ರಣಬೀರ್​ ಕಪೂರ್​ ಎದುರಲ್ಲೇ ಅಶ್ಲೀಲವಾಗಿ ಬೈಯ್ದ ಫೋಟೋಗ್ರಾಫರ್​; ವಿಡಿಯೋ ವೈರಲ್​

ಪಾಪಾರಾಜಿ ಬಳಸಿದ ಅಶ್ಲೀಲ ಭಾಷೆ ಕೇಳಿಸಿಕೊಂಡ ರಣಬೀರ್​ ಕಪೂರ್​ ಅವರಿಗೆ ಸಿಟ್ಟು ಬಂದಿದೆ. ಆದರೂ ಆ ಸಮಯದಲ್ಲಿ ಅವರು ತಾಳ್ಮೆ ಕಳೆದುಕೊಂಡಿಲ್ಲ. ಅಸಹನೆಯಿಂದ ಪಾಪರಾಜಿಗಳ ಕಡೆ ನೋಡಿ ಅಲ್ಲಿಂದ ತೆರಳಿದ್ದಾರೆ. ಪಾಪರಾಜಿಯ ಅಸಭ್ಯ ಭಾಷೆಗೆ ಸೋಶಿಯಲ್​ ಮೀಡಿಯಾದಲ್ಲಿ ಜನರಿಂದ ಖಂಡನೆ ವ್ಯಕ್ತವಾಗುತ್ತಿದೆ. ವಿಡಿಯೋ ವೈರಲ್​ ಆಗಿದ್ದು, ಜನರು ಹಲವು ರೀತಿಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ.

ರಣಬೀರ್​ ಕಪೂರ್​ ಎದುರಲ್ಲೇ ಅಶ್ಲೀಲವಾಗಿ ಬೈಯ್ದ ಫೋಟೋಗ್ರಾಫರ್​; ವಿಡಿಯೋ ವೈರಲ್​
ರಣಬೀರ್​ ಕಪೂರ್​
Follow us
ಮದನ್​ ಕುಮಾರ್​
|

Updated on: Apr 28, 2024 | 11:28 AM

ನಟ ರಣಬೀರ್​ ಕಪೂರ್​ (Ranbir Kapoor) ಅವರು ಇತ್ತೀಚೆಗೆ ಒಂದು ಮುಜುಗರದ ಸನ್ನಿವೇಶ ಎದುರಿಸಿದ್ದಾರೆ. ಗುಜರಾಜ್​ನ ಸೂರತ್​ನಲ್ಲಿ ಆಭರಣದ ಮಳಿಗೆಯನ್ನು ಉದ್ಘಾಟಿಸಲು ರಣಬೀರ್​ ಕಪೂರ್​ ತೆರೆಳಿದ್ದರು. ಅವರ ಫೋಟೋ ಕ್ಲಿಕ್ಕಿಸಲು ಬಂದ ಪಾಪರಾಜಿಯೊಬ್ಬನು (Paparazzi) ಅಶ್ಲೀಲ ಪದಗಳಿಂದ ಬೈಯ್ದಿದ್ದಾನೆ. ಅದನ್ನು ಕೇಳಿಸಿಕೊಂಡು ರಣಬೀರ್​ ಕಪೂರ್​ಗೆ ಶಾಕ್​ ಆಗಿದೆ. ಬಹಳ ಅಚ್ಚರಿಯಿಂದ ಅವರು ಫೋಟೋಗ್ರಾಫರ್​ ಕಡೆಗೆ ನೋಡಿದ್ದಾರೆ. ‘ಏನು ನಡೆಯುತ್ತಿದೆ ಇಲ್ಲಿ?’ ಎಂದು ಪ್ರಶ್ನಿಸಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಈ ವಿಡಿಯೋ ವೈರಲ್​ ಆಗಿದೆ.

