಕಾಂಬಿನೇಷನ್​ನ ಹೊಸ ಸಿನಿಮಾಗೆ ಪ್ರಿಯಾಂಕಾ ಚೋಪ್ರಾ ಅವರು ನಾಯಕಿ ಆಗಿದ್ದಾರೆ. ಈ ಸಿನಿಮಾಗೆ ಶೂಟಿಂಗ್ ನಡೆಯುತ್ತಿದೆ. ಆ ಬಳಿಕ ‘ಕ್ರಿಶ್ 4’ ಸಿನಿಮಾದಲ್ಲಿ ಅವರು ಬ್ಯುಸಿ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ವಿವಾದಾತ್ಮಕ ಮಹಿಳೆಯ ಪಾತ್ರದಲ್ಲಿ ಆಲಿಯಾ ಭಟ್ ಅಥವಾ ಪ್ರಿಯಾಂಕಾ ಚೋಪ್ರಾ

ಈಗ ಪ್ರೇಕ್ಷಕರ ನಿರೀಕ್ಷೆ ದೊಡ್ಡ ಮಟ್ಟದಲ್ಲಿದೆ. ಹಾಗಾಗಿ ‘ಕ್ರಿಶ್ 4’ ಸಿನಿಮಾ ಮಾಡಲು ಹೃತಿಕ್ ರೋಷನ್ ಅವರು ಯಶ್ ರಾಜ್ ಫಿಲ್ಮ್ಸ್ ಜೊತೆ ಕೈ ಜೋಡಿಸಲಿದ್ದಾರೆ ಎಂದು ಸುದ್ದಿ ಆಗಿದೆ. ಈ ಕುರಿತು ಹೆಚ್ಚಿನ ಅಪ್​ಡೇಟ್ ತಿಳಿಯಲು ಫ್ಯಾನ್ಸ್ ಕಾದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.