AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ranveer Singh: ರಣವೀರ್​ ಸಿಂಗ್​-ದೀಪಿಕಾ ಪಡುಕೋಣೆ ಡಿವೋರ್ಸ್​ ವದಂತಿ; ಒಂದೇ ಫೋಟೋದಿಂದ ಫುಲ್​ಸ್ಟಾಪ್​ ಹಾಕಿದ ನಟ

Deepika Padukone: ರಣವೀರ್​ ಸಿಂಗ್​ ಹುಟ್ಟುಹಬ್ಬಕ್ಕೆ ದೀಪಿಕಾ ಪಡುಕೋಣೆ ಅವರ ಕಡೆಯಿಂದ ಯಾವುದೇ ವಿಶ್​ ಬರಲಿಲ್ಲ. ಇದು ನೆಟ್ಟಿಗರ ಅನುಮಾನಕ್ಕೆ ಕಾರಣ ಆಯಿತು.

Ranveer Singh: ರಣವೀರ್​ ಸಿಂಗ್​-ದೀಪಿಕಾ ಪಡುಕೋಣೆ ಡಿವೋರ್ಸ್​ ವದಂತಿ; ಒಂದೇ ಫೋಟೋದಿಂದ ಫುಲ್​ಸ್ಟಾಪ್​ ಹಾಕಿದ ನಟ
ರಣವೀರ್ ಸಿಂಗ್​, ದೀಪಿಕಾ ಪಡುಕೋಣೆ
ಮದನ್​ ಕುಮಾರ್​
|

Updated on: Jul 10, 2023 | 5:32 PM

Share

ಸೆಲೆಬ್ರಿಟಿಗಳ ವೈಯಕ್ತಿಕ ಜೀವನದ ಬಗ್ಗೆ ಅನೇಕ ಗಾಸಿಪ್​ಗಳು ಹಬ್ಬುತ್ತ ಇರುತ್ತವೆ. ಅದರಲ್ಲೂ ಲವ್​, ಬ್ರೇಕಪ್​, ಮದುವೆ, ವಿಚ್ಛೇದನದ (Divorce) ವಿಚಾರದಲ್ಲಿ ವದಂತಿಗಳಿಗೆ ಲೆಕ್ಕವೇ ಇಲ್ಲ. ಇತ್ತೀಚೆಗೆ ದೀಪಿಕಾ ಪಡುಕೋಣೆ (Deepika Padukone) ಮತ್ತು ರಣವೀರ್​ ಸಿಂಗ್​ ಅವರ ದಾಂಪತ್ಯದ ಬಗ್ಗೆ ಗಾಸಿಪ್​ ಮಂದಿಗೆ ಆಸಕ್ತಿ ಕೆರಳಿದೆ. ಈ ದಂಪತಿ ನಡುವೆ ಎಲ್ಲವೂ ಸರಿಯಿಲ್ಲ ಎಂದು ವದಂತಿ ಹಬ್ಬಿಸಲಾಗಿದೆ. ಆದಷ್ಟು ಬೇಗ ರಣವೀರ್​ ಸಿಂಗ್​ (Ranveer Singh) ಮತ್ತು ದೀಪಿಕಾ ಪಡುಕೋಣೆ ಅವರು ಡಿವೋರ್ಸ್​ ಪಡೆಯಬಹುದು ಎಂದೆಲ್ಲ ಗಾಳಿಸುದ್ದಿ ಹರಡಿಸಲಾಗಿತ್ತು. ಆದರೆ ಆ ವದಂತಿಯನ್ನು ರಣವೀರ್​ ಸಿಂಗ್​ ತಳ್ಳಿ ಹಾಕಿದ್ದಾರೆ. ಪತ್ನಿ ಜೊತೆಗಿನ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಅವರು ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

ಡಿವೋರ್ಸ್​ ವದಂತಿ ಹುಟ್ಟಿದ್ದು ಹೇಗೆ?

ಜುಲೈ 6ರಂದು ರಣವೀರ್​ ಸಿಂಗ್​ ಅವರ ಜನ್ಮದಿನ. ಅಭಿಮಾನಿಗಳು, ಆಪ್ತರು ಮತ್ತು ಸೆಲೆಬ್ರಿಟಿಗಳು ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದರು. ಆದರೆ ದೀಪಿಕಾ ಪಡುಕೋಣೆ ಅವರ ಕಡೆಯಿಂದ ಯಾವುದೇ ವಿಶ್​ ಬರಲಿಲ್ಲ. ಇದು ನೆಟ್ಟಿಗರ ಅನುಮಾನಕ್ಕೆ ಕಾರಣ ಆಯಿತು. ಸೋಶಿಯಲ್​ ಮೀಡಿಯಾದಲ್ಲಿ ಪರಸ್ಪರ ವಿಶ್​ ಮಾಡಿಕೊಳ್ಳುತ್ತಿದ್ದ ಈ ದಂಪತಿ ಈಗ ಸೈಲೆಂಟ್​ ಆಗಿದ್ದು ನೋಡಿ ಎಲ್ಲರಿಗೂ ಅನುಮಾನ ಮೂಡಿತು. ಆದರೆ ಸ್ವಲ್ಪ ಸಮಯದಲ್ಲೇ ಅದು ಕ್ಲಿಯರ್​ ಆಯಿತು.