ರಣಬೀರ್​ ಕಪೂರ್​ ಅವರ ಫೋಟೋಗಳನ್ನು ಕ್ಲಿಕ್ಕಿಸಬೇಕು ಎಂಬುದು ಪಾಪರಾಜಿಗಳ ತವಕ. ಜನಜಂಗುಳಿ ಇದ್ದಿದ್ದರಿಂದ ಸರಿಯಾದ ಫೋಟೋಗಳು ಸಿಗದೇ ಇರಬಹುದು. ಈ ಸಂದರ್ಭದಲ್ಲಿ ತಾಳ್ಮೆ ಕಳೆದುಕೊಂಡ ಫೋಟೋಗ್ರಾಫರ್​ ಒಬ್ಬನು ಕೆಟ್ಟ ಭಾಷೆ ಬಳಸಿ ಕೂಗಾಡಿದ್ದಾನೆ. ಆತ ಆ ಮಾತನ್ನು ರಣಬೀರ್​ ಕಪೂರ್​ಗೆ ಹೇಳಿದ್ದಾ ಅಥವಾ ಅಲ್ಲಿದ್ದ ಜನರ ಪೈಕಿ ಯಾರೋ ಒಬ್ಬರಿಗೆ ಹೇಳಿದ್ದಾ ಎಂಬುದು ಖಚಿತವಾಗಿಲ್ಲ.

ಒಟ್ಟಿನಲ್ಲಿ ಆ ಫೋಟೋಗ್ರಾಫರ್​ ಬಳಸಿದ ಅಶ್ಲೀಲ ಭಾಷೆ ಕೇಳಿ ರಣಬೀರ್​ ಕಪೂರ್​ ಅವರಿಗೆ ಕೋಪ ಬಂದಿದೆ. ಆದರೂ ಅವರು ಆ ಸಂದರ್ಭದಲ್ಲಿ ತಾಳ್ಮೆ ಕಳೆದುಕೊಂಡಿಲ್ಲ. ಅಸಹನೆಯಿಂದ ಲುಕ್​ ಕೊಟ್ಟು ಅಲ್ಲಿಂದ ತೆರಳಿದ್ದಾರೆ. ಪಾಪರಾಜಿಗಳ ಅನಾಗರಿಕ ವರ್ತನೆಗೆ ಸೋಶಿಯಲ್​ ಮೀಡಿಯಾದಲ್ಲಿ ಖಂಡನೆ ವ್ಯಕ್ತವಾಗುತ್ತಿದೆ. ಕೆಟ್ಟದಾಗಿ ಮಾತನಾಡಿದ ಪಾಪಾರಾಜಿಗೆ ಅನೇಕರು ಕಮೆಂಟ್​ ಮೂಲಕ ಕ್ಲಾಸ್​ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ: ‘ರಾಮಾಯಣ’ ಸಿನಿಮಾಗಾಗಿ ಹಳ್ಳಿಗೆ ಹೋಗಿ ತರಬೇತಿ ಪಡೆಯುತ್ತಿರುವ ರಣಬೀರ್​ ಕಪೂರ್​

ರಣಬೀರ್​ ಕಪೂರ್​ ಅವರು ಈಗ ರಾಮಾಯಣ ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ. ‘ಅನಿಮಲ್​’ ಸಿನಿಮಾದ ಭಾರಿ ಯಶಸ್ಸಿನ ಬಳಿಕ ಅವರಿಗೆ ಈ ಅವಕಾಶ ಸಿಕ್ಕಿದೆ. ಈ ಸಿನಿಮಾದಲ್ಲಿ ಅವರಿಗೆ ಜೋಡಿಯಾಗಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ. ‘ದಂಗಲ್’ ಖ್ಯಾತಿಯ ನಿರ್ದೇಶಕ ನಿತೇಶ್​ ತಿವಾರಿ ಅವರು ಆ್ಯಕ್ಷನ್​-ಕಟ್​ ಹೇಳುತ್ತಿದ್ದಾರೆ. ಚಿತ್ರೀಕರಣದ ಸೆಟ್​ನಿಂದ ಕೆಲವು ಫೋಟೋಗಳು ಲೀಕ್​ ಆಗಿವೆ. ಆ ಮೂಲಕ ಸಿನಿಮಾ ಮೇಲಿನ ಹೈಪ್​ ಹೆಚ್ಚಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್