ಅಂದುಕೊಂಡಷ್ಟು ಗಳಿಕೆ ಮಾಡಲೇ ಇಲ್ಲ ‘ಟೈಗರ್ 3’ ಸಿನಿಮಾ; ದಾಖಲೆ ಮುರಿಯಲು ವಿಫಲ

‘ಜವಾನ್’ ಹಾಗೂ ‘ಪಠಾಣ್’ ಸಿನಿಮಾಗಳ ಮೊದಲ ದಿನದ ಕಲೆಕ್ಷನ್ ಭರ್ಜರಿಯಾಗಿತ್ತು. ಈ ಗಳಿಕೆಯನ್ನು ಮುರಿಯಲು ‘ಟೈಗರ್ 3’ ವಿಫಲವಾಗಿದೆ. ಅಂದಹಾಗೆ, ‘ಟೈಗರ್ 3’ ಸಿನಿಮಾದ ಮೊದಲ ದಿನದ ಗಳಿಕೆ 44 ಕೋಟಿ ರೂಪಾಯಿ.

ಅಂದುಕೊಂಡಷ್ಟು ಗಳಿಕೆ ಮಾಡಲೇ ಇಲ್ಲ ‘ಟೈಗರ್ 3’ ಸಿನಿಮಾ; ದಾಖಲೆ ಮುರಿಯಲು ವಿಫಲ
ಕತ್ರಿನಾ ಕೈಫ್​, ಸಲ್ಮಾನ್​ ಖಾನ್​
Follow us
ರಾಜೇಶ್ ದುಗ್ಗುಮನೆ
|

Updated on: Nov 13, 2023 | 7:03 AM

ಸಲ್ಮಾನ್ ಖಾನ್ (Salman Khan) ನಟನೆಯ ‘ಟೈಗರ್ 3’ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಭಾರೀ ನಿರೀಕ್ಷೆ ಇತ್ತು. ಈ ನಿರೀಕ್ಷೆಯನ್ನು ಸಿನಿಮಾ ಹುಸಿ ಮಾಡಲಿಲ್ಲ. ಭರ್ಜರಿ ಆ್ಯಕ್ಷನ್​ನೊಂದಿಗೆ ಸಿನಿಮಾ ಮೂಡಿ ಬಂದಿದೆ. ಇಷ್ಟೇ ಅಲ್ಲ, ಸಿನಿಮಾದಲ್ಲಿ ಶಾರುಖ್ ಖಾನ್ ಹಾಗೂ ಹೃತಿಕ್ ರೋಷನ್ ಅವರ ಅತಿಥಿ ಪಾತ್ರ ಗಮನ ಸೆಳೆದಿದೆ. ಗಳಿಕೆ ವಿಚಾರದಲ್ಲಿ ‘ಟೈಗರ್ 3’ ಸಿನಿಮಾ ಕೊಂಚ ಎಡವಿದಂತೆ ಕಾಣುತ್ತಿದೆ. ಸಿನಿಮಾ ಒಳ್ಳೆಯ ಗಳಿಕೆ ಮಾಡಿದೆಯಾದರೂ ನಿರೀಕ್ಷಿತ ಮಟ್ಟದಲ್ಲಿ ಹಣ ಬಂದಿಲ್ಲ.

‘ಜವಾನ್’ ಹಾಗೂ ‘ಪಠಾಣ್’ ಸಿನಿಮಾಗಳ ಮೊದಲ ದಿನದ ಕಲೆಕ್ಷನ್ ಭರ್ಜರಿಯಾಗಿತ್ತು. ಈ ಗಳಿಕೆಯನ್ನು ಮುರಿಯಲು ‘ಟೈಗರ್ 3’ ವಿಫಲವಾಗಿದೆ. ಅಂದಹಾಗೆ, ‘ಟೈಗರ್ 3’ ಸಿನಿಮಾದ ಮೊದಲ ದಿನದ ಗಳಿಕೆ 44 ಕೋಟಿ ರೂಪಾಯಿ. ಆದರೆ, ಶಾರುಖ್ ಸಿನಿಮಾಗಳು ಈ ಗಳಿಕೆಯನ್ನು ಮೀರಿವೆ. ಇದು ಸಲ್ಲು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.

