AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ರಾಮಾಯಣ’ ಟ್ರೈಲರ್: ಹಿಂದೆಂದೂ ನೋಡದಂಥ ದೃಶ್ಯ ವೈಭವದಲ್ಲಿ ಶ್ರೀರಾಮನ ಕತೆ

Ramayana movie trailer: ಈಗ ನಿತೀಶ್ ತಿವಾರಿ ಹಾಗೂ ನಮಿತ್ ಮಲ್ಹೋತ್ರಾ ಅವರು ಒಟ್ಟಿಗೆ ಸೇರಿ, ಹಿಂದೆಂದೂ ಭಾರತೀಯ ತೆರೆಯ ಮೇಲೆ ತೋರಿಸದ ರೀತಿ ಭಾರಿ ಅದ್ಧೂರಿಯಾಗಿ, ದೃಶ್ಯ ವೈಭವದೊಂದಿಗೆ ನಿರ್ಮಾಣ ಮಾಡಿದ್ದಾರೆ. ಇಂದು ಬಿಡುಗಡೆ ಆಗಿರುವ ಟ್ರೈಲರ್​​ನ ಪ್ರತಿ ಫ್ರೇಮಿನಲ್ಲೂ ಅದು ಎದ್ದು ಕಾಣುತ್ತಿದೆ. ಭಾರಿ ಅದ್ಧೂರಿಯಾಗಿ ಸಿನಿಮಾ ಅನ್ನು ನಿರ್ಮಿಸಿರುವುದು ಟ್ರೈಲರ್​​ನಿಂದ ಗೊತ್ತಾಗುತ್ತಿದೆ.

‘ರಾಮಾಯಣ’ ಟ್ರೈಲರ್: ಹಿಂದೆಂದೂ ನೋಡದಂಥ ದೃಶ್ಯ ವೈಭವದಲ್ಲಿ ಶ್ರೀರಾಮನ ಕತೆ
Ramayana Movie Trailer1
ಮಂಜುನಾಥ ಸಿ.
|

Updated on:Oct 15, 2026 | 9:33 PM

Share

ಮುಖ್ಯಾಂಶಗಳು

  • ರಾಮಾಯಣ ಸಿನಿಮಾ ಟ್ರೈಲರ್ ರಿಲೀಸ್ ಆಗಿದೆ
  • ‘ರಾಮಾಯಣ’ ಸಿನಿಮಾ ಶೀಘ್ರವೇ ರಿಲೀಸ್ ಆಗಲಿದೆ
  • ಭಾರಿ ಅದ್ಧೂರಿಯಾಗಿ ಮೂಡಿಬಂದಿದೆ ಸಿನಿಮಾ

ಹಲವು ದಶಕಗಳಿಂದಲೂ ಭಾರತೀಯ ಟಿವಿ ಮತ್ತು ಸಿನಿಮಾಗಳಲ್ಲಿ ರಾಮಾಯಣದ ಕತೆಯನ್ನು ಹೇಳುತ್ತಲೇ ಬರಲಾಗುತ್ತಿದೆ. ಪ್ರತಿಯೊಬ್ಬರೂ ಸಹ ಅವರದ್ದೇ ಆದ ಭಿನ್ನ ನಿರೂಪಣೆಯೊಟ್ಟಿಗೆ ಈ ಪೌರಾಣಿಕ ಕತೆಯನ್ನು ತೆರೆಗೆ ತರುತ್ತಲೇ ಇದ್ದಾರೆ. ಈಗ ನಿತೀಶ್ ತಿವಾರಿ ಹಾಗೂ ನಮಿತ್ ಮಲ್ಹೋತ್ರಾ ಅವರು ಒಟ್ಟಿಗೆ ಸೇರಿ, ಹಿಂದೆಂದೂ ಭಾರತೀಯ ತೆರೆಯ ಮೇಲೆ ತೋರಿಸದ ರೀತಿ ಭಾರಿ ಅದ್ಧೂರಿಯಾಗಿ, ದೃಶ್ಯ ವೈಭವದೊಂದಿಗೆ ನಿರ್ಮಾಣ ಮಾಡಿದ್ದಾರೆ. ಇಂದು ಬಿಡುಗಡೆ ಆಗಿರುವ ಟ್ರೈಲರ್​​ನ ಪ್ರತಿ ಫ್ರೇಮಿನಲ್ಲೂ ಅದು ಎದ್ದು ಕಾಣುತ್ತಿದೆ.

