ಶಾರುಖ್ ಮೊದಲ ಸಂಭಾವನೆ ಎಷ್ಟು? ಈಗ ಈ ಹಣದಲ್ಲಿ ಒಂದು ಹೊತ್ತಿನ ಊಟವೂ ಸಿಗಲ್ಲ

ಪಂಕಜ್ ಉದಾಸ್ ಸಂಗೀತ ಕಚೇರಿಯೊಂದರಲ್ಲಿ ಶಾರುಖ್ ಅವರು ಸಹಾಯಕರಾಗಿ ಕೆಲಸ ಮಾಡಿದ್ದರಂತೆ. ಗೋಷ್ಠಿಗೆ ಬರುವ ಅತಿಥಿಗಳನ್ನು ಅವರ ಆಸನಕ್ಕೆ ಕರೆದೊಯ್ಯುವುದು, ಆಸನವನ್ನು ಹುಡುಕುವಲ್ಲಿ ಸಹಾಯ ಮಾಡುವುದು ಇತ್ಯಾದಿ ಕಾರ್ಯಗಳನ್ನು ಅವರು ಮಾಡಿದ್ದರು. ಈ ವಿಚಾರವನ್ನು ಶಾರುಖ್ ಈ ಮೊದಲು ಹೇಳಿಕೊಂಡಿದ್ದರು.

ಶಾರುಖ್ ಮೊದಲ ಸಂಭಾವನೆ ಎಷ್ಟು? ಈಗ ಈ ಹಣದಲ್ಲಿ ಒಂದು ಹೊತ್ತಿನ ಊಟವೂ ಸಿಗಲ್ಲ
ಶಾರುಖ್ ಖಾನ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Feb 28, 2024 | 1:35 PM

ಶಾರುಖ್ ಖಾನ್ (Shah Rukh Khan) ಅಭಿಮಾನಿಗಳು ಭಾರತದಲ್ಲಿ ಮಾತ್ರವಲ್ಲ, ಪ್ರಪಂಚದಾದ್ಯಂತ ಇದ್ದಾರೆ. ಲಕ್ಷಾಂತರ ಜನರು ಅವರನ್ನು ಪ್ರೀತಿಸುತ್ತಾರೆ. ಶಾರುಖ್ ಇಂದು ಬಾಲಿವುಡ್‌ನ ಕಿಂಗ್. ಅವರ ಸಿನಿಮಾಗಳಿಗೆ ಸಾವಿರ ಕೋಟಿ ರೂಪಾಯಿ ಬಿಸ್ನೆಸ್ ಮಾಡುವ ತಾಕತ್ತಿದೆ. ಅವರು ಸಾಕಷ್ಟು ಕಷ್ಟಪಡುತ್ತಿದ್ದ ಸಮಯವಿತ್ತು. ಪ್ರತಿ ಚಿತ್ರಕ್ಕೆ ನೂರು ಕೋಟಿ ರೂಪಾಯಿ ಚಾರ್ಜ್ ಮಾಡುವ ಶಾರುಖ್ ಅವರ ಮೊದಲ ಗಳಿಕೆ ಎಷ್ಟು ಗೊತ್ತಾ? ಅದನ್ನು ಅವರು ಬಹಿರಂಗಪಡಿಸಿದ್ದರು. ಶಾರುಖ್ ಅವರ ಮೊದಲ ಸಂಭಾವನೆಯು ಪ್ರಸಿದ್ಧ ಗಾಯಕ ದಿವಂಗತ ಪಂಕಜ್ ಉದಾಸ್ ಅವರ ಸಂಗೀತ ಕಚೇರಿಯಿಂದ ಆಗಿತ್ತು ಅನ್ನೋದು ವಿಶೇಷ.

ಹಿರಿಯ ಗಾಯಕ ಪಂಕಜ್ ಉದಾಸ್ ಫೆಬ್ರವರಿ 26ರಂದು ನಿಧನರಾದರು. ಅವರ ನಿಧನದ ನಂತರ ಅಭಿಮಾನಿಗಳು ಹಾಗೂ ಚಿತ್ರರಂಗದ ಎಲ್ಲಾ ತಾರೆಯರು ಸಾಮಾಜಿಕ ಜಾಲತಾಣಗಳಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಈ ನಡುವೆ ಪಂಕಜ್ ಉದಾಸ್ ಮತ್ತು ಶಾರುಖ್ ಖಾನ್​ಗೆ ಸಂಬಂಧಿಸಿದ ಘಟನೆಯೊಂದು ಬೆಳಕಿಗೆ ಬಂದಿದೆ. ಈ ಕಥೆ ಶಾರುಖ್ ಅವರ ಮೊದಲ ಗಳಿಕೆಗೆ ಸಂಬಂಧಿಸಿದೆ. ಈ ಬಗ್ಗೆ ಸ್ವತಃ ಶಾರುಖ್ ಖಾನ್ ಅವರೇ ‘ರಯೀಸ್’ ಚಿತ್ರದ ಪ್ರಚಾರದ ವೇಳೆ ಹೇಳಿದ್ದರು.