ಸಲ್ಮಾನ್ ಖಾನ್ ಅವರು ಬ್ಯಾಕ್​ ಟು ಬ್ಯಾಕ್ ಸೋಲು ಕಾಣುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ರಿಲೀಸ್ ಆದ ಸಿನಿಮಾಗಳಿಕೆ ಹೋಲಿಕೆ ಮಾಡಿದರೆ ‘ಟೈಗರ್ 3’ ಸಿನಿಮಾ ಒಳ್ಳೆಯ ಗಳಿಕೆ ಮಾಡಿದೆ ಎಂದೇ ಹೇಳಬಹುದು. ಇಂದಿನಿಂದ (ನವೆಂಬರ್ 13) ದೀಪಾವಳಿ ರಜೆ ಆರಂಭ ಆಗುತ್ತದೆ. ಇದು ಚಿತ್ರದ ಕಲೆಕ್ಷನ್ ಹೆಚ್ಚಲು ಸಹಕಾರಿ ಆಗಲಿದೆ.

ಯಶ್ ರಾಜ್ ಫಿಲ್ಮ್ಸ್​ ಸ್ಪೈ ಯೂನಿವರ್ಸ್ ಅಡಿಯಲ್ಲಿ ‘ಟೈಗರ್ 3′ ಸಿನಿಮಾ ಮೂಡಿ ಬಂದಿದೆ. ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಅವರ ಆ್ಯಕ್ಷನ್ ಪ್ರೇಕ್ಷಕರ ಹೃದಯವನ್ನು ಗೆಲ್ಲುತ್ತಿದೆ. ಇಮ್ರಾನ್ ಹಶ್ಮಿ ಅವರ ವಿಲನ್ ಅವತಾರ ಪ್ರೇಕ್ಷಕರಿಗೆ ಇಷ್ಟವಾಗುತ್ತಿದೆ.

‘ಜವಾನ್’ ಹಾಗೂ ‘ಪಠಾಣ್’ ಕಲೆಕ್ಷನ್ ವಿವರ

ಶಾರುಖ್ ಖಾನ್ ನಟನೆಯ ‘ಪಠಾಣ್’ ಈ ವರ್ಷ ಜನವರಿ 25ರಂದು ಬಿಡುಗಡೆ ಆಯಿತು. ಮೊದಲ ದಿನವೇ ಈ ಚಿತ್ರ 57 ಕೋಟಿ ರೂ. ಗಳಿಕೆ ಮಾಡಿ ಭರ್ಜರಿ ಓಪನಿಂಗ್ ಕಂಡಿತು. ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ ಚಿತ್ರದ ಕಲೆಕ್ಷನ್ 540.51 ಕೋಟಿ ರೂ. ಆಗಿದೆ.

ಇದನ್ನೂ ಓದಿ: ರಿಲೀಸ್​ಗೂ ಮೊದಲೇ ‘ಜವಾನ್’ ಸಿನಿಮಾ ದಾಖಲೆ ಪುಡಿಮಾಡಿದ ‘ಅನಿಮಲ್’ ಸಿನಿಮಾ

ಇನ್ನು, ‘ಜವಾನ್’ ಸಿನಿಮಾ ಸೆಪ್ಟೆಂಬರ್7 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಮೊದಲ ದಿನವೇ ಚಿತ್ರ 75 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಭಾರತದ ಬಾಕ್ಸ್ ಆಫೀಸ್​ನಲ್ಲಿ ಚಿತ್ರದ ಕಲೆಕ್ಷನ್ ಕೂಡ 640.25 ಕೋಟಿ ರೂಪಾಯಿ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