ಇದನ್ನೂ ಓದಿ: Asin: ಡಿವೋರ್ಸ್​ ವದಂತಿಗೆ ತೆರೆ ಎಳೆದ ನಟಿ ಆಸಿನ್​; ನಿಟ್ಟುಸಿರು ಬಿಟ್ಟ ಅಭಿಮಾನಿಗಳು

ಒಂದು ದಿನ ತಡವಾಗಿ ವಿಶ್​ ಮಾಡಿದ ದೀಪಿಕಾ ಪಡುಕೋಣೆ:

ಪತಿ ರಣವೀರ್ ಸಿಂಗ್​ ಜನ್ಮದಿನಕ್ಕೆ ಶುಭ ಕೋರಲು ದೀಪಿಕಾ ಪಡುಕೋಣೆ ಮರೆತಿದ್ದರು ಎನಿಸುತ್ತದೆ. ಒಂದು ದಿನ ತಡವಾಗಿ, ಅಂದರೆ ಜುಲೈ 7ರ ರಾತ್ರಿ ದೀಪಿಕಾ ಅವರು ಪತಿಗೆ ಹುಟ್ಟುಹಬ್ಬದ ವಿಶ್​ ಮಾಡಿದರು. ಅಲ್ಲಿಗೆ ಎಲ್ಲರ ಅನುಮಾನಕ್ಕೆ ತೆರೆ ಬಿತ್ತು. ಅದೂ ಸಾಲದೆಂಬಂತೆ ಈಗ ರಣವೀರ್​ ಸಿಂಗ್​ ಕೂಡ ಪತ್ನಿಗೆ ಧನ್ಯವಾದ ತಿಳಿಸುವ ಮೂಲಕ ಎಲ್ಲ ವದಂತಿಗಳಿಗೆ ಪೂರ್ಣವಿರಾಮ ಹಾಕಿದ್ದಾರೆ.

ಇದನ್ನೂ ಓದಿ: Ranveer Singh: ‘ವೈರಲ್​ ಆದ ಆ ಫೋಟೋ ನಂದಲ್ಲ’: ವಿಚಾರಣೆ ವೇಳೆ ಶಾಕಿಂಗ್​ ವಿಚಾರ ತಿಳಿಸಿದ ರಣವೀರ್​ ಸಿಂಗ್​

ವೈರಲ್​ ಆಗಿದೆ ಹೊಸ ಫೋಟೋ:

