AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಟಿಸುವಾಗ ಇಂಥದ್ದೇ ಮಾತಿಗೆ ಅಳಬೇಕು ಎಂದರೆ ಹಾಗೆಯೇ ಮಾಡುತ್ತಾರೆ ರಣಬೀರ್

ರಣಬೀರ್ ಕಪೂರ್ ಅವರು ಚಲನಚಿತ್ರರಂಗದಲ್ಲಿ ಸಾಧಿಸಿದ ಯಶಸ್ಸು ಮತ್ತು ಅವರ ಅಭಿನಯ ಪ್ರತಿಭೆ ಅಪಾರ. ರಾಜ್​ಕುಮಾರ ಹಿರಾನಿ ಅವರು ಈ ಬಗ್ಗೆ ಮೆಚ್ಚುಗೆ ಸಿಕ್ಕಿದೆ. 'ಸಂಜು' ಸಿನಿಮಾ ಶೂಟ್ ಸಂದರ್ಭದಲ್ಲಿ ಈ ಬಗ್ಗೆ ವಿವರಿಸಲಾಗಿದೆ.

ನಟಿಸುವಾಗ ಇಂಥದ್ದೇ ಮಾತಿಗೆ ಅಳಬೇಕು ಎಂದರೆ ಹಾಗೆಯೇ ಮಾಡುತ್ತಾರೆ ರಣಬೀರ್
ರಣಬೀರ್ ಕಪೂರ್
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on:Nov 21, 2024 | 7:47 AM

Share

ರಣಬೀರ್ ಕಪೂರ್ ಓರ್ವ ಶ್ರೇಷ್ಠ ನಟ. ಅದನ್ನು ಮತ್ತೆ ಹೇಳಬೇಕಿಲ್ಲ. ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ರಿಷಿ ಕಪೂರ್ ಮಗ ಆಗಿ ಚಿತ್ರರಂಗಕ್ಕೆ ಕಾಲಿಟ್ಟ ಅವರು ನಂತರ ತಮ್ಮ ತನವನ್ನು ಸಾಬೀತು ಮಾಡಿಕೊಂಡರು. ನಟನೆಯ ಮೂಲಕ ಅವರು ಎಲ್ಲರ ಗಮನ ಸೆಳೆದರು. ಈಗ ರಣಬೀರ್ ಕಪೂರ್ ಅವರ ಬಗ್ಗೆ ಕೆಲವರು ಹೇಳಿದ ಮಾತು ವೈರಲ್ ಆಗಿದೆ.

ರಣಬೀರ್ ಕಪೂರ್ ಅವರು ‘ಆ ಅಬ್ ಲೌಟ್ ಚಲೇ’ ಸಹಾಯಕ ನಿರ್ದೇಶಕರಾಗಿ ಗುರುತಿಸಿಕೊಂಡರು. 2007ರಲ್ಲಿ ‘ಸಾವರಿಯಾ’ ಸಿನಿಮಾ ಮೂಲಕ ಹೀರೋ ಆದರು. ‘ವೇಕ್ ಅಪ್ ಸಿಡ್’ ಅವರ ಜನಪ್ರಿಯತೆ ಹೆಚ್ಚಿಸಿತು. 2013ರಲ್ಲಿ ರಿಲೀಸ್ ಆದ ‘ಯೇ ಜವಾನಿ ಹೇ ದಿವಾನಿ’ ಸಿನಿಮಾದಲ್ಲಿ ಅವರ ನಟನೆಯು ಮೆಚ್ಚುಗೆ ಪಡೆಯಿತು. 2018ರಲ್ಲಿ ರಿಲೀಸ್ ಆದ ‘ಸಂಜು’ ಸೂಪರ್ ಹಿಟ್ ಆಯಿತು. ಕಳೆದ ವರ್ಷ ರಿಲೀಸ್ ಆದ ‘ಅನಿಮಲ್’ ಚಿತ್ರದಿಂದ ಅವರು ಖ್ಯಾತಿ ಪಡೆದಿದ್ದಾರೆ.

ರಣಬೀರ್ ಕಪೂರ್ ಅವರು ಎಂತಹ ಅದ್ಭುತ ನಟ ಎಂಬುದನ್ನು ರಾಜ್​ಕುಮಾರ್ ಹಿರಾನಿ ವಿವರಿಸಿದ್ದರು. ರಾಜ್​ಕುಮಾರ್ ಹಿರಾನಿ ಈ ಮೊದಲು ‘ಸಂಜು’ ಸಿನಿಮಾ ನಿರ್ದೇಶನ ಮಾಡಿದ್ದರು. ಈ ಚಿತ್ರದಲ್ಲಿ ಸಾಕಷ್ಟು ಅಳುವ ದೃಶ್ಯಗಳು ಇವೆ. ಇದನ್ನು ರಣಬೀರ್ ಕಪೂರ್ ಜೊತೆ ಶೂಟ್ ಮಾಡೋದು ಎಷ್ಟು ಸುಲಭ ಎಂಬುದನ್ನು ಅವರು ಹೇಳಿದ್ದರು. ‘ಸರಿಯಾದ ಸಮಯಕ್ಕೆ ರಣಬೀರ್ ಕಪೂರ್ ಕಣ್ಣಲ್ಲಿ ನೀರು ಬರುತ್ತಿತ್ತು’ ಎಂದು ಹೇಳಿದ್ದರು ಅವರು. ಇದಕ್ಕೆ ಅನೇಕ ಕಡೆಗಳಿಂದ ಮೆಚ್ಚುಗೆ ಸಿಕ್ಕಿದೆ. ಇದು ಅವರು ಎಂಥ ಶ್ರೇಷ್ಠ ನಟ ಎಂಬುದನ್ನು ತೋರಿಸುತ್ತದೆ.

View this post on Instagram

A post shared by v (@makkaarmickey)

ಇದನ್ನೂ ಓದಿ: ಐಶ್ವರ್ಯಾ ರೈ ಜೊತೆ ರಣಬೀರ್ ಕಪೂರ್ ಗೆಳೆತನ; ಅನುಷ್ಕಾ ಶರ್ಮಾ ಅಸೂಯೆ ನೋಡಿ

ರಣಬೀರ್ ಕಪೂರ್ ಅವರು ‘ರಾಮಾಯಣ: ಪಾರ್ಟ್ 1’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ರಾಮನ ಅವತಾರದಲ್ಲಿ ರಣಬೀರ್ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ಶೂಟ್​ಗಾಗಿ ಅವರು ಮುಂಬೈನಲ್ಲಿಯೇ ಇದ್ದಾರೆ. ಈ ಸಿನಿಮಾ ಮೂರು ಭಾಗಗಳಲ್ಲಿ ರಿಲೀಸ್ ಆಗಲಿದೆ ಎನ್ನಲಾಗಿದೆ. ಇದಲ್ಲದೆ, ‘ಲವ್ ಆ್ಯಂಡ್ ವಾರ್’ ಚಿತ್ರದಲ್ಲೂ ನಟಿಸುತ್ತಿದ್ದಾರೆ. ಈ ಸಿನಿಮಾಗೆ ಸಂಜಯ್ ಲೀಲಾ ಬನ್ಸಾಲಿ ಅವರ ನಿರ್ದೇಶನ ಇದೆ. ಈ ಚಿತ್ರಕ್ಕಾಗಿ ಪ್ರೇಕ್ಷಕರು ಕಾದಿದ್ದಾರೆ. ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಆಗಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:44 am, Thu, 21 November 24