Salman Khan: ‘ಗಾಡ್ ​ಫಾದರ್​’ ಚಿತ್ರಕ್ಕೆ ಸಂಭಾವನೆ ಪಡೆಯದ ಸಲ್ಲುಗೆ ‘ಮೆಗಾ​’ ಕುಟುಂಬದವರು ಏನು ಕೊಡ್ತಾರೆ?

| Updated By: ಮದನ್​ ಕುಮಾರ್​

Updated on: Oct 11, 2022 | 8:53 AM

Megastar Chiranjeevi | Godfather: ಚಿರಂಜೀವಿ ಮತ್ತು ಸಲ್ಮಾನ್​ ಖಾನ್​ ಬಹುಕಾಲದಿಂದ ಸ್ನೇಹಿತರು. ‘ಗಾಡ್​ ಫಾದರ್​’ ಚಿತ್ರದಲ್ಲಿ ಸಲ್ಲು​ ನಟಿಸಿದ್ದರಿಂದ ಉತ್ತರ ಭಾರತದಲ್ಲಿ ಈ ಚಿತ್ರಕ್ಕೆ ಹೆಚ್ಚಿನ ಪ್ರಚಾರ ಸಿಕ್ಕಿತು.

Salman Khan: ‘ಗಾಡ್ ​ಫಾದರ್​’ ಚಿತ್ರಕ್ಕೆ ಸಂಭಾವನೆ ಪಡೆಯದ ಸಲ್ಲುಗೆ ‘ಮೆಗಾ​’ ಕುಟುಂಬದವರು ಏನು ಕೊಡ್ತಾರೆ?
ಮೆಗಾಸ್ಟಾರ್ ಚಿರಂಜೀವಿ, ಸಲ್ಮಾನ್ ಖಾನ್
Follow us on

ಬಾಲಿವುಡ್​ ಮತ್ತು ದಕ್ಷಿಣ ಭಾರತದ ಚಿತ್ರರಂಗದ ನಡುವೆ ಉತ್ತಮ ಒಡನಾಟ ಇದೆ. ಅಲ್ಲಿನ ಸ್ಟಾರ್​ ಕಲಾವಿದರು ಇಲ್ಲಿ ಬಂದು ಅತಿಥಿ ಪಾತ್ರ ಮಾಡಿದ ಉದಾಹರಣೆ ಸಾಕಷ್ಟು ಇದೆ. ಇತ್ತೀಚೆಗೆ ಬಿಡುಗಡೆಯಾದ ತೆಲುಗಿನ ‘ಗಾಡ್​ ಫಾದರ್​’ (Godfather) ಸಿನಿಮಾದಲ್ಲಿ ಸಲ್ಮಾನ್​ ಖಾನ್​ ಅವರು ಒಂದು ಅತಿಥಿ ಪಾತ್ರ ಮಾಡಿದ್ದಾರೆ. ಕಥೆಯ ಪ್ರಮುಖ ಘಟ್ಟದಲ್ಲಿ ಬರುವ ಈ ಪಾತ್ರಕ್ಕೆ ಹೆಚ್ಚು ತೂಕ ಇದೆ. ಒಂದೆರಡು ದೃಶ್ಯಗಳಲ್ಲಿ ಸಲ್ಮಾನ್​ ಖಾನ್​ (Salman Khan) ಕಾಣಿಸಿಕೊಳ್ಳುತ್ತಾರೆ. ಆ ಸಿನಿಮಾಗೆ ‘ಮೆಗಾ ಸ್ಟಾರ್​’ ಚಿರಂಜೀವಿ (Megastar Chiranjeevi) ಹೀರೋ. ಅವರ ‘ಕೊನಿಡೆಲ್ಲಾ ಪ್ರೊಡಕ್ಷನ್​ ಕಂಪನಿ’ ಮೂಲಕ ‘ಗಾಡ್​ ಫಾದರ್​’ ಚಿತ್ರ ಮೂಡಿಬಂತು. ಇದರಲ್ಲಿ ನಟಿಸಿದ್ದಕ್ಕಾಗಿ ಸಲ್ಮಾನ್​ ಖಾನ್​ ಅವರು ಯಾವುದೇ ಸಂಭಾವನೆ ಪಡೆದಿಲ್ಲ.

‘ಮೆಗಾ ಸ್ಟಾರ್​’ ಚಿರಂಜೀವಿ ಹಾಗೂ ಸಲ್ಮಾನ್​ ಖಾನ್​ ಕುಟುಂಬದ ನಡುವೆ ಮೊದಲಿನಿಂದಲೂ ಸ್ನೇಹ ಇದೆ. ಆ ಆತ್ಮೀಯತೆಯ ಕಾರಣದಿಂದಲೇ ಹಣ ಪಡೆಯದೇ ‘ಗಾಡ್​ ಫಾದರ್​’ ಸಿನಿಮಾದಲ್ಲಿ ಸಲ್ಮಾನ್​ ಖಾನ್​ ನಟಿಸಿದರು. ಆದರೂ ಕೂಡ ಚಿರು ಪುತ್ರ ರಾಮ್​ ಚರಣ್​ ಅವರು ಸಲ್ಲುಗೆ ಒಂದು ಐಷಾರಾಮಿ ಕಾರನ್ನು ಗಿಫ್ಟ್​ ನೀಡಲು ತೀರ್ಮಾನಿಸಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ.