ಇಂದು ಎರಡು ಭಿನ್ನ ಟ್ರೈಲರ್​​ಗಳು ಬಿಡುಗಡೆ ಆಗಿದ್ದು, ಒಂದು ಅಂತರಾಷ್ಟ್ರೀಯ ಟ್ರೈಲರ್ ಮತ್ತು ಇನ್ನೊಂದು ಭಾರತೀಯ ಪ್ರೇಕ್ಷಕರಿಗೆ ಮಾಡಲಾದ ಟ್ರೈಲರ್. ಎರಡೂ ಟ್ರೈಲರ್​​ಗಳಲ್ಲಿ ಸಿನಿಮಾದ ದೃಶ್ಯ ವೈಭವ, ತಾಂತ್ರಿಕ ಅದ್ಧೂರಿತನ ಪ್ರತಿ ಫ್ರೇಂನಲ್ಲೂ ಎದ್ದು ಕಾಣುತ್ತಿದೆ. ‘ರಾಮಾಯಣ’ವನ್ನು ಭಾರತದಲ್ಲಿ ಈಗಾಗಲೇ ಹಲವು ಬಾರಿ ನಿರ್ಮಾಣ ಆಗಿದೆ. ಆದರೆ ಹಿಂದೆಂದೂ ನಿರ್ಮಾಣವಾಗದ ರೀತಿಯಲ್ಲಿ ‘ರಾಮಾಯಣ’ವನ್ನು ನಿತೀಶ್ ತಿವಾರಿ ಕಟ್ಟಿಕೊಟ್ಟಿದ್ದಾರೆ.

ಈಗ ಬಿಡುಗಡೆ ಆಗಿರುವ ಟ್ರೈಲರ್​​​ನಲ್ಲಿ ಯಶ್ ಅವರಂಥೂ ಅಬ್ಬರಿಸಿದ್ದಾರೆ. ಈಗ ಬಿಡುಗಡೆ ಆಗಿರುವ ಇಂಟರ್ನ್ಯಾಷನಲ್ ಟ್ರೈಲರ್​​ನಲ್ಲಿ ಆಕ್ಷನ್​​ಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ‘ರಾಮಾಯಣ’ದಲ್ಲಿ ಬರುವ ಕೆಲವು ಪ್ರಮುಖ ಯುದ್ಧ, ಆಕ್ಷನ್ ಸೀಕ್ವೆನ್ಸ್​​ನ ಝಲಕ್​​ಗಳನ್ನು ಇಂಟರ್ನ್ಯಾಷನಲ್ ಟ್ರೈಲರ್​​ನಲ್ಲಿ ತೋರಿಸಲಾಗಿದೆ. ಇನ್ನು ಭಾರತೀಯ ಪ್ರೇಕ್ಷಕರಿಗಾಗಿ ರಿಲೀಸ್ ಮಾಡಲಾಗಿರುವ ಟ್ರೈಲರ್​​ನಲ್ಲಿ ಆಕ್ಷನ್ ಜೊತೆಗೆ ಸೆಂಟಿಮೆಂಟ್ ಮತ್ತು ಭಕ್ತಿಯ ಅಂಶವನ್ನು ಸಹ ತೋರಿಸಲಾಗಿದೆ.

ಇದನ್ನೂ ಓದಿ:‘ರಾಮಾಯಣ’ ಸಿನಿಮಾಗೆ ಅಮೆರಿಕದಲ್ಲಿ ‘ಪಿಜಿ 13’ ಪ್ರಮಾಣಪತ್ರ: ಚಿತ್ರದ ಅವಧಿ 3 ಗಂಟೆ 15 ನಿಮಿಷ

ಈಗ ಬಿಡುಗಡೆ ಆಗಿರುವ ಟ್ರೈಲರ್​​ನಲ್ಲಿ ಯಶ್, ರಣ್​​ಬೀರ್ ಕಪೂರ್ ಅವರೇ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. ಸಾಯಿ ಪಲ್ಲವಿ ಹಾಗೂ ಕೆಲವು ಇತರೆ ಪಾತ್ರಗಳು ಅಲ್ಲಲ್ಲಿ ಬಂದು ಹೋಗುತ್ತವೆ. ಆದರೆ ಕೆಲವು ಪ್ರಮುಖವಾದ ಪಾತ್ರಗಳನ್ನು ಟ್ರೈಲರ್​​ನಲ್ಲಿ ತೋರಿಸಲಾಗಿಲ್ಲ. ವಿಶೇಷವಾಗಿ ಆಂಜನೇಯ ಹಾಗೂ ಇನ್ನೂ ಕೆಲವು ಪಾತ್ರಗಳನ್ನು ಈಗ ರಿಲೀಸ್ ಆಗಿರುವ ಟ್ರೈಲರ್​​ನಲ್ಲಿ ತೋರಿಸಲಾಗಿಲ್ಲ.

ಇಂದು ನಡೆದ ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲಿ ನಟರಾದ ರಣ್​​ಬೀರ್ ಕಪೂರ್, ಯಶ್, ಸಾಯಿ ಪಲ್ಲವಿ ಸೇರಿದಂತೆ ಹಲವು ತಾರೆಯರು, ಎಆರ್ ರೆಹಮಾನ್, ನಿತೀಶ್ ತಿವಾರಿ ಸೇರಿದಂತೆ ಇನ್ನೂ ಹಲವು ಅದ್ಭುತ ತಂತ್ರಜ್ಞರು ಕಾರ್ಯಕ್ರಮದಲ್ಲಿ ಹಾಜರಾಗಿದ್ದರು. ನಿರ್ಮಾಪಕ ನಿತೀಶ್ ತಿವಾರಿ ಅವರು ಕಾರ್ಯಕ್ರಮಕ್ಕೆ ಗೈರಾಗಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:29 pm, Thu, 15 October 26

