ಈ ಸೆಲೆಬ್ರಿಟಿ ಜೋಡಿಗಳಿಗೆ ಶೀಘ್ರವೇ ಮದುವೆ? ಕದ್ದು ಮುಚ್ಚಿ ಓಡಾಡುತ್ತಿದ್ದಾರೆ ಇವರು
ಶುಭ್ಮನ್ ಹಾಗೂ ಸಾರಾ ತೆಂಡೂಲ್ಕರ್ ಅವರು ಡೇಟಿಂಗ್ ಮಾಡುತ್ತಾರೆ ಎನ್ನುವ ಸುದ್ದಿ ಜೋರಾಗಿದೆ. ಹಲವು ಬಾರಿ ಇಬ್ಬರೂ ಒಂದೇ ಸ್ಥಳದಲ್ಲಿ ಕಾಣಿಸಿಕೊಂಡಿದ್ದರಿಂದ ಇವರ ಮಧ್ಯೆ ಏನೋ ನಡೆಯುತ್ತಿದೆ ಎನ್ನುವ ವಿಚಾರ ಹುಟ್ಟಿಕೊಂಡಿದೆ.
ನೆಚ್ಚಿನ ಸೆಲೆಬ್ರಿಟಿ ಯಾರ ಜೊತೆ ಸುತ್ತಾಡುತ್ತಿದ್ದಾರೆ, ಅವರು ಎಲ್ಲೆಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬಿತ್ಯಾದಿ ವಿಚಾರಗಳ ಬಗ್ಗೆ ಅಭಿಮಾನಿಗಳಿಗೆ ಕುತೂಹಲ ಇರುತ್ತದೆ. ಈ ವಿಚಾರದಲ್ಲಿ ಫ್ಯಾನ್ಸ್ ಸಾಕಷ್ಟು ಫಾಲೋ ಅಪ್ ಮಾಡುತ್ತಾರೆ. ಡೇಟಿಂಗ್ ವಿಚಾರವನ್ನು ಹೊರಗೆಳೆದು ತೆಗೆಯುತ್ತಾರೆ. ಗುಟ್ಟಾಗಿ ಬ್ರೇಕಪ್ ಮಾಡಿಕೊಂಡರೆ ಆ ಬಗ್ಗೆ ಅಭಿಮಾನಿಗಳಿಗೆ ಗೊತ್ತಾಗುತ್ತದೆ. ಈಗ ಹಲವು ಸೆಲೆಬ್ರಿಟಿ ಜೋಡಿಗಳು ಕದ್ದುಮುಚ್ಚಿ ಓಡಾಡುತ್ತಿದ್ದಾರೆ. ಅವರು ಶೀಘ್ರವೇ ಮದುವೆ ಆಗಬಹುದು ಎಂದು ನಿರೀಕ್ಷಿಸಲಾಗುತ್ತಿದೆ. ಆ ಸಾಲಿನಲ್ಲಿ ಸಾರಾ ಅಲಿ ಖಾನ್ (Sara Ali Khan), ಸಾರಾ ತೆಂಡೂಲ್ಕರ್ ಮೊದಲಾದವರು ಇದ್ದಾರೆ.
ಶುಭ್ಮನ್ ಹಾಗೂ ಸಾರಾ ತೆಂಡೂಲ್ಕರ್
ಶುಭ್ಮನ್ ಹಾಗೂ ಸಾರಾ ತೆಂಡೂಲ್ಕರ್ ಅವರು ಡೇಟಿಂಗ್ ಮಾಡುತ್ತಾರೆ ಎನ್ನುವ ಸುದ್ದಿ ಜೋರಾಗಿದೆ. ಹಲವು ಬಾರಿ ಇಬ್ಬರೂ ಒಂದೇ ಸ್ಥಳದಲ್ಲಿ ಕಾಣಿಸಿಕೊಂಡಿದ್ದರಿಂದ ಇವರ ಮಧ್ಯೆ ಏನೋ ನಡೆಯುತ್ತಿದೆ ಎನ್ನುವ ವಿಚಾರ ಹುಟ್ಟಿಕೊಂಡಿದೆ. ಇವರು ಶೀಘ್ರವೇ ಮದುವೆ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಚಿರಾಗ್ ಸೂರಿ ಹೆಸರಿನ ಕ್ರಿಕೆಟರ್ ಅವರು ಶುಭ್ಮನ್ ಹಾಗೂ ಸಾರಾ ಮದುವೆ ಆಗುತ್ತಾರೆ ಎಂದು ಹೇಳಿರುವುದಾಗಿ ವರದಿ ಆಗಿದೆ.
ಬಹುತೇಕ ಸೆಲೆಬ್ರಿಟಿಗಳು ಮದುವೆ ವಿಚಾರವನ್ನು ಗುಟ್ಟಾಗಿ ಇಡುತ್ತಾರೆ. ಸಾರಾ ಹಾಗೂ ಶುಭ್ಮನ್ ಕೂಡ ಇದೇ ರೀತಿ ಮಾಡುತ್ತಿದ್ದಾರೆ ಎನ್ನಲಾಗಿದೆ. ಜಿಯೋ ವರ್ಲ್ಡ್ ಪ್ಲಾಜಾ ಉದ್ಘಾಟನೆ ವೇಳೆ ಸಾರಾ ಹಾಗೂ ಶುಭ್ಮನ್ ಗಿಲ್ ಕಾಣಿಸಿಕೊಂಡಿದ್ದರು. ಇವರು ಮದುವೆ ವಿಚಾರವನ್ನು ಶೀಘ್ರವೇ ಅಧಿಕೃತ ಮಾಡುವ ಸಾಧ್ಯತೆ ಇದೆಯಂತೆ.
