‘ಡಾನ್​ 3’ನಲ್ಲಿ ಸೆಲೆಬ್ರಿಟಿಗಳ ದಂಡು; ಶಾರುಖ್ ಜತೆ ನಟಿಸಲಿದ್ದಾರೆ ರಣವೀರ್, ಅಮಿತಾಭ್​?

| Updated By: ರಾಜೇಶ್ ದುಗ್ಗುಮನೆ

Updated on: Sep 19, 2022 | 8:35 PM

ಅಮಿತಾಭ್ ಬಚ್ಚನ್ ಅವರ ಪಾತ್ರ ಹೇಗಿರಲಿದೆ ಎಂಬುದು ರಿವೀಲ್ ಆಗಿಲ್ಲ. ಮೂಲಗಳ ಪ್ರಕಾರ ರಣವೀರ್ ಸಿಂಗ್ ಕೂಡ ಡಾನ್ ಪಾತ್ರದಲ್ಲಿ ಮಿಂಚಲಿದ್ದಾರೆ. ಶಾರುಖ್ ಹಾಗೂ ರಣವೀರ್ ಪಾತ್ರಗಳ ಮಧ್ಯೆ ಫೈಟ್​ ನಡೆಯಲಿದೆ ಎನ್ನಲಾಗುತ್ತಿದೆ.

‘ಡಾನ್​ 3’ನಲ್ಲಿ ಸೆಲೆಬ್ರಿಟಿಗಳ ದಂಡು; ಶಾರುಖ್ ಜತೆ ನಟಿಸಲಿದ್ದಾರೆ ರಣವೀರ್, ಅಮಿತಾಭ್​?
ರಣವೀರ್​-ಶಾರುಖ್​-ಅಮಿತಾಭ್
Follow us on

‘ಡಾನ್​’ (Don Movie) ಸರಣಿಯ ಎರಡು ಚಿತ್ರಗಳು ಸೂಪರ್ ಹಿಟ್ ಆಗಿವೆ. ಫರ್ಹಾನ್​ ಅಖ್ತರ್ ನಿರ್ದೇಶನದ ‘ಡಾನ್’ ಹಾಗೂ ‘ಡಾನ್​ 2’ ಸಿನಿಮಾಗಳು ಬಾಕ್ಸ್ ಆಫೀಸ್​ನಲ್ಲಿ ಧೂಳೆಬ್ಬಿಸಿದ್ದವು. ‘ಡಾನ್​’ ಸರಣಿಯಲ್ಲಿ ಮತ್ತೊಂದು ಸಿನಿಮಾ ಸಿದ್ಧವಾಗಲಿದೆ ಎನ್ನುವ ಸುದ್ದಿ ಈ ಮೊದಲಿನಿಂದಲೇ ಚಾಲ್ತಿಯಲ್ಲಿದೆ. ಆದರೆ, ಈವರೆಗೆ ಅದು ನಿಜವಾಗಿಲ್ಲ. ಫರ್ಹಾನ್​ ಅಖ್ತರ್ ಕಡೆಯಿಂದಲೂ ಈ ಬಗ್ಗೆ ಯಾವುದೇ ಅಪ್​​ಡೇಟ್​ ಸಿಕ್ಕಿಲ್ಲ. ಹೀಗಿರುವಾಗಲೇ ಸಿನಿಮಾ ಬಗ್ಗೆ ಸಾಕಷ್ಟು ಸುದ್ದಿ ಹುಟ್ಟಿಕೊಂಡಿದೆ. ಈಗ ಒಂದು ಲೇಟೆಸ್ಟ್​ ಸುದ್ದಿ ಹರಿದಾಡಿದೆ. ‘ಡಾನ್​ 3’ ಚಿತ್ರದಲ್ಲಿ ಅಮಿತಾಭ್ ಬಚ್ಚನ್, ರಣವೀರ್ ಸಿಂಗ್ (Ranveer Singh)​ ಕೂಡ ನಟಿಸಲಿದ್ದಾರಂತೆ! ಈ ವಿಚಾರ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

1978ರಲ್ಲಿ ಮೂಲ ‘ಡಾನ್​’ ಸಿನಿಮಾ ತೆರೆಗೆ ಬಂತು. ಈ ಚಿತ್ರದಲ್ಲಿ ಅಮಿತಾಭ್ ಬಚ್ಚನ್ ನಟಿಸಿದ್ದರು. ಈ ಚಿತ್ರದಲ್ಲಿ ಒಳ್ಳೆಯ ಗುಣ ಹೊಂದಿರುವ ವಿಜಯ್ ಬದುಕಿದರೆ ಡಾನ್ ಸಾಯುತ್ತಾನೆ. ಇದೇ ಹೆಸರಲ್ಲಿ ಫರ್ಹಾನ್​ ಅಖ್ತರ್ ‘ಡಾನ್​’ ಸಿನಿಮಾ ಮಾಡಿದರು. ಶಾರುಖ್ ಖಾನ್ ಅವರು ಡಾನ್​ ಆಗಿ ಮಿಂಚಿದ್ದರು. ಅವರ ಪಾತ್ರ ಎಲ್ಲರ ಗಮನ ಸೆಳೆದಿತ್ತು. ಈಗ ‘ಡಾನ್​ 3’ ಚಿತ್ರದಲ್ಲಿ ಅಮಿತಾಭ್ ಹಾಗೂ ರಣವೀರ್ ಸಿಂಗ್ ಕೂಡ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