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ದಸರಾ ರಜೆಗೆ ಪ್ರವಾಸಿಗರ ದಂಡು: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್
ದಸರಾ ರಜೆಗೆ ಪ್ರವಾಸಿಗರ ದಂಡು: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್
'ನಕ್ಸಲಿಸಂನ ಎಲ್ಲ ಕುರುಹನ್ನೂ ಅಳಿಸಿಹಾಕಬೇಕು'; ಅಮಿತ್ ಶಾ ಹೇಳಿಕೆ
'ನಕ್ಸಲಿಸಂನ ಎಲ್ಲ ಕುರುಹನ್ನೂ ಅಳಿಸಿಹಾಕಬೇಕು'; ಅಮಿತ್ ಶಾ ಹೇಳಿಕೆ
ಹಾರ್ಮುಜ್ ಜಲಸಂಧಿಯಲ್ಲಿ ಮುಳುಗಿದ ಹಡಗು; ಸಮುದ್ರದಲ್ಲಿ ತೇಲಾಡಿದ ಐಫೋನ್‌ಗಳು
ಹಾರ್ಮುಜ್ ಜಲಸಂಧಿಯಲ್ಲಿ ಮುಳುಗಿದ ಹಡಗು; ಸಮುದ್ರದಲ್ಲಿ ತೇಲಾಡಿದ ಐಫೋನ್‌ಗಳು
ಸ್ಟಿಂಗ್ ಆಪರೇಷನ್: ಉನ್ನತ ಮಟ್ಟದ ತನಿಖೆಗೆ ನೀಡಲು ಸರ್ಕಾರ ಹಿಂದೇಟು!
ಸ್ಟಿಂಗ್ ಆಪರೇಷನ್: ಉನ್ನತ ಮಟ್ಟದ ತನಿಖೆಗೆ ನೀಡಲು ಸರ್ಕಾರ ಹಿಂದೇಟು!
ಸೂಳೆಕೆರೆಯ ಋಣ ತೀರಿಸಲು ಮುಂದಾದ ರೈತರು
ಸೂಳೆಕೆರೆಯ ಋಣ ತೀರಿಸಲು ಮುಂದಾದ ರೈತರು
ಬರಪೀಡಿತ ಪಟ್ಟಿಗೆ 9 ತಾಲೂಕುಗಳ ಸೇರ್ಪಡೆ: ತಾಲೂಕುಗಳ ಸಂಖ್ಯೆ 226ಕ್ಕೆ ಏರಿಕೆ
ಬರಪೀಡಿತ ಪಟ್ಟಿಗೆ 9 ತಾಲೂಕುಗಳ ಸೇರ್ಪಡೆ: ತಾಲೂಕುಗಳ ಸಂಖ್ಯೆ 226ಕ್ಕೆ ಏರಿಕೆ
ಸಿಎಂ ಡಿಕೆ ಶಿವಕುಮಾರ್ ಮನೆಗೆ ಭೇಟಿ ನೀಡಿದ ಹಿರಿಯ ನಟ ದೇವರಾಜ್ ಕುಟುಂಬ
ಸಿಎಂ ಡಿಕೆ ಶಿವಕುಮಾರ್ ಮನೆಗೆ ಭೇಟಿ ನೀಡಿದ ಹಿರಿಯ ನಟ ದೇವರಾಜ್ ಕುಟುಂಬ
ಶ್ರೀರಂಗಪಟ್ಟಣ ದಸರಾ ವೈಭವಕ್ಕೆ ಚಾಲನೆ: ಚಾಮುಂಡೇಶ್ವರಿಗೆ ಪುಷ್ಪಾರ್ಚನೆ
ಶ್ರೀರಂಗಪಟ್ಟಣ ದಸರಾ ವೈಭವಕ್ಕೆ ಚಾಲನೆ: ಚಾಮುಂಡೇಶ್ವರಿಗೆ ಪುಷ್ಪಾರ್ಚನೆ
‘ಇಷ್ಟು ಕೆಳಮಟ್ಟಕ್ಕೆ ಇಳಿಯಬಾರದು’: ಗಾನವಿ ಬಗ್ಗೆ ಗಗನ್ ಚಿನ್ನಪ್ಪ ಟೀಕೆ
‘ಇಷ್ಟು ಕೆಳಮಟ್ಟಕ್ಕೆ ಇಳಿಯಬಾರದು’: ಗಾನವಿ ಬಗ್ಗೆ ಗಗನ್ ಚಿನ್ನಪ್ಪ ಟೀಕೆ
ರಾಹುಲ್ ಗಾಂಧಿ, ಪ್ರಿಯಾಂಕಾದೂ ಸ್ಟಿಂಗ್ ವಿಡಿಯೋ ಬರಬಹುದು: ಎಚ್​​ಡಿಕೆ
ರಾಹುಲ್ ಗಾಂಧಿ, ಪ್ರಿಯಾಂಕಾದೂ ಸ್ಟಿಂಗ್ ವಿಡಿಯೋ ಬರಬಹುದು: ಎಚ್​​ಡಿಕೆ