ಅನನ್ಯಾ ಪಾಂಡೆ ಹಾಗೂ ಆದಿತ್ಯ ರಾಯ್ ಕಪೂರ್
ಅನನ್ಯಾ ಪಾಂಡೆ ಹಾಗೂ ಆದಿತ್ಯ ರಾಯ್ ಕಪೂರ್ ಸುತ್ತಾಟ ನಡೆಸುತ್ತಿದ್ದಾರೆ ಎನ್ನುವ ವಿಚಾರ ಮೊದಲಿನಿಂದಲೂ ಹರಿದಾಡುತ್ತಿದೆ. ಇಬ್ಬರೂ ಶೀಘ್ರವೇ ಮದುವೆ ಆಗಲಿದ್ದಾರಂತೆ. ಮದುವೆ ಬಳಿಕ ನನ್ನ ಹೆಸರು PARK ಎಂದಾಗಲಿದೆ ಎಂದಿದ್ದರು ಅನನ್ಯಾ. ಪಾಂಡೆ ಆದಿತ್ಯ ರಾಯ್ ಕಪೂರ್ ಅನ್ನೋದು ಇದರ ಅರ್ಥ ಎನ್ನಲಾಗಿದೆ. ಅನನ್ಯಾ ಅವರಿಗೆ ಹೇಳಿಕೊಳ್ಳುವಂಥ ಯಶಸ್ಸು ಸಿಗಲಿಲ್ಲ.
ಜಾನ್ವಿ ಕಪೂರ್ ಹಾಗೂ ಶಿಕಾರ್ ಪಹಾರಿಯಾ
ಜಾನ್ವಿ ಕಪೂರ್ ಅವರು ವೈಯಕ್ತಿಕ ವಿಚಾರಗಳನ್ನು ಗುಟ್ಟಾಗಿ ಇಡುತ್ತಾರೆ. ಅವರು ಶಿಖಾರ್ ಪಹಾರಿಯಾ ಜೊತೆ ಡೇಟ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಇವರು ಒಟ್ಟಾಗಿ ಅನೇಕ ಕಡೆಗಳಲ್ಲಿ ಕಾಣಿಸಿಕೊಂಡಿದ್ದರು. ತಿರುಪತಿ ದೇವಸ್ಥಾನಕ್ಕೆ ಜೋಡಿ ಸಮೇತ ಬಂದಿದ್ದರು. ಇಬ್ಬರೂ ಅನೇಕ ಬಾರಿ ಒಟ್ಟಿಗೆ ವೆಕೇಶನ್ ಕಳೆದಿದ್ದಾರೆ. ಇವರು ಮದುವೆ ಆಗೋ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ನವ್ಯಾ ನಂದ ಹಾಗೂ ಸಿದ್ದಾರ್ಥ್ ಚತುರ್ವೇದಿ
ಅಮಿತಾಭ್ ಬಚ್ಚನ್ ಮೊಮ್ಮಗಳು ನವ್ಯಾ ನಂದ ಹಾಗೂ ಸಿದ್ದಾರ್ಥ್ ಚತುರ್ವೇದಿ ಡೇಟ್ ಮಾಡುತ್ತಿರುವ ವಿಚಾರ ಗುಟ್ಟಾಗಿ ಉಳಿದಿಲ್ಲ. ಇವರು ಮದುವೆ ಆಗಲಿದ್ದಾರಂತೆ. ಇವರ ಡೇಟಿಂಗ್ ವಿಚಾರ ಆಗಾಗ ಸುದ್ದಿ ಆಗುತ್ತದೆ. ಬಚ್ಚನ್ ಮೊಮ್ಮಗಳ ಮದುವೆ ನೋಡಲು ಫ್ಯಾನ್ಸ್ ಕಾದಿದ್ದಾರೆ.
ಇದನ್ನೂ ಓದಿ: ‘ಕಾಫಿ ವಿತ್ ಕರಣ್’ ಶೋನಲ್ಲಿ ಸಾರಾ ಅಲಿ ಖಾನ್, ಅನನ್ಯಾ ಪಾಂಡೆ ಮಸ್ತ್ ಮಾತು
ಸಾರಾ ಅಲಿ ಖಾನ್
ಸಾರಾ ಅಲಿ ಖಾನ್ ಅವರು ಕಾರ್ತಿಕ್ ಆರ್ಯನ್ ಜೊತೆ ಡೇಟ್ ಮಾಡುತ್ತಿದ್ದರು. ಆ ಬಳಿಕ ಅವರದ್ದು ಬ್ರೇಕಪ್ ಆಯಿತು. ಈಗ ಅವರ ರಿಲೇಶನ್ಶಿಪ್ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಅವರು ಗುಟ್ಟಾಗಿ ಮದುವೆ ಆಗುವುದಾಗಿ ಕಾಫಿ ವಿತ್ ಕರಣ್ ಶೋನಲ್ಲಿ ಭಾಗಿ ಆಗಿದ್ದರು. ಅವರು ಶುಭಮನ್ ಗಿಲ್ ಜೊತೆ ಡೇಟ್ ಮಾಡುತ್ತಿಲ್ಲ ಎಂದು ವರದಿ ಆಗಿತ್ತು. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