Randeep Hooda: ಅನೌನ್ಸ್ ಆಯ್ತು ‘ಸ್ವತಂತ್ರ ವೀರ್ ಸಾವರ್ಕರ್’; ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳೋರು ಯಾರು?

Swatantra Veer Savarkar Biopic | Mahesh Manjrekar: ಬಾಲಿವುಡ್​ನಲ್ಲಿ ಬಯೋಪಿಕ್ ಟ್ರೆಂಡ್​ಗೆ ಹೊಸ ಚಿತ್ರ ಸೇರ್ಪಡೆಯಾಗಿದೆ. ಸ್ವಾತಂತ್ರ್ಯ ಹೋರಾಟಗಾರ ಸಾವರ್ಕರ್ ಜೀವನಚರಿತ್ರೆ ಆಧರಿಸಿ ‘ಸ್ವತಂತ್ರ ವೀರ ಸಾವರ್ಕರ್’ ಚಿತ್ರ ಅನೌನ್ಸ್ ಆಗಿದೆ. ಚಿತ್ರದ ಬಗ್ಗೆ ಡಿಟೇಲ್ಸ್ ಇಲ್ಲಿದೆ.

Randeep Hooda: ಅನೌನ್ಸ್ ಆಯ್ತು ‘ಸ್ವತಂತ್ರ ವೀರ್ ಸಾವರ್ಕರ್’; ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳೋರು ಯಾರು?
ವೀರ ಸಾವರ್ಕರ್, ರಣದೀಪ್ ಹೂಡಾ
Follow us
TV9 Web
| Updated By: shivaprasad.hs

Updated on:Mar 23, 2022 | 3:44 PM

ಭಾರತೀಯ ಚಿತ್ರರಂಗದಲ್ಲಿ ಸದ್ಯ ಸ್ವಾತಂತ್ರ್ಯ ಹೋರಾಟ ಹಾಗೂ ಬಯೋಪಿಕ್ ಟ್ರೆಂಡ್ ಜೋರಾಗಿದೆ. ಈ ವಸ್ತು ವಿಷಯದಲ್ಲಿ ಈಗಾಗಲೇ ಹಲವು ಚಿತ್ರಗಳು ತೆರೆಗೆ ಬಂದಿದ್ದು, ಒಂದಷ್ಟು ಚಿತ್ರಗಳು ಅನೌನ್ಸ್ ಆಗಿವೆ. ಈ ಪಟ್ಟಿಗೆ ಹೊಸ ಸೇರ್ಪಡೆ ‘ಸ್ವಾತಂತ್ರ್ಯ ವೀರ ಸಾವರ್ಕರ್’. ಇತಿಹಾಸದಲ್ಲಿ ಸಾಕಷ್ಟು ಚರ್ಚೆಯಾಗಿರುವ, ಭಿನ್ನ ಆಯಾಮಗಳಲ್ಲಿ ಜನರಿಂದ ವಿಮರ್ಶೆಗೆ ಒಳಗಾದವರು ಸಾವರ್ಕರ್. ಇದೀಗ ಅವರ ಜೀವನ ಚರಿತ್ರೆಯನ್ನು ತೆರೆಯ ಮೇಲೆ ತರಲು ಬಾಲಿವುಡ್ ಸಿದ್ಧತೆ ನಡೆಸಿದೆ. ಚಿತ್ರರಂಗದ ಘಟಾನುಘಟಿಗಳು ಇದಕ್ಕೆ ಕೈಜೋಡಿಸುತ್ತಿದ್ದು, ಸಾಕಷ್ಟು ಕುತೂಹಲ ಮೂಡಿಸಿದೆ. ಸಾಮಾನ್ಯವಾಗಿ ಖ್ಯಾತನಾಮರ ಬಯೋಪಿಕ್ ಅನೌನ್ಸ್ ಆದಾಗ ಬರುವ ಮೊದಲ ಪ್ರಶ್ನೆ ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಯಾರು ಎನ್ನುವುದು? ‘ಸ್ವತಂತ್ರ ವೀರ್ ಸಾವರ್ಕರ್’ (Swatantra Veer Savarkar) ಚಿತ್ರದಲ್ಲಿ ಖ್ಯಾತ ನಟ ರಣದೀಪ್ ಹೂಡ (Randeep Hooda) ಸಾವರ್ಕರ್ ಆಗಿ ಬಣ್ಣಹಚ್ಚಲಿದ್ದಾರೆ. ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿರುವವರು ಮಹೇಶ್ ಮಾಂಜ್ರೇಕರ್.