ಎಷ್ಟು ಸಂಭಾವನೆ ಪಡೆದರು? ಯಾವ ಗಿಫ್ಟ್​ ನೀಡಿದರು? ಈ ಎಲ್ಲ ವಿಚಾರಗಳು ಖಾಸಗಿ ಆಗಿರುತ್ತವೆ. ಹಾಗಾಗಿ ಈ ಕುರಿತು ‘ಮೆಗಾ ಸ್ಟಾರ್​’ ಕುಟುಂಬದಿಂದ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ಹಾಗಿದ್ದರೂ ಕೂಡ ಟಾಲಿವುಡ್​ ಅಂಗಳದಲ್ಲಿ ಈ ಒಂದು ಸುದ್ದಿ ಹರಿದಾಡುತ್ತಿದೆ. ರಾಮ್​ ಚರಣ್​ ನಟನೆಯ ‘ಆರ್​ಆರ್​ಆರ್​’ ಬಿಡುಗಡೆ ಸಂದರ್ಭದಲ್ಲೂ ಸಲ್ಮಾನ್​ ಖಾನ್​ ಅವರು ಸಹಕಾರ ನೀಡಿದ್ದರು.

ಇದನ್ನೂ ಓದಿ
ಸೆಟ್​​ನಲ್ಲಿ ಸಲ್ಲುನ ಭೇಟಿ ಮಾಡೋಕೆ ಬಂದ ರಾಮ್​ ಚರಣ್​ಗೆ ಸಿಕ್ತು ಹಿಂದಿ ಸಿನಿಮಾ ಆಫರ್
ತಂಗಿ ಗಂಡನ ಜೊತೆಗೆ ಸಲ್ಮಾನ್​ ಖಾನ್​ ಕಿರಿಕ್​; ಭಾವನ ಸಿನಿಮಾದಿಂದಲೇ ಹೊರನಡೆದ ಆಯುಷ್​ ಶರ್ಮಾ?
ಬಹಿರಂಗ ವೇದಿಕೆಯಲ್ಲಿ ಸಲ್ಲು ಇದೆಂಥಾ ಕೆಲಸ; ಪೂಜಾ ಹೆಗ್ಡೆ ವಿಚಾರದಲ್ಲಿ ಸಿಕ್ಕಾಪಟ್ಟೆ ಮುಜುಗರ
ಸಲ್ಮಾನ್​ ಖಾನ್ ಫಾರ್ಮ್​ಹೌಸ್​ ಬೆಲೆ 80 ಕೋಟಿ ರೂ.! ಸಲ್ಲು ಮೆಚ್ಚಿನ ಈ ಸ್ಥಳದಲ್ಲಿ ಏನೆಲ್ಲ ಇದೆ?

ಬಾಲಿವುಡ್​ಗೆ ಹೋಲಿಸಿದರೆ ದಕ್ಷಿಣ ಭಾರತದ ಸಿನಿಮಾಗಳು ಹೆಚ್ಚು ಕಲೆಕ್ಷನ್​ ಮಾಡುತ್ತಿವೆ. ಹಾಗಾಗಿ ಹಿಂದಿ ಚಿತ್ರರಂಗದ ಅನೇಕರು ದಕ್ಷಿಣಕ್ಕೆ ಬಂದು ನಟಿಸಲು ಮನಸ್ಸು ಮಾಡುತ್ತಿದ್ದಾರೆ. ‘ಗಾಡ್​ ಫಾದರ್​’ ಚಿತ್ರದಲ್ಲಿ ಸಲ್ಮಾನ್​ ಖಾನ್​ ಅಭಿನಯಿಸಿದ್ದರಿಂದ ಉತ್ತರ ಭಾರತದಲ್ಲಿ ಈ ಚಿತ್ರಕ್ಕೆ ಹೆಚ್ಚಿನ ಪ್ರಚಾರ ಸಿಕ್ಕಿತು.

ಅಂದಹಾಗೆ, ಇದು ಮಲಯಾಳಂನ ‘ಲೂಸಿಫರ್​’ ಚಿತ್ರದ ತೆಲುಗು ರಿಮೇಕ್​. ಮೂಲ ಸಿನಿಮಾದಲ್ಲಿ ಮೋಹನ್​ ಲಾಲ್​ ಮಾಡಿದ್ದ ಪಾತ್ರವನ್ನು ತೆಲುಗಿನಲ್ಲಿ ಚಿರಂಜೀವಿ ಮಾಡಿದ್ದಾರೆ. ಪೃಥ್ವಿರಾಜ್​ ಸುಕುಮಾರ್​ ಮಾಡಿದ್ದ ಅತಿಥಿ ಪಾತ್ರವನ್ನು ತೆಲುಗಿನಲ್ಲಿ ಸಲ್ಮಾನ್​ ಖಾನ್​ ಮಾಡಿದ್ದಾರೆ. ಅವರ ಆ್ಯಕ್ಷನ್​ ದೃಶ್ಯಗಳನ್ನು ನೋಡಿ ಫ್ಯಾನ್ಸ್​ ಇಷ್ಟಪಟ್ಟಿದ್ದಾರೆ. ಈ ಚಿತ್ರಕ್ಕೆ ಮೋಹನ್​ ರಾಜ ನಿರ್ದೇಶನ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 8:08 am, Tue, 11 October 22