‘ರಯೀಸ್’ 2017ರಲ್ಲಿ ರಿಲೀಸ್ ಆಯಿತು. ಈ ಸಿನಿಮಾ ಅಂದುಕೊಂಡಷ್ಟು ಬಿಸ್ನೆಸ್ ಮಾಡಲಿಲ್ಲ. ಈ ಚಿತ್ರದ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಶಾರುಖ್ ತಮ್ಮ ಆರಂಭಿಕ ದಿನಗಳ ಬಗ್ಗೆ ಪ್ರಸ್ತಾಪಿಸಿದ್ದರು. ಪಂಕಜ್ ಉದಾಸ್ ಅವರ ಸಂಗೀತ ಕಚೇರಿಯೊಂದರಲ್ಲಿ ಶಾರುಖ್ ಅವರು ಸಹಾಯಕರಾಗಿ ಕೆಲಸ ಮಾಡಿದ್ದರಂತೆ. ಗೋಷ್ಠಿಗೆ ಬರುವ ಅತಿಥಿಗಳನ್ನು ಅವರ ಆಸನಕ್ಕೆ ಕರೆದೊಯ್ಯುವುದು, ಆಸನವನ್ನು ಹುಡುಕುವಲ್ಲಿ ಸಹಾಯ ಮಾಡುವುದು ಇತ್ಯಾದಿ ಕಾರ್ಯಗಳನ್ನು ಅವರು ಮಾಡಿದ್ದರು.

ಈ ಕೆಲಸಕ್ಕೆ 50 ರೂಪಾಯಿ ಪಡೆದಿದ್ದಾಗಿ ಶಾರುಖ್ ಹೇಳಿದ್ದರು. ಅವರು ತಮ್ಮ ಮೊದಲ ಸಂಪಾದನೆಯಿಂದ ತಾಜ್ ಮಹಲ್ ನೋಡಲು ಆಗ್ರಾಕ್ಕೆ ಹೋದರು. ಅದರ ನಂತರವೂ ಅವನ ಬಳಿ ಸ್ವಲ್ಪ ಹಣ ಉಳಿದಿತ್ತು. ತಾಜ್‌ಮಹಲ್‌ನ ಹೊರಗೆ ಲಸ್ಸಿ ಖರೀದಿಸಿ ಕುಡಿದಿದ್ದರು. ಆದರೆ ಅದರಲ್ಲಿ ನೊಣ ಬಿದ್ದಿದ್ದರಿಂದ ಅವರ ಆರೋಗ್ಯ ಹದಗೆಟ್ಟಿತ್ತು. ಆ ನಂತರ ಆಗ್ರಾದಿಂದ ದೆಹಲಿಗೆ ಅವರು ಹಿಂದಿರುಗಿದರು. ಈಗ ಅವರು ಪ್ರತಿ ಸಿನಿಮಾಗೆ ನೂರಾರು ಕೋಟಿ ರೂಪಾಯಿ ಚಾರ್ಜ್ ಮಾಡುತ್ತಾರೆ. ಸಾವಿರಾರು ಕೋಟಿಯ ಒಡೆಯರಾಗಿದ್ದಾರೆ. ಶಾರು ಖಾನ್ ಅವರ ಈ ಪ್ರಯಾಣವು ಅಭಿಮಾನಿಗಳಿಗೆ ಸ್ಫೂರ್ತಿದಾಯಕವಾಗಿದೆ.

ಇದನ್ನೂ ಓದಿ: ಪ್ಯಾಂಕ್ರಿಯಾಟಿಕ್​ ಕ್ಯಾನ್ಸರ್​ನಿಂದ ಗಾಯಕ ಪಂಕಜ್ ಉದಾಸ್ ನಿಧನ; ಈ ರೋಗದ ಲಕ್ಷಣಗಳಿವು

ಪಂಕಜ್ ಉದಾಸ್ ತಮ್ಮ 72ನೇ ವಯಸ್ಸಿಗೆ ನಿಧನ ಹೊಂದಿದರು. ಅವರು ಬಹಳ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅಜಯ್ ದೇವಗನ್, ಕಾಜೋಲ್, ಮಾಧುರಿ ದೀಕ್ಷಿತ್, ಅರ್ಜುನ್ ಕಪೂರ್ ಸೇರಿದಂತೆ ಹಲವು ಬಾಲಿವುಡ್ ತಾರೆಯರು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಅವರ ಗಜಲ್ ಮತ್ತು ಹಾಡುಗಳಿಂದ ಲಕ್ಷಾಂತರ ಹೃದಯಗಳಲ್ಲಿ ಈಗಲೂ ಇದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