‘ಸ್ವಾತಂತ್ರ್ಯ ವೀರ್ ಸಾವರ್ಕರ್’ ಚಿತ್ರವನ್ನು ‘ಶಹೀದ್ ದಿವಸ’ವಾದ ಇಂದು (ಮಾರ್ಚ್ 23) ಅನೌನ್ಸ್ ಮಾಡಿದ್ದಾರೆ ರಣದೀಪ್ ಹೂಡ. ಆನಂದ್ ಪಂಡಿತ್ ಹಾಗೂ ಸಂದೀಪ್ ಸಿಂಗ್ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರ ಅನೌನ್ಸ್ ಮಾಡಿ ಬರೆದುಕೊಂಡಿರುವ ರಣದೀಪ್ ಹೂಡ, ‘‘ಸಾವರ್ಕರ್ ಪಾತ್ರವನ್ನು ನಿರ್ವಹಿಸುವುದು ಒಂದು ಗೌರವ’’ ಎಂದು ಹೇಳಿದ್ದಾರೆ.

ರಣದೀಪ್ ಹೂಡ ಪೋಸ್ಟ್ ಇಲ್ಲಿದೆ:

ವೀರ ಸಾವರ್ಕರ್ ನಿಲುವಿನ ಬಗ್ಗೆ ದೇಶದಲ್ಲಿ ಹಲವು ಆಯಾಮದಲ್ಲಿ ಚರ್ಚೆಗಳು ನಡೆಯುತ್ತವೆ. ಹೀಗಿರುವಾಗ ಸಾವರ್ಕರ್ ಬಯೋಪಿಕ್ ತಯಾರಿಸುವ ಕಾರಣವೇನು ಎಂಬುದನ್ನು ರಣದೀಪ್ ಹೂಡ ವಿವರಿಸಿದ್ದಾರೆ. ‘‘ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿ, ಸ್ವಾತಂತ್ರ್ಯ ಗಳಿಸಲು ಬಹಳಷ್ಟು ಜನರು ಕಾರಣರಾಗಿದ್ದಾರೆ. ಆದರೆ ಎಲ್ಲರೂ ಅಷ್ಟಾಗಿ ಗುರುತಿಸಲ್ಪಟ್ಟಿಲ್ಲ. ವಿನಾಯಕ ದಾಮೋದರ ಸಾವರ್ಕರ್ ಅವರ ಬಗ್ಗೆ ಸಾಕಷ್ಟು ತಪ್ಪು ಕಲ್ಪನೆಗಳು ಹಾಗೂ ಚರ್ಚೆಗಳು ನಡೆದಿವೆ. ಅವರ ಕತೆಯನ್ನು ಜನರಿಗೆ ಹೇಳಬೇಕು. ಇದಕ್ಕಾಗಿ ‘ಸರಬ್ಜಿತ್’ ನಂತರ ಸಂದೀಪ್ ಅವರೊಂದಿಗೆ ಸೇರಿ ಕೆಲಸ ಮಾಡುತ್ತಿರುವುದಕ್ಕೆ ಸಂತಸವಾಗಿದೆ. ಇದು ಮತ್ತೊಂದು ಸವಾಲಿನ ಪಾತ್ರವಾಗಲಿದೆ’’ ಎಂದು ರಣದೀಪ್ ಹೂಡ ಹೇಳಿದ್ದಾರೆ.

ಚಿತ್ರದ ಬಗ್ಗೆ ನಿರ್ದೇಶಕ ಮಹೇಶ್ ಮಾಂಜ್ರೇಕರ್ ಟ್ವೀಟ್:

ಜೂನ್ ತಿಂಗಳಲ್ಲಿ ಚಿತ್ರದ ಶೂಟಿಂಗ್ ಪ್ರಾರಂಭವಾಗಲಿದೆ. ಲಂಡನ್, ಮಹಾರಾಷ್ಟ್ರ, ಅಂಡಮಾನ್ ಮತ್ತು ನಿಕೋಬಾರ್ ಮೊದಲಾದ ಸ್ಥಳಗಳಲ್ಲಿ ಚಿತ್ರೀಕರಣ ನಡೆಸುವ ಯೋಜನೆಯನ್ನು ಚಿತ್ರತಂಡ ಹಾಕಿಕೊಂಡಿದೆ. ಚಿತ್ರದ ಬಗ್ಗೆ ಮತ್ತಷ್ಟು ಮಾಹಿತಿಗಳು ಇನ್ನಷ್ಟೇ ಘೋಷಣೆಯಾಗಬೇಕಿದೆ.

ಇದನ್ನೂ ಓದಿ:

ಪರಭಾಷೆ ಸಿನಿಮಾಗಳಿಂದ ‘ಜೇಮ್ಸ್​’ ಚಿತ್ರಕ್ಕೆ ತೊಂದರೆ; ಆಕ್ರೋಶ ಹೊರಹಾಕಿದ ಅಪ್ಪು ಅಭಿಮಾನಿಗಳು

Samantha: ಮಾಜಿ ಪತಿಯನ್ನು ಅನ್​ಫಾಲೋ ಮಾಡಿದ ಸಮಂತಾ; ಫ್ಯಾನ್ಸ್ ಗಮನಿಸಿದ್ರು ಮತ್ತೊಂದು ಅಚ್ಚರಿಯ ವಿಚಾರ

Published On - 3:30 pm, Wed, 23 March 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