ಅಮಿತಾಭ್ ಬಚ್ಚನ್ ಅವರ ಪಾತ್ರ ಹೇಗಿರಲಿದೆ ಎಂಬುದು ರಿವೀಲ್ ಆಗಿಲ್ಲ. ಮೂಲಗಳ ಪ್ರಕಾರ ರಣವೀರ್ ಸಿಂಗ್ ಕೂಡ ಡಾನ್ ಪಾತ್ರದಲ್ಲಿ ಮಿಂಚಲಿದ್ದಾರೆ. ಶಾರುಖ್ ಹಾಗೂ ರಣವೀರ್ ಪಾತ್ರಗಳ ಮಧ್ಯೆ ಫೈಟ್​ ನಡೆಯಲಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಚಿತ್ರತಂಡದಿಂದ ಅಧಿಕೃತ ಮಾಹಿತಿ ಸಿಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.

ಇದನ್ನೂ ಓದಿ
ಹಲವು ತಿಂಗಳ ಬಳಿಕ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್​ಗೆ ಫುಲ್ ರಿಲೀಫ್
ಆರ್ಯನ್​ ಖಾನ್​ ಕೇಸ್​ ಮರೆತು ಸಾರ್ವಜನಿಕವಾಗಿ ಕಾಣಿಸಿಕೊಂಡ ಶಾರುಖ್ ಪತ್ನಿ ಗೌರಿ ಖಾನ್​, ಪುತ್ರಿ ಸುಹಾನಾ
ಬೆಂಗಳೂರಿನಲ್ಲಿ ಕಾಣಿಸಿಕೊಂಡ ಆರ್ಯನ್​ ಖಾನ್​; ಮಗನ ಹೆಗಲಿಗೆ ದೊಡ್ಡ ಜವಾಬ್ದಾರಿ ಹೊರಿಸಿದ ಶಾರುಖ್​?
ಆರ್ಯನ್​ ಖಾನ್​​ಗೆ ಬಾಡಿಗಾರ್ಡ್​ ಫೈನಲ್​? ವರ್ಷದ ಸಂಬಳ 2.7 ಕೋಟಿ ರೂಪಾಯಿ

ಈವರೆಗೆ ‘ಡಾನ್ 3’ ಬಗ್ಗೆ ಯಾವುದೇ ಅಪ್​​ಡೇಟ್ ಸಿಕ್ಕಿಲ್ಲ. ಶಾರುಖ್ ಖಾನ್ ಸದ್ಯ ಮೂರು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದರ ಜತೆಗೆ ಕೆಲ ಚಿತ್ರಗಳಲ್ಲಿ ಅತಿಥಿ ಪಾತ್ರ ಮಾಡುತ್ತಿದ್ದಾರೆ. ಈ ಎಲ್ಲಾ ಕಾರಣದಿಂದ ಕೆಲ ವರ್ಷ ಅವರ ಕಾಲ್​​ಶೀಟ್ ಸಿಗೋದು ಅನುಮಾನ. ಫರ್ಹಾನ್ ಕೂಡ ಸದ್ಯ ಸ್ಕ್ರಿಪ್ಟ್​ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಎಲ್ಲಾ ಕಾರಣದಿಂದ ಈ ಸಿನಿಮಾ ಸೆಟ್ಟೇರಲು ಮತ್ತಷ್ಟು ಸಮಯ ತೆಗೆದುಕೊಳ್ಳಬಹುದು.

ಇದನ್ನೂ ಓದಿ: ‘ಮಗನೇ ಆ ಶರ್ಟ್​ ನನ್ನದು’; ಆರ್ಯನ್​ ಖಾನ್ ಹೊಸ ಪೋಸ್ಟ್​ಗೆ ಕಮೆಂಟ್ ಹಾಕಿ ಕಾಲೆಳೆದ ಶಾರುಖ್​

ಪ್ರಿಯಾಂಕಾ ಚೋಪ್ರಾ ಅವರು ಡಾನ್ ಸರಣಿಯಲ್ಲಿ ಪೊಲೀಸ್ ಆಗಿ ಮಿಂಚಿದ್ದರು. ಆದರೆ, ಈಗ ಅವರು ವಿದೇಶದಲ್ಲಿ ಸೆಟಲ್ ಆಗಿದ್ದಾರೆ. ಹಾಲಿವುಡ್ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಕಾರಣದಿಂದ ಅವರು ಮತ್ತೆ ‘ಡಾನ್’ ಸಿನಿಮಾದಲ್ಲಿ ನಟಿಸೋದು ಅನುಮಾನ ಎನ್ನಲಾಗುತ್ತಿದೆ.