ದೀಪಿಕಾ ಪಡುಕೋಣೆ ಜೊತೆ ಖುಷಿಯಾಗಿ ಕಾಲ ಕಳೆದ ಫೋಟೋವನ್ನು ರಣವೀರ್​ ಸಿಂಗ್​ ಅವರು ಶೇರ್​ ಮಾಡಿಕೊಂಡಿದ್ದಾರೆ. ‘ಹುಟ್ಟುಹಬ್ಬದ ಶುಭ ಕೋರಿದ್ದಕ್ಕೆ ಧನ್ಯವಾದಗಳು’ ಎಂಬ ಕ್ಯಾಪ್ಷನ್​ನೊಂದಿಗೆ ಅವರು ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಹೊಸ ಫೋಟೋ ಹಂಚಿಕೊಂಡಿದ್ದಾರೆ. ಒಟ್ಟಿನಲ್ಲಿ ಈ ದಂಪತಿ ನಡುವೆ ಯಾವುದೇ ಕಿರಿಕ್​ ಇಲ್ಲ ಎಂಬುದು ಸ್ಪಷ್ಟವಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
ಸೊಳ್ಳೆ ಕಾಟಕ್ಕೆ ಮುಕ್ತಿ ನೀಡಿ ಪ್ಲೀಸ್, ದರ್ಶನ್; ನಾನೇನು ಮಾಡೋಕಾಗಲ್ಲ DGP
ಸೊಳ್ಳೆ ಕಾಟಕ್ಕೆ ಮುಕ್ತಿ ನೀಡಿ ಪ್ಲೀಸ್, ದರ್ಶನ್; ನಾನೇನು ಮಾಡೋಕಾಗಲ್ಲ DGP
ಕೋಟಿ ಆಸ್ತಿಗಾಗಿ ಜೀವಂತ ವೃದ್ಧನ ಮರಣ ಪ್ರಮಾಣಪತ್ರ ಸೃಷ್ಟಿಸಿ ವಂಚನೆ!
ಕೋಟಿ ಆಸ್ತಿಗಾಗಿ ಜೀವಂತ ವೃದ್ಧನ ಮರಣ ಪ್ರಮಾಣಪತ್ರ ಸೃಷ್ಟಿಸಿ ವಂಚನೆ!
ಒಂಟಿ ಮನೆಗಳನ್ನೇ ದರೋಡೆ ಮಾಡ್ತಿದ್ದ ಖತರ್ನಾಕ್ ಗ್ಯಾಂಗ್ ಬಂಧನ
ಒಂಟಿ ಮನೆಗಳನ್ನೇ ದರೋಡೆ ಮಾಡ್ತಿದ್ದ ಖತರ್ನಾಕ್ ಗ್ಯಾಂಗ್ ಬಂಧನ
ನಾಗೇಂದ್ರ ರಾಜೀನಾಮೆ ಪಟ್ಟು, ರಾಜ್ಯಾದ್ಯಂತ ಪ್ರತಿಭಟನೆಗೂ ಬಿಜೆಪಿ ಪ್ಲ್ಯಾನ್
ನಾಗೇಂದ್ರ ರಾಜೀನಾಮೆ ಪಟ್ಟು, ರಾಜ್ಯಾದ್ಯಂತ ಪ್ರತಿಭಟನೆಗೂ ಬಿಜೆಪಿ ಪ್ಲ್ಯಾನ್
ಇಂದು ನಾಗಪಂಚಮಿಯ ಜೊತೆಗೆ ಸೂರ್ಯ ಸಂಕ್ರಮಣದ ವಿಶೇಷ ಪರ್ವ ದಿನ!
ಇಂದು ನಾಗಪಂಚಮಿಯ ಜೊತೆಗೆ ಸೂರ್ಯ ಸಂಕ್ರಮಣದ ವಿಶೇಷ ಪರ್ವ ದಿನ!
ಚಿಕ್ಕಪ್ಪನ ಜೊತೆ ನಟನೆ, ನಟ ನಿರಂಜನ್ ಹೇಳಿದ್ದೇನು? ವಿಡಿಯೋ ನೋಡಿ
ಚಿಕ್ಕಪ್ಪನ ಜೊತೆ ನಟನೆ, ನಟ ನಿರಂಜನ್ ಹೇಳಿದ್ದೇನು? ವಿಡಿಯೋ ನೋಡಿ
ದರ್ಶನ್ ಅಭಿಮಾನಿಗಳಿಗೆ ನಗುತ್ತಲೇ ಬುದ್ಧಿವಾದ ಹೇಳಿದ ವಿಜಯಲಕ್ಷ್ಮಿ ದರ್ಶನ್
ದರ್ಶನ್ ಅಭಿಮಾನಿಗಳಿಗೆ ನಗುತ್ತಲೇ ಬುದ್ಧಿವಾದ ಹೇಳಿದ ವಿಜಯಲಕ್ಷ್ಮಿ ದರ್ಶನ್
ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದ ಸಂಸ್ಕೃತಿಯ ಸೊಗಡು
ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದ ಸಂಸ್ಕೃತಿಯ ಸೊಗಡು
ವಂದೇ ಮಾತರಂಗೆ ಅವಮಾನಿಸಿದ ಆರೋಪ: ಸೋನಿಯಾ ಗಾಂಧಿ ವಿರುದ್ಧ ಕೇಸ್ ಬುಕ್!
ವಂದೇ ಮಾತರಂಗೆ ಅವಮಾನಿಸಿದ ಆರೋಪ: ಸೋನಿಯಾ ಗಾಂಧಿ ವಿರುದ್ಧ ಕೇಸ್ ಬುಕ್!
ಮತ್ತೆ ಮುನ್ನೆಲೆಗೆ ಬಂದ ನೈಸ್ ರಸ್ತೆ ಟೋಲ್:ಸಿಡಿದೆದ್ದ ಪ್ರತಿಪಕ್ಷಗಳು
ಮತ್ತೆ ಮುನ್ನೆಲೆಗೆ ಬಂದ ನೈಸ್ ರಸ್ತೆ ಟೋಲ್:ಸಿಡಿದೆದ್ದ ಪ್ರತಿಪಕ್ಷಗಳು